rtgh

ರೇಷನ್ ಕಾರ್ಡ್ ತಿದ್ದುಪಡಿ ಮಾಡಲು ಅವಕಾಶ : ಗೃಹಲಕ್ಷಿ ಅನ್ನಭಾಗ್ಯ ಹಣ ಪಡೆಯಲು ಈ ಕೆಲಸ ಮಾಡಿ

Allow to amend ration card

ನಮಸ್ಕಾರ ಸ್ನೇಹಿತರೇ ಇವತ್ತಿನ ಲೇಖನದಲ್ಲಿ ನಿಮಗೆ ತಿಳಿಸುತ್ತಿರುವ ವಿಷಯ ಏನೆಂದರೆ ರಾಜ್ಯದಲ್ಲಿ ರೇಷನ್ ಕಾರ್ಡ್ ಗೆ ಸಂಬಂಧಿಸಿದಂತೆ ತಿದ್ದುಪಡಿ ಮಾಡಲು ರಾಜ್ಯ ಸರ್ಕಾರ ಅವಕಾಶ ಕಲ್ಪಿಸಿರುವುದರ ಬಗ್ಗೆ ಮಾಹಿತಿಯನ್ನು ತಿಳಿಸಲಾಗುತ್ತಿದೆ. ನಿಮ್ಮ ಹೆಸರು ಮಿಸ್ಸಾಗಿದ್ದರೆ ಪಡಿತರ ಚೀಟಿಯಲ್ಲಿ ಹಾಗೂ ಬಿಟ್ಟು ಹೋದಂತಹ ಹೆಸರುಗಳನ್ನು ಸೇರಿಸುವುದರ ಮೂಲಕ ರಾಜ್ಯ ಸರ್ಕಾರದಿಂದ ಉಚಿತವಾಗಿ ಅಕ್ಕಿ ಮತ್ತು ಗೋಧಿಯನ್ನು ಪಡೆದುಕೊಳ್ಳಬಹುದಾಗಿದೆ.

Allow to amend ration card
Allow to amend ration card

ಕಳೆದ ಮೂರು ವರ್ಷಗಳ ಹಿಂದೆ ಅಂದರೆ 2020 ರಿಂದ ರೇಷನ್ ಕಾರ್ಡ್ ಎನ್ನುವುದು ಬಹಳ ಮಹತ್ವವನ್ನು ಪಡೆದುಕೊಂಡಿದೆ ಎಂದು ಹೇಳಬಹುದು ಏಕೆಂದರೆ ಕರೋನ ಎನ್ನುವ ಮಹಾಮಾರಿ ದೇಶದಾದ್ಯಂತ 2020ರಲ್ಲಿ ದೇಶವನ್ನು ಆವರಿಸಿ ಸಾಕಷ್ಟು ಸಾವು ನೋವು ನಷ್ಟಗಳನ್ನು ಉಂಟುಮಾಡಿದೆ ಎಂದು ಹೇಳಬಹುದು ಇಂತಹ ಸಂದರ್ಭದಲ್ಲಿ ರೇಷನ್ ಕಾರ್ಡ್ ಬಡತನ ರೇಖೆಗಿಂತ ಕೆಳಗಿರುವವರಿಗೆ ಅಥವಾ ತೀರ ಬಡವರಿಗೆ ಹೆಚ್ಚು ಉಪಯೋಗ ವಾಗಿದೆ ಎಂದು ಹೇಳಬಹುದು.

ಅಕ್ಕಿ ಗೋಧಿ ಮತ್ತಿತರ ಧಾನ್ಯಗಳನ್ನು ಉಚಿತವಾಗಿ ನೀಡಲು ಕೇಂದ್ರ ಸರ್ಕಾರ ಕೊರೋನ ಸಂದರ್ಭದಲ್ಲಿ ಬಡವರಿಗೆ ಹಾಗೂ ಬಡತನ ರೇಖೆಗಿಂತ ಕೆಳಗಿರುವವರಿಗೆ ನೀಡಲು ನಿರ್ಧರಿಸಿತು ಅದರಂತೆ ಈಗಲೂ ಕೂಡ ಸಾಕಷ್ಟು ಜನರು ಪಡಿತರ ಚೀಟಿಯ ಮೂಲಕ ಉಚಿತವಾಗಿ ಪಡಿತರವನ್ನು ಪಡೆದುಕೊಳ್ಳಲು ಸಾಧ್ಯವಾಗುತ್ತದೆ.

ರೇಷನ್ ಕಾರ್ಡ್ ತಿದ್ದುಪಡಿಗೆ ಅವಕಾಶ :

ರಾಜ್ಯದಲ್ಲಿ ಇದೀಗ ಸಾಕಷ್ಟು ರೇಷನ್ ಕಾರ್ಡ್ ತಿದ್ದುಪಡಿ ಕಾರ್ಯ ಪ್ರಾರಂಭವಾಗಿದೆ ಎಂದು ಹೇಳಬಹುದು ನಿಮ್ಮ ಹೆಸರು ರೇಷನ್ ಕಾರ್ಡ್ ನಲ್ಲಿ ಇಲ್ಲದಿದ್ದರೆ ಒಂದು ವೇಳೆ ನೀವೇನಾದರೂ ಮತ್ತೆ ನಿಮ್ಮ ಹೆಸರನ್ನು ಸೇರಿಸಿಕೊಳ್ಳುವ ಮೂಲಕ ರೇಷನ್ ಅನ್ನು ಉಚಿತವಾಗಿ ಪಡೆದುಕೊಳ್ಳಲು ಸಾಧ್ಯ ವಾಗುತ್ತದೆ
ರೇಷನ್ ಕಾರ್ಡ್ ನಲ್ಲಿ ಹೆಸರನ್ನು ಸೇರಿಸಲು ಹೇಗೆ ಸಾಧ್ಯವಾಗುತ್ತದೆ ಎಂದು ನೋಡುವುದಾದರೆ,

