ನಮಸ್ಕಾರ ಸ್ನೇಹಿತರೆ ಏಪ್ರಿಲ್ 11ಕ್ಕೆ ಕರ್ನಾಟಕದ ಶಾಲೆಗಳಿಗೆ ಬೇಸಿಗೆ ರಜೆ ಶುರುವಾಗಲಿದ್ದು ಅದಕ್ಕೂ ಮೊದಲೇ ಫಲಿತಾಂಶ ಪ್ರಕಟಣೆ ಮಾಡಲಾಗುತ್ತದೆಯ ಯಾವಾಗ ಅಡ್ಮಿಶನ್ ಶುರುವಾಗಲಿದೆ ಹೊಸ ಶೈಕ್ಷಣಿಕ ಶಾಲೆ ಯಾವಾಗ ಶುರುವಾಗಲಿದೆ ದಿನಾಂಕ ಮತ್ತು ಸಂಬಂಧಿಸಿದಂತೆ ಎಲ್ಲಾ ವಿವರಗಳನ್ನು ಈ ಲೇಖನದಲ್ಲಿ ತಿಳಿಯಬಹುದಾಗಿದೆ.
Contents
ಏಪ್ರಿಲ್ 6 ರಂದು ಕೊನೆಯ ಪರೀಕ್ಷೆ :
ಮೊದಲ ಹಂತದ ಲೋಕಸಭಾ ಚುನಾವಣೆಗೆ ಕರ್ನಾಟಕದಲ್ಲಿ ಅಧಿಸೂಚನೆ ಪ್ರಕಟವಾಗಿದೆ ಅದರ ಕಾವು ಏರುತ್ತಿರುವ ಹೊತ್ತು ಇದಾಗಿದ್ದು ಇದರ ನಡುವೆ ವಾರ್ಷಿಕ ಪರೀಕ್ಷಾ ಸೀಸನ್ ಗಳು ಕೂಡ ಪ್ರಾರಂಭವಾಗಿದೆ. ಮಾರ್ಚ್ 22ಕ್ಕೆ ದ್ವಿತೀಯ ಪಿಯುಸಿ ಪರೀಕ್ಷೆಗಳು ಮುಗಿದಿದ್ದು ಇದೀಗ ಕರ್ನಾಟಕ ಎಸ್ ಎಸ್ ಎಲ್ ಸಿ ಪರೀಕ್ಷೆ ನಡೆಯುತ್ತಿದೆ ಹಾಗೂ ಏಪ್ರಿಲ್ ಆರರನ್ನು ಕರ್ನಾಟಕದ ಎಸೆಸೆಲ್ಸಿಯ ಕೊನೆಯ ಪರೀಕ್ಷೆ ನಡೆಯಲಿದೆ.
ಕರ್ನಾಟಕ ಸರ್ಕಾರ ಬಿಡುಗಡೆ ಮಾಡಿರುವ ಶೈಕ್ಷಣಿಕ ಮಾರ್ಗದರ್ಶಿ :
ಒಂದನೇ ತರಗತಿಯಿಂದ 9ನೇ ತರಗತಿಯ ವರೆಗಿನ ಪರೀಕ್ಷೆಗಳು ಮಾರ್ಚ್ 15ರಿಂದ 30ರ ಅವಧಿಯಲ್ಲಿ ನಡೆಯುತ್ತಿದೆ ಇದರ ನಡುವೆ ಒಂದರಿಂದ 7ನೇ ತರಗತಿಯ ಮಕ್ಕಳಿಗೆ ಪರೀಕ್ಷೆಗಳು ಶಾಲಾ ಮಟ್ಟದಲ್ಲಿ ನಡೆದರೆ ಐದು ಎಂಟು ಮತ್ತು 9ನೇ ತರಗತಿಯ ಪರೀಕ್ಷೆಗಳನ್ನು ಶಾಲಾ ಪರೀಕ್ಷೆ ಮತ್ತು ಮೌಲ್ಯಮಾಪನ ಮಂಡಳಿ ನಡೆಸುವುದಾಗಿ ಕರ್ನಾಟಕ ಸರ್ಕಾರ ಬಿಡುಗಡೆ ಮಾಡಿರುವ ಶೈಕ್ಷಣಿಕ ಮಾರ್ಗದರ್ಶಿ.
