ನಮಸ್ಕಾರ ಸ್ನೇಹಿತರೆ ಮಹಿಳೆಯರಿಗೆ ಎಂದು ಸಾಕಷ್ಟು ಉತ್ತಮ ಯೋಜನೆಗಳನ್ನು ಕೇಂದ್ರ ಸರ್ಕಾರ ಪರಿಚಯಿಸುವುದರ ಮೂಲಕ ಆರ್ಥಿಕ ಸ್ವಾವಲಂಬನೆಯನ್ನು ಉತ್ತಮಗೊಳಿಸಲು ಮುಂದಾಗಿದೆ. ಸ್ವಂತ ಉದ್ಯಮವನ್ನು ಸಾಕಷ್ಟು ಮಹಿಳೆಯರು ಆರಂಭಿಸುವುದರಿಂದ ಹಿಡಿದು ಉಚಿತ ಹಣವನ್ನು ಮನೆಯಲ್ಲಿರುವ ಹಣೆಗೆ ಕೂಡ ಪಡೆದುಕೊಳ್ಳಲು ಈ ಯೋಜನೆ ಮೂಲಕ ಸಾಧ್ಯವಾಗುತ್ತದೆ.
ಇದೀಗ ಪ್ರಧಾನ ಮಂತ್ರಿ ಉಜ್ವಲ ಯೋಜನೆ ಕೇಂದ್ರ ಸರ್ಕಾರ ಪರಿಚಯಿಸಿದ್ದು ಈ ಯೋಜನೆಯ ಅಡಿಯಲ್ಲಿ ಎರಡು ಗ್ಯಾಪ್ ಸಿಲಿಂಡರನ್ನು ಮಹಿಳೆಯರು ಉಚಿತವಾಗಿ ಪಡೆದುಕೊಳ್ಳಬಹುದಾಗಿದೆ. ಅಲ್ಲದೇ ಉಚಿತವಾಗಿ ಗ್ಯಾಸ್ ಕನೆಕ್ಷನ್ ಕೂಡ ಪಡೆಯಬಹುದಾಗಿತ್ತು ಮಹಿಳೆಯರು ಪಡೆಯುವುದರಿಂದ ಹೆಚ್ಚಿನ ಪ್ರಯೋಜನವನ್ನು ಪಡೆಯಬಹುದಾಗಿದೆ.
Contents
ಪ್ರಧಾನ ಮಂತ್ರಿಯಿಂದ ಗಿಫ್ಟ್ :
ಉಚಿತವಾಗಿ ಗ್ಯಾಪ್ ಕನೆಕ್ಷನ್ ಅನ್ನು ಪಡೆದುಕೊಂಡು ಮಹಿಳೆಯರು ಪ್ರಧಾನ ಮಂತ್ರಿ ಉಜ್ವಲ ಯೋಜನೆಯ ಅಡಿಯಲ್ಲಿ ಸೌದೆ ಒಲೆಯಿಂದ ಅಡುಗೆ ಮಾಡುವಂತಹ ಕಷ್ಟದಿಂದ ಮುಕ್ತರಾಗಿದ್ದಾರೆ ಎಂದು ಹೇಳಬಹುದು. ಉಚಿತ ಗ್ಯಾಸ್ ಕನೆಕ್ಷನ್ ಅನ್ನು ಇಂದು ಕೋಟ್ಯಂತರ ಮಹಿಳೆಯರು ಪಡೆದುಕೊಂಡಿದ್ದಾರೆ.
ಅಲ್ಲದೆ ಮಹಿಳೆಯರು ಪ್ರಧಾನಮಂತ್ರಿ ಉಜ್ವಲ ಯೋಜನೆಯ ಅಡಿಯಲ್ಲಿ 300 ರೂಪಾಯಿಗಳ ಸಬ್ಸಿಡಿಯನ್ನು ಕೂಡ ಪಡೆಯಬಹುದಾಗಿದೆ ಇದೀಗ ಕೇವಲ 603 ರೂಪಾಯಿಗಳನ್ನು ಮಾತ್ರ ಪ್ರತಿ ಸಿಲಿಂಡರ್ ಗೆ ಮಹಿಳೆಯರು ಪಾವತಿಸಬಹುದು.
