ನಮಸ್ಕಾರ ಸ್ನೇಹಿತರೆ ಇವತ್ತಿನ ಲೇಖನದಲ್ಲಿ ರೈತರ ಮಕ್ಕಳಿಗೆ ಸಿಹಿ ಸುದ್ದಿಯನ್ನು ತಿಳಿಸಲಾಗುತ್ತಿದೆ. ಸರ್ಕಾರವು ರೈತರ ಮಕ್ಕಳಿಗೆ ಶಿಕ್ಷಣ ನೀಡುವ ನಿಟ್ಟಿನಲ್ಲಿ ಕೃಷಿ ವಿಶ್ವವಿದ್ಯಾಲಯದಲ್ಲಿ ಪ್ರಾಯೋಗಿಕ ಪರೀಕ್ಷೆ ಹಾಗೂ ಹೆಚ್ಚಿನ ಆದ್ಯತೆಯನ್ನು ರೈತರ ಮಕ್ಕಳಿಗೆ ನೀಡಲು ಸರ್ಕಾರ ಮುಂದಾಗಿದೆ.
ರಾಜ್ಯದ ಎಲ್ಲಾ ಕೃಷಿ ಮತ್ತು ಕೃಷಿಗೆ ಸಂಬಂಧಿಸಿದಂತೆ ವಿಶ್ವವಿದ್ಯಾಲಯಗಳ 2024 25ರ ಸ್ನಾತಕೋತ್ತರ ಪದವಿಗಳ ಪ್ರವೇಶಾತಿಗಾಗಿ ಕೃಷಿಕರ ಕೋಟ್ಯಾದ ಆನ್ಲೈನ್ ದಾಖಲಾತಿ ಪರಿಶೀಲನೆ ಕುರಿತು ತಿಳಿಸಲಾಗುತ್ತಿದೆ.
Contents
ಸ್ನಾತಕ ಪದವಿಗಳಿಗೆ ಪ್ರವೇಶಾತಿ ಪ್ರಾರಂಭ :
ಪ್ರಸಕ್ತ 2024 ಮತ್ತು 25ನೇ ಶೈಕ್ಷಣಿಕ ಸಾಲಿನಲ್ಲಿ ಸ್ನಾರ್ಥಕ ಪದವಿಗಳಿಗೆ ಕೃಷಿಕರ ಕೋಟಾದ ಅಡಿಯಲ್ಲಿ ಪ್ರವೇಶಾತಿಗೆ ಸಂಬಂಧಿಸಿದಂತೆ ಸಲ್ಲಿಸುವ ದಾಖಲಾತಿಗಳನ್ನು ಆನ್ಲೈನಲ್ಲಿ ಪರಿಶೀಲನೆ ಮಾಡಲಾಗುತ್ತದೆ.
ಯಾವ ಕೇಂದ್ರದಲ್ಲಿ ದಾಖಲಾತಿ ಪರಿಶೀಲನೆಗೆ ಆಯ್ಕೆ ಮಾಡಲಾಗಿರುತ್ತದೆಯೋ ಅಭ್ಯರ್ಥಿಗಳು ಕರ್ನಾಟಕ ಪರೀಕ್ಷಾ ಪ್ರಾಧಿಕಾರಕ್ಕೆ ಅರ್ಜಿಯನ್ನು ಸಲ್ಲಿಸುವ ಸಂದರ್ಭದಲ್ಲಿ ಅದೇ ಕೇಂದ್ರಗಳಲ್ಲಿ ಸಂಬಂಧಿತ ವಿಶ್ವವಿದ್ಯಾಲಯಗಳಿಂದ ನಿಯೋಜಿಸಿದ ಸಮಿತಿ ದಾಖಲಾತಿಗಳನ್ನು ಪರಿಶೀಲನೆ ಮಾಡಲಾಗುತ್ತದೆ.
