rtgh

Breaking News : ಪೊಲೀಸರಿಗೆ ದಂಡ ಹಾಕುವ ಅಧಿಕಾರವಿರುವುದಿಲ್ಲ ತಿಳಿದುಕೊಳ್ಳಿ

The police have no power to impose fines

ನಮಸ್ಕಾರ ಸ್ನೇಹಿತರೆ ಸೈನಿಕರು ದೇಶದ ಗಡಿಯಲ್ಲಿ ಶಾಂತಿಯನ್ನು ಕಾಪಾಡಿಕೊಳ್ಳುವಂತಹ ಕೆಲಸವನ್ನು ಮಾಡಿದರೆ ದೇಶದ ಒಳಗೆ ಇರುವಂತಹ ಕಾನೂನು ಸುವ್ಯವಸ್ಥೆಯನ್ನು ಕಾಪಾಡಿಕೊಳ್ಳುವಂತಹ ಕೆಲಸವನ್ನು ರಾಜ್ಯದ ಪ್ರತಿಯೊಂದು ಪೊಲೀಸರು ಕೂಡ ಮಾಡುತ್ತಾರೆ.

The police have no power to impose fines
The police have no power to impose fines

ಪೊಲೀಸರು ಇರುವುದರಿಂದಲೇ ದೇಶದಲ್ಲಿ ಶಾಂತಿ ಸುವ್ಯವಸ್ಥೆ ಸರಿಯಾದ ದಿಕ್ಕಿನಲ್ಲಿ ಸಾಗುತ್ತಿದೆ ಎಂದು ಹೇಳಿದರೆ ತಪ್ಪಾಗಲಾರದು. ಒಂದು ಬಾರಿಯಾದರೂ ಕೂಡ ನಾನು ದೊಡ್ಡವನಾದ ಮೇಲೆ ಪೊಲೀಸ್ ಆಗಬೇಕೆಂದು ಪ್ರತಿಯೊಬ್ಬರೂ ಕೂಡ ಹೇಳಿಕೊಂಡಿರುವುದು ಇದೆ ಆದರೆ ಪೊಲೀಸರು ಎಂದ ತಕ್ಷಣ ಪ್ರತಿಯೊಬ್ಬ ಪೊಲೀಸರು ಕೂಡ ಒಳ್ಳೆಯವರೇ ಆಗಬೇಕೆಂದು ನಿಯಮವೇನಿಲ್ಲ ಪೊಲೀಸರಲ್ಲಿಯೂ ಕೂಡ ಕೆಲವೊಮ್ಮೆ ಕೆಲವರು ಸಾಮಾನ್ಯ ನಾಗರಿಕರಿಗೆ ತೊಂದರೆ ಕೊಡುವಂತಹ ಜನರು ಕೂಡ ಇರುತ್ತಾರೆ .

ಹೀಗಾಗಿ ಇವತ್ತಿನ ಲೇಖನದಲ್ಲಿ ನಾವು ತಿಳಿಸುತ್ತಿರುವ ವಿಷಯ ಏನೆಂದರೆ, ಪೊಲೀಸರಿಂದ ಕೆಲವೊಂದು ಸಮಸ್ಯೆಗಳು ಹೇಗೆ ಎದುರಾಗುತ್ತವೆ ಎಂಬುದರ ಬಗ್ಗೆ. ಪೊಲೀಸರಿಂದ ಸಮಸ್ಯೆಗಳು ಎದುರಾದಾಗ ತಪ್ಪಿಸಿಕೊಳ್ಳಲು ನೀವು ಏನು ಮಾಡಬೇಕು ಎಂಬುದರ ಬಗ್ಗೆ ಇವತ್ತಿನ ಲೇಖನದಲ್ಲಿ ತಿಳಿಯಬಹುದು.

ಈ ರೀತಿಯಾಗಿ ಟ್ರಾಫಿಕ್ ಪೊಲೀಸರು ಮಾಡುವಂತಿಲ್ಲ :

