rtgh

ಮಹಿಳೆಯರಿಗೆ ಭರ್ಜರಿ ಕೊಡುಗೆ.!! ಈ ಯೋಜನೆಯಡಿ ನಿಮ್ಮದಾಗಲಿದೆ 2 ಉಚಿತ ಸಿಲಿಂಡರ್

Pradhan Mantri Ujjwala Scheme

ಹಲೋ ಸ್ನೇಹಿತರೇ, ಮಹಿಳೆಯರಿಗಾಗಿ ಹಲವಾರು ಯೋಜನೆಗಳನ್ನ ರಾಜ್ಯ ಸರ್ಕಾರ ಮತ್ತು ಕೇಂದ್ರ ಸರ್ಕಾರಗಳು ಪರಿಚಯಿಸಿವೆ, ಮಹಿಳೆಯರ ಸಬಲೀಕರಣಕ್ಕಾಗಿ ಹಲವು ಯೋಜನೆಗಳು ರೂಪಿತವಾಗಿದ್ದು ಇದಕ್ಕಾಗಿ ಪ್ರತಿ ವರ್ಷ ಸಾವಿರಾರು ಕೋಟಿ ರೂಪಾಯಿಗಳನ್ನು ಮೀಸಲಿಡಲಾಗುತ್ತದೆ. ಈ ಯೋಜನೆಯ ಮೂಲಕ ಮಹಿಳೆಯರಿಗೆ 2 ಉಚಿತ ಸಿಲಿಂಡರ್ ಅನ್ನು ನೀಡಲಾಗುತ್ತದೆ. ಈ ಯೋಜನೆಯ ಬಗೆಗಿನ ಹೆಚ್ಚಿನ ವಿವರವನ್ನು ನಾವು ನಿಮಗೆ ಈ ಲೇಖನದ ಮೂಲಕ ತಿಳಿಸಿಕೊಡಲಿದ್ದೇವೆ.

Pradhan Mantri Ujjwala Scheme

ಪ್ರಧಾನ ಮಂತ್ರಿ ನರೇಂದ್ರ ಮೋದಿಯವರು ಅವರ ಆಡಳಿತ ಅವಧಿಯಲ್ಲಿ ಕೆಲವು ಅನೇಕ ಯೋಜನೆಗಳನ್ನು ಜಾರಿಗೆ ತರಲಾಗಿದೆ, ಅವುಗಳಲ್ಲಿ ಪ್ರಧಾನ ಮಂತ್ರಿ ಉಜ್ವಲ ಯೋಜನೆಯು ಕೂಡ ಒಂದು.

ಪ್ರಧಾನ ಮಂತ್ರಿ ಉಜ್ವಲ ಯೋಜನೆಯಲ್ಲಿ ಸಬ್ಸಿಡಿ ಗ್ಯಾಸ್ ಸಿಲಿಂಡರ್

ಸೌದೆ ಒಲೆ ಮೂಲಕ ಅಡುಗೆ ಮಾಡುವ ಕಷ್ಟ ಹೆಣ್ಣು ಮಕ್ಕಳಿಗೆ ಇನ್ನು ಮುಂದೆ ಇಲ್ಲ, ಪ್ರತಿಯೊಂದು ಮನೆಗೂ ಕೂಡ ಉಚಿತವಾಗಿ ಗ್ಯಾಸ್ ಕನೆಕ್ಷನ್ ನೀಡುವ ಯೋಜನೆ ಪ್ರಧಾನ ಮಂತ್ರಿ ಉಜ್ವಲ ಯೋಜನೆ ಆಗಿದೆ.

ಈ ಯೋಜನೆಯ ಅಡಿಯಲ್ಲಿ ಯಾವ ಮಹಿಳೆಯರು ಇನ್ನೂ ಸಾಂಪ್ರದಾಯಿಕವಾಗಿ ಕಟ್ಟಿಗೆ ಹೊತ್ತಿಸಿ ಅಡುಗೆ ಮಾಡುತ್ತಾರೋ ಅಂತವರಿಗೆ ಸಹಾಯಕವಾಗಲು ಉಚಿತ ಗ್ಯಾಸ್ ಕನೆಕ್ಷನ್ ನೀಡಲಾಗುತ್ತಿದೆ.

