ನಮಸ್ಕಾರ ಸ್ನೇಹಿತರೇ, ಇಂದಿನ ನಮ್ಮ ಈ ಲೇಖನಕ್ಕೆ ನಿಮಗೆಲ್ಲರಿಗೂ ಆತ್ಮೀಯವಾದ ಸ್ವಾಗತ, ಮಹಿಳೆಯರಿಗಾಗಿ ಹಲವಾರು ಯೋಜನೆಗಳನ್ನು ರಾಜ್ಯ ಸರ್ಕಾರ ಮತ್ತು ಕೇಂದ್ರ ಸರ್ಕಾರವು ಪರಿಚಯಿಸಿದೆ, ಮಹಿಳೆಯರ ಸಬಲೀಕರಣಕ್ಕಾಗಿ ಹಲವಾರು ಯೋಜನೆಗಳು ರೂಪಿತವಾಗಿದ್ದು ಇದಕ್ಕಾಗಿ ಪ್ರತಿ ವರ್ಷವು ಸಾವಿರಾರು ಕೋಟಿ ರೂಪಾಯಿಗಳನ್ನು ಮೀಸಲಿಡಲಾಗುತ್ತದೆ.
ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರ ಆಡಳಿತದ ಅವಧಿಯಲ್ಲಿ ಕೆಲವು ಪ್ರಮುಖವಾದ ಯೋಜನೆಗಳನ್ನು ಜಾರಿಗೆ ತರಲಾಗಿದೆ, ಅವುಗಳಲ್ಲಿ ಪ್ರಧಾನ ಮಂತ್ರಿ ಉಜ್ವಲ ಯೋಜನೆ ಸಹ ಒಂದು.
Contents
ಪ್ರಧಾನ ಮಂತ್ರಿ ಉಜ್ವಲ ಯೋಜನೆಯಲ್ಲಿ ಸಬ್ಸಿಡಿ ಗ್ಯಾಸ್ ಸಿಲಿಂಡರ್
ಸೌದೆ ಒಲೆಯ ಮೂಲಕ ಅಡುಗೆಯನ್ನು ಮಾಡುವ ಕಷ್ಟ ಇನ್ನು ಮುಂದೆ ಹೆಣ್ಣು ಮಕ್ಕಳಿಗೆ ಇಲ್ಲ, ಪ್ರತಿಯೊಂದು ಮನೆಗೂ ಸಹ ಉಚಿತವಾಗಿ ಗ್ಯಾಸ್ ಕನೆಕ್ಷನ್ ನೀಡುವ ಯೋಜನೆ ಪ್ರಧಾನ ಮಂತ್ರಿ ಉಜ್ವಲ ಯೋಜನೆ ಆಗಿದೆ.
ಈ ಯೋಜನೆಯ ಅಡಿಯಲ್ಲಿ ಯಾವ ಮಹಿಳೆಯರು ಇನ್ನೂ ಸಾಂಪ್ರದಾಯಿಕವಾಗಿ ಕಟ್ಟಿಗೆ ಹೊತ್ತಿಸಿ ಅಡುಗೆ ಮಾಡುತ್ತಾರೋ ಅಂತವರಿಗೆ ಸಹಾಯಕವಾಗಲು ಉಚಿತ ಗ್ಯಾಸ್ ಕನೆಕ್ಷನ್ ನೀಡಲಾಗುತ್ತಿದೆ.
ಇತ್ತೀಚಿಗೆ ಮಹಿಳಾ ದಿನಾಚರಣೆಯ ಪ್ರಯುಕ್ತ ಮಾನ್ಯ ಪ್ರಧಾನ ಮಂತ್ರಿ ನರೇಂದ್ರ ಮೋದಿಜಿ ಅವರು ಮಹಿಳೆಯರಿಗೆ ಮತ್ತೊಂದು ಕೊಡುಗೆ ನೀಡಿದ್ದು, ಇಲ್ಲಿಯವರೆಗೆ ಉಚಿತವಾಗಿ ನೀಡಲಾಗುತ್ತಿದ್ದ ಒಂದು ಗ್ಯಾಸ್ ಸಿಲೆಂಡರ್ ಬದಲಿಗೆ ಎರಡು ಗ್ಲಾಸ್ ಸಿಲಿಂಡರ್ ನೀಡಲು ನಿರ್ಧರಿಸಿದ್ದಾರೆ. ಅಂದರೆ 300 ರೂಪಾಯಿಗಳ ಸಬ್ಸಿಡಿಯನ್ನು ಪ್ರತಿ ಸಿಲಿಂಡರ್ ಮೇಲೆ ಪಡೆಯಬಹುದು.
