ಹಲೋ ಸ್ನೇಹಿತರೇ, ದೇಶದ ರೈತ ಅವನ ಜಮೀನಿನಲ್ಲಿ ಸರಿಯಾಗಿ ಫಸಲು ಪಡೆಯಲು ಸಾಧ್ಯವಾದರೆ ಮಾತ್ರ ನಾವು ಕೂಡ ಜೀವನ ನಡೆಸಲು ಸಾಧ್ಯ ಎನ್ನುವುದು ಸಾರ್ವಕಾಲಿಕ ಸತ್ಯ. ಇಂತಹ ಸಂದರ್ಭದಲ್ಲಿ ರೈತರಿಗೆ ಅನುಕೂಲವಾಗುವಂಥ ಸಾಕಷ್ಟು ಯೋಜನೆಗಳು ಸರ್ಕಾರದ ಕಡೆಯಿಂದ ಜಾರಿಗೆ ಬರುತ್ತಿವೆ. ಅದರಲ್ಲಿ ಮುಖ್ಯವಾಗಿದ್ದು ರೈತರಿಗೆ ಸಾಲ ಸೌಲಭ್ಯ ಒದಗಿಸುವ ಯೋಜನೆಗಳು.
ಸಾಮಾನ್ಯವಾಗಿ ರೈತರು ವಾರ್ಷಿಕ ಬೆಳೆಯನ್ನು ನಂಬಿಕೊಂಡು ಇರುತ್ತಾರೆ, ಇಂತಹ ಸಂದರ್ಭದಲ್ಲಿ ವರ್ಷದಲ್ಲಿ ಒಮ್ಮೆ ಬರುವ ಆದಾಯಕ್ಕಾಗಿ ವರ್ಷ ಬಿಡಿ ಕೃಷಿ ಚಟುವಟಿಕೆಗೆ ಹಣ ಖರ್ಚು ಮಾಡುವ ಪರಿಸ್ಥಿತಿ ಇರುತ್ತದೆ
ಅಂತಹ ಸಂದರ್ಭಗಳಲ್ಲಿ ಸಾಲವನ್ನು ಮಾಡಿ ಕೃಷಿ ಚಟುವಟಿಕೆಗೆ ಅಗತ್ಯ ಇರುವಂತಹ ವಸ್ತುಗಳನ್ನು ಒದಗಿಸಿಕೊಳ್ಳುತ್ತಾರೆ. ಇದೀಗ ಸರ್ಕಾರವು ಕಿಸಾನ್ ಕ್ರೆಡಿಟ್ ಯೋಜನೆಯನ್ನು ಜಾರಿಗೆ ತಂದಿದ್ದು ಈ ಮೂಲಕ ಅತಿ ಕಡಿಮೆ ಬಡ್ಡಿ ದರದಲ್ಲಿ ರೈತರು ಸಾಲ ಸೌಲಭ್ಯವನ್ನು ಪಡೆಯಬಹುದು.
Contents
ಕಿಸಾನ್ ಕ್ರೆಡಿಟ್ ಕಾರ್ಡ್
ವಿಶೇಷವಾಗಿ ರೈತರಿಗಾಗಿಯೇ ಈ ಯೋಜನೆಯನ್ನು ಜಾರಿಗೆ ತರಲಾಗಿದೆ. ಈ ಕಿಸಾನ್ ಕ್ರೆಡಿಟ್ ಕಾರ್ಡ್ ಇರುವ ರೈತರು ಸರ್ಕಾರದ ಕಡೆಯಿಂದ ಅತಿ ಕಡಿಮೆ ಒಡ್ಡಿಯಲ್ಲಿ ಸಾಲ ಸೌಲಭ್ಯವನ್ನು ಪಡೆಯಬಹುದಾಗಿದೆ. ಈ ಸಾಲವನ್ನು ರೈತರು ತಮ್ಮ ಬೆಳೆ ಬಿತ್ತನೆ, ರಸ ಗೊಬ್ಬರ, ಕಟಾವು ನೀರಾವರಿ ಮೊದಲಾದವುಗಳಿಗೆ ಬಳಕೆ ಮಾಡಿಕೊಳ್ಳಬಹುದು.
