rtgh
Headlines

KSRTC ಡ್ರೈವರ್ ಹುದ್ದೆಗಳಿಗೆ ಅರ್ಜಿ ಆಹ್ವಾನ : ನೇರ ನೇಮಕಾತಿ ನಡೆಯುತ್ತಾ.!! ಇಲ್ಲಿದೆ ಮಾಹಿತಿ

Application Invitation for KSRTC Driver Posts

ನಮಸ್ಕಾರ ಸ್ನೇಹಿತರೆ ಇವತ್ತಿನ ಲೇಖನದಲ್ಲಿ ನಿಮಗೆ ಕೆಎಸ್ಆರ್ಟಿಸಿ ಡ್ರೈವರ್ ಹುದ್ದೆಗಳಿಗೆ ಅರ್ಜಿ ಆಹ್ವಾನ ಮಾಡಿರುವುದರ ಬಗ್ಗೆ ಮಾಹಿತಿಯನ್ನು ತಿಳಿಸಲಾಗುತ್ತಿದೆ.

Application Invitation for KSRTC Driver Posts
Application Invitation for KSRTC Driver Posts

ಸಾಕಷ್ಟು ಜನರು ಕರ್ನಾಟಕ ಸಾರಿಗೆ ಸಂಸ್ಥೆಯಲ್ಲಿ ಕಾರ್ಯನಿರ್ವಹಿಸಬೇಕೆಂದು ಬಯಸುತ್ತಾರೆ ಅಂತವರಿಗೆ ಇದೊಂದು ಸಿಹಿ ಸುದ್ದಿ ಎಂದು ಹೇಳಬಹುದು. ಅದರಂತೆ ಹೊರಗುತ್ತಿಗೆ ಆಧಾರದ ಮೇಲೆ ವಾಯುವ್ಯ ಕರ್ನಾಟಕ ರಸ್ತೆ ಸಾರಿಗೆ ನಿಗಮದಲ್ಲಿ ಚಾಲಕರಾಗಿ ಕಾರ್ಯನಿರ್ವಹಿಸಲು ಇದೀಗ ಅರ್ಜಿಗಳನ್ನು ಆಹ್ವಾನಿಸಲಾಗಿದೆ.

ಅರ್ಜಿ ಸಲ್ಲಿಸಲು ಬಯಸುವ ಅಭ್ಯರ್ಥಿಗಳು ಅಗತ್ಯ ದಾಖಲೆಗಳೊಂದಿಗೆ ಹುದ್ದೆಗಳಿಗೆ ಅರ್ಜಿ ಸಲ್ಲಿಸಿ ಹುದ್ದೆಯನ್ನು ಪಡೆದುಕೊಳ್ಳಬಹುದು.

KSRTC ಯಲ್ಲಿ ಖಾಲಿ ಇರುವ ಹುದ್ದೆಗಳು :

ಡ್ರೈವರ್ ಹುದ್ದೆಗಳು ಖಾಲಿ ಇದ್ದು ಯಾವ ವಿಭಾಗದಲ್ಲಿ ಎಷ್ಟೋ ಹುದ್ದೆಗಳಿವೆ ಎಂಬುದನ್ನು ನೋಡುವುದಾದರೆ,

