ನಮಸ್ಕಾರ ಸ್ನೇಹಿತರೆ 202324 ನೇ ಸಾಲಿನ ಕರ್ನಾಟಕ ಎಸ್ ಎಸ್ ಎಲ್ ಸಿ ಪರೀಕ್ಷೆ ಬರೆದ ವಿದ್ಯಾರ್ಥಿಗಳು ಹಾಗೂ ಇವರ ಪೋಷಕರು ಇವತ್ತಿನ ಲೇಖನದಲ್ಲಿ ತಿಳಿಸಲಾಗುತ್ತಿರುವಂತಹ ಮಾಹಿತಿಯನ್ನು ತಿಳಿದುಕೊಳ್ಳಲೇಬೇಕು. ಇವತ್ತಿನ ಲೇಖನದಲ್ಲಿ 2023 ಮತ್ತು 24 ನೇ ಸಾಲಿನ ಈ ಪರೀಕ್ಷೆ ಮೌಲ್ಯಮಾಪನ ರಿಸಲ್ಟ್ ಕುರಿತಂತೆ ಸಾಕಷ್ಟು ಮಾಹಿತಿಯನ್ನು ಇದೀಗ ತಿಳಿಯಬಹುದು.
Contents
ಎಸ್ ಎಸ್ ಎಲ್ ಸಿ ಪರೀಕ್ಷೆ :
ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯ ನಿರ್ಣಯ ಮಂಡಳಿಯಿಂದ ಎಸ್ ಎಸ್ ಎಲ್ ಸಿ ವಿದ್ಯಾರ್ಥಿಗಳಿಗೆ ಒಟ್ಟು ಮೂರು ಪರೀಕ್ಷೆಗಳನ್ನು ಪ್ರಸಕ್ತ ಶೈಕ್ಷಣಿಕ ಸಾಲಿನಿಂದ ನಡೆಸಲಾಗುತ್ತದೆ ಅಂದರೆ ಈಗಾಗಲೇ ಎಸ್ ಎಸ್ ಎಲ್ ಸಿ ಪರೀಕ್ಷೆ ಒಂದು ಪ್ರಾರಂಭವಾಗಿದ್ದು ಏಪ್ರಿಲ್ ಆರರಂದು ಅಂತ್ಯವಾಗುತ್ತದೆ.
ವಿದ್ಯಾರ್ಥಿಗಳಲ್ಲಿ ಪರೀಕ್ಷೆ ಮುಗಿಯುತ್ತಿದ್ದಂತೆ ಹಾಗೂ ಪೋಷಕರಲ್ಲಿ ಎಷ್ಟು ಬೇಗ ಮೌಲ್ಯಮಾಪನ ಮುಗಿಯುತ್ತದೆ ಆದಷ್ಟು ಬೇಗ ಫಲಿತಾಂಶ ಬರುತ್ತದೆ ಎನ್ನುವ ಪ್ರಶ್ನೆ ಮೂಡುವುದರಲ್ಲಿ ಯಾವುದೇ ಸಂಶಯವಿಲ್ಲ ಇದೀಗ ಈ ಪ್ರಶ್ನೆಗಳಿಗೆ ಉತ್ತರ ಸಿಕ್ಕಿದೆ.
ಕೆಎಸ್ಇಎಬಿ ಇಂದ ಮೂರು ಪರೀಕ್ಷೆ :
ಪೂರಕ ಪರೀಕ್ಷೆಯಲ್ಲದ ಮೂರು ಪರೀಕ್ಷೆಗಳನ್ನು ಈ ಬಾರಿ ಎಸ್ ಎಲ್ ಸಿ ವಿದ್ಯಾರ್ಥಿಗಳಿಗೆ ನಡೆಸುವ ಹಿನ್ನೆಲೆಯಲ್ಲಿ ಬಹುವೇಗ ಪರೀಕ್ಷೆ ಒಂದರಲ್ಲಿ ರಿಸಲ್ಟ್ ಅನ್ನು ಪ್ರಕಟಿಸಬೇಕಾದಂತಹ ಅನಿವಾರ್ಯತೆ ಉಂಟಾಗಿದೆ. ಆದ್ದರಿಂದ ಎಸ್ ಎಸ್ ಎಲ್ ಸಿ ವಿದ್ಯಾರ್ಥಿ ವಿದ್ಯಾರ್ಥಿಗಳು ಪರೀಕ್ಷೆಯ ಉತ್ತರ ಪತ್ರಿಕೆಯ ಮೌಲ್ಯಮಾಪನ ಪ್ರಕ್ರಿಯೆಯನ್ನು ಮಂಡಳಿಯು ಏಪ್ರಿಲ್ 15ರಿಂದಲೇ ನಡೆಸಲು ಕ್ರಮ ಕೈಗೊಂಡಿದೆ.
