ನಮಸ್ಕಾರ ಸ್ನೇಹಿತರೆ ಪ್ರಕೃತಿ ವಿಕೋಪದ ಕಾರಣದಿಂದಾಗಿ ರೈತರು ಈಗಾಗಲೇ ಸಾಕಷ್ಟು ಬೆಲೆಗಳನ್ನು ನಾಶಪಡಿಸಿಕೊಂಡಿದ್ದಾರೆ ರೈತರಿಗೆ ಹಾನಿಯಾಗದಂತೆ ಸರ್ಕಾರವೂ ಕೂಡ ಹಾಗೂ ರೈತರ ಕಷ್ಟಗಳಿಗೆ ಪರಿಹಾರ ನೀಡಲು ಬೆಳೆ ವಿಮೆ ಹಾಗೂ ಬೆಳೆ ಪರಿಹಾರ ನೀಡಲು ಸರ್ಕಾರ ನಿರ್ಧರಿಸಿದೆ.
ಹಾಗಾಗಿ ತಮ್ಮ ಬೆಳೆ ಹಾನಿ ಹಾಗೂ ಬೆಳೆ ವಿಮೆ ಪರಿಹಾರದ ಬಗ್ಗೆ ರೈತರು ತಿಳಿದುಕೊಳ್ಳುವ ಅವಶ್ಯಕತೆ ಹೆಚ್ಚಾಗಿದೆ. ಇದೀಗ ಸರ್ಕಾರ ಈ ರೈತರಿಗೆ ಮಾತ್ರ ಬೆಳೆ ವಿಮೆ ಪರಿಹಾರ ಮತ್ತು ಬೆಳೆ ಹಾನಿ ಪರಿಹಾರ ಹಣ ಜಮಾಡುತ್ತದೆ ಹಾಗಾದರೆ ಯಾವ ಯಾವ ರೈತರು ಸರ್ಕಾರದ ಈ ಪ್ರಯೋಜನವನ್ನು ಪಡೆದುಕೊಳ್ಳಬಹುದು ಎಂದು ಈ ಲೇಖನದಲ್ಲಿ ಸಂಪೂರ್ಣವಾಗಿ ತಿಳಿಯಬಹುದು.
Contents
ರೈತರಿಗೆ ಬೆಳೆವಿಮೆ ಹಣ ಜಮ :
ರೈತರು ಸರ್ಕಾರ ಬಿಡುಗಡೆ ಮಾಡಿರುವ ಬೆಳೆ ವಿಮೆ ಹಣ ನಿಮ್ಮ ಬ್ಯಾಂಕ್ ಖಾತೆಗೆ ವರ್ಗಾವಣೆ ಆಗಿದೆಯೇ ಇಲ್ಲವೇ ಎಂಬುದನ್ನು ತಿಳಿದುಕೊಂಡ ನಂತರ ನಿಮ್ಮ ಖಾತೆಗೆ ಏಕೆ ವರ್ಗಾವಣೆಯಾಗಿಲ್ಲ ಎಂಬುದನ್ನು ಮೊದಲು ತಿಳಿದುಕೊಳ್ಳಬೇಕು.
ಬೆಳೆ ವಿಮೆ ಕಂಪನಿಗಳ ವೆಬ್ ಪೇಜ್ ಅನ್ನು ಸರ್ಕಾರದ ಅಧಿಕೃತ ವೆಬ್ಸೈಟ್ನಲ್ಲಿ ನೋಡಬಹುದು ಅದರಲ್ಲಿ ನೀವು ಆಯಾ ಜಿಲ್ಲೆಯ ವಿವಾ ಕಂಪನಿಗಳ ಪಟ್ಟಿಯನ್ನು ನೋಡಬಹುದಾಗಿದೆ ಅದರಲ್ಲಿ ನಿಮ್ಮ ಜಿಲ್ಲೆಯ ವಿಮಾ ಕಂಪನಿಯ ಬೆಳೆವಿಮೆ ಉಚಿತ ಸಹಾಯವಾಣಿ ದೂರವಾಣಿ ಸಂಖ್ಯೆಗೆ ಕರೆ ಮಾಡಬೇಕು. 1800 180 1551 ಈ ಸಂಖ್ಯೆಗೆ ಕರೆ ಮಾಡಬೇಕಾಗುತ್ತದೆ.
