rtgh
Headlines

ನೀಲಿ ಆಧಾರ್ ಕಾರ್ಡ್ ಪಡೆದವರಿಗೆ ಮಾತ್ರ ಸರ್ಕಾರದ ಯೋಜನೆ ಲಾಭ ಸಿಗುತ್ತೆ ತಕ್ಷಣ ಅಪ್ಲೈ ಮಾಡಿ !

How to Get Blue Aadhaar Card

ನಮಸ್ಕಾರ ಸ್ನೇಹಿತರೆ ಐದು ವರ್ಷದೊಳಗಿನ ಮಕ್ಕಳಿಗಾಗಿ ಭಾರತದ ವಿಶಿಷ್ಟ ಗುರುತಿನ ಪ್ರಾಧಿಕಾರವು ವಿಶೇಷ ಗುರುತಿನ ಚೀಟಿ ಬಾಲ ಆಧಾರ್ ಅಥವಾ ನೀಲಿ ಆಧಾರ್ ಕಾರ್ಡ್ ಅನ್ನು ಪರಿಚಯಿಸಿದೆ ಅದರಂತೆ ಈ ನೀಲಿ ಆಧಾರ್ ಕಾರ್ಡ್ ಅನ್ನು ಐದು ವರ್ಷದ ಒಳಗಿನ ಮಕ್ಕಳಿಗಾಗಿ ಪೋಷಕರು ಹೇಗೆ ಪಡೆಯಬೇಕು

How to Get Blue Aadhaar Card
How to Get Blue Aadhaar Card

ಇದರಿಂದಾಗುವ ಪ್ರಯೋಜನಗಳು ಏನು ಎಂಬುದರ ಸಂಪೂರ್ಣ ಮಾಹಿತಿಯನ್ನು ಈ ಲೇಖನದಲ್ಲಿ ತಿಳಿದ ಕೊಳ್ಳಬಹುದು. ನೀಲಿ ಆಧಾರ್ ಕಾರ್ಡ್ ಮಾಡಿಸಲು ಏನೆಲ್ಲ ದಾಖಲೆಗಳು ಇರಬೇಕು ಎಂಬುದರ ಸಂಪೂರ್ಣ ಮಾಹಿತಿಯನ್ನು ಹಾಗೂ ನೀಲಿ ಆಧಾರ್ ಕಾರ್ಡ್ ಎಂದರೇನು ಎಂಬುದರ ಬಗ್ಗೆ ನೋಡುವುದಾದರೆ,

ಐದು ವರ್ಷದ ಒಳಗಿನ ಮಕ್ಕಳಿಗೆ ನೀಲಿ ಆಧಾರ್ ಕಾರ್ಡ್ :

ಭಾರತೀಯ ಜನತೆಗೆ ಆಧಾರ್ ಕಾರ್ಡ್ ಎಂಬುದು ಒಂದು ವಿಶಿಷ್ಟ ಗುರುತಿನ ದಾಖಲೆಯಾಗಿದೆ ಇದು ಕೇವಲ ಗುರುತಿನ ದಾಖಲೆಯಾಗಿರದೆ ಸರ್ಕಾರದ ಹಾಗೂ ಖಾಸಗಿಯ ಅನೇಕ ಪ್ರಯೋಜನಗಳನ್ನು ಪಡೆಯಲು ಆಧಾರ್ ಕಾರ್ಡ್ ಅತಿ ಮುಖ್ಯವಾದ ದಾಖಲೆ ಎಂದು ಹೇಳಿದರು ಕೂಡ ತಪ್ಪಾಗಲಾರದು.

