ನಮಸ್ಕಾರ ಸ್ನೇಹಿತರೆ ಸಾಕಷ್ಟು ಜನಪ್ರಿಯತೆಯನ್ನು ದೇಶದಲ್ಲಿ ಮೇಟ ಮಾಲಿಕತ್ವದ ವಾಟ್ಸಪ್ ಪಡೆದಿದೆ ಎಂದು ಹೇಳಿದರೆ ತಪ್ಪಾಗಲಾರದು. ಮೇಟ ಕಂಪನಿಯು ಇದೀಗ ವಾಟ್ಸಪ್ ಬಳಕೆದಾರರಿಗೆ ಹೊಸ ಹೊಸ ಫೀಚರ್ಗಳನ್ನು ನೀಡುವ ಮೂಲಕ ಇನ್ನಷ್ಟು ಗ್ರಾಹಕರನ್ನು ಸೆಳೆಯುತ್ತಿದೆ ಎಂದು ಹೇಳಬಹುದು.
ಮೊಬೈಲ್ ಬಳಸುವಂತಹ ಪ್ರತಿಯೊಬ್ಬರೂ ಕೂಡ ವಾಟ್ಸಪ್ ಅನ್ನು ಬಳಸುವುದು ಸಹಜವಾಗಿದ್ದು ಕೆಲವರ ದಿನ ವಾಟ್ಸಪ್ ಬಳಸಲು ಆರಂಭವಾಗುವುದಿಲ್ಲ ಎಂದು ಹೇಳಿದರೆ ತಪ್ಪಾಗಲಾರದು. ಇದೀಗ ಕಂಪನಿಯು ವಾಟ್ಸಾಪ್ ಬಳಕೆದಾರರಿಗೆ ಹೊಸ ಹೊಸ ಫೀಚರ್ಗಳನ್ನು ನೀಡುತ್ತಿದ್ದು ಯಾವ ರೀತಿಯ ಬದಲಾವಣೆಗಳನ್ನು ಮಾಡಿದೆ ಎಂಬುದನ್ನು ಈ ಲೇಖನದಲ್ಲಿ ತಿಳಿಯಬಹುದು.
Contents
ವಾಟ್ಸಪ್ ಬಳಸುವವರಿಗೆ ಸಿಹಿ ಸುದ್ದಿ :
ಅದರಂತೆ ಇನ್ನೂ ಈ ಹಿಂದೆ ನಾವು ಬಳಸುತ್ತಿದ್ದಂತಹ ವಾಟ್ಸಪ್ ಹಾಗೂ ಈಗ ಬಳಸುತ್ತಿರುವಂತಹ ವಾಟ್ಸಪ್ ಬಹಳ ವ್ಯತ್ಯಾಸವಿದ್ದು ಸಂಪೂರ್ಣವಾಗಿ ವಾಟ್ಸಪ್ ಬದಲಾಗಿದೆ ಎಂದು ಹೇಳಿದರೆ ತಪ್ಪಾಗಲಾರದು ಏಕೆಂದರೆ ವಾಟ್ಸಾಪ್ ಚಾಟಿಂಗ್ ನಿಂದ ಹಿಡಿದು ವಾಟ್ಸಪ್ ಸ್ಟೇಟಸ್ ನಲ್ಲಿಯೂ ಕೂಡ ಸಂಪೂರ್ಣವಾದಂತಹ ಬದಲಾವಣೆಯನ್ನು ಕಾಣಬಹುದು.
ಸದ್ಯದ ವಾಟ್ಸಪ್ ಸ್ಟೇಟಸ್ ನಲ್ಲಿ ಹೊಸ ಅಪ್ ಡೇಟ್ ಅನ್ನು ಪರಿಚಯಿಸಲು ಮುಂದಾಗಿದ್ದು ಈ ನೂತನ ಫೀಚರ್ ಸಾಕಷ್ಟು ಪ್ರೈವಸಿ ಸ್ಟೇಟಸ್ ಅಪ್ಲೋಡ್ ಮಾಡುವವರಿಗೆ ಸಹಾಯವಾಗಲಿದೆ ಎಂದು ಹೇಳಬಹುದು.
ಇದನ್ನು ಓದಿ : SSP ವಿದ್ಯಾರ್ಥಿ ವೇತನಕ್ಕೆ ಅರ್ಜಿ ಸಲ್ಲಿಸಿರುವವರು ಈ ಕೆಲಸವನ್ನು ಕೂಡಲೇ ಮಾಡಿ : ಇಲ್ಲಿದೆ ಲಿಂಕ್
ವಾಟ್ಸಾಪ್ ಸ್ಟೇಟಸ್ ನಲ್ಲಿ ಬದಲಾವಣೆ :
ವಾಟ್ಸಪ್ ನಲ್ಲಿ ಸಾಮಾನ್ಯವಾಗಿ ಸ್ಟೇಟಸ್ ಹಾಕಿದ್ದಾರೆ ಅದು 24 ಗಂಟೆಗಳ ನಂತರ ಕ್ಯಾನ್ಸಲ್ ಆಗುತ್ತದೆ ಇದು ಎಲ್ಲರಿಗೂ ತಿಳಿದಿರುವ ವಿಷಯ ಅದರಂತೆ ವಿಶ್ ಅನೇಕ ರೀತಿಯ ವಿಶೇಷತೆಗಳು ವಾಟ್ಸಪ್ ಸ್ಟೇಟಸ್ ನಲ್ಲಿ ಇವೆ. ವಾಟ್ಸಪ್ ಅಪ್ಲೋಡ್ ಮಾಡುವಂತ ಸಂದರ್ಭದಲ್ಲಿ ಸ್ಟೇಟಸ್ ಅನ್ನು ಯಾರಿಗೆ ಮಾತ್ರ ಹಾಕಬೇಕು ಎನ್ನುವ ಆಯ್ಕೆ ಬಳಕೆದಾರರಿಗೆ ಸಿಗುತ್ತದೆ.
ಇನ್ನು ಬಳಕೆದಾರರು ಕೆಲವೊಂದು ಸಮಯದಲ್ಲಿ ತಮಗೆ ಬೇಕಾದ ವ್ಯಕ್ತಿ ಗಳಿಗೆ ಮಾತ್ರ ಸ್ಟೇಟಸ್ ಅನ್ನು ಹಾಕಲು ಬಯಸುತ್ತಾರೆ ಅದರಂತೆ ನಾವು ಯಾರಿಗೆ ಸ್ಟೇಟಸ್ ಅನ್ನು ಹಾಕಲು ಬಯಸುತ್ತೀವೋ ಅಂತಹ ಸಮಯದಲ್ಲಿ ಅವರನ್ನು ಬಿಟ್ಟು ಬೇರೆಯವರನ್ನು ಹೈಡ್ ಮಾಡಬೇಕಾಗುತ್ತದೆ
ಇನ್ನು ನೀವು ಯಾರು ನೋಡಬೇಕು ಎಂದು ಸ್ಟೇಟಸ್ ಹಾಕಿರುತ್ತೀರೋ ಅವರು ನೋಡದೆ ಇದ್ದಾಗ ಕೇವಲ 24 ಗಂಟೆ ವಾಟ್ಸಾಪ್ ಸ್ಟೇಟಸ್ ಅವಧಿ ಆಗಿರುವುದರಿಂದ ಆಟೋಮೆಟಿಕ್ ಆಗಿ ಅದು ಡಿಲೀಟ್ ಆಗಿರುತ್ತದೆ ಆದರೆ ಇನ್ನು ಮುಂದೆ ಅಂತಹ ಸಮಸ್ಯೆ ಎದುರಿಸುವ ಅಗತ್ಯವಿಲ್ಲ ಇದೇ ಕಾರಣಕ್ಕಾಗಿ ಕಂಪನಿ ಈಗ ಹೊಸ ಫೀಚರ್ ಅನ್ನು ಬಿಡುಗಡೆ ಮಾಡಿದೆ.
ಮೆನ್ಷನ್ ಫೀಚರ್ ಬಿಡುಗಡೆ :
ನೀವು ಯಾರಿಗೆ ಪ್ರತ್ಯೇಕವಾಗಿ ಸ್ಟೇಟಸ್ ಅನ್ನು ವಾಟ್ಸಾಪ್ನಲ್ಲಿ ಹಾಕುತ್ತಿರೋ ಅವರಿಗೆ ಒಂದು ನೋಟಿಫಿಕೇಶನ್ ತಲುಪುತ್ತದೆ. ನಿಮ್ಮ ಸ್ಟೇಟಸ್ ಅನ್ನು ನೀವು ಪೋಸ್ಟ್ ಮಾಡುವಂತ ಸಂದರ್ಭದಲ್ಲಿ ನಮೂದಿಸುವ ಸಂಪರ್ಕವನ್ನು ತಕ್ಷಣವೇ ನೋಟಿಫಿಕೇಶನ್ ಅನ್ನು ಸ್ವೀಕರಿಸುತ್ತದೆ.
ಅದರ ಮೂಲಕ ಅವರು ನಿಮ್ಮ ಸ್ಟೇಟಸ್ ಅನ್ನು ನೋಡಬಹುದಾಗಿದೆ ಇನ್ನು ಮುಂದೆ ಸ್ಟೇಟಸ್ ಹಾಕಿದರೆ ಅವರು ನೋಡಿದ್ದಾರೋ ಇಲ್ಲವೋ ಎಂಬುದನ್ನು ಪದೇಪದೇ ಚೆಕ್ ಮಾಡುವಂತಹ ಅಗತ್ಯವಿರುವುದಿಲ್ಲ. ಯಾರು ನೋಡಿದ್ದಾರೆ ಎನ್ನುವ ಬಗ್ಗೆ ನಿಮಗೆ ವಾಟ್ಸಪ್ ನೋಟಿಫಿಕೇಶನ್ ಕಳುಹಿಸಲಾಗುತ್ತದೆ.
ಒಟ್ಟಾರೆ ಮೇಠ ಕಂಪನಿಯು ವಾಟ್ಸಾಪ್ ಬಳಕೆದಾರರಿಗೆ ಹೊಸ ಹೊಸ ಫೀಚರ್ಗಳನ್ನು ಪರಿಚಯಿಸುತ್ತಿದ್ದು ಇದೀಗ ವಾಟ್ಸಪ್ ಮೆನ್ಷನ್ ಫೀಚರನ್ನು ಬಿಡುಗಡೆ ಮಾಡಿದೆ ಇದರಿಂದ ಸುಲಭವಾಗಿ ನಮ್ಮ ಸ್ಟೇಟಸ್ ಅನ್ನು ಅವರು ನೋಡಿದ್ದಾರೋ ಇಲ್ಲವೋ ಎಂಬುದನ್ನು ತಿಳಿಯಬಹುದಾಗಿದೆ.
ಹಾಗಾಗಿ ಈ ಮಾಹಿತಿಯನ್ನು ಪ್ರತಿಯೊಬ್ಬರಿಗೂ ಶೇರ್ ಮಾಡುವ ಮೂಲಕ ಇನ್ನು ಮುಂದೆ ವಾಟ್ಸಾಪ್ನಲ್ಲಿ ಮೆನ್ಷನ್ ಫೀಚರ್ ಬಿಡುಗಡೆಯಾಗಲಿದೆ ಎಂದು ತಿಳಿಸಿ ಧನ್ಯವಾದಗಳು.