rtgh

ಕೇಂದ್ರ ಸರ್ಕಾರದ ಬೊಂಬಾಟ್ ಗಿಫ್ಟ್.!! ಪ್ರತಿ ಮಹಿಳೆಗೆ ಸಿಗಲಿದೆ 11,000 ರೂಪಾಯಿ

Pradhan Mantri Matrutva Vandan Yojana

ಹಲೋ ಸ್ನೇಹಿತರೇ, ದೇಶದಲ್ಲಿ ವಾಸಿಸುವ ಮಹಿಳೆಯರಿಗೆ ಅಗತ್ಯವಾಗಿರುವ ಆರ್ಥಿಕ ನೆರವು ಕೊಡಲು ಕೇಂದ್ರ ಸರ್ಕಾರ ಬದ್ಧವಾಗಿದೆ. ಇದಕ್ಕೆ ಪೂರಕವಾಗಿ ಸಾಕಷ್ಟು ಪ್ರಮುಖ ಯೋಜನೆಗಳನ್ನು ಜಾರಿಗೆ ತರಲಾಗಿದೆ.

Pradhan Mantri Matrutva Vandan Yojana

ಮಹಿಳಾ ಹಾಗೂ ಮಕ್ಕಳ ಕಲ್ಯಾಣ ಇಲಾಖೆಯ ವತಿಯಿಂದ ಗರ್ಭಿಣಿ ಸ್ತ್ರೀಯರಿಗಾಗಿ ಒಂದು ಪ್ರಮುಖವಾದ ಯೋಜನೆಯು ಜಾರಿಗೆ ತರಲಾಗಿದ್ದು ಇದರಿಂದ ಮಹಿಳೆಯರ ಪೌಷ್ಟಿಕ ಆಹಾರ ಮತ್ತು ಮಗುವಿನ ಆಹಾರಕ್ಕೆ ಅನುಕೂಲವಾಗುವ ಆರ್ಥಿಕ ನೆರವನ್ನು ಪಡೆದುಕೊಳ್ಳಬಹುದಾಗಿದೆ.

ಪ್ರಧಾನ ಮಂತ್ರಿ ಮಾತೃತ್ವ ವಂದನ ಯೋಜನೆ

ನಮಗೆಲ್ಲ ಗೊತ್ತಿರುವ ಹಾಗೆ ಬಡತನ ರೇಖೆಗಿಂತ ಕೆಳಗಿರುವವರಿಗೆ ಅಥವಾ ಬಡವರಿಗೆ ಮಕ್ಕಳಿಗೆ ಸರಿಯಾಗಿ ಪೋಷಕಾಂಶ ಆಹಾರವನ್ನು ಒದಗಿಸಲು ಸಾಧ್ಯವಿಲ್ಲ, ಈ ರೀತಿ ಮಕ್ಕಳಿಗೆ ಅಥವಾ ಗರ್ಭಿಣಿಯಾಗಿದ್ದಾಗ ಸರಿಯಾಗಿ ಪೋಷಕಾಂಶಯುಕ್ತ ಆಹಾರ ಸಿಗದೇ ಇದ್ದಾಗ ದೇಶದಲ್ಲಿ ಅನಾರೋಗ್ಯ ಸಮಸ್ಯೆ ತಲೆದೂರುತ್ತದೆ.

ಇದನ್ನ ತಡೆಗಟ್ಟುವ ಸಲುವಾಗಿ ಸರ್ಕಾರವು ಪ್ರಧಾನ ಮಂತ್ರಿ ಮಾತೃತ್ವ ವಂದನ ಯೋಜನೆಯನ್ನು ಜಾರಿಗೆ ತಂದಿತು. ಈ ಯೋಜನೆಯಡಿಯಲ್ಲಿ ಗರ್ಭಿಣಿಯಾದ ಸ್ತ್ರೀಯರಿಗೆ 11,000ಗಳನ್ನು ಸರ್ಕಾರ ನೇರವಾಗಿ ಖಾತೆಗೆ ಜಮಾ ಮಾಡುತ್ತದೆ.

ಯೋಜನೆಯ ಪ್ರಯೋಜನಗಳು!

ಮಾತೃತ್ವ ವಂದನಾ ಯೋಜನೆಯಡಿಯಲ್ಲಿ ಗರ್ಭಿಣಿ ಮತ್ತು ಹಾಲುಣಿಸುವ ತಾಯಂದಿರಿಗೆ ಹಣಕಾಸಿನ ಸಹಾಯ ನೀಡಲಾಗುವುದು. ಜೊತೆಗೆ ಪ್ರಸವ ಪೂರ್ವ ಮತ್ತು ಪುರಸಭಾ ನಂತರದ ಅವರ ವೈದ್ಯಕೀಯ ತಪಾಸಣೆ, ಚಿಕಿತ್ಸೆ ಉಚಿತ ಔಷಧಿಗಳು ಮೊದಲ ಅವುಗಳನ್ನು ಸರ್ಕಾರ ಒದಗಿಸುತ್ತದೆ.