2023-24 ರ ಪ್ರಕಾರ ಘೋಷಣೆ ಮಾಡಲಾಗಿದೆ. ಹೀಗಾಗಿ ಇದನ್ನು 5 8 ಮತ್ತು 9ನೇ ತರಗತಿಯ ಬೋರ್ಡ್ ಪರೀಕ್ಷೆ ಎಂದು ಹೇಳಲಾಗಿತ್ತು, ಮಾರ್ಚ್ ಹತ್ತರಿಂದ ಈ ಪರೀಕ್ಷೆಗಳು ನಡೆದು 18ರ ತನಕ ನಡೆಸಲು ಆಯೋಜನೆ ಮಾಡಲಾಗಿತ್ತು ಆದರೆ ಇದರ ನಡುವೆ ಈ ವಿಚಾರ ಕೋರ್ಟ್ ಮೆಟ್ಟಲೇರಿದ ಪರಿಣಾಮವಾಗಿ ಪರೀಕ್ಷೆ ವಿಳಂಬವಾಗಿದ್ದು ಇದೀಗ ಮಾರ್ಚ್ 25ರಿಂದ ಶುರುವಾಗಿ ಮಾರ್ಚ್ 28ಕ್ಕೆ ಈ ಪರೀಕ್ಷೆಗಳು ಮುಕ್ತಾಯವಾಗಿದೆ.
ಕರ್ನಾಟಕ ಶಾಲೆಗಳಿಗೆ ಕರ್ನಾಟಕ ಸರ್ಕಾರ ಬಿಡುಗಡೆ ಮಾಡಿರುವ ಶೈಕ್ಷಣಿಕ ಮಾರ್ಗದರ್ಶಿ 2023 24ರ ಪ್ರಕಾರ ಬೇಸಿಗೆ ರಜೆ ಹಾಗೂ ಏಪ್ರಿಲ್ ಮೊದಲ ವಾರ ಫಲಿತಾಂಶ ಪ್ರಕಟವಾಗಿದ್ದು ಏಪ್ರಿಲ್ ಒಂದರಿಂದ ಇದರ ನಡುವೆ ಮೌಲ್ಯಮಾಪನ ಕಾರ್ಯ ಶೈಕ್ಷಣಿಕ ವರ್ಷದ ಒಂದನೇ ತರಗತಿಯಿಂದ 9ನೇ ತರಗತಿವರೆಗಿನ ವಾರ್ಷಿಕ ಪರೀಕ್ಷೆ ಮುಗಿದ ನಂತರ ನಡೆಯಲಿದ್ದು ಅದಾಗಿ ಏಪ್ರಿಲ್ 8ರಂದು ಪ್ರಾಥಮಿಕ ತರಗತಿಗಳ ಫಲಿತಾಂಶ ಪ್ರಕಟಣೆ ಆಗಲಿದೆ. 8 ಮತ್ತು 9ನೇ ತರಗತಿಗಳು ಫಲಿತಾಂಶ ಏಪ್ರಿಲ್ 10 ರಂದು ಪ್ರಕಟಣೆ ಯಾಗುತ್ತದೆ.
ಎಸ್ ಎಸ್ ಎಲ್ ಸಿ ಪರೀಕ್ಷೆಯ ಉತ್ತರ ಪತ್ರಿಕೆಗಳ ಮೂಲೆ ಮಾಪನ ಏಪ್ರಿಲಾರರಿಂದ 13ರವರೆಗೆ ನಡೆಯಲಿದ್ದು ಇದರ ನಡುವೆ ಏಪ್ರಿಲ್ 11ರಿಂದ ಹಾಲಿ ಶೈಕ್ಷಣಿಕ ವರ್ಷದ ಬೇಸಿಗೆ ರಜೆ ಶುರುವಾಗಲಿದೆ. ಮೇ 28 ರವರೆಗೆ ಬೇಸಿಗೆ ರಜೆ ಇರಲಿದ್ದು ಪ್ರಾಥಮಿಕ ಹಿರಿಯ ಪ್ರಾಥಮಿಕ ಶಾಲೆಗಳ ತರಗತಿಗಳ ಪರೀಕ್ಷೆಯನ್ನು ಖಾಸಗಿ ಶಾಲೆಗಳಲ್ಲಿ ಈಗಾಗಲೇ ಮುಗಿಸಲಾಗಿದೆ. ಎರಡು ಹಂತಗಳಲ್ಲಿ ಎಲ್ ಕೆ ಜಿ ಇಂದ 9ನೇ ತರಗತಿವರೆಗಿನ ಮಕ್ಕಳಿಗೆ ಅಂದರೆ ಬೇಸಿಗೆ ರಜೆ ಮಾರ್ಚ್ 22 ಮತ್ತು ಮಾರ್ಚ್ 25 ರಿಂದ ಈಗಾಗಲೇ ಶುರುವಾಗಿದೆ.
