ನಮಸ್ಕಾರ ಸ್ನೇಹಿತರೆ ಕಂದಾಯ ಇಲಾಖೆಯಲ್ಲಿ ಗ್ರಾಮ ಆಡಳಿತ ಅಧಿಕಾರಿ ಹುದ್ದೆಗಳಿಗೆ ನೇರ ನೇಮಕಾತಿಯನ್ನು ಕರ್ನಾಟಕ ಸರ್ಕಾರವು ಮಾಡುತ್ತಿದ್ದು ಇದೀಗ ಅಧಿಕೃತ ಅಧಿಸೂಚನೆಯನ್ನು ಕರ್ನಾಟಕ ಪರೀಕ್ಷಾ ಪ್ರಾಧಿಕಾರ ಫೆಬ್ರವರಿ 20ರಂದು ಪ್ರಕಟಣೆ ಮಾಡಿತು ಅದಕ್ಕೆ ಸಂಬಂಧಿಸಿದಂತೆ ಶೈಕ್ಷಣಿಕ ಅರ್ಹತೆ ಅಥವಾ ವಿದ್ಯಾರ್ಹತೆ ತಿದ್ದುಪಡಿ ಮಾಡಿರುವುದರ ಹೊಸ ನಿಯಮವನ್ನು ಅಳವಡಿಸಲಾಗಿದ್ದು .
ಹಾಗಾದರೆ ಎಷ್ಟು ಶೈಕ್ಷಣಿಕ ಅರ್ಹತೆಯನ್ನು ನಿಗದಿಪಡಿಸಲಾಗಿದೆ ಎಂಬುದರ ಸಂಪೂರ್ಣ ಮಾಹಿತಿಯನ್ನು ಈ ಲೇಖನದಲ್ಲಿ ತಿಳಿಯಬಹುದಾಗಿದೆ.
Contents
ಗ್ರಾಮ ಆಡಳಿತ ಅಧಿಕಾರಿಗಳ ಶೈಕ್ಷಣಿಕ ಅರ್ಹತೆ :
ಕರ್ನಾಟಕ ಸರ್ಕಾರ ಕಂದಾಯ ಇಲಾಖೆಯಲ್ಲಿ ಇದೀಗ ಗ್ರಾಮದ ಳಿತ ಅಧಿಕಾರಿ ಹುದ್ದೆಗಳಿಗೆ ಕರ್ನಾಟಕ ಸರ್ಕಾರದಿಂದ ಅರ್ಜಿಯನ್ನು ಕರೆಯಲಾಗಿದೆ ಇದಕ್ಕೆ ಸಂಬಂಧಿಸಿದಂತೆ ಗ್ರಾಮೀಣ ಅಧಿಕಾರಿ ಹುದ್ದೆಗಳಿಗೆ ಶಿಕ್ಷಣ ಅರ್ಹತೆಯನ್ನು ತಿದ್ದುಪಡಿ ಮಾಡಲಾಗಿದೆ ಅಭ್ಯರ್ಥಿಗಳು ಈ ಮಾಹಿತಿಯನ್ನು ಸಂಪೂರ್ಣವಾಗಿ ತಿಳಿದುಕೊಂಡ ನಂತರವೇ ಹುದ್ದೆಗಳಿಗೆ ಅರ್ಜಿ ಸಲ್ಲಿಸಬೇಕು.