ಇದನ್ನು ಓದಿ : ಸರ್ಕಾರಿ ನೌಕರರು ಹಳೆಯ ಪಿಂಚಣಿ ಯೋಜನೆಗೆ ಹೇಗೆ ಅರ್ಜಿ ಸಲ್ಲಿಸಬೇಕು ? ಇಲ್ಲಿದೆ ಸಂಪೂರ್ಣ ಮಾಹಿತಿ
ಕೆಇಎ ಅರ್ಜಿ ನಮೂನೆ :
ವಿದ್ಯಾರ್ಥಿಗಳು ಈ ಮೊದಲು ಕೆಇಎ ಅಜ್ಜಿ ನಮೂನೆಯಲ್ಲಿ ಅವರು ಸೂಚಿಸಿರುವ ಪರೀಕ್ಷಾ ಕೇಂದ್ರವನ್ನು ಅವಲಂಬಿಸಿ ಅಂತಹ ವಿದ್ಯಾರ್ಥಿಗಳು ಕೆಳಗೆ ತಿಳಿಸಲಾಗುವಂತಹ ದಾಖಲಾತಿಗಳನ್ನು ರಾಜ್ಯದ ಕೃಷಿ ಮತ್ತು ಕೃಷಿ ಸಂಬಂಧಿತ ವಿಶ್ವವಿದ್ಯಾಲಯಗಳ ಹಾಗೂ ಕರ್ನಾಟಕ ಪರೀಕ್ಷಾ ಪ್ರಾಧಿಕಾರ ಅಧಿಕೃತ ವೆಬ್ಸೈಟ್ ಗೆ ಭೇಟಿ ನೀಡಿ ಆನ್ಲೈನ್ ಮೂಲಕ ಅಪ್ಲೋಡ್ ಮಾಡಬೇಕಾಗುತ್ತದೆ.
ಆನ್ಲೈನ್ ಮೂಲಕ ಅಪ್ಲೋಡ್ ಮಾಡಲು ಬೇಕಾಗುವ ದಾಖಲೆಗಳು :
ಆನ್ಲೈನ್ ಪರಿಶೀಲನೆಗೆ ಸಂಬಂಧಿಸಿದಂತೆ ಸಲ್ಲಿಸಬೇಕಾದಂತಹ ಅರ್ಜಿಯಲ್ಲಿ ಮೂಲ ದಾಖಲಾತಿಗಳನ್ನು ವಿದ್ಯಾರ್ಥಿಗಳು ಹೊಂದಿರಬೇಕು ಅವುಗಳೆಂದರೆ,
- ಸಿಇಟಿ ಪ್ರವೇಶ ಚೀಟಿ
- ವ್ಯವಸಾಯಗಾರರ ಅಥವಾ ಕೃಷಿ ಮತ್ತು ಕೃಷಿ ಸಂಬಂಧಿತ ಕೂಲಿಕಾರ್ಮಿಕರ ಪ್ರಮಾಣ ಪತ್ರ. ಆರ್ಡಿ ಸಂಖ್ಯೆಯೊಂದಿಗೆ ಕಂದಾಯ ಇಲಾಖೆಯಲ್ಲಿ ನೀಡಲಾಗುವಂತಹ ಕಂದಾಯ ಪ್ರಮಾಣ ಪತ್ರ.
- ಅವಿಭಾಜ್ಯ ಕುಟುಂಬದಲ್ಲಿ ವಾಸಿಸುತ್ತಿದ್ದರೆ ವಿದ್ಯಾರ್ಥಿಗಳು ಪೂರಕವಾಗಿ ವಂಶವೃಕ್ಷ ಪ್ರಮಾಣ ಪತ್ರ ಕೃಷಿಕರ ಕೋಟಾದ ಅಡಿಯಲ್ಲಿ ಅರ್ಜಿಯನ್ನು ಪರಿಗಣಿಸಲು ಕಡ್ಡಾಯವಾಗಿ ನೀಡಬೇಕು. ಆರ್ ಡಿ ಸಂಖ್ಯೆ ಮತ್ತು ಕ್ಯೂಆರ್ ಕೋಡ್ ನೊಂದಿಗೆ ತಹಶೀಲ್ದಾರ್ ರವರು ಕೊಡುವ ಪ್ರಮಾಣ ಪತ್ರ.
- ಆದಾಯ ಪ್ರಮಾಣ ಪತ್ರ
- ಅಫೀಡವಿಟ್
ಹೀಗೆ ಕೆಲವೊಂದು ದಾಖಲಾತಿಗಳನ್ನು ಹೊಂದುವುದರ ಮೂಲಕ ವಿದ್ಯಾರ್ಥಿಗಳು ಸ್ನಾತಕೋತ್ತರ ಪದವಿಗಳಿಗೆ ಕೃಷಿ ಸಂಬಂಧಿತ ವಿಶ್ವವಿದ್ಯಾಲಯಗಳಲ್ಲಿ ಪ್ರವೇಶಾತಿಯನ್ನು ಹೊಂದಲು ಅರ್ಜಿಯನ್ನು ಸಲ್ಲಿಸಬೇಕು.