ಈ ಮೌಲ್ಯಮಾಪನವನ್ನು ಸರ್ಕಾರ ನಿಷ್ಪಕ್ಷಪಾತ ಕಾರ್ಯದರ್ಶಿಕ ಹಾಗೂ ಎಚ್ಚರಿಕೆಯಿಂದ ನಡೆಸಲು ಕ್ರಮ ಕೈಗೊಳ್ಳುವಂತೆ ಜಿಲ್ಲಾ ಉಪ ನಿರ್ದೇಶಕರಿಗೆ ಸೂಚನೆಯನ್ನು ಮಂಡಳಿಯೂ ಸಹ ನೀಡಿದೆ. ಅಲ್ಲದೆ ಇದು ವ್ಯಾಲ್ಯೂಯೇಷನ್ ಪ್ರಕ್ರಿಯೆ ಡಿಡಿಪಿಐಗಳು ನಿರ್ವಹಿಸಬೇಕಾದಂತಹ ಜವಾಬ್ದಾರಿ ಮತ್ತು ಕರ್ತವ್ಯಗಳ ಮಾರ್ಗಸೂಚಿಯನ್ನು ಮಂಡಳಿಯು ಪ್ರಕಟಿಸಿದೆ ಎಂದು ಹೇಳಬಹುದು.
ಇದನ್ನು ಓದಿ : ಮಕ್ಕಳ ಸಹಾಯಧನ ಹೆಚ್ಚಳಕ್ಕೆ ನಿರ್ಧಾರ : ನಿಮ್ಮ ಮಕ್ಕಳಿಗೆ ಎಷ್ಟು ಹಣ ಸಿಗುತ್ತೆ ನೋಡಿ !
ಏಪ್ರಿಲ್ 15ರಿಂದ ಉತ್ತರ ಪತ್ರಿಕೆಗಳ ಮೌಲ್ಯಮಾಪನ ಪ್ರಾರಂಭ :
ಏಪ್ರಿಲ್ 15 ರಂದು ಕರ್ನಾಟಕದ ರಾಜ್ಯದ ಉತ್ತರ ಪತ್ರಿಕೆಗಳ ಮೌಲ್ಯಮಾಪನ ಪ್ರಾರಂಭಗೊಳ್ಳಲಿದೆ ಎಲ್ಲ ಮೂಲಸೌಕರ್ಯಗಳನ್ನು ಮೌಲ್ಯಮಾಪಕರಿಗೆ ಕಲ್ಪಿಸಬೇಕು ಸಲಹೆಸರಿಯಾಗಿ ಮೌಲ್ಯಮಾಪಕರು ಹಾಜರಾಗುವಂತೆ ಕ್ರಮ ಕೈಗೊಳ್ಳಬೇಕು ಕಡ್ಡಾಯವಾಗಿ ಮೊಬೈಲ್ ಬಳಕೆಯನ್ನು ನಿಷೇಧಿಸಲಾಗಿದೆ.
ರಾಜಕೀಯ ವ್ಯಕ್ತಿಗಳು ಕೇಂದ್ರಕ್ಕೆ ಚುನಾವಣೆಯ ಹಿನ್ನೆಲೆಯಲ್ಲಿ ಭೇಟಿ ನೀಡುವುದನ್ನು ಕಡ್ಡಾಯವಾಗಿ ನಿಷೇಧಿಸಲಾಗಿದೆ. ಶಾಲಾ ಕಟ್ಟಡದ 200 ಮೀಟರ್ ಪ್ರದೇಶವನ್ನು ಮೌಲ್ಯಮಾಪನದ ಕಾರ್ಯ ನಡೆಸಲಾಗುವ ಕೇಂದ್ರಗಳಲ್ಲಿ ನಿಷೇಧಿತವೆಂದು ಘೋಷಣೆ ಮಾಡಲು ಕ್ರಮ ಕೈಗೊಳ್ಳಲಾಗುತ್ತದೆ. ಅದನ್ನು ಪಾಲಿಸಲು ಕೂಡ ಸೂಚನೆಯನ್ನು ನೀಡಲಾಗಿದೆ.