ಈಗಾಗಲೇ ಎಲ್ಲಾ ವಿದ್ಯಾರ್ಥಿಗಳಿಗೆ ತಿಳಿದಿರುವ ಹಾಗೆ ಕಂದಾಯ ಇಲಾಖೆಯಲ್ಲಿ ಖಾಲಿ ಇರುವ ಹುದ್ದೆಗಳಿಗೆ ಅರ್ಜಿಯನ್ನು ಆಹ್ವಾನ ಮಾಡಲಾಗಿದೆ ಫೆಬ್ರವರಿ 20ರಂದು ಹೊರಡಿಸಿರುವ ಅಧಿಕೃತ ಅಧಿಸೂಚನೆಯಲ್ಲಿ ಶೈಕ್ಷಣಿಕ ಅರ್ಹತೆಯನ್ನು ಅಭ್ಯರ್ಥಿಗಳನ್ನು ತಿದ್ದುಪಡಿ ಮಾಡಲಾಗಿದೆ. ಹಾಗಾದರೆ ಗ್ರಾಮ ಆಡಳಿತ ಅಧಿಕಾರಿ ಹುದ್ದೆಗಳಿಗೆ ಶೈಕ್ಷಣಿಕ ಅರ್ಹತೆ ಏನು ಇರಬೇಕು ಎಂಬುದರ ಮಾಹಿತಿಯನ್ನು ನೋಡುವುದಾದರೆ,
- ಈ ಹಿಂದೆ ಗ್ರಾಮ ಆಡಳಿತ ಅಧಿಕಾರಿ ಹುದ್ದೆಗೆ ಅರ್ಜಿ ಸಲ್ಲಿಸಲು ದ್ವಿತೀಯ ಪಿಯುಸಿ ಅಥವಾ ತತ್ಸಮಾನ ವಿದ್ಯಾರ್ಹತೆ ಹೊಂದಿರಬೇಕೆಂದು ತಿಳಿಸಲಾಗಿತ್ತು.
ಆದರೆ ಈಗ ಈ ಮಾಹಿತಿಯನ್ನು ತಿದ್ದುಪಡಿ ಮಾಡಲಾಗಿದ್ದು ಏನು ಅರ್ಹತೆಯನ್ನು ಗ್ರಾಮ ಆಡಳಿತ ಅಧಿಕಾರಿ ಹುದ್ದೆಗೆ ಹೊಂದಿರಬೇಕೆಂದು ನೋಡುವುದಾದರೆ.
ಇದನ್ನು ಓದಿ : ಯುಗಾದಿಯ ಇತಿಹಾಸ ನಿಮಗೆ ತಿಳಿದಿದೆಯಾ ? ಹಬ್ಬದ ಆಸಕ್ತಿದಾಯಕ ವಿಚಾರ ಇಲ್ಲಿದೆ
ತಿದ್ದುಪಡಿಯ ಪ್ರಕಾರ ಗ್ರಾಮಾಡಳಿತ ಅಧಿಕಾರಿ ಹುದ್ದೆಗೆ ಶೈಕ್ಷಣಿಕ ಅರ್ಹತೆ :
ತಿದ್ದುಪಡಿಯ ಪ್ರಕಾರ ಗ್ರಾಮ ಆಡಳಿತ ಅಧಿಕಾರಿ ಹುದ್ದೆಗೆ ಶೈಕ್ಷಣಿಕ ಅರ್ಹತೆ ಏನಿರಬೇಕೆಂದು ನೋಡುವುದಾದರೆ,
- ಸಿಬಿಎಸ್‌ಸಿ ಮತ್ತು ಐಸಿಎಸ್ ಸೀ ಮಂಡಳಿ ನಡೆಸುವಂತಹ 12ನೇ ತರಗತಿಯಲ್ಲಿ ಉತ್ತೀರ್ಣರಾಗಿರಬೇಕು.
- ಸರ್ಕಾರದ ಪರೀಕ್ಷಾ ಮಂಡಳಿ ನಡೆಸುವ 12ನೇ ತರಗತಿಯ ಪರೀಕ್ಷೆಯಲ್ಲಿ ಪಾಸಾಗಿರಬೇಕು.