ವಾಹನ ಚಲಾವಣೆಯ ಕಾನೂನು ನಿಯಮಗಳನ್ನು ನಮ್ಮ ಭಾರತ ದೇಶದಲ್ಲಿ ಯಾರೇ ಆಗಲಿ ಉಲ್ಲಂಘಿಸಿದರೆ ಅವರಿಗೆ ತಂಡವನ್ನು ಟ್ರಾಫಿಕ್ ಪೊಲೀಸರು ವಿಧಿಸುತ್ತಾರೆ ಆದರೆ ಇದಕ್ಕೂ ಕೂಡ ಒಂದು ಸರಿಯಾದ ನಿಯಮವಿದ್ದು ಸಾಮಾನ್ಯ ನಾಗರಿಕರು ಇದರ ಬಗ್ಗೆ ಸಾಕಷ್ಟು ಮಾಹಿತಿ ಎಂದು ತಿಳಿದುಕೊಂಡಿರುವುದಿಲ್ಲ ಹೀಗಾಗಿ ಕೆಲವೊಂದು ಕೆಲಸಗಳನ್ನು ಟ್ರಾಫಿಕ್ ಪೊಲೀಸರು ಮಾಡುವಂತೆ ನೀವು ಪ್ರತಿರೋಧ ಮಾಡುವಂತಹ ಅವಕಾಶ ನಿಮಗೆ ಕಾನೂನು ನೆಲಗಟ್ಟಿನ ಅಡಿಯಲ್ಲಿ ನೀಡಿದೆ.

ಟ್ರಾಫಿಕ್ ಪೊಲೀಸರು ಯಾವುದೇ ಕಾರಣಕ್ಕೂ ನಿಮ್ಮನ್ನು ಅಡ್ಡ ಹಾಕಿದ ನಂತರ ನಿಮ್ಮ ಬಳಿ ಇರುವಂತಹ ವಾಹನದ ಕೀಯನ್ನು ಪಡೆದುಕೊಳ್ಳುವ ಹಾಗಿಲ್ಲ ಈ ರೀತಿ ಮಾಡುವುದು ಕಾನೂನು ಪ್ರಕಾರವಾಗಿ ತಪ್ಪಾಗಿರುತ್ತದೆ ಇದಾದನಂತರ ನಿಮ್ಮ ಬಳಿ ಡ್ರೈವಿಂಗ್ ಲೈಸೆನ್ಸ್ ಸಾಮಾನ್ಯವಾಗಿ ರಿಜಿಸ್ಟ್ರೇಷನ್ ಸರ್ಟಿಫಿಕೇಟ್ ಸೇರಿದಂತೆ ವಾಹನಕ್ಕೆ ಸಂಬಂಧಪಟ್ಟಂತಹ ಡಾಕ್ಯುಮೆಂಟ್ಸ್ ಗಳನ್ನು ಕೂಡ ಟ್ರಾಫಿಕ್ ಪೊಲೀಸರು ಕೇಳಬಹುದಾಗಿದೆ.

ಅಂತಹ ಸಂದರ್ಭದಲ್ಲಿ ನೀವು ಪೊಲ್ಲ್ಯೂಷನ್ ಸರ್ಟಿಫಿಕೇಟ್ ಅನ್ನು ಟ್ರಾಫಿಕ್ ಪೊಲೀಸರಿಗೆ ನೀಡಬೇಕಾದ ಅಗತ್ಯವಿರುವುದಿಲ್ಲ ಏಕೆಂದರೆ ಕೇವಲ rto ಆಫೀಸರ್ ಮಾತ್ರ ಪೊಲ್ಲ್ಯೂಷನ್ ಸರ್ಟಿಫಿಕೇಟ್ ಅನ್ನು ಪರಿಶೀಲನೆ ಮಾಡುವಂತಹ ಅಧಿಕಾರವನ್ನು ಹೊಂದಿರುತ್ತಾರೆ.

ಇದನ್ನು ಓದಿ : ದ್ವಿತೀಯ PUC ಫಲಿತಾಂಶ ಪ್ರಕಟವಾಗಿದೆ : ಮೊಬೈಲ್ ನಲ್ಲಿ ರಿಸಲ್ಟ್ ನೋಡುವ ಲಿಂಕ್ ಇಲ್ಲಿದೆ

ಪೊಲೀಸರ ವಿರುದ್ಧವು ಕೂಡ ದೂರು ದಾಖಲಿಸಬಹುದು :

ನಿಮ್ಮ ವಾಹನಗಳನ್ನು ಯಾರಾದರೂ ಒಂದು ವೇಳೆ ನೀವು ರಸ್ತೆಯಲ್ಲಿ ಹೋಗಬೇಕಾದರೆ ಕಾನ್ಸ್ಟೇಬಲ್ ಅಡ್ಡ ಕಟ್ಟಿದರೆ ಅವರು ನೂರು ರೂಪಾಯಿಗಳ ಮೇಲೆ ಹೆಚ್ಚಿನ ಫೈನಲ್ ಹಾಕುವ ಅಧಿಕಾರ ಇರುವುದಿಲ್ಲ ಎಂಬುದು ಕಾನೂನು ಪ್ರಕಾರವಾಗಿ ತಿಳಿದುಕೊಂಡಿರಬೇಕಾಗುತ್ತದೆ.

