rtgh

ನೀತಿ ಸಂಹಿತೆ ಎಂದರೇನು ನಿಮಗೆ ತಿಳಿದಿದೆಯಾ ? ಚುನಾವಣಾ ಸಂದರ್ಭದಲ್ಲಿ ಉಲ್ಲಂಘನೆ ಮಾಡಿದರೆ ಯಾವ ಶಿಕ್ಷೆ ಇದೆ .?

Know without fail what is Code of Conduct

ನಮಸ್ಕಾರ ಸ್ನೇಹಿತರೆ ಚುನಾವಣೆ ದಿನಾಂಕವನ್ನು ಚುನಾವಣಾ ಆಯೋಗವು ದೇಶದಲ್ಲಿ ಇದೀಗ ಅಧಿಕೃತವಾಗಿ ಘೋಷಿಸಿದ ಕ್ಷಣದಿಂದಲೇ ದೇಶದಾದ್ಯಂತ ನೀತಿ ಸಂಹಿತೆ ಜಾರಿಯಾಗುತ್ತದೆ ಆ ಸಮಯದಿಂದಲೇ ಅಧಿಕಾರದಲ್ಲಿ ಇರುವಂತಹ ಸರ್ಕಾರ ತನ್ನ ಅಧಿಕಾರವನ್ನು ಕಳೆದುಕೊಳ್ಳುತ್ತದೆ ಎಂದು ಹೇಳಬಹುದು. ಸರ್ಕಾರದಿಂದ ಸಿಗುವಂತಹ ಯಾವುದೇ ಸೌಲತ್ತುಗಳನ್ನು ಬಳಸಿಕೊಳ್ಳುವಂತಿಲ್ಲ.

Know without fail what is Code of Conduct
Know without fail what is Code of Conduct

ಪ್ರತಿಯೊಬ್ಬರ ಹಕ್ಕು ಹಾಗೂ ಕರ್ತವ್ಯ ಮತದಾನವಾಗಿದ್ದು ಸೂಕ್ತ ಪ್ರತಿನಿಧಿಗಳನ್ನು ನಮ್ಮ ಕ್ಷೇತ್ರಗಳಿಗೆ ಆಯ್ಕೆ ಮಾಡಿಕೊಳ್ಳುವುದು ನಮ್ಮ ಜವಾಬ್ದಾರಿಯ ಆಗಿರುತ್ತದೆ ಈ ಹೊಣೆ ಬಹಳ ದಿನಗಳ ನಂತರ ಇದೀಗ ನಮಗೆ ಮತ್ತೆ ಬರುತ್ತಿದೆ. ಒಂದೇ ಹಂತದಲ್ಲಿ ಮೇ ಹತ್ತರಂದು ರಾಜ್ಯದಲ್ಲಿ ವಿಧಾನಸಭೆ ಚುನಾವಣೆ ನಡೆಯುತ್ತಿದ್ದು ಸದ್ಯಕ್ಕೆ ರಾಜಕೀಯ ಪಕ್ಷಗಳು ಅಥವಾ ಅಭ್ಯರ್ಥಿಗಳು ಭರ್ಜರಿ ಪ್ರಚಾರದಲ್ಲಿ ತೊಡಗಿದ್ದಾರೆ ಎಂದು ಹೇಳಬಹುದು.

ಅದರಂತೆ ಇವತ್ತಿನ ಲೇಖನದಲ್ಲಿ ಚುನಾವಣೆಗೆ ಸಂಬಂಧಿಸಿದಂತೆ ಕೆಲವು ನೀತಿ ನಿಯಮಗಳ ಬಗ್ಗೆ ತಿಳಿಸಲಾಗುತ್ತಿದ್ದು ಚುನಾವಣಾ ಆಯೋಗವು ಕೆಲವೊಂದು ನಿಯಮಗಳನ್ನು ಚುನಾವಣೆ ಘೋಷಣೆ ಮಾಡಿದಾಗ ಜಾರಿಗೆ ತರುತ್ತದೆ ಅದರಲ್ಲಿ ಬಹಳ ಮುಖ್ಯವಾದದ್ದು ಏನೆಂದರೆ ಚುನಾವಣಾ ನೀತಿ ಸಂಹಿತೆಯಾಗಿದೆ. ರಾಜ್ಯದಲ್ಲಿ ಮಾರ್ಚ್ 29ರಿಂದಲೇ ಮಾದರಿ ಸಂಹಿತೆ ಜಾರಿಯಾಗಿದೆ. ಹಾಗಾದರೆ ನೀತಿ ಸಂಹಿತೆ ಎಂದರೇನು? ನೀತಿ ಸಂಹಿತೆ ಉಲ್ಲಂಘಿಸಿದವರು ಏನು ಶಿಕ್ಷೆ ಎಂಬುದರ ಎಲ್ಲಾ ವಿಚಾರಗಳ ಬಗ್ಗೆ ಈ ಲೇಖನದಲ್ಲಿ ತಿಳಿಯಬಹುದು.