ಅರ್ಜಿ ಶುಲ್ಕದ ವಿವರ :
ಸ್ನಾತಕೋತರ ಪದವಿಗೆ ಅರ್ಜಿಯನ್ನು ಸಲ್ಲಿಸುವ ಸಂದರ್ಭದಲ್ಲಿ ಅಭ್ಯರ್ಥಿಗಳು ಆನ್ಲೈನ್ ಮೂಲಕ ಅರ್ಜಿಯನ್ನು ಸಲ್ಲಿಸಬೇಕಾಗುತ್ತದೆ ಅರ್ಜಿಯನ್ನು ಸಲ್ಲಿಸುವ ಸಂದರ್ಭದಲ್ಲಿ ಆನ್ಲೈನ್ ಮೂಲಕವೇ ಅಭ್ಯರ್ಥಿಗಳದ್ದು ಪರಿಶೀಲನೆ ಮಾಡಲಾಗುತ್ತದೆ. ಅಭ್ಯರ್ಥಿಗಳು ಅರ್ಜಿಯನ್ನು ಪರಿಶೀಲನೆಗಾಗಿ ಅರ್ಜಿ ಶುಲ್ಕವನ್ನು ಪಾವತಿಸಬೇಕಾಗುತ್ತದೆ.
- ಸಾಮಾನ್ಯ ವರ್ಗಗಳಿಗೆ ಸಾವಿರ ರೂಪಾಯಿ
- ಪರಿಶಿಷ್ಟ ಜಾತಿ ಪರಿಶಿಷ್ಟ ಪಂಗಡ ಪ್ರವರ್ಗ ಒಂದು ಅಭ್ಯರ್ಥಿಗಳಿಗೆ 500 ರೂಪಾಯಿ
ಹೀಗೆ ಶುಲ್ಕವೆಂದು ಕೃಷಿ ವಿಶ್ವವಿದ್ಯಾಲಯಗಳ ಅಧಿಕೃತ ಜಾಲತಾಣದಲ್ಲಿ ನೀಡಲಾಗುವ ಆನ್ಲೈನ್ ಸೌಲಭ್ಯದ ಮೂಲಕ ಪಾವತಿ ಮಾಡಬಹುದಾಗಿದ್ದು ಅರ್ಜಿ ಶುಲ್ಕವನ್ನು ಪಾವತಿಸಿದ ನಂತರವೇ ಶುಲ್ಕ ರಶೀತಿ ಹಾಗೂ ದಾಖಲಾತಿಗಳನ್ನು ಸಲ್ಲಿಸಿದ ಮಾಹಿತಿಗಳನ್ನು ಡೌನ್ಲೋಡ್ ಮಾಡಿಕೊಳ್ಳಲು ಅಭ್ಯರ್ಥಿಗಳು ಸಾಧ್ಯವಾಗುತ್ತದೆ.
ಹೀಗೆ ರಾಜ್ಯ ಸರ್ಕಾರವು ರೈತರ ಮಕ್ಕಳಿಗೆ ಕೃಷಿ ವಿಶ್ವವಿದ್ಯಾಲಯದಲ್ಲಿ ಪ್ರಾಯೋಗಿಕ ಪರೀಕ್ಷೆ ಹಾಗೂ ಹೆಚ್ಚಿನ ಆದ್ಯತೆಯನ್ನು ನೀಡಲು ಮುಂದಾಗಿದ್ದು ಇದೀಗ ಸ್ನಾರ್ಥಕ ಪದವಿಗಳ ಪ್ರವೇಶಾತಿಗಾಗಿ ರಾಜ್ಯದ ಎಲ್ಲಾ ಕೃಷಿ ಮತ್ತು ಕೃಷಿ ಸಂಬಂಧಿತ ವಿಶ್ವವಿದ್ಯಾಲಯಗಳಲ್ಲಿ ಕೃಷಿಕರ ಕೋಟದ ಆನ್ಲೈನ್ ದಾಖಲಾತಿಯನ್ನು ಮಾಡಲಾಗುತ್ತಿದೆ.
ಹಾಗಾಗಿ ಈ ಮಾಹಿತಿಯ ಬಗ್ಗೆ ಎಲ್ಲ ರೈತರ ಮಕ್ಕಳಿಗೆ ಶೇರ್ ಮಾಡುವ ಮೂಲಕ ಅವರೇನಾದರೂ ಕೃಷಿಗೆ ಸಂಬಂಧಿಸಿದಂತೆ ಸ್ನಾತಕೋತ್ತರ ಪದವಿಯನ್ನು ಪಡೆಯಲು ಬಯಸುತ್ತಿದ್ದರೆ ಈ ಮಾಹಿತಿಯು ಹೆಚ್ಚು ಉಪಯುಕ್ತವಾಗಲಿದೆ ಧನ್ಯವಾದಗಳು.