rtgh

ಬ್ಯಾಂಕುಗಳ ಸಾಲದ ಮೇಲಿನ ಬಡ್ಡಿಮನ್ನಾ : ತಡಮಾಡದೆ ಈ ಕೆಲಸ ತಕ್ಷಣ ಮಾಡಿ !

Waiver of interest on bank loans

ನಮಸ್ಕಾರ ಸ್ನೇಹಿತರೆ ಸರಿಯಾದ ಸಮಯಕ್ಕೆ ರಾಜ್ಯದಲ್ಲಿ ಹಿಂಗಾರು ಮುಂಗಾರು ಬಾರದೆ ಅಕಾಲಿಕ ಸಮಯದಲ್ಲಿ ರೈತರು ಮಳೆ ಬಂದ ಕಾರಣದಿಂದಾಗಿ ತಾವು ಬೆಳೆದಂತಹ ಬೆಳೆಯು ನಾಶವಾಗಿರುವ ಕಾರಣದಿಂದ ಕಂಗಲಾಗಿದ್ದಾರೆ. ರಾಜ್ಯದಲ್ಲಿ ಜಲಕ್ಷಾಮ ಎದುರಾಗಿರುವ ಕಾರಣದಿಂದ ಸರಕಾರದ ಪರಿಸ್ಥಿತಿ ಎದುರಾಗಿದ್ದು ಇದರ ನಡುವೆ ರೈತರು ಕೂಡ ಸಂಕಷ್ಟದಲ್ಲಿದ್ದಾರೆ.

Waiver of interest on bank loans
Waiver of interest on bank loans

ಅವರಿಗಾಗಿ ರಾಜ್ಯ ಸರ್ಕಾರವು ಈಗ ನೆರವನ್ನು ನೀಡುವ ಸಲುವಾಗಿ ರೈತರ ಸಾಲದ ಮೇಲೆ ಇರುವಂತಹ ಬಡ್ಡಿಯನ್ನು ತೆರವುಗೊಳಿಸಲು ನಿರ್ಧರಿಸಿದ್ದು ರೈತರು ಬ್ಯಾಂಕುಗಳಿಂದ ಮತ್ತು ಪಡೆಯುವುದರ ಮೂಲಕ ಕೃಷಿಗೆ ಎಂದು ತೆಗೆದುಕೊಂಡಂತಹ ಸಾಲದ ಮೇಲಿನ ಬಡ್ಡಿಯನ್ನು ಸರ್ಕಾರ ಮನ್ನಾ ಮಾಡುವ ಯೋಜನೆ ಒಂದನ್ನು ಜಾರಿಗೆ ತಂದಿದೆ.

ಸಾಲ ಪಡೆದಂತಹ ರೈತರಿಗೆ ಸಿಹಿ ಸುದ್ದಿ :

ಡಿಸೆಂಬರ್ 12 200 ಅವಧಿಗೆ ಸರ್ಕಾರವು ಹೊರಡಿಸಿರುವ ಆದೇಶದಂತೆ ಗ್ರಾಮೀಣ ಅಭಿವೃದ್ಧಿ ಬ್ಯಾಂಕ್ ಕೃಷಿ ಸಹಕಾರ ಸಂಘ-ಸಂಸ್ಥೆಗಳು ಪ್ರಾಥಮಿಕ ಸಹಕಾರಿ ಕೃಷಿ ಸಂಘಗಳು ಜಿಲ್ಲಾ ಕೇಂದ್ರ ಸಹಕಾರ ಬ್ಯಾಂಕ್ ಲ್ಯಾಂಪ್ ಸಹಕಾರ ಸಂಘಗಳು ಇವುಗಳಿಂದ ಕೃಷಿ ಚಟುವಟಿಕೆಗಳಿಗೆ ರೈತರು ಸಾಲವನ್ನು ತೆಗೆದುಕೊಂಡಿದ್ದರೆ.