ಒಂದು ವೇಳೆ ನೂರು ರೂಪಾಯಿಗಿಂತ ಹೆಚ್ಚಿನ ಫೈನನ್ನು ಕಾನ್ಸ್ಟೇಬಲ್ ನಿಮಗೆ ಹಾಕುತ್ತಿದ್ದಾರೆ ಅವರ ವಿರುದ್ಧ ಕಂಪ್ಲೇಂಟ್ ಕೊಡುವಂತಹ ಅವಕಾಶವನ್ನು ಕೂಡ ಹೊಂದಿರುತ್ತೀರಿ. ಇದರ ಜೊತೆಗೆ ಟ್ರಾಫಿಕ್ ಪೊಲೀಸರು ನಿಮ್ಮ ಗಾಡಿಯ ಡಾಕ್ಯುಮೆಂಟ್ಸ್ಗಳನ್ನು ಕೇಳಿದಾಗ ಡಿಜಿ ಲಾಕರ್ ನಲ್ಲಿ ನೀವು ಡಾಕ್ಯುಮೆಂಟ್ಗಳಲ್ಲಿ ಇಟ್ಟಿದ್ದರೆ ಅದನ್ನು ಕೂಡ ತೋರಿಸಬಹುದಾಗಿದೆ.

ಅಂತಹ ಡಾಕ್ಯುಮೆಂಟ್ಸ್ ಗಳನ್ನು ಟ್ರಾಫಿಕ್ ಪೊಲೀಸರು ಮಾನ್ಯ ಎಂಬುದಾಗಿ ಪರಿಗಣಿಸಬೇಕಾಗುತ್ತದೆ ಒಂದು ವೇಳೆ ಅದನ್ನು ಕಡೆಗಣಿಸಿದರೆ ಅವರ ವಿರುದ್ಧ ಕಂಪ್ಲೇಂಟ್ ಮಾಡುವಂತಹ ಎಲ್ಲ ಸ್ವಾತಂತ್ರ್ಯವನ್ನು ಸಾಮಾನ್ಯವಾಗಿ ನಾಗರಿಕರು ಹೊಂದಿರುತ್ತಾರೆ.

ಹೀಗೆ ವಾಹನ ಸವಾರರು ಕೆಲವೊಂದು ನಿಯಮಗಳನ್ನು ತಿಳಿದುಕೊಂಡಿರುವುದರ ಮೂಲಕ ಟ್ರಾಫಿಕ್ ಪೊಲೀಸರು ನಿಮ್ಮ ಮೇಲೆ ಹೆಚ್ಚಿನ ಹೊರೆಯನ್ನು ಏರಿದಾಗ ಸರ್ಕಾರ ನಿಯಮಗಳ ಪ್ರಕಾರ ನಿಮ್ಮ ಡಾಕ್ಯುಮೆಂಟ್ ಗಳನ್ನು ಡಿಜಿ ಲಾಕರ್ ಗಳ ಮೂಲಕ ಇಟ್ಟುಕೊಳ್ಳಬಹುದಾಗಿತ್ತು ಅದನ್ನು ಕೂಡ ಒಪ್ಪಿಕೊಳ್ಳದೆ ಟ್ರಾಫಿಕ್ ಪೊಲೀಸರು ಇದ್ದರೆ ಅಂಥವರ ವಿರುದ್ಧ ದೂರು ನೀಡಲು ಕಾನೂನು ನಿಮಗೆ ಎಲ್ಲ ರೀತಿಯಾದಂತಹ ಅವಕಾಶ ಕಲ್ಪಿಸಿದೆ.

ಹಾಗಾಗಿ ಟ್ರಾಫಿಕ್ ಪೊಲೀಸ್ರಿಗೆ ಸಂಬಂಧಿಸಿದಂತಹ ಈ ಮಾಹಿತಿಯನ್ನು ಎಲ್ಲಾ ನಾಗರಿಕರಿಗೂ ಶೇರ್ ಮಾಡುವ ಮೂಲಕ ಅವರು ಕೂಡ ಟ್ರಾಫಿಕ್ ನಿಯಮದ ಬಗ್ಗೆ ಕೆಲವೊಂದು ನಿಯಮಗಳನ್ನು ತಿಳಿದುಕೊಳ್ಳಲಿ ಧನ್ಯವಾದಗಳು.

ಇತರೆ ವಿಷಯಗಳು :

Spread the love

Leave a Reply

Your email address will not be published. Required fields are marked *