ಎಸ್ ಎಸ್ ಎಲ್ ಸಿ ಪರೀಕ್ಷೆ ಒಂದರಲ್ಲಿ ರಿಸಲ್ಟ್ ಯಾವಾಗ ?
ಮೌಲ್ಯಮಾಪನ ಕಾರ್ಯ ಏಪ್ರಿಲ್ 15 ರಂದು ಆರಂಭವಾಗುವ ಹಿನ್ನೆಲೆಯಲ್ಲಿ ನೋಡುವುದಾದರೆ ಮೇಂಟರಂದು ಅಥವಾ ಮೇ 15ರ ನಂತರವೇ sslc ಪರೀಕ್ಷೆ ರಿಸಲ್ಟ್ ಅನ್ನು ನಿರೀಕ್ಷಿಸಬಹುದಾಗಿದೆ. ಮರು ಮೌಲ್ಯಮಾಪನ ಫಲಿತಾಂಶವನ್ನು ಮೇ 23 ರಂದು ಪ್ರಕಟ ಮಾಡುವ ಕುರಿತು ಈ ಹಿಂದೆ ಕೆ ಎಸ್ ಇ ಎ ಬಿ ತಿಳಿಸಿತ್ತು.
ಈ ಕಾರಣಕ್ಕಾಗಿ ರಿಸಲ್ಟ್ ಬಿಡುಗಡೆ ಮಾಡಲು ಈ ಪ್ರಕ್ರಿಯೆಗಳನ್ನು ಮುಗಿಸಿ ಒಂದು ತಿಂಗಳಾದರೂ ಕಾಲಾವಕಾಶ ಬೇಕಾಗುತ್ತದೆ. ವಿದ್ಯಾರ್ಥಿಗಳು ಎಸ್ ಎಸ್ ಎಲ್ ಸಿ ಪರೀಕ್ಷಾ ಫಲಿತಾಂಶವನ್ನು ತಿಳಿದುಕೊಳ್ಳಬೇಕಾದರೆ https://kseab.karnataka.gov.in ಅಥವಾ https://karresults.nic.in ವೆಬ್ ಸೈಟ್ ಗೆ ಭೇಟಿ ನೀಡಿ ತಮ್ಮ ರಿಜಿಸ್ಟರ್ ಅನ್ನು ನಮೂದಿಸುವುದರ ಮೂಲಕ ಫಲಿತಾಂಶವನ್ನು ಚೆಕ್ ಮಾಡಬಹುದಾಗಿದೆ.
ವಿದ್ಯಾರ್ಥಿಗಳು ಎಸ್ ಎಸ್ ಎಲ್ ಸಿ ಪರೀಕ್ಷೆ ಒಂದರ ಫಲಿತಾಂಶವನ್ನು ಮೇ 8 ಅಥವಾ ಮೇ ದರ ನಂತರವೇ ತಿಳಿದುಕೊಳ್ಳಬಹುದಾಗಿದೆ ಹಾಗಾಗಿ ಎಸ್ ಎಸ್ ಎಲ್ ಸಿ ಪರೀಕ್ಷೆಯ ಫಲಿತಾಂಶ ಯಾವಾಗ ಪ್ರಕಟಣೆಯಾಗುತ್ತದೆ ಎಂದು ಕುತೂಹಲದಿಂದ ಕಾಯುತ್ತಿರುವ ವಿದ್ಯಾರ್ಥಿಗಳು ಹಾಗೂ ಪೋಷಕರಿಗೆ ಈ ಮಾಹಿತಿಯನ್ನು ಶೇರ್ ಮಾಡುವ ಮೂಲಕ ಎಸ್‌ಎಸ್‌ಎಲ್‌ಸಿ ಪರೀಕ್ಷೆ ಫಲಿತಾಂಶ ತಿಳಿದುಕೊಳ್ಳುವ ಬಗ್ಗೆ ತಿಳಿಸಿ ಧನ್ಯವಾದಗಳು.