 1. ಧಾರವಾಡ ವಿಭಾಗದಲ್ಲಿ ಸೌದತ್ತಿ ರಾಮದುರ್ಗ ಹಳಿಯಾಳ ದಾಂಡೇಲಿ ಧಾರವಾಡ ಡಿಪೋಗಳಿಗೆ 30 ಹುದ್ದೆಗಳು ಖಾಲಿ ಇವೆ.
 2. ಚಿಕ್ಕೋಡಿ ವಿಭಾಗದಲ್ಲಿ ಚಿಕ್ಕೋಡಿ, ಗೋಕಾಕ್ ಸಂಕೇಶ್ವರ ನಿಪ್ಪಾಣಿ ರಾಯಭಾಗ ಹುಕ್ಕೇರಿ ಅಥಣಿ ಡಿಪೋಗಳಿಗೆ 40 ಹುದ್ದೆಗಳು ಖಾಲಿ ಇವೆ.
 3. ಹಾವೇರಿ ವಿಭಾಗದಲ್ಲಿ ರಾಣೇಬೆನ್ನೂರು ಹಾವೇರಿ ಹಿರೇಕೆರೂರು ಹಾನಗಲ್ ಬ್ಯಾಡಗಿ ಸವಣೂರು ಡಿಪೋಗಳಿಗೆ 50 ಹುದ್ದೆಗಳು ಖಾಲಿ ಇವೆ.
 4. ಶಿರಸಿ ವಿಭಾಗದಲ್ಲಿ ಕಾರವಾರ ಸಿರಸಿ, ಕುಮಟಾ ಭಟ್ಕಲ್ ಯಲ್ಲಾಪುರ ಅಂಕೋಲಾ ಡಿಪೋ ಗಳಿಗೆ 60 ಹುದ್ದೆಗಳು ಖಾಲಿ ಇವೆ.
  ಹೀಗೆ ವಿವಿಧ ವಿಭಾಗದಲ್ಲಿ ಡ್ರೈವರ್ ಹುದ್ದೆಗಳು ಕೆಎಸ್ಆರ್ಟಿಸಿಯಲ್ಲಿ ಖಾಲಿ ಇದ್ದು ಈ ಹುದ್ದೆಗಳಿಗೆ ಇದೀಗ ಅರ್ಜಿ ಆಹ್ವಾನಿಸಲಾಗಿದೆ.

ಡ್ರೈವರ್ ಹುದ್ದೆಗೆ ಬೇಕಾಗುವ ದಾಖಲೆಗಳು :

KSRTC ಹೊರಡಿಸಿರುವ ಅಧಿಸೂಚನೆಯ ಪ್ರಕಾರ ಡ್ರೈವರ್ ಹುದ್ದೆಗಳಿಗೆ ಕೆಲವೊಂದು ದಾಖಲೆಗಳನ್ನು ಹೊಂದುವುದರ ಮೂಲಕ ಅಭ್ಯರ್ಥಿಗಳು ಹುದ್ದೆಗಳಿಗೆ ಅರ್ಜಿ ಸಲ್ಲಿಸಬಹುದಾಗಿದೆ. ಆ ಪ್ರಮುಖ ದಾಖಲೆಗಳೆಂದರೆ ,

 1. Aadhar card.
 2. Driving licence.
 3. Medical fitness certificate.
 4. Police verification certificate.
 5. Passport size photos.
 6. Marks card from 7th standard and above.
 7. Transfer certificate.
 8. Bank details.
  ಹೀಗೆ ಕೆಲವೊಂದು ಪ್ರಮುಖ ದಾಖಲೆಗಳನ್ನು ಆಸಕ್ತಿ ಹೊಂದಿರುವ ಅಭ್ಯರ್ಥಿಗಳು ಹೊಂದುವುದರ ಮೂಲಕ ಅರ್ಜಿಯನ್ನು ಸಲ್ಲಿಸಬಹುದು.

ಉದ್ಯೋಗ ಮಾಹಿತಿ :

ಉದ್ಯೋಗದ ವಿಧ ಡ್ರೈವರ್
ಇಲಾಖೆ ಕರ್ನಾಟಕ ಸಾರಿಗೆ ಇಲಾಖೆ
ಉದ್ಯೋಗ ಸ್ಥಳ ಕರ್ನಾಟಕ
ಅರ್ಜಿ ಸಲ್ಲಿಸುವ ಲಿಂಕ್ https://nwkrtc.karnataka.gov.in/
ಅಧಿಸೂಚನೆ ನೋಡಿ ಕ್ಲಿಕ್ ಮಾಡಿ

ಇದನ್ನು ಓದಿ : ಮೋದಿಯಿಂದ ಉಚಿತ 300 ಯೂನಿಟ್ ವಿದ್ಯುತ್ ಜೊತೆಗೆ ರೂ.15,000 ಹಣ ಪಡೆಯಿರಿ ತಿಂಗಳಿಗೆ !