ಈ ರೀತಿಯಾಗಿ ರೈತರು ಖುಷಿಗೋಸ್ಕರ ಮಧ್ಯಮಾವಧಿ ದೀರ್ಘಾವಧಿ ಮತ್ತು ಮಧ್ಯಂತರ ಸಾಲಗಳ ಮೇಲೆ ಇರುವಂತಹ ಬಡ್ಡಿಯನ್ನು ಸರ್ಕಾರವು ಮನ್ನಾ ಮಾಡುವಂತೆ ಆದೇಶ ಹೊರಡಿಸಿದೆ.

ಇದನ್ನು ಓದಿ : 1ಲಕ್ಷ ಹಣ ಮಹಿಳೆಯರಿಗೆ ಗ್ಯಾರಂಟಿ : ಚುನಾವಣೆಗೆ 5 ಗ್ಯಾರಂಟಿ ಘೋಷಣೆ ! ಯಾರಿಗೆ ಸಿಗುತ್ತೆ ನೋಡಿ

ಸಾಲದ ಮೇಲಿನ ಬಡ್ಡಿಮನ್ನಾ :

ರೈತರು ತಾವು ಬ್ಯಾಂಕ್ ಮತ್ತು ಇತರ ಸಂಘ-ಸಂಸ್ಥೆಗಳಿದ್ದ ತೆಗೆದುಕೊಂಡಿರುವಂತಹ ಸಾಲದಾಸಲ್ಲನ್ನು ಪಾವತಿ ಮಾಡಿದ್ದರೆ ಅಂಥವರ ಸಾಲದ ಮೇಲಿನ ಬಡ್ಡಿಯನ್ನು ಸರ್ಕಾರದ ಆದೇಶ ಕ್ರಮ ಸಂಖ್ಯೆ ಒಂದರಂತೆ ಮನ ಮಾಡಲು ಸೂಚನೆ ನೀಡಲಾಗಿದೆ ಇದಕ್ಕೆ ಸಂಬಂಧಪಟ್ಟ ಹಾಗೆ ಶರತ್ತಿನ ಮಂಜೂರಾದಿಯೊಂದಿಗೆ ಸಹಕಾರಿ ಸಂಘಗಳಿಗೆ ಮೊಬಲಗನ್ನು ನೀಡುವಂತೆ ಸರ್ಕಾರವು ಪತ್ರವನ್ನು ರವಾನಿಸಿದೆ. ಅದರ ಕೊನೆಯ ದಿನಾಂಕ 29-02-2024 ಆಗಿತ್ತು.

ಸರ್ಕಾರವು ಇನ್ನೂ ಸರ್ಕಾರದ ಆದೇಶ ಕ್ರಮ ಸಂಖ್ಯೆ 2ರಂತೆ ನೋಡುವುದಾದರೆ ಸುಸ್ತಿರಿಯಾಗಿರುವ ಸಾಲದ ಮೇಲೆ ಸಹಕಾರಿ ಸಂಘ ನಿಬಂಧಕರ ಪ್ರಸ್ತಾವನೆಯ ಸದರಿ ಯೋಜನೆಯ ಅಡಿಯಲ್ಲಿ ಸಹಕಾರ ಸಂಘಗಳು 29-02-2024ರ ನೀಡಿರುವಂತಹ ಮಾಹಿತಿಯ ಪ್ರಕಾರ 29,450 ರಷ್ಟು ರೈತರು ತಮ್ಮ ಸಾಲವನ್ನು ಮರುಪಾವತಿ ಮಾಡಿದ್ದು ಅವರು ಪಡೆದಿರುವ ಸಾಲದ ಮೇಲಿನ ಬಡ್ಡಿಯನ್ನು ಇದೀಗ ಸರ್ಕಾರ ತೆರವುಗೊಳಿಸಿದೆ. ಅಂದರೆ ಸರ್ಕಾರವು ಸುಮಾರು 214.50 ಕೋಟಿಗಳಷ್ಟು ಬಡ್ಡಿಯನ್ನು ತೆರೆವುಗೊಳಿಸಿದ್ದು ರೈತರು ತಾವು ಪಡೆದಂತಹ ಪಾವತಿ ಮಾಡಿರುವ ಅಸಲು 281.88 ಕೋಟಿ ಅಷ್ಟಿದೆ.