ಇದೀಗ ಐದು ವರ್ಷದ ಒಳಗಿನ ಮಕ್ಕಳಿಗೂ ಕೂಡ ಹೊಸ ಮಾದರಿಯ ವಿಶಿಷ್ಟ ಗುರುತಿನ ಚೀಟಿಯನ್ನು ಭಾರತ ವಿಶಿಷ್ಟ ಗುರುತಿನ ಪ್ರಾಧಿಕಾರವು ಪರಿಚಯಿಸಿದೆ. ಭಾರತ ವಿಶಿಷ್ಟ ಗುರುತಿನ ಪ್ರಾಧಿಕಾರವು ಪರಿಚಯಿಸಿರುವ ಹೊಸ ಮಾದರಿಯ ವಿಶಿಷ್ಟ ಗುರುತಿನ ಚೀಟಿಯ ಹೆಸರು ನೀಲಿ ಆಧಾರ್ ಅಥವಾ ಬಾಲಾ ಆಧಾರ್.

ಮಕ್ಕಳಿಗೆ ಈ ಹೊಸ ಗುರುತಿನ ಚೀಟಿಯಿಂದ ಆಗುವ ಪ್ರಯೋಜನಗಳೇನು? ಹಾಗೂ ಈ ಹೊಸ ಗುರುತಿನ ಚೀಟಿಯನ್ನು ಐದು ವರ್ಷದೊಳಗಿನ ಪೋಷಕರು ಹೇಗೆ ಪಡೆಯಬೇಕು ಎಂಬುದನ್ನು ಇದೀಗ ನೋಡಬಹುದು.

ನೀಲಿ ಆಧಾರ್ ಕಾರ್ಡ್ ಎಂದರೇನು ?

ಭಾರತದ ವಿಶಿಷ್ಟ ಗುರುತಿನ ಪ್ರಾಧಿಕಾರದ ಆಧಾರ ವ್ಯವಸ್ಥೆಯಲ್ಲಿ ನವಜಾತ ಹಾಗೂ ಐದು ವರ್ಷದ ಒಳಗಿನ ಚಿಕ್ಕ ಮಕ್ಕಳನ್ನು ನೋಂದಾಯಿಸಿಕೊಳ್ಳಲು ವಿನ್ಯಾಸಗೊಳಿಸಲಾಗಿರುವ ಹೊಸ ಕಾರ್ಡ್ ಈ ನೀಲಿ ಆಧಾರ್ ಕಾರ್ಡ್ ಆಗಿದೆ.

ಆಧಾರ್ ಕಾರ್ಡ್ ನಲ್ಲಿ ಬಳಸಲಾಗಿರುವ ಅಕ್ಷರಗಳ ಫಾಂಟ್ ನೀಲಿ ಬಣ್ಣದ್ದಾಗಿದೆ ಹಾಗಾಗಿ ಈ ಕಾರ್ಡನ್ನು ನೀಲಿ ಆಧಾರ್ ಕಾರ್ಡ್ ಅಥವಾ ಬ್ಲೂ ಆಧಾರ್ ಕಾರ್ಡ್ ಎಂದು ಹೇಳಲಾಗುತ್ತದೆ. ಎರಡು ಸಾವಿರದ ಹದಿನೆಂಟರಲ್ಲಿ ಈ ವಿಶಿಷ್ಟ ಕಾರ್ಡ್ನ್ನು ಭಾರತದ ವಿಶಿಷ್ಟ ಗುರುತಿನ ಪ್ರಾಧಿಕಾರವು ಪರಿಚಯಿಸಿದೆ. ಈ ಆಧಾರ್ ಕಾರ್ಡ್ ನಲ್ಲಿ 12 ಅಂಕಿಯವಿಶಿಷ್ಟ ಸಂಖ್ಯೆಯನ್ನು ನೋಡಬಹುದು.