ಹೆಣ್ಣು ಮಕ್ಕಳ ಜೀವನದ ಬಣ್ಣವನ್ನು ಇದೀಗ ಹೋಳಿ ಹಬ್ಬಕ್ಕೆ ಇನ್ನಷ್ಟು ಹೆಚ್ಚಿಸುವ ಸಲುವಾಗಿ ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಮತ್ತೊಂದು ಗುಡ್ ನ್ಯೂಸ್ ಅನ್ನು ನೀಡಿದ್ದಾರೆ. ಎರಡು ಉಚಿತ ಗ್ಯಾಸ್ ಸಿಲಿಂಡರನ್ನು ಮಹಿಳೆಯರು ಇದೀಗ ಪ್ರಧಾನಮಂತ್ರಿ ಉಜ್ವಲ ಯೋಜನೆ ಅಡಿಯಲ್ಲಿ ಪಡೆಯಬಹುದಾಗಿದೆ. ಈ ರೀತಿ ಉಚಿತ ಗ್ಯಾಸ್ ಸಿಲಿಂಡರನ್ನು ಪಡೆಯಬೇಕಾದರೆ ಮಹಿಳೆಯರು ಆನ್ಲೈನ್ ಮೂಲಕ ಅರ್ಜಿಯನ್ನು ಸಲ್ಲಿಸಿ ಯೋಜನೆಯ ಪ್ರಯೋಜನವನ್ನು ಪಡೆಯಬಹುದು.
ಇದನ್ನು ಓದಿ : ಗೃಹಲಕ್ಷ್ಮಿ ಪೆಂಡಿಂಗ್ ಹಣದ ಜೊತೆಗೆ 7ನೇ ಕಂತಿನ ಹಣ ಇಂದು ಜಮಾ ಆಗಿದೆ : ಈ ಲಿಂಕ್ ಬಳಸಿ ಚೆಕ್ ಮಾಡಿ !
ಅರ್ಜಿ ಸಲ್ಲಿಸಲು ಬೇಕಾದ ದಾಖಲೆಗಳು :
ಪ್ರಧಾನ ಮಂತ್ರಿ ಉಜ್ವಲ ಯೋಜನೆ 2.0 ಪ್ರಯೋಜನವನ್ನು ಪಡೆಯಬೇಕಾದರೆ ಮಹಿಳೆಯರು ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಬಹುದಾಗಿದ್ದು ಅರ್ಜಿಯನ್ನು ಸಲ್ಲಿಸಲು ಕೆಲವೊಂದು ದಾಖಲೆಗಳನ್ನು ಹೊಂದಿರಬೇಕು,
- ಆಧಾರ್ ಕಾರ್ಡ್
- ರೇಷನ್ ಕಾರ್ಡ್
- ಜಾತಿ ಪ್ರಮಾಣ ಪತ್ರ
- ವಿಳಾಸ ಪುರಾವೆ
- ಆದಾಯ ಪ್ರಮಾಣ ಪತ್ರ
- ಮೊಬೈಲ್ ನಂಬರ್
- ಬ್ಯಾಂಕ್ ಖಾತೆಯ ವಿವರ
- ಇತ್ತೀಚಿನ ಪಾಸ್ಪೋರ್ಟ್ ಸೈಜ್ ಫೋಟೋ
ಹೀಗೆ ಈ ದಾಖಲೆಗಳನ್ನು ಹೊಂದುವುದರ ಮೂಲಕ ಆನ್ಲೈನಲ್ಲಿ ಪ್ರಧಾನಮಂತ್ರಿ ಉಜ್ವಲ ಯೋಜನೆಗೆ ಅರ್ಜಿ ಸಲ್ಲಿಸಬಹುದು.
ಯಾರೆಲ್ಲ ಯೋಜನೆಯ ಪ್ರಯೋಜನ ಪಡೆಯಬಹುದು :
ಪ್ರಧಾನಮಂತ್ರಿ ಉಜ್ವಲ ಯೋಜನೆಯ ಪ್ರಯೋಜನವನ್ನು ಮಹಿಳೆಯರು ಪಡೆಯಬೇಕಾದರೆ ಕೆಲವೊಂದು ಅರ್ಹತೆಗಳನ್ನು ಮಹಿಳೆಯರು ಹೊಂದಿರಬೇಕು.
