rtgh

ಅನ್ನದಾತರಿಗೆ ಸಂತಸದ ಘಳಿಗೆ.!! ಸರ್ಕಾರದಿಂದ ನಿಮ್ಮ ಕೈ ಸೇರಲಿದೆ ₹25,000

Kisan Aashirwad scheme

ಹಲೋ ಸ್ನೇಹಿತರೇ, ನಮ್ಮ ದೇಶ ಕೃಷಿಯನ್ನು ಜೀವಾಳವಾಗಿಸಿಕೊಂಡಿದ್ದರೂ ಕೂಡ , ಇತ್ತೀಚಿನ ದಿನಗಳಲ್ಲಿ ಕೃಷಿ ಚಟುವಟಿಕೆಯನ್ನು ಉತ್ತೇಜಿಸುವುದು ಬಹಳ ಮುಖ್ಯವಾಗಿದೆ. ಯಾಕೆಂದರೆ ಸಾಮಾನ್ಯವಾಗಿ ಕೃಷಿ ಮಾಡುವವರ ಸಂಖ್ಯೆ ಕಡಿಮೆ ಆಗುತ್ತಿದೆ.

Kisan Aashirwad scheme

ಇದೇ ಕಾರಣಕ್ಕೆ ಕೃಷಿಯನ್ನು ಇನ್ನಷ್ಟು ಹೆಚ್ಚು ಜನ ಅಥವಾ ರೈತರು ಮುಂದುವರಿಸಿಕೊಂಡು ಹೋಗಲು ಕೇಂದ್ರ ಸರ್ಕಾರ ಹಾಗೂ ರಾಜ್ಯ ಸರ್ಕಾರ ರೈತರಿಗೆ ಅನುಕೂಲವಾಗುವಂತಹ ಕೆಲವು ಪ್ರಮುಖ ಸೌಲಭ್ಯಗಳನ್ನು ಕೂಡ ಒದಗಿಸುತ್ತಿವೆ.

ರೈತರಿಗಾಗಿ ಕೇಂದ್ರ ಸರ್ಕಾರ ಮತ್ತು ರಾಜ್ಯ ಸರ್ಕಾರ ಜಂಟಿಯಾಗಿ ಕಿಸಾನ್ ಆಶೀರ್ವಾದ ಸ್ಕೀಮ್ ಅನ್ನು ಪರಿಚಯಿಸಿವೆ. ಒಂದು ವೇಳೆ ಐದು ಎಕರೆ ಅಥವಾ ಅದಕ್ಕಿಂತ ಕಡಿಮೆ ಭೂಮಿಯನ್ನು ಹೊಂದಿರುವವರು ಕಿಸಾನ್ ಆಶೀರ್ವಾದ ಯೋಜನೆಯಡಿಯಲ್ಲಿ 25,000ಗಳ ವರೆಗೆ ಸಹಾಯಧನವನ್ನು ಪಡೆದುಕೊಳ್ಳಲು ಸಾಧ್ಯವಿದೆ.

ಏನಿದು ಕಿಸಾನ್ ಆಶೀರ್ವಾದ ಯೋಜನೆ?

ಈಗಾಗಲೇ ಕಿಸಾನ್ ಸಮ್ಮಾನ್ ನಿಧಿ ಯೋಜನೆಯ ಮೂಲಕ ಸರ್ಕಾರವು ರೈತರಿಗೆ ಆರ್ಥಿಕವಾಗಿ ಸಹಾಯಧನವನ್ನು ಒದಗಿಸಿದೆ. ಇದೀಗ ಕಿಸಾನ್ ಆಶೀರ್ವಾದ ಸ್ಕೀಮ್ ನ ಜಾರಿಗೆ ತರಲಾಗಿದ್ದು, ಪ್ರತಿ ಎಕರೆಗೆ 5000 ಗಳಂತೆ 5 ಏಕರಿಗಿಂತ ಕಡಿಮೆ ಇರುವವರು ಸಹಾಯಧನವನ್ನು ಪಡೆಯಬಹುದು.

ಕಿಸಾನ್ ಆಶೀರ್ವಾದ ಯೋಜನೆ ಅಡಿಯಲ್ಲಿ ಎಷ್ಟು ಸಹಾಯಧನ ಸಿಗಲಿದೆ?

ಒಂದು ಎಕರೆ ಜಮೀನಿಗೆ – 5,000
ಎರಡು ಎಕರೆ ಜಮೀನಿಗೆ – 10,000
ಮೂರು ಎಕರೆ ಜಮೀನಿಗೆ – 15,000
ನಾಲ್ಕು ಎಕರೆ ಜಮೀನಿಗೆ – 20000
5 ಎಕರೆ ಜಮೀನಿಗೆ 25,000 ಪಡೆಯಬಹುದು.

