rtgh

ಖಾಸಗಿ ಆಸ್ಪತ್ರೆಯಲ್ಲಿ ಬಿಲ್ ಕಟ್ಟುವವರಿಗೆ ಹೊಸ ಘೋಷಣೆ : ಕೇಂದ್ರ ಸರ್ಕಾರದಿಂದ ಸಿಹಿ ಸುದ್ದಿ

New announcement for private hospital bill payers

ನಮಸ್ಕಾರ ಸ್ನೇಹಿತರೆ ಇವತ್ತಿನ ಲೇಖನದಲ್ಲಿ ಕೇಂದ್ರ ಸರ್ಕಾರವು ನೀಡುತ್ತಿರುವಂತಹ ಸಿಹಿ ಸುದ್ದಿಯ ಬಗ್ಗೆ ಮಾಹಿತಿಯನ್ನು ತಿಳಿಸಲಾಗುತ್ತಿದೆ. ಆಸ್ಪತ್ರೆ ಆರೋಗ್ಯ ರಕ್ಷಣೆಯ ಬಗ್ಗೆ ಇಂದು ನಾವು ಹೆಚ್ಚು ಕಾಳಜಿಯನ್ನು ವಹಿಸಬೇಕಾಗುತ್ತದೆ. ನಾವು ಮಾಡುವಂತಹ ಯಾವುದೇ ಕೆಲಸ ಹಣ ಇವೆಲ್ಲವೂಕ್ಕಿಂತ ಹೆಚ್ಚಾಗಿ ಆರೋಗ್ಯ ಹೆಚ್ಚು ಮುಖ್ಯವಾಗಿರುತ್ತದೆ. ಆರೋಗ್ಯ ರಕ್ಷಣೆಯ ಬಗ್ಗೆ ಹಾಗಾಗಿ ಹೆಚ್ಚು ಕಾಳಜಿ ವಹಿಸುವುದು ಇತ್ತೀಚಿನ ದಿನಗಳಲ್ಲಿ ಮುಖ್ಯವಾಗಿದೆ. ಆದರೆ ಈಗಿರುವಂತಹ ದಿನಮಾನಗಳಲ್ಲಿ ನಮ್ಮ ಆರೋಗ್ಯ ಯಾವಾಗ ಹಾಳಾಗುತ್ತದೆ ಎಂಬುದನ್ನು ನಾವು ಅರಿಯಲು ಸಾಧ್ಯವಿಲ್ಲ.

New announcement for private hospital bill payers
New announcement for private hospital bill payers

ಅಲ್ಲದೆ ಖಾಸಗಿ ಆಸ್ಪತ್ರೆಗಳಲ್ಲಿ ಬಡ ಜನರು ಚಿಕಿತ್ಸೆಯನ್ನು ಪಡೆಯುವುದು ಬಹಳ ಕಷ್ಟವಾಗಿದೆ ಇದೀಗ ಅದನ್ನು ಗುರಿಯಾಗಿಸಿಕೊಂಡು ಕೇಂದ್ರ ಸರ್ಕಾರವು ಒಂದು ಹೊಸ ಯೋಜನೆಯನ್ನು ಪ್ರಾರಂಭಿಸಿದೆ. ಕೇಂದ್ರ ಸರ್ಕಾರದ ಈ ಒಂದು ಹೊಸ ಯೋಜನೆಯ ಅಡಿಯಲ್ಲಿ ಬಡವರ್ಗದ ಜನತೆ ಖಾಸಗಿ ಆಸ್ಪತ್ರೆಯಲ್ಲಿ ಉಚಿತವಾಗಿ ಚಿಕಿತ್ಸೆಯನ್ನು ಪಡೆಯಬಹುದಾಗಿದೆ. ಹಾಗಾದರೆ ಆ ಯೋಜನೆ ಯಾವುದು? ಈ ಯೋಜನೆಗೆ ಹೇಗೆ ಅರ್ಹರಾಗಬೇಕು ಎಂಬುದರ ಸಂಪೂರ್ಣ ಮಾಹಿತಿಯನ್ನು ಇವತ್ತಿನ ಲೇಖನದಲ್ಲಿ ತಿಳಿಸಲಾಗುತ್ತಿದೆ.

ಬಡವರ್ಗದ ಜನರಿಗಾಗಿ ಕೇಂದ್ರ ಸರ್ಕಾರದಿಂದ ಹೊಸ ಯೋಜನೆ :

ಬಡವರ್ಗದ ಜನತೆಗಾಗಿ ಕೇಂದ್ರ ಸರ್ಕಾರವು ಆಯುಷ್ಮಾನ್ ಭಾರತ್ ಯೋಜನೆಯನ್ನು ಜಾರಿಗೆ ತಂದಿದ್ದು ಬಡವರ್ಗದ ಕುಟುಂಬಗಳಿಗೆ ಚಿಕಿತ್ಸೆ ಸೌಲಭ್ಯ ವಂತಹ ಒದಗಿಸುವ ಉದ್ದೇಶದಿಂದ ಈ ಯೋಜನೆಯನ್ನು ಕೇಂದ್ರ ಸರ್ಕಾರ ಜಾರಿಗೆ ತಂದಿದೆ.