ಇನ್ನು ರಾಜ್ಯದಲ್ಲಿರುವಂತಹ ಸದ್ಯದ ಪರಿಸ್ಥಿತಿಯನ್ನು ನೋಡುವುದಾದರೆ ನಿಬಂಧಕರು ಯೋಜನೆಯ ಅವಧಿಯನ್ನು ಸರ್ಕಾರಕ್ಕೆ ವಿಸ್ತರಿಸುವಂತೆ ಮನವಿ ಸಲ್ಲಿಸಿದ್ದರು ಇನ್ನು ಈ ಆ ಮನವಿಯನ್ನು ಸರ್ಕಾರವು ಪರಿಶೀಲಿಸಿ ನೀಡಿರುವ ಪ್ರಸ್ತಾವನೆಯಲ್ಲಿ ವಿವರಿಸುವ ಅಂಶಗಳ ಹಿನ್ನೆಲೆಯಲ್ಲಿ ಸರ್ಕಾರ ಆದೇಶ ಸಂಖ್ಯೆ ಸಿಇಒ 291 ಸಿ ಯಲ್ ಯಸ್ 2023 ದಿನಾಂಕ 20-01-2024 ಆದೇಶದ ಪ್ರಕಾರ ರೈತರು ತಾವು ಪಡೆದ ಸಾಲದ ಅಸಲನ್ನು ಪಾವತಿ ಮಾಡಿದರೆ ಅವರ ಬಡ್ಡಿಮನ್ನ ಎಂಬ ಯೋಜನೆಗೆ ನೀಡಿದ ಸಮಯವನ್ನು ಇದೀಗ 31-03-2024 ರಂದು ವಿಸ್ತರಣೆ ಮಾಡುವಂತೆ ಆದೇಶ ಹೊರಡಿಸಲಾಗಿದೆ.

ಒಟ್ಟಾರೆ ರಾಜ್ಯದಲ್ಲಿ ಇದೀಗ ಬ್ಯಾಂಕುಗಳಲ್ಲಿ ರೈತರು ಸಾಲವನ್ನು ಪಡೆದಿದ್ದರೆ ಬಡ್ಡಿಯನ್ನು ಇದೀಗ ಮನ್ನ ಮಾಡುವುದಾಗಿ ಹೊರಟಿದ್ದು ಈಗಾಗಲೇ ಸಾಕಷ್ಟು ರೈತರ ಬಡ್ಡಿ ಮನ್ನಾ ಆಗಿದೆ. ಹಾಗಾಗಿ ನಿಮಗೆ ತಿಳಿದಿರುವ ಯಾರಾದರೂ ರೈತ ಸ್ನೇಹಿತರು ಸಾಲವನ್ನು ಈ ಬ್ಯಾಂಕುಗಳಲ್ಲಿ ಪಡೆದುಕೊಂಡಿದ್ದರೆ ಹಾಗೂ ಪಡೆದ ಸಾಲದ ಅಸಲನ್ನು ಪಾವತಿ ಮಾಡಿದ್ದರೆ ಇನ್ನು ಮುಂದೆ ಯಾವುದೇ ರೀತಿಯ ಬಡ್ಡಿಯನ್ನು ಅದಕ್ಕೆ ಪಾವತಿಸುವ ಅಗತ್ಯವಿಲ್ಲ ಎಂದು ತಿಳಿಸಿ ಧನ್ಯವಾದಗಳು

ಇತರೆ ವಿಷಯಗಳು :

Spread the love

Leave a Reply

Your email address will not be published. Required fields are marked *