ಕೃಷಿ ಭೂಮಿ ಹೊಂದಿರುವವರೇ ಹುಷಾರ್.!!‌ ಸರ್ಕಾರದಿಂದ ಬಂತು ಖಡಕ್‌ ವಾರ್ನಿಂಗ್

ರೈತರಿಗೆ ಪಿ.ಎಂ ಕಿಸಾನ್ ಸಮ್ಮಾನ ನಿಧಿ ಯೋಜನೆಯ ಅಡಿಯಲ್ಲಿ ಪ್ರತಿ ವರ್ಷ 6,000 ರೂಪಾಯಿ ಸಿಗುತ್ತದೆ. ಇದಕ್ಕೆ 25,000ಗಳ ಆಶೀರ್ವಾದ ಯೋಜನೆಯ ಸಹಾಯಧನವು ಸೇರಿದರೆ ಪ್ರತಿ ವರ್ಷ 31 ಸಾವಿರ ರೂಪಾಯಿಗಳನ್ನು ಸರ್ಕಾರದಿಂದಲೇ ರೈತರು ಪಡೆದುಕೊಳ್ಳಲು ಸಾಧ್ಯವಾಗುತ್ತದೆ.

ಕಿಸಾನ್ ಆಶೀರ್ವಾದ ಯೋಜನೆಗೆ ಬೇಕಾಗಿರುವ ದಾಖಲೆಗಳು

  • ರೈತರ ಭೂಮಿಯ ಪಹಣಿ ಪತ್ರ
  • ಆಧಾರ್ ಕಾರ್ಡ್
  • ಬ್ಯಾಂಕ್ ಖಾತೆಯ‌ ಸಂಪೂರ್ಣ ವಿವರ (ಈ ಕೆ ವೈ ಸಿ ಕಡ್ಡಾಯ)
  • ಆಧಾರ್ ಕಾರ್ಡ್ ಗೆ ಲಿಂಕ್ ಆಗಿರುವ ಮೊಬೈಲ್ ಸಂಖ್ಯೆ
  • ಪಾಸ್ ಪೋರ್ಟ್ ಅಳತೆಯ ಫೋಟೋ

ಎಲ್ಲಿ ಅರ್ಜಿ ಸಲ್ಲಿಸಬಹುದು ಗೊತ್ತ?

ರೈತರು ಹತ್ತಿರದ ಕೃಷಿ ಇಲಾಖೆಗೆ ಹೋಗಿ ಸಂಬಂಧಪಟ್ಟ ದಾಖಲೆ ಹಾಗೂ ಮಾಹಿತಿಯನ್ನು ನೀಡಿ ಕಿಸಾನ್ ಆಶೀರ್ವಾದ ಯೋಜನೆಗೆ ಅರ್ಜಿ ಸಲ್ಲಿಸಬಹುದು.

ಸದ್ಯ ಕಿಸಾನ್ ಆಶೀರ್ವಾದ ಯೋಜನೆಯ ಪ್ರಯೋಜನವನ್ನು ಜಾರ್ಖಂಡ್ ರಾಜ್ಯದಲ್ಲಿರುವ 35 ಲಕ್ಷ ರೈತರು ಪಡೆದುಕೊಳ್ಳುತ್ತಿದ್ದಾರೆ. ಈ ಯೋಜನೆಯು ಸದ್ಯ ಜಾರ್ಖಂಡ್ ನಲ್ಲಿ ಸಕ್ಸಸ್ ಆದಲ್ಲಿ ರಾಷ್ಟ್ರ ವ್ಯಾಪ್ತಿಯನ್ನು ವಿಸ್ತರಿಸಲಾಗುವುದು ಎನ್ನುವ ವರದಿ ಲಭ್ಯವಾಗಿದೆ.

ಇತರೆ ವಿಷಯಗಳು:

ಹೊಸ ಬಿಪಿಎಲ್‌ ಕಾರ್ಡ್‌ ಪಡೆಯುವ ಸುಲಭ ಮಾರ್ಗ.! ಇಲ್ಲಿಂದಲೇ ಫಾರ್ಮ್‌ ಭರ್ತಿ ಮಾಡಲು ಲಿಂಕ್

PM ಕಿಸಾನ್‌ 17 ನೇ ಕಂತಿಗೆ ಸಂಬಂಧಿಸಿದಂತೆ ದೊಡ್ಡ ಅಪ್‌ಡೇಟ್! ಇಲ್ಲಿದೆ ಸಂಪೂರ್ಣ ಮಾಹಿತಿ


Spread the love

Leave a Reply

Your email address will not be published. Required fields are marked *