ಸಿಗುತ್ತೆ 300 ರೂಪಾಯಿ ಸಬ್ಸಿಡಿ!
LPG ಗ್ಯಾಸ್ ಸಿಲೆಂಡರ್ ಬಳಕೆಯನ್ನು ಮಾಡುವವರಿಗಿಂತ ಉಜ್ವಲ ಯೋಜನೆಯ ಅಡಿಯಲ್ಲಿ ಗ್ಯಾಸ್ ಕನೆಕ್ಷನ್ ಅನ್ನು ಪಡೆದುಕೊಂಡಿರುವವರಿಗೆ ಗ್ಯಾಸ್ ಬೆಲೆ ಕಡಿಮೆ ಎನ್ನುಬಹುದು. ಈ ಹಿಂದೆ 200 ರೂಪಾಯಿಗಳಿದ್ದ, ಸಬ್ಸಿಡಿಯನ್ನು 100 ರೂಪಾಯಿಗೆ ಏರಿಕೆ ಮಾಡಿ 300 ಮಾಡಲಾಗಿದೆ.
ಇದನ್ನೂ ಸಹ ಓದಿ: ಇನ್ನುಮುಂದೆ ಯಾವ ಟೋಲ್ ಗೇಟ್ ಕೂಡ ದೇಶದಲ್ಲಿ ಇರುವುದಿಲ್ಲ ; ಹೊಸ ಟ್ವಿಸ್ಟ್ ನಲ್ಲಿದೆ ಗುಡ್ ನ್ಯೂಸ್
ಆದ್ದರಿಂದ ಪ್ರತಿ ಸಿಲೆಂಡರ್ ಅನ್ನು ಕೇವಲ 603 ರೂಪಾಯಿಗಳಿಗೆ ಖರೀದಿಸಬಹುದು. ಇನ್ನು ಆರ್ಥಿಕವಾಗಿ ಹಿಂದುಳಿದವರಿಗೆ ಮಾತ್ರ ಈ ಯೋಜನೆಯ ಲಾಭ ಸಿಗುತ್ತದೆ. ಅದರ ಜೊತೆಗೆ ವರ್ಷದಲ್ಲಿ 12 ಸಿಲಿಂಡರ್ ಅನ್ನು ಖರೀದಿ ಮಾಡಿದರೆ ಮಾತ್ರವೇ ಈ ಸಬ್ಸಿಡಿಯು ಅನ್ವಯವಾಗುತ್ತದೆ. ಅದಕ್ಕಿಂತ ಹೆಚ್ಚಿಗಿ ಗ್ಯಾಸ ಸಿಲೆಂಡರ್ ಅನ್ನು ಬಳಕೆಯನ್ನು ಮಾಡಿದರೆ ಯಾವುದೇ ರೀತಿಯ ಸಬ್ಸಿಡಿಯು ಸಿಗುವುದಿಲ್ಲ.