ಈ ಹೆಸರಿನಿಂದ ಹೆಂಡತಿಗೆ ಕರೆಯುವಂತಿಲ್ಲ : ಕೋರ್ಟ್ ನಿಂದ ಬೆಳ್ಳಂಬೆಳಗ್ಗೆ ಆದೇಶ ಬಿಡುಗಡೆ
ಕಿಸಾನ್ ಕ್ರೆಡಿಟ್ ಸಾಲದ ಮೊತ್ತ ಎಷ್ಟು?
ಇದು ಮೂರು ವರ್ಷಗಳ ಅಲ್ಪಾವಧಿಯ ಸಾಲ ಯೋಜನೆಯಾಗಿದೆ. ರೈತರುಗಳು ಹೊಂದಿರುವ ಜಮೀನಿನ ಆಧಾರದ ಮೇಲೆ ಸಾಲದ ಮೊತ್ತವನ್ನು ನಿರ್ಧಾರವಾಗುತ್ತದೆ. ಕನಿಷ್ಠ ಮೂರು ಲಕ್ಷ ರೂಪಾಯಿಗಳನ್ನು ಮೂರು ವರ್ಷಗಳ ಅವಧಿಗೆ ಪಡೆಯಬಹುದು
ಇದಕ್ಕೆ ನಾಲ್ಕು ಪರ್ಸೆಂಟ್ ಬಡ್ಡಿ ದರ ವಿಧಿಸಲಾಗುವುದು. ಈ ಯೋಜನೆಗೆ ಅರ್ಜಿ ಸಲ್ಲಿಸಿದ ಕೇವಲ 15 ದಿನಗಳಲ್ಲಿ ನಿಮಗೆ ಸಾಲವು ನಿಮ್ಮ ಹೆಸರಿಗೆ ಜಮಾ ಮಾಡುತ್ತದೆ.
ಎಲ್ಲಿ ಸಿಗುತ್ತೆ ಸಾಲ?
2% ಬಡ್ಡಿ ದರದಲ್ಲಿ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಕಿಸಾನ್ ಕ್ರೆಡಿಟ್ ಸಾಲವನ್ನು ನೀಡುತ್ತದೆ. ಹೆಚ್ ಡಿ ಎಫ್ ಸಿ ಬ್ಯಾಂಕ್ 9% ಬಡ್ಡಿ ವಿಧಿಸಿದರೆ ಬ್ಯಾಂಕ್ ಆಫ್ ಇಂಡಿಯಾದಲ್ಲಿ 25% ನಷ್ಟು ಬಡ್ಡಿ ಇದೆ.
ಅರ್ಜಿ ಸಲ್ಲಿಸಲು ಬೇಕಾಗಿರುವ ದಾಖಲೆಗಳು
- ಆರ್ ಟಿ ಸಿ
- ಗುರುತಿನ ಪುರಾವೆ ಆಗಿ ಆಧಾರ್ ಕಾರ್ಡ್
- ಜಮೀನಿನ ಪಹಣಿ ಪತ್ರ
- ಮೊಬೈಲ್ ಸಂಖ್ಯೆ
- ಪಾಸ್ ಪೋರ್ಟ್ ಅಳತೆಯ ಫೋಟೋ
18 ರಿಂದ 65 ವರ್ಷ ವಯಸ್ಸಿನ ರೈತರು ಈ ಯೋಜನೆಯ ಅಡಿಯಲ್ಲಿ ಸಾಲ ಸೌಲಭ್ಯ ಪಡೆಯಬಹುದಾಗಿದ್ದು, ಹೆಚ್ಚಿನ ಮಾಹಿತಿಗಾಗಿ ಹತ್ತಿರದ ಬ್ಯಾಂಕ್ ಶಾಖೆಗೆ ಭೇಟಿ ನೀಡಿ.
ಇತರೆ ವಿಷಯಗಳು:
2ಲಕ್ಷ ಉಚಿತ ವಿದ್ಯಾರ್ಥಿ ವೇತನ : ಈ ಕೂಡಲೇ Google Scholarshipಗೆ ಅರ್ಜಿ ಸಲ್ಲಿಸಿ ಇಲ್ಲಿದೆ ಲಿಂಕ್
ಪ್ರಧಾನಮಂತ್ರಿ ಕಿಸಾನ್ ಲಿಸ್ಟ್ ನಲ್ಲಿ ನಿಮ್ಮ ಹೆಸರು ಇದ್ದಾರೆ 17ನೇ ಕಂತಿನ ಹಣ ಜಮಾ : ಒಮ್ಮೆ ಪಟ್ಟಿ ನೋಡಿ !