  1. ಮೊದಲು ಸರ್ಕಾರದ ಅಧಿಕೃತ ವೆಬ್ಸೈಟ್ ಗೆ ಭೇಟಿ ನೀಡಬೇಕು.
  2. https://nfsa.gov.in/Default.aspx
  3. ಈ ವೆಬ್ ಸೈಟ್ ಗೆ ಭೇಟಿ ನೀಡಿದ ನಂತರ ಅದರಲ್ಲಿ ರೇಷನ್ ಕಾರ್ಡ್ ವಿವರಗಳು ಎನ್ನುವ ಆಯ್ಕೆಯನ್ನು ನೋಡಬಹುದಾಗಿದೆ ಅದರ ಮೇಲೆ ಕ್ಲಿಕ್ ಮಾಡಬೇಕು.
  4. ಕ್ಲಿಕ್ ಮಾಡಿದ ನಂತರ ನಿಮ್ಮ ರಾಜ್ಯ ಜಿಲ್ಲೆ ತಾಲೂಕು ಹೋಬಳಿ ಮೊದಲಾದವುಗಳನ್ನು ಆಯ್ಕೆ ಮಾಡಿ ಮಾಹಿತಿ ನೀಡಬೇಕಾಗುತ್ತದೆ.
  5. ಅದಾದ ನಂತರ ನೀವು ನಿಮ್ಮ ಪಡಿತರ ಅಂಗಡಿಯ ಹೆಸರು ಅಂದರೆ ನ್ಯಾಯಬೆಲೆ ಅಂಗಡಿಯ ಹೆಸರು ಹಾಗೂ ಅದರ ಮಾಲೀಕರ ಹೆಸರು ಪಡಿತರ ಚೀಟಿಯ ಪ್ರಕಾರ ಆಯ್ಕೆ ಮಾಡಿ ಮಾಹಿತಿ ನೀಡಬೇಕಾಗುತ್ತದೆ.
  6. ಅದಾದ ನಂತರ ಮುಂದೆ ಕಾಣುವಂತಹ ಒಂದು ಲಿಸ್ಟ್ ನಲ್ಲಿ ಪಡಿತರ ಚೀಟಿ ಹೊಂದಿರುವವರ ಹೆಸರು ಇರುತ್ತದೆ ಅದರಲ್ಲಿ ಒಂದು ವೇಳೆ ನಿಮ್ಮ ಹೆಸರು ಇಲ್ಲದಿದ್ದರೆ ಅದಕ್ಕೆ ಕಾರಣವೂ ಕೂಡ ಅದರಲ್ಲಿಯೇ ತಿಳಿಯಬಹುದಾಗಿದೆ.

ಪಡಿತರ ಚೀಟಿಯಲ್ಲಿ ಮತ್ತೆ ಹೆಸರು ಸೇರಿಸುವ ವಿಧಾನ :

ಪಡಿತರ ಚೀಟಿಯಲ್ಲಿ ನಿಮ್ಮ ಹೆಸರನ್ನು ನೀವು ಮತ್ತೆ ಸೇರಿಸಬೇಕಾದರೆ ಆನ್ಲೈನ್ ನಲ್ಲಿ ನೀವು ಇದನ್ನು ಮಾಡಲು ಸಾಧ್ಯವಿಲ್ಲ ಇದಕ್ಕಾಗಿ ನೀವು ಹತ್ತಿರದ ಆಹಾರ ಇಲಾಖೆಯ ಸ್ಥಳೀಯ ಕಚೇರಿಗೆ ಭೇಟಿ ನೀಡಬೇಕಾಗುತ್ತದೆ ನೀಡಬೇಕು ಅದಾದ ನಂತರ ನಿಮ್ಮ ಹೆಸರನ್ನು ಸೇರಿಸಲಾಗುತ್ತದೆ.

ಹೀಗೆ ಕರ್ನಾಟಕ ರಾಜ್ಯದಲ್ಲಿ ಇದೀಗ ಪಡಿತರ ಚೀಟಿಗೆ ಸಂಬಂಧಿಸಿದಂತೆ ತಿದ್ದುಪಡಿ ಮಾಡಲು ಅವಕಾಶ ಕಲ್ಪಿಸಲಾಗಿದ್ದು ಈ ಬಗ್ಗೆ ಪ್ರತಿಯೊಬ್ಬರಿಗೂ ಶೇರ್ ಮಾಡುವ ಮೂಲಕ ರಾಜ್ಯದಲ್ಲಿ ಮತ್ತೊಮ್ಮೆ ಪಡಿತರ ಚೀಟಿ ತಿದ್ದುಪಡಿ ಮಾಡಲು ರಾಜ್ಯ ಸರ್ಕಾರ ಅವಕಾಶ ಕಲ್ಪಿಸಿದೆ ಎಂಬುದನ್ನು ತಿಳಿಸಿ ಇದರಿಂದ ಅವರೆನಾದರೂ ಪಡಿತರ ಚೀಟಿಗೆ ಸಂಬಂಧಿಸಿ ದಂತೆ ತಿದ್ದುಪಡಿ ಮಾಡಲು ಬಯಸುತ್ತಿದ್ದರೆ ಇದು ಉತ್ತಮ ಅವಕಾಶವೆಂದು ಹೇಳಬಹುದು ಧನ್ಯವಾದಗಳು.

ಇತರೆ ವಿಷಯಗಳು :

Spread the love

Leave a Reply

Your email address will not be published. Required fields are marked *