ನೀನೇ ಆಧಾರ್ ಕಾರ್ಡ್ ನ ಪ್ರಯೋಜನಗಳು :

ವಿಶೇಷವಾಗಿ ಐದು ವರ್ಷದ ಮಕ್ಕಳಿಗಾಗಿ ನೀಲಿ ಆಧಾರ್ ಕಾರ್ಡ್ ಅನ್ನು ಪರಿಚಯಿಸಲಾಗಿದ್ದು ಮಗುವಿನ ವಿಶಿಷ್ಟವಾದ ಗುರುತನ್ನು ಈ ನೀಲಿ ಆಧಾರ್ ಕಾರ್ಡ್ ಹೊಂದಿರುತ್ತದೆ. ಇದರಲ್ಲಿರುವ ಪ್ರಮುಖ ಪ್ರಯೋಜನವೇನೆಂದರೆ ವಿವಾದಗಳ ಸಂದರ್ಭದಲ್ಲಿ ಮತ್ತು ತುರ್ತು ಸಮಯದಲ್ಲಿ ಈ ನೀಲಿ ಆಧಾರ್ ಕಾರ್ಡ್ ಉಪಯೋಗವಾಗುತ್ತದೆ.

ಮಕ್ಕಳ ಮೇಲಿನ ದೌರ್ಜನ್ಯ ಮತ್ತು ಶೋಷಣೆಯನ್ನು ತಡೆಗಟ್ಟಲು ಅತಿ ಮುಖ್ಯವಾಗಿದ್ದು ಅದೇ ರೀತಿ ಮಕ್ಕಳ ಕಳ್ಳ ಸಾಗಾಣಿಕೆ ಬಾಲ್ಯ ವಿವಾಹ ಮತ್ತು ಬಾಲಕಾರ್ಮಿಕ ಸೇರಿದಂತೆ ಹಲವಾರು ಅಕ್ರಮಗಳನ್ನು ತಡೆಗಟ್ಟಲು ಈ ನೀಲಿ ಆಧಾರ್ ಕಾರ್ಡ್ ಸಹಾಯಕವಾಗಿದೆ ಎಂದು ಹೇಳಬಹುದು.

ನೀಲಿ ಆಧಾರ್ ಕಾರ್ಡ್ ಅನ್ನು ಮಗುವಿನ ಶಾಲಾ ಪ್ರವೇಶಕ್ಕಾಗಿ ಹೊಸದಾಗಿ ಬ್ಯಾಂಕ್ ಖಾತೆಯನ್ನು ತೆರೆಯಲು ಪಾಸ್ ಪೋರ್ಟ್ ಗಾಗಿ ಅರ್ಜಿ ಸಲ್ಲಿಸಲು ಈ ನೀಲಿ ಆಧಾರ್ ಕಾರ್ಡ್ ಅನ್ನು ಮುಖ್ಯ ದಾಖಲೆಯಾಗಿ ಬಳಸಬಹುದಾಗಿದೆ. ಇದಲ್ಲದೆ ಅನೇಕ ರೀತಿಯ ಸರ್ಕಾರಿ ಯೋಜನೆಗಳ ಲಾಭವನ್ನು ಪಡೆಯಲು ಮತ್ತು ವಿವಿಧ ಉದ್ದೇಶಗಳಿಗಾಗಿ ಗುರುತಿನ ಮತ್ತು ವಿಳಾಸದ ಪುರಾವೆಯಾಗಿಯೂ ಕೂಡ ಬಳಸಬಹುದಾಗಿದೆ.

ಸರ್ಕಾರದ ಯೋಜನೆಗಳಾದ ವಿದ್ಯಾರ್ಥಿ ವೇತನ ಆರೋಗ್ಯ ವಿಮೆ ಸೇರಿದಂತೆ ಹಲವಾರು ಯೋಜನೆಗಳ ಪ್ರಯೋಜನಗಳನ್ನು ಅಥವಾ ಲಾಭಗಳನ್ನು ಪಡೆದುಕೊಳ್ಳಲು ನೀಲಿ ಆಧಾರ್ ಕಾರ್ಡ್ ನಿಂದ ಸಾಧ್ಯವಾಗುತ್ತದೆ.