ಈಗಾಗಲೇ ಆರು ವರ್ಷಗಳಲ್ಲಿ ಯೋಜನೆಯ ಅಡಿಯಲ್ಲಿ ಖಾಸಗಿ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆದವರ ಸಂಖ್ಯೆ 6.5 ಕೋಟಿಯಾಗಿದ್ದು ಈ ಸಂಖ್ಯೆಯಲ್ಲಿ 3.2 ಕೋಟಿ ಮಹಿಳೆಯರು ಸೇರಿದ್ದಾರೆ ಅದರಲ್ಲಿಯೂ ವಿಶೇಷವಾಗಿ ಈ ಯೋಜನೆಯು ಮಹಿಳೆಯರಿಗೆ ಹೆಚ್ಚು ಸಹಕಾರಿಯಾಗಿದೆ ಎಂದು ಹೇಳಬಹುದು.

ಚಿಕಿತ್ಸೆಗಳನ್ನು ಖಾಸಗಿ ಆಸ್ಪತ್ರೆಯಲ್ಲಿ ಪಡೆಯಬಹುದು :

ಮಹಿಳೆಯರು ಕ್ಯಾನ್ಸರ್ ಕಣ್ಣಿನ ಸಮಸ್ಯೆಗಳು ಈ ಎಸ್ ಟಿ ಸಮಸ್ಯೆಗಳು ಮತ್ತು ನವಜಾತ ಆರೈಕೆ ಪ್ಯಾಕೇಜ್ ಗಳಲ್ಲಿ ಈಗಾಗಲೇ ಮಹಿಳೆಯರು ಹೆಚ್ಚು ಪಡೆದುಕೊಂಡಿದ್ದು ಸುಮಾರು 10 ಕೋಟಿ ಆಯುಷ್ಮಾನ್ ಭಾರತ್ ಕಾರ್ಡುಗಳನ್ನು ಈಗಾಗಲೇ ಕೇಂದ್ರ ಸರ್ಕಾರ ವಿತರಣೆ ಮಾಡಿದೆ.

ಹೆಚ್ಚು ಸೀರಿಯಸ್ ಖಾಯಿಲೆಗಳಾದ ಕ್ಯಾನ್ಸರ್ ನರರೋಗ ಮೂತ್ರಪಿಂಡ ಸಂಬಂಧಿಸಿದ ಕಾಯಿಲೆಗಳು ಹೀಗೆ ಸೇರಿ 900 ಚಿಕಿತ್ಸಾ ವಿಧಾನಗಳನ್ನು ಹಾಗೂ 169 ತುರ್ತು ಚಿಕಿತ್ಸೆಗಳು ಹಾಗೂ 36 ಚಿಕಿತ್ಸಾ ವಿಧಾನಗಳಿಗೆ ಸಂಬಂಧಿಸಿದಂತೆ ಬಡವರ್ಗದ ಜನರು ಖಾಸಗಿ ಆಸ್ಪತ್ರೆಯಲ್ಲಿ ಈ ಯೋಜನೆಯ ಅಡಿಯಲ್ಲಿ ಚಿಕಿತ್ಸೆ ಪಡೆಯಬಹುದಾಗಿದೆ.

ಅರ್ಜಿ ಸಲ್ಲಿಸುವ ವಿಧಾನ :

ಬಡವರ್ಗದ ಜನರು ಕೇಂದ್ರ ಸರ್ಕಾರದ ಆಯುಷ್ಮಾನ್ ಭಾರತ್ ಯೋಜನೆಗೆ ಅರ್ಜಿಯನ್ನು ಸಲ್ಲಿಸಬೇಕಾದರೆ ತಮ್ಮ ಸ್ಮಾರ್ಟ್ಫೋನ್ ಗಳಲ್ಲಿಯೇ ಮನೆಯಲ್ಲಿಯೇ ಕುಳಿತು ಸುಲಭವಾಗಿ ಅಪ್ಲೈ ಮಾಡಬಹುದಾಗಿದೆ. ಅರ್ಜಿಯನ್ನು ಸಲ್ಲಿಸಬೇಕಾದರೆ ಮೊದಲು ಗೂಗಲ್ ಪ್ಲೇ ಸ್ಟೋರ್ ನಲ್ಲಿ ಆಯುಷ್ಮಾನ್ ಭಾರತ್ ಆಪ್ ಅನ್ನು ಡೌನ್ಲೋಡ್ ಮಾಡುವ ಮೂಲಕ ಅದರಲ್ಲಿ pm jay ಅಪ್ಲಿಕೇಶನ್ ಅನ್ನು ತೆರೆಯಬೇಕು.