ಮಾದರಿ ನೀತಿ ಸಂಹಿತೆ :

ಭಾರತವನ್ನು ಹೊರತುಪಡಿಸಿದರೆ ವಿಶ್ವದ ಯಾವುದೇ ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿಯೂ ಕೂಡ ಮಾದರಿ ನೀತಿ ಸಂಹಿತೆ ಪರಿಕಲ್ಪನೆ ಇಲ್ಲ ಎಂದು ಹೇಳಬಹುದು ಅದರಂತೆ ಚುನಾವಣಾ ಆಯೋಗವು 1960ರ ಕೇರಳ ವಿಧಾನಸಭಾ ಚುನಾವಣೆಯಲ್ಲಿ ಮೊದಲ ಬಾರಿಗೆ ಮಾದರಿ ನೀತಿ ಸಂಹಿತೆಯನ್ನು ಜಾರಿಗೆ ಮಾಡಿತು.

ಚುನಾವಣೆಯ ಸಂದರ್ಭದಲ್ಲಿ ಚುನಾವಣೆಗೆ ಸ್ಪರ್ಧಿಸುತ್ತಿರುವ ಅಭ್ಯರ್ಥಿಗಳು ಹಾಗೂ ಆಯಾ ಪಕ್ಷಗಳು ಯಾವ ರೀತಿ ನಡೆದುಕೊಳ್ಳಬೇಕು ಪ್ರಚಾರವನ್ನು ಯಾವ ರೀತಿ ಕೈಗೊಳ್ಳಬೇಕು ಮತದಾರರು ಹಾಗೂ ಅಭ್ಯರ್ಥಿಗಳು ಏನು ಮಾಡಬೇಕು ಯಾವ ವಿಚಾರವನ್ನು ಗಮನದಲ್ಲಿಟ್ಟುಕೊಳ್ಳಬೇಕು ಎಂಬುದರ ಬಗ್ಗೆ ಮಾದರಿ ನೀತಿ ಸಂಹಿತೆಯಲ್ಲಿ ಸೂಚನೆ ನೀಡುವ ಒಂದು ಮಾರ್ಗಸೂಚಿ ಎಂದು ಹೇಳಬಹುದು.

ಇದನ್ನು ಓದಿ : 2ಲಕ್ಷ ಉಚಿತ ವಿದ್ಯಾರ್ಥಿ ವೇತನ : ಈ ಕೂಡಲೇ Google Scholarshipಗೆ ಅರ್ಜಿ ಸಲ್ಲಿಸಿ ಇಲ್ಲಿದೆ ಲಿಂಕ್

ಯಾವ ರೀತಿಯಲ್ಲಿ ಅಭ್ಯರ್ಥಿಗಳು ಅಥವಾ ರಾಜಕೀಯ ಪಕ್ಷಗಳು ಇರಬೇಕು ?

ಚುನಾವಣಾ ಆಯೋಗವು ಚುನಾವಣೆ ದಿನಾಂಕವನ್ನು ಅಧಿಕೃತವಾಗಿ ಘೋಷಣೆ ಮಾಡಿದ ಕ್ಷಣದಿಂದಲೇ ನೀತಿ ಸಂಹಿತೆ ಜಾರಿಯಾಗುತ್ತದೆ ಅದರಂತೆ ಆ ಸಮಯದಿಂದಲೇ ಸರ್ಕಾರದ ಸವಲತ್ತುಗಳನ್ನು ಬಳಸಿಕೊಳ್ಳುವಂತಿಲ್ಲ. ಸರ್ಕಾರ ತನ್ನ ಅಧಿಕಾರವನ್ನು ಆ ಸಂದರ್ಭದಲ್ಲಿ ಕಳೆದುಕೊಳ್ಳುತ್ತದೆ ಅಲ್ಲದೆ ಸರ್ಕಾರದಿಂದ ದೊರೆಯುವಂತಹ ಯಾವುದೇ ಸೌಲತ್ತುಗಳನ್ನು ಕೂಡ ಬಳಸಿಕೊಳ್ಳುವಂತಿಲ್ಲ.