ಅರ್ಜಿ ಸಲ್ಲಿಸಲು ಬೇಕಾಗಿರುವ ದಾಖಲೆಗಳು:
- ಮಹಿಳಾ ಫಲಾನುಭವಿಯ ಆಧಾರ್ ಕಾರ್ಡ್
- ಆದಾಯ ಪ್ರಮಾಣ ಪತ್ರ
- ಪಾಸ್ ಪೋರ್ಟ್ ಅಳತೆಯ ಫೋಟೋ
- ರೇಷನ್ ಕಾರ್ಡ್
- ಬ್ಯಾಂಕ್ ಖಾತೆಯ ವಿವರ
- ಜಾತಿ ಪ್ರಮಾಣ ಪತ್ರ
ಅರ್ಜಿ ಸಲ್ಲಿಸಲು ಅರ್ಹತೆಗಳು
- ಫಲಾನುಭವಿ ಮಹಿಳೆ 18 ವರ್ಷ ಮೇಲ್ಪಟ್ಟರಾಗಿರಬೇಕು
- ಗ್ರಾಮೀಣ ಪ್ರದೇಶದಲ್ಲಿ 1 ಲಕ್ಷ ರೂಪಾಯಿ ಹಾಗೂ ನಗರ ಪ್ರದೇಶಗಳಲ್ಲಿ 2 ಲಕ್ಷ ರೂಪಾಯಿಗಳಿಗಿಂತ ಕಡಿಮೆ ಆದಾಯ ಹೊಂದಿರಬೇಕು
- ಈಗಾಗಲೇ ಕನೆಕ್ಷನ್ ಪಡೆದುಕೊಂಡಿದ್ದರೆ ಅಂತವರಿಗೆ ಮತ್ತೆ ಪಡೆಯಲು ಅವಕಾಶವಿಲ್ಲ.
- ಒಂದು ಮನೆಗೆ ಒಂದೇ ಗ್ಯಾಸ್ ಕನೆಕ್ಷನ್ ಯನ್ನು ಉಚಿತವಾಗಿ ನೀಡಲಾಗುವುದು.
ಅರ್ಜಿ ಸಲ್ಲಿಸುವುದು ಹೇಗೆ?
ಪ್ರಧಾನ ಮಂತ್ರಿ ಉಜ್ವಲ ಯೋಜನೆ 2.0 ಇದಕ್ಕೆ ನೀವು ಅರ್ಜಿ ಸಲ್ಲಿಸಲು ಮೊದಲು https://www.pmuy.gov.in/index.aspx ಅಧಿಕೃತ ವೆಬ್ ಸೈಟ್ ಗೆ ಭೇಟಿಯನ್ನು ನೀಡಿ. ಕೇಳಿರುವ ಎಲ್ಲಾ ಮಾಹಿತಿಗಳನ್ನು ಭರ್ತಿ ಮಾಡಿ ಅರ್ಜಿ ಸಲ್ಲಿಸಬೇಕು. ಅಥವಾ ನಿಮ್ಮ ಹತ್ತಿರದ ಗ್ಯಾಸ್ ಏಜೆನ್ಸಿಗೆ ಹೋಗಿ ಸಹ ನೀವು ಅರ್ಜಿಯನ್ನು ಸಲ್ಲಿಸಬಹುದಾಗಿದೆ.
ಸಂಬಂಧಪಟ್ಟ ಅಧಿಕಾರಿಗಳು ಸ್ಥಳವನ್ನು ಪರಿಶೀಲನೆ ನಡೆಸಿದ ನಂತರ ನಿಮಗೆ ಉಚಿತ ಗ್ಯಾಸ್ ಕನೆಕ್ಷನ್ ಅನ್ನು ಮಂಜೂರು ಮಾಡಿಕೊಡಲಾಗುತ್ತದೆ.
ಇತರೆ ವಿಷಯಗಳು:
ಎಲ್ಲಾ ಶಾಲೆಗಳಿಗೆ ಬೇಸಿಗೆ ರಜೆ ಪ್ರಾರಂಭ : ಯಾವಾಗ ಹೊಸ ಶೈಕ್ಷಣಿಕ ವರ್ಷ ಶಾಲೆ ಶುರುವಾಗಲಿದೆ ನೋಡಿ
ಈ ಹೆಸರಿನಿಂದ ಹೆಂಡತಿಗೆ ಕರೆಯುವಂತಿಲ್ಲ : ಕೋರ್ಟ್ ನಿಂದ ಬೆಳ್ಳಂಬೆಳಗ್ಗೆ ಆದೇಶ ಬಿಡುಗಡೆ