- ವಿದ್ಯಾರ್ಥಿಗಳು ನ್ಯಾಷನಲ್ ಇನ್ಸ್ಟಿಟ್ಯೂಟ್ ಆಫ್ ಓಪನಿಂಗ್ ಸ್ಕೂಲ್ ಇನ್ ಅಧ್ಯಯನ ನಡೆಸುವ ಹೆಚ್ಚು ಹಾಗೂ ಪ್ರೌಢ ಶಿಕ್ಷಣ ಕೋರ್ಸ್ಗಳ ಪರೀಕ್ಷೆಯನ್ನು
- ಮೂರು ವರ್ಷಗಳ ಡಿಪ್ಲೋಮಾ ಅಥವಾ ಎರಡು ವರ್ಷಗಳ ಐಟಿಐ ಕೋರ್ಸ್
- ಡಿಪ್ಲೋಮೋ ಶಿಕ್ಷಣ ನೆಡೆಸುವ ಭಾಷಾ ಕೋರ್ಸ್ ಗಳಿಗೆ ಒಂದು ಶೈಕ್ಷಣಿಕ ವಿಷಯದಲ್ಲಿ ಅಥವಾ ಪದವಿ ಪೂರ್ವ ಮಂಡಳಿ ನಡೆಸುವ ಪರೀಕ್ಷೆಯಲ್ಲಿ ಒಂದು ಭಾಷೆಯಲ್ಲಿ ಪದವಿ ಉತ್ತೀರ್ಣರಾಗಿ ಇರಬೇಕೆಂದು ಹೊಸ ಶೈಕ್ಷಣಿಕ ಅರ್ಹತೆಯ ಪ್ರಕಾರ ವಿದ್ಯಾರ್ಥಿಗಳಿಗೆ ತಿಳಿಸಲಾಗಿದೆ.
ಯಾವ ರೀತಿ ತಿದ್ದುಪಡಿ ಮಾಡಲಾಗಿದೆ :
ಗ್ರಾಮ ಆಡಳಿತ ಅಧಿಕಾರಿ ಹುದ್ದೆಗೆ ಅರ್ಜಿಯನ್ನು ಸಲ್ಲಿಸಬೇಕಾದರೆ ವಿದ್ಯಾರ್ಥಿಗಳು 2040 ಬಿಎಸ್ಸಿ 2022 ದಿನಾಂಕ 13.3.2024ರಲ್ಲಿ ಸೂಚಿಸಿರುವಂತೆ ಸರ್ಕಾರದ ಅಧಿಸೂಚನೆಯ ಪ್ರಕಾರ ಶೈಕ್ಷಣಿಕ ವಿದ್ಯಾರ್ಥಿ ಕೊನೆ ಭಾಗವನ್ನು ಇದೀಗ ತಿದ್ದುಪಡಿ ಮಾಡಲಾಗಿದೆ.
ಮೇಲ್ಗಡೆ ನೀಡಿರುವ ಮಾಹಿತಿಯ ಪ್ರಕಾರ ಅಭ್ಯರ್ಥಿಗಳು ನಿಮ್ಮ ಶೈಕ್ಷಣಿಕ ಅರ್ಹತೆಯನ್ನು ತಿಳಿದುಕೊಂಡ ನಂತರವೇ ಗ್ರಾಮ ಆಡಳಿತ ಅಧಿಕಾರಿ ಹುದ್ದೆಗಳಿಗೆ ಅರ್ಜಿಯನ್ನು ಸಲ್ಲಿಸಬೇಕಾಗುತ್ತದೆ.
ಒಟ್ಟಾರೆ ಗ್ರಾಮ ಆಡಳಿತ ಅಧಿಕಾರಿ ಹುದ್ದೆಗೆ ಸಂಬಂಧಿಸಿದಂತೆ ಶೈಕ್ಷಣಿಕ ಅರ್ಹತೆಯಲ್ಲಿ ತಿದ್ದುಪಡಿ ಮಾಡಲಾಗಿದ್ದು ವಿದ್ಯಾರ್ಥಿಗಳು ಶೈಕ್ಷಣಿಕ ಅರ್ಹತೆಗೆ ಅನುಗುಣವಾಗಿ ಗ್ರಾಮ ಆಡಳಿತ ಅಧಿಕಾರಿ ಹುದ್ದೆಗೆ ಅರ್ಜಿ ಸಲ್ಲಿಸಿ ಉದ್ಯೋಗವನ್ನು ಪಡೆಯಬಹುದಾಗಿದೆ. ಹಾಗಾಗಿ ಪ್ರತಿಯೊಬ್ಬರಿಗೂ ಈ ಮಾಹಿತಿಯನ್ನು ಶೇರ್ ಮಾಡುವ ಮೂಲಕ ಗ್ರಾಮ ಆಡಳಿತ ಅಧಿಕಾರಿ ಹುದ್ದೆಗೆ ಯಾವ ವಿದ್ಯಾರ್ಹತೆ ಹೊಂದಿರಬೇಕೆಂದು ತಿಳಿಸಿ ಧನ್ಯವಾದಗಳು.