ಇದನ್ನು ಓದಿ : ಪಂಚಾಯತ್ ರಾಜ್ ಇಲಾಖೆಯಲ್ಲಿ ಖಾಲಿ ಇರುವ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಸಿದ್ದರಾಗಿ ಇಲ್ಲಿದೆ ಲಿಂಕ್ !

ನೀಲಿ ಆಧಾರ್ ಕಾರ್ಡ್ ನ ಪ್ರಕ್ರಿಯೆ :

ಹೊಸ ನೀಲಿ ಆಧಾರ್ ಕಾರ್ಡ್ 5 ವರ್ಷದ ಒಳಗಿನ ಮಗುವಿಗೆ ನೋಂದಾಯಿಸಲು ಮಗುವಿನ ಬಯೋಮೆಟ್ರಿಕ್ ನೀಡುವ ಅಗತ್ಯವಿರುವುದಿಲ್ಲ ಏಕೆಂದರೆ ಮಗುವಿನ ಪೋಷಕರ ಪಾಲಕರ ಯುಐಡಿ ಯೊಂದಿಗೆ ಮಗುವಿನ ಯುಐಡಿಯನ್ನು ಲಿಂಕ್ ಮಾಡಲಾಗಿರುವ ಜನಸಂಖ್ಯೆ ಮಾಹಿತಿ ಹಾಗೂ ಮುಖ ಫೋಟೋ ಆಧಾರದ ಮೇಲೆ ಈ ನೀಲಿ ಆಧಾರ್ ಕಾರ್ಡ್ ಅನ್ನು ಮಗುವಿಗೆ ಪ್ರಕ್ರಿಯೆಗೊಳಿಸಲಾಗುತ್ತದೆ.

ಬಯೋಮೆಟ್ರಿಕ್ ಎಷ್ಟು ವರ್ಷಗಳ ನಂತರ ನೀಡಬೇಕು ?

ಮಗು ಐದು ವರ್ಷದ ಒಳಗಾಗಿದ್ದಾಗ ನೀಲಿ ಗಾರ್ಡನ್ನು ಮಾಡಿಸಲು ಮೊದಲೇ ತಿಳಿಸಿರುವಂತೆ ಮಗುವಿನ ಬಯೋಮೆಟ್ರಿಕ್ ಅನ್ನು ನೀಡಿರುವುದಿಲ್ಲ ಆದ್ದರಿಂದ ಮಗುವಿಗೆ ಐದು ವರ್ಷ ತುಂಬಿದ ನಂತರ ಹಾಗೂ 15 ವರ್ಷ ತುಂಬಿದ ನಂತರ 10 ಬೆರಳುಗಳನ್ನು ಐರಿಸ್ ಮತ್ತು ಮುಖದ ಛಾಯಾಚಿತ್ರಗಳ ಬಯೋಮೆಟ್ರಿಕ್ ಡಾಟಾವನ್ನು ಆಧಾರ್ ಕಾರ್ಡ್ ಗೆ ನವೀಕರಿಸುವುದು ಕಡ್ಡಾಯವಾಗಿರುತ್ತದೆ ಇಲ್ಲದಿದ್ದರೆ ಆ ಕಾರ್ಡ್ ಸಾಮಾನ್ಯವಾಗಿ ಎಂದರ್ಥ.

ನೊಂದಣಿ ಮಾಡುವ ವಿಧಾನ :