  1. ಹೊಸ ಯೋಜನೆ ಘೋಷಣೆಯನ್ನು ಕೂಡ ಸರ್ಕಾರಗಳು ಮಾಡುವಂತಿಲ್ಲ.
  2. ಅಧಿಕಾರದಲ್ಲಿದ್ದ ಸರ್ಕಾರ ಹಿಂದಿನ ಬಜೆಟ್ ನಲ್ಲಿ ಘೋಷಣೆ ಮಾಡಲಾದ ಯೋಜನೆಗಳನ್ನು ನೀತಿ ಸಂಹಿತೆ ಜಾರಿಯಾದ ದಿನದಿಂದ ಮುಂದುವರಿಸಬಹುದೇ ಹೊರತು ಯಾವುದೇ ರೀತಿಯ ಹೊಸ ಯೋಜನೆಗಳನ್ನು ಅಥವಾ ವಿನಾಯಿತಿಗಳನ್ನು ಘೋಷಣೆ ಮಾಡುವ ಅಧಿಕಾರವಿರುವುದಿಲ್ಲ.
  3. ಯಾವುದೇ ರೀತಿಯ ಭರವಸೆ ಅಥವಾ ಯಾವುದೇ ಯೋಜನೆಗೆ ಶಂಕುಸ್ಥಾಪನೆ ನೆರವೇರಿಸುವುದು ಮತದಾರರ ಗಮನ ಸೆಳೆಯುವುದಕ್ಕಾಗಿ ನಿಷೇಧವಾಗಿದೆ.
  4. ಯಾವುದೇ ಯೋಜನೆಗಳ ಪರಿಶೀಲನಯನ್ನು ಶಾಸಕರು ಅಥವಾ ಸಚಿವರು ಮಾಡುವುದು ಉಲ್ಲಂಖಾನೆ ಮಾಡಿದಂತಾಗುತ್ತದೆ.
  5. ಹಾಗಾಗಿ ಹೊಸ ಸರ್ಕಾರಿ ಯೋಜನೆಗಳಿಗೆ ಸರ್ಕಾರ ಅನುದಾನ ನೀಡುವಂತಿಲ್ಲ.
  6. ಒಂದು ವೇಳೆ ಯೋಜನೆಗಳು ಚುನಾವಣೆ ಘೋಷಣೆಗೂ ಮುನ್ನ ಚಾಲ್ತಿಯಲ್ಲಿದ್ದರೆ ಎಲೆಕ್ಷನ್ ಮುಗಿಯುವವರೆಗೂ ಆ ಯೋಜನೆಗಳನ್ನು ನಿಲ್ಲಿಸಬೇಕು.
  7. ನೀತಿ ಸಂಹಿತೆ ಜಾರಿಯಲ್ಲಿರುವ ಸಂದರ್ಭದಲ್ಲಿ ಅಧಿಕಾರಿಗಳನ್ನು ವರ್ಗಾವಣೆ ಮಾಡುವಂತಿಲ್ಲ.
  8. ಚುನಾವಣೆಗೆ ನಿಯೋಜಿತಗೊಂಡ ಅಧಿಕಾರಿಗಳನ್ನು ಹೊರತುಪಡಿಸಿ ಯಾವುದೇ ಅಧಿಕಾರಿಗಳನ್ನು ಕೂಡ ವರ್ಗಾವಣೆ ಮಾಡುವ ಅವಕಾಶವಿರುವುದಿಲ್ಲ.
  9. ಚುನಾವಣಾ ಆಯೋಗದ ಒಪ್ಪಿಗೆ ಇಲ್ಲದೆ ಚುನಾವಣೆ ಕೆಲಸಗಳಿಗೆ ಕೆಲವು ಅಧಿಕಾರಿಗಳ ವಾಹನಗಳನ್ನು ಬಳಸುವಂತಿಲ್ಲ.
  10. ಅಧಿಕಾರಿಗಳ ನೇಮಕಾತಿ ಪ್ರಮೋಷನ್ ಕೂಡ ಚುನಾವಣಾ ಆಯೋಗದ ಒಪ್ಪಿಗೆ ಇಲ್ಲದೆ ಮಾಡುವುದನ್ನು ನಿಷೇಧ ಮಾಡಲಾಗಿದೆ.
  11. ಶಾಸಕರನ್ನು ಸಚಿವರನ್ನು ವೈಯಕ್ತಿಕ ವಿಷಯಗಳಿಗೆ ಯಾವುದೇ ಅಧಿಕಾರಿಗಳಾಗಲಿ ಭೇಟಿ ಮಾಡುವಂತಿಲ್ಲ.
  12. ಅಭ್ಯರ್ಥಿಗಳು ತಮ್ಮ ಪಕ್ಷದ ಪ್ರಚಾರಕ್ಕಾಗಿ ಸರ್ಕಾರದ ಹಣದಲ್ಲಿ ಜಾಹೀರಾತು ನೀಡಬಾರದು.
  13. ಪ್ರಿಂಟ್ ಮುದ್ರಣ ಮಾಧ್ಯಮಗಳಲ್ಲಾಗಲಿ ಜಾಹೀರಾತನ್ನು ಸರ್ಕಾರಿ ಹಣದಲ್ಲಿ ನೀಡುವಂತಿಲ್ಲ.
  14. ಧಾರ್ಮಿಕ ಸ್ಥಳಗಳಲ್ಲಿ ಚುನಾವಣಾ ಸಭೆಗಳನ್ನು ಪೋಸ್ಟರ್ ಕಟೌಟ್ ಬಳಸುವ ಮೂಲಕ ನಡೆಸುವಂತಿಲ್ಲ.
  15. ದೇವಸ್ಥಾನ ಮಸೀದಿ, ಚರ್ಚ್ಗಳಂತಹ ಧಾರ್ಮಿಕ ಸ್ಥಳಗಳಲ್ಲಿ ಚುನಾವಣೆ ಸಭೆಯನ್ನು ನಡೆಸಲು ಅನುಮತಿಯನ್ನು ಚುನಾವಣಾ ಆಯೋಗ ನೀಡುವುದಿಲ್ಲ.
    ಹೀಗೆ ಕೆಲವೊಂದು ನಿಯಮಗಳನ್ನು ರಾಜಕೀಯ ಪಕ್ಷಗಳು ಅಥವಾ ಅಭ್ಯರ್ಥಿಗಳು ಪಾಡಿಸಬೇಕಾಗುತ್ತದೆ.