ಆಗ ನಿಮ್ಮ ಜಿಲ್ಲೆಗೆ ಸಂಬಂಧಿಸಿದ ಬೆಳೆ ವಿಮೆ ಕಂಪನಿಯ ಮೊಬೈಲ್ ನಂಬರ್ ನೀಡಲಾಗುತ್ತದೆ ಅದಕ್ಕೆ ನೀವು ಕರೆ ಮಾಡಿ ನಿಮ್ಮ ಬೆಳೆ ವಿಮೆ ಕುರಿತಂತೆ ಮಾಹಿತಿಯನ್ನು ತಿಳಿದುಕೊಳ್ಳಬಹುದು. ನೀವು ಬೆಳೆ ವಿಮೆ ಪಾವತಿಸಿದ್ದರೆ ಕಳೆದ ಸಾಲಿನಲ್ಲಿ ಹಾಗೂ ಏಕೆ ನಿಮ್ಮ ಬೆಳೆ ವಿಮೆ ಹಣ ಜಮಾ ಆಗಿಲ್ಲ ಎನ್ನುವುದಕ್ಕೆ ಕಾರಣವೇನು ಹಾಗೂ ಯಾವಾಗ ಬೆಳೆ ವಿಮೆ ಹಣ ಜಮಾ ಆಗುತ್ತದೆ ಸೇರಿದಂತೆ ಸಾಕಷ್ಟು ಮಾಹಿತಿಯನ್ನು ಮನೆಯಲ್ಲಿಯೇ ಕುಳಿತು ರೈತರು ತಿಳಿಯಬಹುದಾಗಿದೆ.
ಇದನ್ನು ಓದಿ : ರೇಷನ್ ಕಾರ್ಡ್ ಡೌನ್‌ಲೋಡ್ ಮಾಡುವ ಸುಲಭ ವಿಧಾನ!
ರೈತರು ಯಾವಾಗ ದೂರು ನೀಡಬೇಕು :
ಬೆಳೆ ವಿಮೆ ಮಾಡಿಸಿದಂತಹ ರೈತರು ಅತಿವೃಷ್ಟಿ ಪ್ರವಾಹ ನಿರಂತರ ಮಳೆ ಸಿಡಿಲು ಸೇರಿದಂತೆ ಹವಾಮಾನ ವೈಪರಿತ್ಯದಿಂದಾಗಿ ಅವರ ಬೆಳೆ ಏನಾದರೂ ಹಾಳಾದರೆ 72 ಗಂಟೆಯ ಒಳಗಾಗಿ ಸಂಬಂಧಿಸಿದ ವಿಮ ಕಂಪನಿಗೆ ದೂರು ನೀಡಬೇಕಾಗುತ್ತದೆ ಆಗ ದೂರು ನೀಡಿದ ರೈತರ ಜಮೀನಿಗೆ ವಿಮಾ ಕಂಪನಿಯ ಸಿಬ್ಬಂದಿಗಳು ಬಂದು ಬೆಳೆ ಪರಿಶೀಲನೆ ಮಾಡುತ್ತಾರೆ.
ವಿಮೆ ಪರಿಹಾರಕ್ಕೆ ಮೇಲಾಧಿಕಾರಿಗಳಿಗೆ ವರದಿಯನ್ನು ಸಲ್ಲಿಸುತ್ತಾರೆ ಅದಾದ ನಂತರ ಎಷ್ಟು ಪ್ರಮಾಣದ ಬೆಳೆ ರೈತರಿಗೆ ಹಾನಿಯಾಗಿದೆ ಎಂಬುದನ್ನ ನೋಡಿಕೊಂಡು ಬೆಳೆ ವಿಮೆಯ ಹಣವನ್ನು ರೈತರ ಬ್ಯಾಂಕ್ ಖಾತೆಗೆ ಜಮಾ ಮಾಡುತ್ತಾರೆ.
