ನಮಸ್ಕಾರ ಸ್ನೇಹಿತರೇ ಪೋಸ್ಟ್ ಆಫೀಸ್ನ ಈ ಯೋಜನೆಗಳ ಮುಂದೆ ಬ್ಯಾಂಕುಗಳು ಕೊಡುವಂತಹ ಲಾಭಗಳು ಫೇಲ್ ಆಗುತ್ತವೆ. ಜನರು ಒಂದು ಕಾಲದಲ್ಲಿ ಹಣವನ್ನು ಉಳಿತಾಯ ಮಾಡುತ್ತಾ ಇದ್ದರು ಆದರೆ ಇತ್ತೀಚಿನ ದಿನಗಳಲ್ಲಿ ಹಣವನ್ನು ಉಳಿತಾಯ ಮಾಡಿದರೆ ಅದು ಹೆಚ್ಚಾಗುವುದಿಲ್ಲ ಬದಲಾಗಿ ಅದನ್ನ ಹೂಡಿಕೆ ಮಾಡಿದರೆ ಮಾತ್ರ ಆ ಹಣವನ್ನು ಇನ್ನಷ್ಟು ಹೆಚ್ಚಬಹುದು ಎಂದು ಇಂದಿನ ಜನರು ಬುದ್ಧಿವಂತರಾಗಿರುವುದರಿಂದ ಹೂಡಿಕೆ ಮಾಡಲು ಬಯಸುತ್ತಾರೆ.
ಅದರಂತೆ ಪೋಸ್ಟ್ ಆಫೀಸ್ನಲ್ಲಿ ಬ್ಯಾಂಕಿಗಿಂತ ಹೆಚ್ಚಾಗಿ ಇರುವಂತಹ ಯೋಜನೆಗಳಲ್ಲಿ ಹೂಡಿಕೆ ಮಾಡುವುದರಿಂದ ಹೆಚ್ಚಿನ ಲಾಭ ಹಾಗೂ ಸುರಕ್ಷತೆಯು ಕೂಡ ಇರುತ್ತದೆ ಎನ್ನುವಂತಹ ರಹಸ್ಯವನ್ನು ಗ್ರಾಹಕರು ಈಗಾಗಲೇ ತಿಳಿದುಕೊಂಡಿದ್ದಾರೆ.
Contents
ಪೋಸ್ಟ್ ಆಫೀಸ್ ಸೇವಿಂಗ್ ಅಕೌಂಟ್ :
ರಾಷ್ಟ್ರೀಯ ಉಳಿತಾಯ ಯೋಜನೆಯನ್ನು ನೀವು ಮಾಡಿದರೆ ಪೋಸ್ಟ್ ಆಫೀಸ್ನ ಸೇವಿಂಗ್ ಅಕೌಂಟ್ ನಲ್ಲಿ ಖಂಡಿತವಾಗಿಯೂ ಉತ್ತಮ ರೀತಿಯಲ್ಲಿ ಆದಾಯವನ್ನು ಪಡೆದುಕೊಳ್ಳಬಹುದಾಗಿದೆ. 6.9 ಪ್ರತಿಶತ ಹಣವನ್ನು ಒಂದು ವರ್ಷದ ಹೂಡಿಕೆಯ ಮೇಲೆ ಈ ಯೋಜನೆಯಲ್ಲಿ ಪಡೆಯಬಹುದಾಗಿದೆ.
ಏಳು ಪ್ರತಿಶತ ಎರಡು ವರ್ಷಕ್ಕೆ ಹಾಗೂ 7.5% ಬಡ್ಡಿದರವನ್ನು ಐದು ವರ್ಷಕ್ಕೆ ಈ ಯೋಜನೆಯಲ್ಲಿ ರಿಟರ್ನ್ ರೂಪದಲ್ಲಿ ಪಡೆಯಬಹುದಾಗಿದೆ. ಅದರಂತೆ ಪೋಸ್ಟ್ ಆಫೀಸ್ನ ಮತ್ತೊಂದು ಯೋಜನೆ ಬಗ್ಗೆ ಮಾತನಾಡುವುದಾದರೆ ಆರು ಪಾಯಿಂಟ್ ಐದು ಪರ್ಸೆಂಟ್ ಪಟ್ಟಿದರವನ್ನು ನೀಡುವಂತಹ ಅಧಿಕಾರ ಹೂಡಿಕೆಯನ್ನು ಮಾಡಿದರೆ 12 ವರ್ಷ ನಾಲ್ಕು ತಿಂಗಳಲ್ಲಿ ಹೂಡಿಕೆ ಮಾಡಿದಂತಹ ಹಣ ದುಪ್ಪಟ್ಟಾಗುತ್ತದೆ.