ಹೀಗೆ ರಾಜ್ಯದಲ್ಲಿ ಚುನಾವಣೆ ಪ್ರಯುಕ್ತವಾಗಿ ಜಾರಿಯಾದ ನೀತಿ ಸಂಹಿತೆಯ ಪ್ರಕಾರವಾಗಿ ಎಲ್ಲಾ ಅಭ್ಯರ್ಥಿಗಳು ನಡೆದುಕೊಳ್ಳಬೇಕು ಹಾಗೂ ಮತದಾರರು ಕೂಡ ನಡೆದುಕೊಳ್ಳಬೇಕಾಗುತ್ತದೆ.

ಚುನಾವಣಾ ಸಮಯದಲ್ಲಿ ಅಭ್ಯರ್ಥಿಗಳು ಮತದಾರರನ್ನು ಓಲೈಸಲು ಮದ್ಯ ಹಣ ಸೀರೆಯಂತಹ ಉಡುಗೊರೆಗಳನ್ನು ನೀಡಬಾರದು ಹಾಗೂ ಬಾಡೂಟ ಹಾಕಿಸುವುದನ್ನು ಕೂಡ ನೀತಿ ಸಂಹಿತ ಪ್ರಕಾರ ನಿಷೇಧಿಸಲಾಗಿದೆ. ಜನಸಾಮಾನ್ಯರು ಕೂಡ ಚುನಾವಣೆ ಸಂದರ್ಭದಲ್ಲಿ ಹೆಚ್ಚು ಮತದ ಹಣವನ್ನು ತಮ್ಮೊಂದಿಗೆ ಇಟ್ಟುಕೊಳ್ಳುವಂತಿಲ್ಲ.

ಒಟ್ಟಾರೆ ದೇಶದಲ್ಲಿ ಲೋಕಸಭಾ ಚುನಾವಣೆಯ ಪ್ರಯುಕ್ತವಾಗಿ ಚುನಾವಣಾ ಆಯೋಗವು ನೀತಿ ಸಂಹಿತೆಯನ್ನು ಜಾರಿಗೆ ಮಾಡಿದ್ದು ಆ ಪ್ರಕಾರವಾಗಿಯೇ ಅಭ್ಯರ್ಥಿಗಳು ಶಾಸಕರು ಹಾಗೂ ಜನಸಾಮಾನ್ಯರು ಕೂಡ ನಡೆದುಕೊಳ್ಳಬೇಕು. ಒಂದು ವೇಳೆ ನೀತಿ ಸಂಹಿತೆ ಗೆ ಅನುಗುಣವಾಗಿ ನಡೆದುಕೊಳ್ಳದಿದ್ದರೆ ಅವರ ವಿರುದ್ಧ ಕಠಿಣ ಕ್ರಮವನ್ನು ಚುನಾವಣಾ ಆಯೋಗ ತೆಗೆದುಕೊಳ್ಳುತ್ತದೆ ಹಾಗಾಗಿ ಈ ಮಾಹಿತಿಯ ಬಗ್ಗೆ ಪ್ರತಿಯೊಬ್ಬರಿಗೂ ಶೇರ್ ಮಾಡಿ ಧನ್ಯವಾದಗಳು.

ಇತರೆ ವಿಷಯಗಳು :

Spread the love

Leave a Reply

Your email address will not be published. Required fields are marked *