ರೈತರಿಗೆ ಸಿಹಿ ಸುದ್ದಿ: ವಿವಿಧ ಯೋಜನೆಗಳಡಿ ಸಹಾಯಧನಕ್ಕೆ ಅರ್ಜಿ ಆಹ್ವಾನ

ಮಹಿಳೆ ಮೊದಲು ಬಾರಿಗೆ ತಾಯಿಯಾಗಿದ್ದರೆ 5,000 ಹಾಗೂ ಎರಡನೇ ಬಾರಿಗೆ ಹೆಣ್ಣು ಮಗುವನ್ನು ಪಡೆದರೆ 6,000ಗಳನ್ನು ಸರ್ಕಾರದ ವತಿಯಿಂದ ನೀಡಲಾಗುವುದು. ಈ ಯೋಜನೆಗಾಗಿ ಮಹಿಳೆಯರು ಮೊದಲು ಗರ್ಭಧಾರಣೆ ಆದ ಅನಂತರ ನೋಂದಣಿಯನ್ನು ಮಾಡಿಕೊಳ್ಳಬೇಕು. ಎಎನ್‌ಸಿ ಮಾಡಿದ ನಂತರ 2000 ಗಳು ಹಾಗೂ ಮಗು ಹುಟ್ಟಿದ ನಂತರದ ಮೊದಲ ಲಸಿಕೆಯನ್ನು ಹಾಕಿಸಿದ ಬಳಿಕ 3000 ರೂಪಾಯಿಗಳನ್ನು ಬಿಡುಗಡೆ ಮಾಡಲಾಗುವುದು.

ಯಾರು ಅರ್ಜಿ ಸಲ್ಲಿಸಬಹುದು?

19 ವರ್ಷ ಮೀರಿದ ಮದುವೆಯಾದ ಮಹಿಳೆ ಈ ಯೋಜನೆಗೆ ಅರ್ಹರು. ಅಂಗನವಾಡಿ ಕಾರ್ಯಕರ್ತೆಯರು ಆಶಾ ಕಾರ್ಯಕರ್ತೆಯರು ಮೊದಲಾದವರು ಕೂಡ ಈ ಯೋಜನೆಯ ಪ್ರಯೋಜನ ಪಡೆಯಬಹುದು.

ನೋಂದಣಿ ಮಾಡಿಕೊಳ್ಳಲು ಬೇಕಾಗಿರುವ ದಾಖಲೆಗಳು!

  • ಗರ್ಭಿಣಿ ದೃಢೀಕರಣ ಪ್ರಮಾಣ ಪತ್ರ
  • ಆಧಾರ್ ಕಾರ್ಡ್
  • ರೇಷನ್ ಕಾರ್ಡ್
  • ಜಾತಿ ಪ್ರಮಾಣ ಪತ್ರ
  • ಆದಾಯ ಪ್ರಮಾಣ ಪತ್ರ
  • ಹಣ ಬಿಡುಗಡೆ ಮಾಡಲು ಹಂತ ಹಂತದ ಗರ್ಭಿಣಿ ಸ್ತ್ರೀಯರ ಫೋಟೋವನ್ನು ಕೂಡ ಕೊಡಬೇಕಾಗುತ್ತದೆ.

ಅರ್ಜಿ ಸಲ್ಲಿಸುವುದು ಹೇಗೆ?

ಪ್ರಧಾನ ಮಂತ್ರಿ ಮಾತೃತ್ವ ವಂದನ ಯೋಜನೆಯ ಅಧಿಕೃತ ವೆಬ್ಸೈಟ್ನಲ್ಲಿ ಅರ್ಜಿ ಸಲ್ಲಿಸಬಹುದು ಅಥವಾ ಹತ್ತಿರದ ಆರೋಗ್ಯ ಕೇಂದ್ರಗಳಲ್ಲಿ ಹಾಗೂ ಅಂಗನವಾಡಿ ಕೇಂದ್ರಗಳಲ್ಲಿ ಮಾಹಿತಿ ಪಡೆದು ಅಲ್ಲೇ ಅರ್ಜಿ ಸಲ್ಲಿಸಬಹುದು.

ಬ್ಯಾಂಕುಗಳ ಸಾಲದ ಮೇಲಿನ ಬಡ್ಡಿಮನ್ನಾ : ತಡಮಾಡದೆ ಈ ಕೆಲಸ ತಕ್ಷಣ ಮಾಡಿ !

ಇನ್ನುಮುಂದೆ ಯಾವ ಟೋಲ್ ಗೇಟ್ ಕೂಡ ದೇಶದಲ್ಲಿ ಇರುವುದಿಲ್ಲ ; ಹೊಸ ಟ್ವಿಸ್ಟ್ ನಲ್ಲಿದೆ ಗುಡ್ ನ್ಯೂಸ್

Spread the love

Leave a Reply

Your email address will not be published. Required fields are marked *