ಅದಾದ ನಂತರ ಫಲಾನುಭವಿ ಎಂಬ ಆಯ್ಕೆಯನ್ನು ತೆರೆದು ಅದರಲ್ಲಿ ಹೊಸ ಸದಸ್ಯರ ನೋಂದಣಿಗೆ ಕ್ಲಿಕ್ ನೀಡಿ ಅದಾದ ನಂತರ ಆಧಾರ್ ಸಂಖ್ಯೆಯನ್ನು ನಮೂದಿಸಬೇಕಾಗುತ್ತದೆ ನಮೂದಿಸಿದ ನಂತರ ಓಟಿಪಿಯನ್ನು ಪಡೆಯಬಹುದು ಅದರಲ್ಲಿ ನೀವು ಓಟಿಪಿ ಹೆಸರು ಲಿಂಗ ಹುಟ್ಟಿದ ದಿನಾಂಕ ಮತ್ತು ವಿಳಾಸದಂತಹ ಅಗತ್ಯವಿರುವಂತಹ ಎಲ್ಲಾ ವೈಯಕ್ತಿಕ ವಿವರಗಳನ್ನು ಭರ್ತಿ ಮಾಡಬೇಕಾಗುತ್ತದೆ. ಈ ರೀತಿ ಅಗತ್ಯ ದಾಖಲೆಗಳನ್ನು ಅಪ್ಲೋಡ್ ಮಾಡಿದ ನಂತರ ಒಂದು ಬಾರಿ ವಿವರಗಳನ್ನು ಭರ್ತಿ ಮಾಡಿದ ನಂತರ ಪರಿಶೀಲಿಸಿ ತಮ್ಮ ವಿವರಗಳನ್ನು ದೃಢೀಕರಿಸಿ ಮತ್ತು ಅರ್ಜಿಯನ್ನು ಸಲ್ಲಿಸಬಹುದಾಗಿದೆ.

ಹೀಗೆ ಕೇಂದ್ರ ಸರ್ಕಾರದ ಆಯುಷ್ಮಾನ್ ಭಾರತ್ ಕಾರ್ಡ್ ಯೋಜನೆಗೆ ಅರ್ಜಿ ಸಲ್ಲಿಸುವುದರ ಮೂಲಕ ಕೇಂದ್ರ ಸರ್ಕಾರದಿಂದ ಬಡವರ್ಗದ ಜನರು ಖಾಸಗಿ ಆಸ್ಪತ್ರೆಗಳಲ್ಲಿ ಚಿಕಿತ್ಸೆಯನ್ನು ಪಡೆಯಬಹುದಾಗಿದೆ.

ಒಟ್ಟಾರೆ ಕೇಂದ್ರ ಸರ್ಕಾರವು ಬಡವರ್ಗದ ಜನರ ಆರೋಗ್ಯದ ದೃಷ್ಟಿಯನ್ನು ಗಮನದಲ್ಲಿಟ್ಟುಕೊಂಡು ಖಾಸಗಿ ಆಸ್ಪತ್ರೆಗಳಲ್ಲಿಯೂ ಕೂಡ ಬಡವರ್ಗದ ಜನರು ಹೆಚ್ಚಿನ ಚಿಕಿತ್ಸೆಯನ್ನು ಪಡೆಯಬೇಕು ಎಂಬ ಉದ್ದೇಶದಿಂದ ಕೇಂದ್ರ ಸರ್ಕಾರವು ಆಯುಷ್ಮಾನ್ ಭಾರತ್ ಕಾರ್ಡ್ ಯೋಜನೆಯನ್ನು ಜಾರಿಗೆ ತಂದಿದ್ದು.

ಈ ಯೋಜನೆಯ ಸಂಪೂರ್ಣ ಪ್ರಯೋಜನವನ್ನು ಎಲ್ಲಾ ಬಡವರ್ಗದ ಜನರು ಪಡೆದುಕೊಳ್ಳುವಂತೆ ಆಗಲಿ ಈ ಮಾಹಿತಿಯನ್ನು ಎಲ್ಲರಿಗೂ ಶೇರ್ ಮಾಡುವುದರ ಮೂಲಕ ಅವರು ಕೂಡ ಕೇಂದ್ರ ಸರ್ಕಾರದ ಆಯುಷ್ಮಾನ್ ಭರತ್ ಕಾರ್ಡ್ ಯೋಜನೆಗೆ ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಿ ಯೋಜನೆಯ ಸಂಪೂರ್ಣ ಪ್ರಯೋಜನವನ್ನು ಪಡೆದುಕೊಳ್ಳುವಂತೆ ತಿಳಿಸಿ ಧನ್ಯವಾದಗಳು.

ಇತರೆ ವಿಷಯಗಳು :

Spread the love

Leave a Reply

Your email address will not be published. Required fields are marked *