ಅರ್ಜಿ ಸಲ್ಲಿಸಲು ಇರುವ ವೆಬ್ಸೈಟ್ :

ಕೆಎಸ್ಆರ್ಟಿಸಿ ಅಲ್ಲಿ ಖಾಲಿ ಇರುವ ಈ ಹುದ್ದೆಗಳಿಗೆ ಅರ್ಜಿಯನ್ನು ಸಲ್ಲಿಸಬೇಕಾದರೆ ಅಭ್ಯರ್ಥಿಗಳು ವಾಯುವ್ಯ ಕರ್ನಾಟಕ ರಸ್ತೆ ಸಾರಿಗೆ ಅಧಿಕೃತ ವೆಬ್ಸೈಟ್ ಆದ https://nwkrtc.karnataka.gov.in/ಈ ವೆಬ್ಸೈಟ್ ಗೆ ಭೇಟಿ ನೀಡಿ ಆನ್ಲೈನ್ ಮುಖಾಂತರ ನಿಗದಿತ ದಿನದೊಳಗೆ ಅರ್ಜಿಯನ್ನು ಸಲ್ಲಿಸಬಹುದಾಗಿದೆ.

ಹೆಚ್ಚಿನ ಮಾಹಿತಿಗಾಗಿ :

ಕೆಎಸ್ಆರ್ಟಿಸಿ ಸಾರಿಗೆ ನಿಗಮದ ಡಿಪೋ ಗೆ ಭೇಟಿ ನೀಡಿ ಅರ್ಜಿಯನ್ನು ಸಲ್ಲಿಸಬಹುದಾಗಿದ್ದು ಈ ಬಗ್ಗೆ ಹೆಚ್ಚಿನ ಮಾಹಿತಿಯನ್ನು ತಿಳಿದುಕೊಳ್ಳಬೇಕಾದರೆ ಅಭ್ಯರ್ಥಿಗಳು ದೂರವಾಣಿ ಸಂಖ್ಯೆಯಾದ,

 1. 08213588801
 2. 8618943513
 3. 7259382467
  ಈ ಸಂಖ್ಯೆಗೆ ಕರೆ ಮಾಡಿ ಹೆಚ್ಚಿನ ಮಾಹಿತಿಯನ್ನು ತಿಳಿದುಕೊಳ್ಳಬಹುದು.

ಒಟ್ಟಾರೆ ಕರ್ನಾಟಕ ಸರ್ಕಾರವು ಸಾರಿಗೆ ಇಲಾಖೆಯಲ್ಲಿ ಖಾಲಿ ಇರುವ ಡ್ರೈವರ್ ಹುದ್ದೆಗಳಿಗೆ ಇದೀಗ ಅರ್ಜಿಯನ್ನು ಆಹ್ವಾನಿಸಲಾಗಿದ್ದು ಆಸಕ್ತಿ ಹೊಂದಿರುವ ಅಭ್ಯರ್ಥಿಗಳು ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಿ ಡ್ರೈವರ್ ಹುದ್ದೆಯನ್ನು ಪಡೆಯಬಹುದಾಗಿದೆ. ಹೊರಗುತ್ತಿಗೆ ಆಧಾರದ ಮೇಲೆ ಚಾಲಕರಾಗಿ ವಾಯುವ್ಯ ಕರ್ನಾಟಕ ರಸ್ತೆ ಸಾರಿಗೆ ನಿಗಮದಲ್ಲಿ ಕಾರ್ಯನಿರ್ವಹಿಸಲು ಇದೊಂದು ಸುವರ್ಣ ಅವಕಾಶ ಹಾಗಾಗಿ ಪ್ರತಿಯೊಬ್ಬರಿಗೂ ಈ ಮಾಹಿತಿಯನ್ನು ಕಳುಹಿಸಿ ಧನ್ಯವಾದಗಳು.

ಇತರೆ ವಿಷಯಗಳು :

Spread the love

Leave a Reply

Your email address will not be published. Required fields are marked *