ವೆಬ್ಸೈಟ್ :
ರೈತರು ತಮ್ಮ ಬೆಳೆ ವಿಮೆ ಹಣ ನೋಡಬೇಕಾದರೆ ಸರ್ಕಾರದ ಅಧಿಕೃತ ವೆಬ್ ಸೈಟ್ ಗೆ ಭೇಟಿ ನೀಡಬೇಕು. https://landrecords.karnataka.gov.in/PariharaPayment/ಇದರ ಮೂಲಕವೂ ಕೂಡ ಬೆಳೆ ವಿಮೆಯ ಹಣವನ್ನು ಪಡೆಯಬಹುದಾಗಿದೆ. ಬೆಳೆ ವಿಮೆಯನ್ನು ರೈತರು ಮಾಡಿಸಿದ್ದರೆ ಯಾವ ಕಂಪನಿಗೆ ಅವರು ಬೆಳೆ ವಿಮೆ ಹಣ ಪಾವತಿಸುತ್ತಾರೋ ಅದರ ಬಗ್ಗೆ ಅವರಿಗೆ ಮಾಹಿತಿ ಇರುವುದಿಲ್ಲ ಅಂತಹ ರೈತರು https://www.samrakshane.karnataka ಈ ವೆಬ್ಸೈಟ್ಗೆ ಭೇಟಿ ನೀಡುವುದರ ಮೂಲಕ ಯಾವ ಜಿಲ್ಲೆಯಲ್ಲಿ ಯಾವ ಬೆಳೆ ವಿಮೆ ಕಂಪನಿ ಕರ್ನಾಟಕ ರಾಜ್ಯದಲ್ಲಿ ಇದೆ ಎಂಬುದರ ಪಟ್ಟಿ ಸಿಗುತ್ತದೆ.
ಆ ಪಟ್ಟಿಗಳ ಮೂಲಕ ಯಾವ ಬೆಳೆ ವಿಮಾ ಕಂಪನಿಗೆ ನೀವು ಹಣವನ್ನು ಪಾವತಿಸಿದ್ದೀರಿ ಎಂಬುದನ್ನು ತಿಳಿಯಬಹುದಾಗಿದೆ. ಹಾಗೂ ಬೆಳೆ ಹಾನಿ ಮಾಹಿತಿಯನ್ನು ಪಡೆಯಬೇಕಾದರೆ ಬೆಳೆ ವಿಮಾ ಸಿಬ್ಬಂದಿ ಮೊಬೈಲ್ ನಂಬರ್ 18001801551 ಈ ನಂಬರ್ಗೆ ಕರೆ ಮಾಡಿ ಮಾಹಿತಿಯನ್ನು ತಿಳಿದುಕೊಳ್ಳಬಹುದಾಗಿದೆ.
ಬೆಳೆವಿಮೆ ಪರಿಹಾರ :
ಪ್ರಧಾನ ಮಂತ್ರಿ ಫಸಲ್ ಭೀಮಾ ಯೋಜನೆಯ ಅಡಿಯಲ್ಲಿ ಬೆಳೆಗಳಿಗೆ ವಿಮೆ ಕಟ್ಟಿದ ರೈತರಿಗೆ ಅಕಾಲಿಕ ಮಳೆ ಅತಿವೃಷ್ಟಿ ಪ್ರವಾಹ ಗುಡುಗು ಬಿಸಿಲು ಬಿರುಗಾಳಿ ಸೇರಿದಂತೆ ಹವಾಮಾನ ವೈಪರಿತ್ಯದಿಂದಾಗಿ ಬೆಳೆ ಹಾಳಾದರೆ ಬೆಳೆ ವಿಮೆ ಹಣ ಜಮಾ ಆಗುತ್ತದೆ ಬೆಳೆ ಹಾಳಾದಂತಹ 72 ಗಂಟೆಯ ಒಳಗಾಗಿ ರೈತರು ಆಯಾ ಜಿಲ್ಲೆಯ ತಮ್ಮ ವಿಮಾ ಕಂಪನಿಗೆ ದೂರು ನೀಡಬೇಕಾಗುತ್ತದೆ.