ನೀವೇನಾದರೂ ಆಫ್ಲೈನ್ ಮುಖಾಂತರ ನೀವೇ ಆಧಾರ್ ಕಾರ್ಡ್ ಅನ್ನು ಪಡೆಯಲು ಅರ್ಜಿ ಸಲ್ಲಿಸಿದರೆ ಯಾವುದಾದರೂ ನಿಮ್ಮ ಹತ್ತಿರವಿರುವ ಆಧಾರ್ ಸೇವ ಕೇಂದ್ರ ಅಥವಾ ಶಾಶ್ವತ ದಾಖಲಾತಿ ಕೇಂದ್ರಕ್ಕೆ ಅಗತ್ಯವಿರುವ ದಾಖಲಾತಿಗಳೊಂದಿಗೆ ಭೇಟಿ ನೀಡಬೇಕು. ಅದಾದ ನಂತರ ಆಧಾರ್ ನೋಂದಣಿಯ ಅರ್ಜಿ ಫಾರಂ ಅನ್ನು ಭರ್ತಿ ಮಾಡಿ ನೀಲಿ ಆಧಾರ್ ಕಾರ್ಡ್ ಗಾಗಿ ಅರ್ಜಿಯನ್ನು ಸಲ್ಲಿಸಬಹುದಾಗಿದೆ.

ನೀಲಿ ಆಧಾರ್ ಕಾರ್ಡ್ ಗೆ ಬೇಕಾಗುವ ದಾಖಲೆಗಳು :

ನೀಲಿ ಆಧಾರ್ ಕಾರ್ಡ್ ಗೆ ಅರ್ಜಿಯನ್ನು ಸಲ್ಲಿಸಬೇಕಾದರೆ ಪೋಷಕರ ಕೆಲವೊಂದು ಪ್ರಮುಖ ದಾಖಲೆಗಳನ್ನು ಹೊಂದಿರಬೇಕು ಅವುಗಳೆಂದರೆ,

  1. ಪೋಷಕರ ಆಧಾರ್ ಕಾರ್ಡ್
  2. ಮಗುವಿನ ಜನ್ಮ ಪ್ರಮಾಣ ಪತ್ರ ಅಥವಾ ಆಸ್ಪತ್ರೆಯ ಡಿಸ್ಚಾರ್ಜ್ ಪ್ಲೀಸ್
  3. ಮಗುವಿನ ಪಾಸ್ಪೋರ್ಟ್ ಸೈಜ್ ಎರಡು ಫೋಟೋ
  4. ಪೋಷಕರ ಇಲಾಖೆಯ ಪ್ರಮಾಣ ಪತ್ರ ಅಂದರೆ ಪಡಿತರ ಚೀಟಿ ಅಥವಾ ವಿದ್ಯುತ್ ಬಿಲ್ ಮೊದಲಾದವು

ಆನ್ಲೈನ್ ಮುಖಾಂತರ ನೊಂದಾಯಿಸುವ ಪ್ರಕ್ರಿಯೆ :

ಐದು ವರ್ಷದೊಳಗಿನ ಮಗುವಿಗೆ ನೀಲಿ ಆಧಾರ್ ಕಾರ್ಡ್ ಅನ್ನು ಪಡೆಯಬೇಕಾದರೆ ಪೋಷಕರು ಆಧಾರ್ತ್ನ ಅಧಿಕೃತ ವೆಬ್ಸೈಟ್ ಗೆ ಭೇಟಿ ನೀಡಬೇಕು.