ಇದನ್ನು ಓದಿ : ಹೆಣ್ಣು ಮಕ್ಕಳಿಗೆ ಭರ್ಜರಿ ಸುದ್ದಿ.!! ಈ ಯೋಜನೆಯಡಿ ನಿಮ್ಮದಾಗಲಿದೆ 50,000 ರೂ. ಇಂದೇ ಅಪ್ಲೈ ಮಾಡಿ
ಪೋಸ್ಟ್ ಆಫೀಸ್ ಸೀನಿಯರ್ ಸಿಟಿಜನ್ ಸೇವಿಂಗ್ ಸ್ಕೀಂ :
60 ವರ್ಷ ಮೇಲ್ಪಟ್ಟ ವಯಸ್ಸಿನ ವೃದ್ಧರು ಸೀನಿಯರ್ ಸಿಟಿಜನ್ ಸೇವಿಂಗ್ ಸ್ಕೀಮ್ ನಲ್ಲಿ ಹಣವನ್ನು ಹೂಡಿಕೆ ಮಾಡಬಹುದಾಗಿದೆ 8.2% ಬಡ್ಡಿ ದರವನ್ನು ಹಣವನ್ನು ಇದರಲ್ಲಿ ಹೂಡಿಕೆ ಮಾಡುವುದರಿಂದಾಗಿ ಪಡೆಯಬಹುದು. ಠೇವಣಿ ಹಣದ ಮೇಲೆ ಏಳು ಪಾಯಿಂಟ್ ನಾಲ್ಕು ಬಡ್ಡಿದರ ಸಿಗುತ್ತದೆ. ಏಳು ಪಾಯಿಂಟ್ ಒಂದು ಪರ್ಸೆಂಟ್ ಪಟ್ಟಿದರವನ್ನು ಪಿಪಿಎಫ್ ಯೋಜೆನೆಯಲ್ಲಿ ಹೂಡಿಕೆಯ ಮೇಲೆ ಪಡೆಯಬಹುದು.
ಸುಕನ್ಯಾ ಸಮೃದ್ಧಿ ಯೋಜನೆ :
ತಂದೆ ತಾಯಿಯರು ಸುಕನ್ಯಾ ಸಮೃದ್ಧಿ ಯೋಜನೆಯ ಅಡಿಯಲ್ಲಿ ಹತ್ತು ವರ್ಷಕ್ಕಿಂತ ಕಡಿಮೆ ಇರುವಂತಹ ಹೆಣ್ಣು ಮಕ್ಕಳ ಹೆಸರಿನಲ್ಲಿ ಖಾತೆಯನ್ನು ನಿರ್ಮಾಣ ಮಾಡಬಹುದಾಗಿದೆ ಎಂಟು ಪ್ರತಿಶತ ನನ್ನು ಹೂಡಿಕೆ ಮಾಡಿದಂತಹ ಹಣದ ಮೇಲೆ ಬಡ್ಡಿಯ ರೂಪದಲ್ಲಿ ಪಡೆಯಲಾಗುವುದು.
7.5% ವಾರ್ಷಿಕ ರಿಟರ್ನ್ ಅನ್ನು ಮಹಿಳಾ ಸಮಾಜ ಸೇವೆ ಯೋಜನೆಯ ಅಡಿಯಲ್ಲಿ ಪಡೆಯಬಹುದಾಗಿದೆ 7.5% ಪಡ್ಡಿದರವನ್ನು ಕಿಸಾನ್ವಿಕಾಸ್ ಪತ್ರ ಯೋಜನೆಯ ಅಡಿಯಲ್ಲಿ ಒಂದು ವರ್ಷ ಹೂಡಿಕೆ ಮಾಡುವ ಮೂಲಕ ಪಡೆಯಬಹುದಾಗಿದೆ. ಹೀಗೆ ಪೋಸ್ಟ್ ಆಫೀಸ್ನಲ್ಲಿ ಹೂಡಿಕೆ ಮಾಡುವುದರ ಮೂಲಕ ಹೆಚ್ಚಿನ ಪ್ರಯೋಜನವನ್ನು ಪಡೆದುಕೊಳ್ಳಬಹುದು.
ಒಟ್ಟಾರೆ ಕೇಂದ್ರ ಸರ್ಕಾರವು ಪೋಸ್ಟ್ ಆಫೀಸ್ ನಲ್ಲಿ ಹೊಸ ಹೊಸ ಹೂಡಿಕೆ ಯೋಜನೆಗಳನ್ನು ಜಾರಿಗೆ ತರುವುದರ ಮೂಲಕ ಹೆಚ್ಚಿನ ಹಣವನ್ನು ಹೂಡಿಕೆ ಮಾಡಿ ಹೆಚ್ಚಿನ ಲಾಭವನ್ನು ಪಡೆಯಬಹುದಾಗಿದೆ ಅಲ್ಲದೆ ಹೂಡಿಕೆ ಮಾಡಿದಂತಹ ಹಣಕ್ಕೆ ಸುರಕ್ಷತೆಯನ್ನು ಕೂಡ ಇದರಲ್ಲಿ ನೋಡಬಹುದು. ಹಾಗಾಗಿ ಹೂಡಿಕೆ ಮಾಡುವಂತಹ ಪ್ರತಿಯೊಬ್ಬರಿಗೂ ಪೋಸ್ಟ್ ಆಫೀಸ್ನ ಈ ಯೋಜನೆಗಳ ಬಗ್ಗೆ ಮಾಹಿತಿಯನ್ನು ಶೇರ್ ಮಾಡಿ ಧನ್ಯವಾದಗಳು.