ಇತ್ತೀಚಿಗೆ ಮಹಿಳಾ ದಿನಾಚರಣೆಯ ಪ್ರಯುಕ್ತ ಮಾನ್ಯ ಪ್ರಧಾನ ಮಂತ್ರಿ ನರೇಂದ್ರ ಮೋದಿಜಿ ಅವರು ಮಹಿಳೆಯರಿಗೆ ಮತ್ತೊಂದು ಕೊಡುಗೆ ನೀಡಿದ್ದು, ಇಲ್ಲಿಯವರೆಗೆ ಉಚಿತವಾಗಿ ನೀಡಲಾಗುತ್ತಿದ್ದ ಒಂದು ಗ್ಯಾಸ್ ಸಿಲೆಂಡರ್ ಬದಲಿಗೆ ಎರಡು ಗ್ಲಾಸ್ ಸಿಲಿಂಡರ್ ನೀಡಲು ನಿರ್ಧರಿಸಿದ್ದಾರೆ. ಅಂದ್ರೆ 300 ರೂಪಾಯಿಗಳ ಸಬ್ಸಿಡಿ ಹಣವನ್ನು ಪ್ರತಿ ಸಿಲಿಂಡರ್ ಮೇಲೆ ಪಡೆಯಬಹುದು.

ಸಿಗುತ್ತೆ 300 ರೂಪಾಯಿ ಸಬ್ಸಿಡಿ

ಈ ಮೂಲಕ ಎಲ್ ಪಿ ಜಿ ಗ್ಯಾಸ್ ಸಿಲೆಂಡರ್ ಬಳಕೆ ಮಾಡುವವರಿಗಿಂತ ಉಜ್ವಲ ಯೋಜನೆಯ ಅಡಿಯಲ್ಲಿ ಗ್ಯಾಸ್ ಕನೆಕ್ಷನ್ ಪಡೆದುಕೊಂಡಿರುವವರಿಗೆ ಗ್ಯಾಸ್ ದರ ಕಡಿಮೆ ಎನ್ನುಬಹುದು. ಈ ಮೊದಲು ಪ್ರತಿ ಕುಟುಂಬಕ್ಕೆ 200 ರೂಪಾಯಿಗಳಿದ್ದ, ಸಬ್ಸಿಡಿಯನ್ನು ನೂರು ರೂಪಾಯಿ ಹೆಚ್ಚಳ ಮಾಡಿ 300 ರೂಪಾಯಿ ಮಾಡಲಾಗಿದೆ.

ಇನ್ನುಮುಂದೆ ಯಾವ ಟೋಲ್ ಗೇಟ್ ಕೂಡ ದೇಶದಲ್ಲಿ ಇರುವುದಿಲ್ಲ ; ಹೊಸ ಟ್ವಿಸ್ಟ್ ನಲ್ಲಿದೆ ಗುಡ್ ನ್ಯೂಸ್

ಹೀಗಾಗಿಯೇ ಪ್ರತಿ ಸಿಲೆಂಡರ್ ಅನ್ನು ಮಹಿಳೆಯರು ಕೇವಲ 603 ರೂಪಾಯಿಗಳಿಗೆ ಖರೀದಿಸಬಹುದುದಾಗಿದೆ. ಈ ಯೋಜನೆಯ ಲಾಭ ಕೇವಲ ಆರ್ಥಿಕವಾಗಿ ಹಿಂದುಳಿದವರಿಗೆ ಮಾತ್ರವೇ ಆಗಿದೆ. ಜೊತೆಗೆ ವರ್ಷದಲ್ಲಿ 12 ಸಿಲಿಂಡರ್ ಖರೀದಿ ಮಾಡಿದರೆ ಮಾತ್ರ ಈ ಸಬ್ಸಿಡಿ ಅನ್ವಯವಾಗುತ್ತದೆ. ಅದಕ್ಕಿಂತ ಹೆಚ್ಚಿಗೆ ಗ್ಯಾಸ ಸಿಲೆಂಡರ್ ಬಳಕೆ ಮಾಡಿದರೆ ಯಾವುದೇ ರೀತಿಯ ಸಬ್ಸಿಡಿ ಸಿಗುವುದಿಲ್ಲ.

ಅರ್ಜಿ ಸಲ್ಲಿಸಲು ಬೇಕಾಗಿರುವ ದಾಖಲೆಗಳು

  • ಮಹಿಳಾ ಅಭ್ಯರ್ಥಿಯ ಆಧಾರ್ ಕಾರ್ಡ್
  • ರೇಷನ್ ಕಾರ್ಡ್
  • ಆದಾಯ ಪ್ರಮಾಣ ಪತ್ರ
  • ಜಾತಿ ಪ್ರಮಾಣ ