ನಮಸ್ಕಾರ ಸ್ನೇಹಿತರೇ ದಿನೇ ದಿನೇ ದೇಶದಾದ್ಯಂತ ಲೋಕಸಭಾ ಚುನಾವಣೆಯ ಕಾವು ಹೆಚ್ಚಾಗುತ್ತಿದೆ ಒಂದು ಕಡೆ ಕರ್ನಾಟಕ ಸರ್ಕಾರವು ಸೇರಿದಂತೆ ದೇಶದ ಹಲವು ರಾಜ್ಯಗಳು ಬರಗಾಲದಿಂದ ತತ್ತರಿಸಿವೆ. ರೈತರ ಸಂಕಷ್ಟಗಳು ತೀರ ಹೇಳದಂತಾಗಿದೆ ರೈತರು ಮಳೆ ಕೊರತೆಯಿಂದ ಬೆಳೆ ನಷ್ಟ ಕೀಡಾಗಿದ್ದು ಅವರಿಗೆ ಪರ ಪರಿಹಾರ ಬೆಳೆ ನಷ್ಟ ಪರಿಹಾರಕ್ಕಾಗಿ ಅಂಗಲಾಚುವಂತ ಪರಿಸ್ಥಿತಿ ಉಂಟಾಗಿದೆ.
ಇಂತಹ ಸಂಕಷ್ಟದ ಪರಿಸ್ಥಿತಿಯಲ್ಲಿಯೇ ಚುನಾವಣೆಯ ನಿಮಿತ್ತ ರಾಜಕೀಯ ಪಕ್ಷಗಳು ಹೊಸ ಹೊಸ ಭರವಸೆಗಳನ್ನು ನೀಡುತ್ತಿದ್ದು ಅದರಲ್ಲಿಯೂ ರೈತರಿಗೆ ಸಾಕಷ್ಟು ಗ್ಯಾರಂಟಿಗಳನ್ನು ಕೂಡ ನೀಡಲು ನಿರ್ಧರಿಸುವೆ.
Contents
ಇಂಡಿಯಾ ಮೈತ್ರಿಕೂಟ :
ಇಂಡಿಯಾ ಮೈತ್ರಿಕೂಟ ಅಧಿಕಾರಕ್ಕೆ ಬಂದರೆ ಈಗಾಗಲೇ ದೇಶದ ರೈತರ ಸಾಲ ಮನ್ನಾ ಮಾಡಲಾಗುವುದೆಂದು ಕಾಂಗ್ರೆಸ್ ಪಕ್ಷವು ರೈತರಿಗೆ ಘೋಷಣೆ ಮಾಡಿದೆ ಅದರ ಜೊತೆಗೆ ಹೊಸ ಕಾಯ್ದೆಯನ್ನು ರೈತರ ರಕ್ಷಣೆಗಾಗಿ ಜಾರಿ ಮಾಡಲಾಗುತ್ತದೆ gst ವ್ಯಾಪ್ತಿಯಿಂದ ಕೃಷಿ ಹೊರಗೆ ಇರಲಿದೆ.
ಕನಿಷ್ಠ ಬೆಂಬಲ ಬೆಲೆಯ ಖಾತ್ರಿ ನೀಡಲು ರೈತರಿಗೆ ಸ್ವಾಮಿನಾಥನ್ ಸಮಿತಿಯ ವರದಿಯು ಜಾರಿಯಾದಂತಹ ಭರವಸೆಗಳನ್ನು ನೀಡಲಾಗಿದ್ದು ರೈತರ ಉತ್ಪನ್ನಗಳಿಗೆ ಬೆಲೆ ಸಂರಕ್ಷಣೆ ಬೆಳೆ ವಿಮೆ ಯೋಜನೆಯ ಸ್ವರೂಪ ಬದಲಾವಣೆ ಹೀಗೆ ಅನೇಕ ರೀತಿಯ ಭರವಸೆಗಳನ್ನು ಕಾಂಗ್ರೆಸ್ ಪಕ್ಷವು ದೇಶದಲ್ಲಿರುವ ರೈತರಿಗೆ ನೀಡುತ್ತಿದೆ.
ಇದನ್ನು ಓದಿ : 1000 ಗ್ರಾಮ ಆಡಳಿತ ಅಧಿಕಾರಿ ಹುದ್ದೆಗಳಿಗೆ ಅರ್ಜಿ ಆಹ್ವಾನ! ಪಿಯುಸಿ ಪಾಸ್ ಆದ್ರೆ ಸಾಕು
ರೈತರ ಎರಡು ಲಕ್ಷ ರೂಪಾಯಿ ಸಾಲ ಮನ್ನಾ :
ದೇಶದಲ್ಲಿ ನಡೆಯುತ್ತಿರುವ ಲೋಕಸಭಾ ಚುನಾವಣೆಯ ಹಿನ್ನೆಲೆಯಲ್ಲಿ ಕೇಳಿ ಬರುತ್ತಿರುವ ಘೋಷಣೆಗಳು ಒಂದು ಕಡೆಯಾದರೆ ಮತ್ತೊಂದು ಕಡೆ ಮೇ 13 ರಂದು ನಡೆಯಲಿರುವ ಆಂಧ್ರಪ್ರದೇಶದ ವಿಧಾನಸಭಾ ಚುನಾವಣೆಯ ಹಿನ್ನೆಲೆಯಲ್ಲಿ ಅಲ್ಲಿನ ಪಕ್ಷಗಳು ರೈತರ ಸಾಲ ಮನ್ನಾ ಕುರಿತು ಮತ್ತಷ್ಟು ಘೋಷಣೆಗಳನ್ನು ಹೊರಡಿಸುತ್ತಿವೆ.
ತೆಲಂಗಾಣ ಹಾಗೂ ಕರ್ನಾಟಕ ವಿಧಾನಸಭಾ ಚುನಾವಣೆಗಳಲ್ಲಿ ಗ್ಯಾರೆಂಟಿ ಯೋಜನೆಗಳ ಮೂಲಕ ಅಧಿಕಾರವನ್ನು ಪಡೆದಿರುವ ಕಾಂಗ್ರೆಸ್ ಪಕ್ಷವು ಇದೀಗ ಅದೇ ತಂತ್ರವನ್ನು ಆಂಧ್ರಪ್ರದೇಶದ ವಿಧಾನಸಭಾ ಚುನಾವಣೆಯಲ್ಲಿ ಕೂಡ ಪ್ರಯೋಗಿಸುತ್ತಿದೆ.
ಆಂಧ್ರಪ್ರದೇಶ ವಿಧಾನಸಭಾ ಚುನಾವಣೆ :
ಕಾಂಗ್ರೆಸ್ ಪಕ್ಷವು ಆಂಧ್ರಪ್ರದೇಶ ವಿಧಾನಸಭಾ ಚುನಾವಣೆ ಗಾಗಿ ಬಡ ಕುಟುಂಬಕ್ಕೆ ವಾರ್ಷಿಕ ಒಂದು ಲಕ್ಷ ರೂಪಾಯಿಗಳ ಪ್ರೋತ್ಸಾಹ ಧನ 2 ಲಕ್ಷ ರೂಪಾಯಿಗಳ ರೈತರ ಸಾಲ ಮನ್ನಾ ಸೇರಿದಂತೆ ಒಟ್ಟು ಒಂಬತ್ತು ಗ್ಯಾರಂಟಿ ಘೋಷಣೆಗಳನ್ನು ಹೊರಡಿಸಿದೆ.
ಆಂಧ್ರಪ್ರದೇಶದ ಕಾಂಗ್ರೆಸ್ ಸಮಿತಿ ಅಧ್ಯಕ್ಷ ವೈ ಎಸ್ ಶರ್ಮಿಳಾ ಅವರು ಹಲವು ಗ್ಯಾರೆಂಟಿ ಯೋಜನೆಗಳನ್ನು ಕಳೆದ ಮಾರ್ಚ್ 30ರಂದು ಒಳಗೊಂಡಿರುವ ಚುನಾವಣಾ ಪ್ರಣಾಳಿಕೆಯನ್ನು ಬಿಡುಗಡೆ ಮಾಡಿದ್ದಾರೆ. ಮಹಾಲಕ್ಷ್ಮಿ ಯೋಗ ಮಹಿಳೆಯರಿಗೆ ಕರ್ನಾಟಕದಲ್ಲಿ ಕಾಂಗ್ರೆಸ್ ಸರ್ಕಾರ ಜಾರಿಗೊಳಿಸಿರುವ ಪ್ರತಿ ತಿಂಗಳು ರೂ.2000ಗಳನ್ನು ಮಹಿಳೆಯರಿಗೆ ನೀಡುವ ಗೃಹಲಕ್ಷ್ಮಿ ಯೋಜನೆ ಅಂತೆ ಆಂಧ್ರಪ್ರದೇಶದಲ್ಲಿ ಕಾಂಗ್ರೆಸ್ ಪಕ್ಷವು ಮಹಾಲಕ್ಷ್ಮಿ ಯೋಜನೆಯನ್ನು ಮಹಿಳೆಯರಿಗೆ ಘೋಷಣೆ ಮಾಡಿದೆ.