- ಬಿಪಿಎಲ್ ರೇಷನ್ ಕಾರ್ಡನ್ನು ಕಡ್ಡಾಯವಾಗಿ ಹೊಂದಿರಬೇಕು
- ಭಾರತೀಯ ಮಹಿಳೆಯರು ಮಾತ್ರ ಈ ಯೋಜನೆಗೆ ಅರ್ಜಿ ಸಲ್ಲಿಸಲು ಅವಕಾಶ ನೀಡಲಾಗಿದೆ
- ಅರ್ಜಿ ಸಲ್ಲಿಸುವ ಮಹಿಳೆಯರ ವಯಸ್ಸು 18 ವರ್ಷಕ್ಕಿಂತ ಹೆಚ್ಚಿರಬೇಕು
- ರೂ. 1 ಲಕ್ಷ ಗಳಿಗಿಂತ ಕುಟುಂಬದ ಆದಾಯ ಗ್ರಾಮೀಣ ಪ್ರದೇಶದಲ್ಲಿ ಹಾಗೂ 2 ಲಕ್ಷ ರೂಪಾಯಿಗಳಿಗಿಂತ ನಗರ ಪ್ರದೇಶಗಳಲ್ಲಿ ಕುಟುಂಬದ ಆದಾಯ ಕಡಿಮೆ ಇರಬೇಕು
- ಈ ಹಿಂದೆ ಗ್ಯಾಸ್ ಸಂಪರ್ಕವನ್ನು ಪಡೆದಿರುವ ಅಭ್ಯರ್ಥಿಗಳು ಯೋಜನೆಗೆ ಅರ್ಜಿ ಸಲ್ಲಿಸಲು ಅವಕಾಶವಿಲ್ಲ.
ಈ ಅರ್ಹತೆಗಳನ್ನು ಹೊಂದಿದವರು ಮಾತ್ರ ಪ್ರಧಾನ ಮಂತ್ರಿ ಉಜ್ವಲ ಯೋಜನೆಗೆ ಅರ್ಜಿಯನ್ನು ಸಲ್ಲಿಸಿ ಪ್ರಧಾನಮಂತ್ರಿ ಉಜ್ವಲ ಯೋಜನೆ ಅಡಿಯಲ್ಲಿ ಉಚಿತವಾಗಿ 2 ಗ್ಯಾಸ್ ಸಿಲಿಂಡರ್ ಅನ್ನು ಪಡೆಯಬಹುದಾಗಿದೆ.
ಅರ್ಜಿ ಸಲ್ಲಿಸುವ ವಿಧಾನ :
ಮಹಿಳೆಯರು ಪ್ರಧಾನಮಂತ್ರಿ ಉಜ್ವಲ ಯೋಜನೆಗೆ ಅರ್ಜಿ ಸಲ್ಲಿಸಿ ಎರಡು ಉಚಿತ ಗ್ಯಾಸ್ ಸಿಲಿಂಡರನ್ನು ಪಡೆಯಬೇಕಾದರೆ ಪ್ರಧಾನಮಂತ್ರಿ ಉಜ್ವಲ ಯೋಜನೆಯ ಅಧಿಕೃತ ವೆಬ್ಸೈಟ್ ಗೆ ಭೇಟಿ ನೀಡಬೇಕು. https://www.pmuy.gov.in/index.aspx ಈ ವೆಬ್ ಸೈಟಿಗೆ ಭೇಟಿ ನೀಡಿ ಆನ್ಲೈನಲ್ಲಿ ಅರ್ಜಿ ಸಲ್ಲಿಸಬಹುದಾಗಿದೆ.
ಒಟ್ಟಾರೆ ಕೇಂದ್ರ ಸರ್ಕಾರವು ಮಹಿಳೆಯರಿಗೆ ಯಾವುದೇ ರೀತಿಯ ಕಷ್ಟವಾಗಬಾರದು ಎನ್ನುವ ಉದ್ದೇಶದಿಂದ ಉಚಿತವಾಗಿ ಎರಡು ಗ್ಯಾಸ್ ಕಲೆಕ್ಷನ್ ಅನ್ನು ನೀಡುತ್ತಿದ್ದು ಈ ಬಗ್ಗೆ ಪ್ರತಿಯೊಬ್ಬರಿಗೂ ಶೇರ್ ಮಾಡುವ ಮೂಲಕ ಹೋಳಿ ಹಬ್ಬದ ಪ್ರಯುಕ್ತ ಬಂಪರ್ ಗಿಫ್ಟ್ ಅನ್ನು ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರ ಸರ್ಕಾರ ನೀಡಿದೆ ಎಂದು ತಿಳಿಸಿ ಧನ್ಯವಾದಗಳು.