ಇದನ್ನು ಓದಿ : ವಾಹನ ಸವಾರರೇ ಎಚ್ಚರ : ಈ ತಪ್ಪು ಮಾಡಿದರೆ 10000 ದಂಡ ಫಿಕ್ಸ್ ತಪ್ಪದೆ ಈ ಮಾಹಿತಿ ತಿಳಿಯಿರಿ
ಮುಂದಿನ ಶೈಕ್ಷಣಿಕ ವರ್ಷದ ಶಾಲೆ ಮೇ 29 ರಿಂದ ಪ್ರಾರಂಭ :
ಹಾಲಿ ಶಿಕ್ಷಣ ವರ್ಷದ ಚಟುವಟಿಕೆಗಳು ಮುಗಿದು ಮೇ 28ಕ್ಕೆ ಬೇಸಿಗೆ ರಜೆ ಮುಗಿಯಲಿದೆ ಎಂದು ಕರ್ನಾಟಕ ಸರ್ಕಾರ ಬಿಡುಗಡೆ ಮಾಡಿರುವ ಶೈಕ್ಷಣಿಕ ಮಾರ್ಗದರ್ಶಿಯ ಪ್ರಕಾರ ತಿಳಿಸಲಾಗಿದ್ದು ಹೊಸ ಶೈಕ್ಷಣಿಕ ವರ್ಷದ ಶೈಕ್ಷಣಿಕ ಚಟುವಟಿಕೆಗಳು ಮಾರನೇ ದಿನದಿಂದ ಶುರುವಾಗಲಿದೆ.
ಅಂದರೆ ಮೇ 29 ರಂದು ಹೊಸ ಶೈಕ್ಷಣಿಕ ವರ್ಷ ಪ್ರಾರಂಭವಾಗಲಿದ್ದು ಪ್ರೀತಿಯಿಂದ 10ನೇ ತರಗತಿಯವರೆಗೂ ಖಾಸಗಿ ಶಾಲೆಗಳಲ್ಲಿ ಮೇ 27 ರಿಂದ ಶಾಲೆ ಪ್ರಾರಂಭವಾಗಲಿದೆ. ಈಗಾಗಲೇ ಹೊಸ ಶೈಕ್ಷಣಿಕ ವರ್ಷದ ಚಟುವಟಿಕೆಗಳು ಪ್ರಾರಂಭವಾಗಿದ್ದು ಈಗಾಗಲೇ ಬೆಂಗಳೂರು ವ್ಯಾಪ್ತಿಯಲ್ಲಿ ಅಂದರೆ ಜನವರಿಯಲ್ಲಿ ಹೊಸ ವಿದ್ಯಾರ್ಥಿಗಳ ಪ್ರವೇಶ ಪ್ರಕ್ರಿಯೆ ಪ್ರಾರಂಭವಾಗಿದೆ. ಇದು ಏಪ್ರಿಲ್ ನಲ್ಲಿ ಅಧಿಕೃತವಾಗಿ ನಡೆಯುತ್ತದೆ ಬೆಂಗಳೂರು ಬಿಟ್ಟು ಹೊರಗೆ ಎಂದರೆ ಜಿಲ್ಲಾ ಮಟ್ಟದಲ್ಲಿ ಏಪ್ರಿಲ್ ಮೂರನೇ ವಾರದಿಂದ ಅಡ್ಮಿಶನ್ ಪ್ರಾರಂಭವಾಗಲಿದೆ.
ಒಟ್ಟಾರೆ ಕರ್ನಾಟಕ ರಾಜ್ಯದಲ್ಲಿ ಇದೀಗ ಬೇಸಿಗೆ ರಜೆ ಪ್ರಾರಂಭವಾಗಲಿದ್ದು ಮೇ 29ರ ನಂತರ ಹೊಸ ಶೈಕ್ಷಣಿಕ ವರ್ಷದ ಶಾಲೆಗಳು ಪ್ರಾರಂಭವಾಗಲಿದೆ ಹಾಗಾಗಿ ಈ ಬಗ್ಗೆ ಎಲ್ಲ ವಿದ್ಯಾರ್ಥಿಗಳು ಹಾಗೂ ಸಂಬಂಧಿಕರಿಗೂ ಶೇರ್ ಮಾಡುವ ಮೂಲಕ ಹೊಸ ಶೈಕ್ಷಣಿಕ ವರ್ಷ ಮೇ 29 ರಂದು ನಡೆಯಲಿದೆ ಎಂದು ತಿಳಿಸಿ ಧನ್ಯವಾದಗಳು.