ಆಗ ವಿಮಾ ಕಂಪನಿಯ ಸಿಬ್ಬಂದಿಗಳು ದೂರು ನೀಡಿದಂತಹ ರೈತರ ಜಮೀನಿಗೆ ಬಂದು ಹಾಳಾದ ಬೆಳೆಗಳನ್ನು ಪರಿಶೀಲನೆ ಮಾಡುತ್ತಾರೆ ಅದಾದ ನಂತರ ಮೇಲಾಧಿಕಾರಿಗಳಿಗೆ ವಿಮ ಪರಿಹಾರಕ್ಕಾಗಿ ವರದಿ ಸಲ್ಲಿಸುತ್ತಾರೆ. ಎಷ್ಟು ಪ್ರಮಾಣದ ಬೆಳೆ ಹಾನಿ ರೈತರಿಗೆ ಆಗಿದೆ ಎಂಬುದನ್ನು ನೋಡಿಕೊಂಡು ವಿವಾ ಕಂಪನಿಯು ರೈತರ ಖಾತೆಗೆ ಬೆಳೆ ವಿಮೆಯ ಹಣವನ್ನು ಜಮಾಡುತ್ತದೆ.
ಹೀಗೆ ಬೆಳೆ ವಿಮೆಗೆ ಸಂಬಂಧಿಸಿದಂತೆ ರಾಜ್ಯ ಸರ್ಕಾರವು ಹಲವಾರು ಮಾಹಿತಿಯನ್ನು ರಾಜ್ಯದ ರೈತರಿಗೆ ತಿಳಿಸುತ್ತಿದ್ದು ನಿನ್ನೆ ನಡೆದ ಸಭೆಯಲ್ಲಿ ಪ್ರಕೃತಿಯಲ್ಲಿನ ಅತಿವೃಷ್ಟಿ ಮತ್ತು ಅನಾವೃಷ್ಟಿಯಿಂದಾಗಿ ಆರ್ಥಿಕ ನಷ್ಟ ರೈತರಿಗೆ ಉಂಟಾದ ಕಾರಣದಿಂದ ವಿಮೆ ಪರಿಹಾರವನ್ನು ಕಲ್ಪಿಸಲು ಹಾಗೂ ರೈತರ ಒಟ್ಟಾರೆ ಕೃಷಿ ಉತ್ಪಾದನೆಯನ್ನು ಅಂದಾಜಿಸಲು ಬೆಲೆ ಕಟಾವು ಪ್ರಯೋಗಗಳನ್ನು ನಡೆಸಲಾಗುತ್ತದೆ ಎಂದು ಜಿಲ್ಲಾಧಿಕಾರಿ ಡಾ. ಅವಿನಾಶ್ ಮೆನನ್ ರಾಜೇಂದ್ರ ಅವರು ತಿಳಿಸಿದ್ದಾರೆ.
ಹಾಗಾಗಿ ಈ ಮಾಹಿತಿಯ ಬಗ್ಗೆ ಪ್ರತಿಯೊಬ್ಬರಿಗೂ ಶೇರ್ ಮಾಡುವ ಮೂಲಕ ಅವರಿಗೂ ಕೂಡ ಬೆಳೆ ವಿಮೆ ಹಣ ಬಂದಿದೆಯ ಅಂತ ತಿಳಿದುಕೊಳ್ಳಲು ಹೇಳಿ ಧನ್ಯವಾದಗಳು.