  1. https://uidai.gov.in ಅದರಲ್ಲಿ ಆಧಾರ್ ನೋಂದಣಿ ಎಂಬ ಆಪ್ಷನ್ ಕಾಣುತ್ತದೆ.
  2. ಅದರಲ್ಲಿ ಕೇಳಲಾಗಿರುವ ಮಗುವಿನ ಹೆಸರು ಹಾಗೂ ಪಾಲಕ ಅಥವಾ ಪೋಷಕರ ಮಾನ್ಯವಾಗಿರುವ ಮೊಬೈಲ್ ನಂಬರ್ ಜೊತೆಗೆ ಇನ್ನು ಅನೇಕ ದಾಖಲೆಗಳನ್ನು ನಮೂದಿಸಿ ನೊಂದಣಿಗಾಗಿ ನಿಮ್ಮ ಹತ್ತಿರದ ಆಧಾರ್ ಕೇಂದ್ರದ ಅಪಾಯಿಂಟ್ಮೆಂಟ್ ಸ್ಲಾಟ್ ಅನ್ನು ಆಯ್ಕೆ ಮಾಡಿಕೊಳ್ಳಬೇಕು.
  3. ಅದಾದ ನಂತರ ಅಗತ್ಯ ದಾಖಲಾತಿಗಳೊಂದಿಗೆ ನಿಗದಿತ ದಿನಾಂಕದಂದು ದಾಖಲಾತಿ ಕೇಂದ್ರಕ್ಕೆ ಭೇಟಿ ನೀಡಬೇಕಾಗುತ್ತದೆ.
  4. ಭೇಟಿ ನೀಡಿ ಅರ್ಜಿಯನ್ನು ಸಲ್ಲಿಸಿದ ನಂತರ ಅರ್ಜಿ ಸಲ್ಲಿಸಿದ ಡಾಕ್ಯುಮೆಂಟ್ಗಳ ಪರಿಶೀಲನೆ ಪ್ರಕ್ರಿಯೆಯು ಪ್ರಾರಂಭವಲವಾಗುತ್ತದೆ ಅದಾದ ನಂತರ ನಿಮ್ಮ ಮೊಬೈಲ್ಗೆ ಸಂದೇಶ ಬರುತ್ತದೆ ಅದರಲ್ಲಿ ನೀವು ಸ್ವೀಕೃತಿ ಚೀಟಿಯನ್ನು ಪಡೆಯಬಹುದಾಗಿದೆ.
  5. ಹೀಗೆ ಪರಿಶೀಲನೆ ಪ್ರಕ್ರಿಯೆ 60 ದಿನಗಳ ಒಳಗಾಗಿ ನಡೆದು ನಿಮ್ಮ ಮಗುವಿನ ನೀಲಿ ಆಧಾರ್ ಕಾರ್ಡ್ ಅನ್ನು ನೀವು ಪಡೆಯಬಹುದಾಗಿದೆ.

ಹೀಗೆ ಆಧಾರ್ ಕಾರ್ಡ್ ಗೆ ಸಂಬಂಧಿಸಿದಂತೆ ಐದು ವರ್ಷದ ಮಗುವಿನ ಆಧಾರ್ ಕಾರ್ಡಿಗೆ ನೀಲಿ ಆಧಾರ್ ಕಾರ್ಡ್ ಎಂದು ಕರೆಯಲಾಗಿದ್ದು ಈ ಕಾರ್ಡ್ ಮಾಡಿಸುವುದರ ಮೂಲಕ ಹೆಚ್ಚಿನ ಪ್ರಯೋಜನಗಳನ್ನು ಆ ಮಗುವು ಪಡೆದುಕೊಳ್ಳಬಹುದು. ಹಾಗಾಗಿ ನೀಲಿ ಆಧಾರ್ ಕಾರ್ಡ್ ಗೆ ಸಂಬಂಧಿಸಿದ ಈ ಮಾಹಿತಿಯನ್ನು ಎಲ್ಲರಿಗೂ ಶೇರ್ ಮಾಡಿ ಧನ್ಯವಾದಗಳು.

ಇತರೆ ವಿಷಯಗಳು :

ಯಾರಿಗೆ ಸಿಗುತ್ತೆ ನೀಲಿ ಆಧಾರ್ ಕಾರ್ಡ್ ..?

5 ವರ್ಷದ ಒಳಗಿನ ಮಕ್ಕಳಿಗೆ ಸಿಗಲಿದೆ.

ಬಯೋಮೆಟ್ರಿಕ್ ನೀಡಲಾಗುತ್ತ ..?

ಮಕ್ಕಳಿಗೆ ನೀಡಲಾಗುವುದಿಲ್ಲ.

Spread the love

Leave a Reply

Your email address will not be published. Required fields are marked *