ಪ್ರತಿ ಬಡ ಕುಟುಂಬಕ್ಕೆ ಈ ಯೋಜನೆಯಡಿಯಲ್ಲಿ 8500 ಗಳಂತೆ ವಾರ್ಷಿಕ ಒಂದು ಲಕ್ಷ ರೂಪಾಯಿ ನೀಡುವುದಾಗಿ ಕಾಂಗ್ರೆಸ್ ಪಕ್ಷವು ಹೇಳಿದೆ. ಇವುಗಳಲ್ಲದೆ ಇನ್ನೂ ಕೆಲವು ಘೋಷಣೆಗಳನ್ನು ಕಾಂಗ್ರೆಸ್ ಪಕ್ಷ ನೀಡಿದೆ.
- ರೈತರಿಗೆ ಕನಿಷ್ಠ ಬೆಂಬಲ ಬೆಲೆಯ ಜೊತೆಗೆ ಶೇಕಡ 50ರಷ್ಟು ಹೆಚ್ಚುವರಿ ಹಣ ನೀಡಲಾಗುತ್ತದೆ.
- ಕನಿಷ್ಠ ದಿನದ ಕೂಲಿ 400 ರೂಪಾಯಿಗಳಿಗೆ ಉದ್ಯೋಗ ಖಾತ್ರಿ ಯೋಜನೆ ಅಡಿಯಲ್ಲಿ ಏರಿಕೆ ಮಾಡಲಾಗಿದೆ.
- ಎಲ್ ಕೆ ಜಿ ಇಂದ ಪಿಜಿ ವರೆಗಿನ ಮಕ್ಕಳಿಗೆ ಉಚಿತ ಶಿಕ್ಷಣ ಪ್ರತಿ ವಸತಿ ರಹಿತ ಕುಟುಂಬಕ್ಕೆ 5 ಲಕ್ಷಗಳ ವೆಚ್ಚದಲ್ಲಿ ಮನೆ ನಿರ್ಮಾಣ ಮಾಡಿಕೊಡಲು ಘೋಷಣೆ ಮಾಡಿದೆ.
ಹೀಗೆ ಹಲವರು ಘೋಷಣೆಗಳನ್ನು ಕಾಂಗ್ರೆಸ್ ಪಕ್ಷವು ಆಂಧ್ರಪ್ರದೇಶದ ವಿಧಾನಸಭಾ ಚುನಾವಣೆಯ ಹಿನ್ನೆಲೆಯಲ್ಲಿ ಘೋಷಣೆ ಮಾಡಿದೆ.
ಒಟ್ಟಾರೆ ಆಂಧ್ರಪ್ರದೇಶದಲ್ಲಿ ನಡೆಯುತ್ತಿರುವ ವಿಧಾನಸಭಾ ಚುನಾವಣೆಯ ಹಿನ್ನೆಲೆಯಲ್ಲಿ ಕಾಂಗ್ರೆಸ್ ಪಕ್ಷವು ಹಲವಾರು ಗ್ಯಾರಂಟಿ ಯೋಜನೆಗಳನ್ನು ಘೋಷಣೆ ಮಾಡಿದ್ದು ಅದರಲ್ಲಿಯೂ ಮುಖ್ಯವಾಗಿ ರೈತರಿಗೆ ಎರಡು ಲಕ್ಷ ರೂಪಾಯಿಗಳವರೆಗಿನ ಸಾಲವನ್ನು ಮನ್ನಾ ಮಾಡುವುದಾಗಿ ಘೋಷಣೆ ಮಾಡಿದೆ.
ಇದರಿಂದ ರೈತರು ಯಾರಿಗೆ ವೋಟ್ ಮಾಡಲಿದ್ದಾರೆ ಎಂಬುದನ್ನು ಮುಂದಿನ ದಿನಗಳಲ್ಲಿ ಕಾದು ನೋಡಬೇಕಾಗಿದೆ ಹಾಗಾಗಿ ಈ ಮಾಹಿತಿಯ ಬಗ್ಗೆ ಪ್ರತಿಯೊಬ್ಬರಿಗೂ ಶೇರ್ ಮಾಡಿ ಧನ್ಯವಾದಗಳು.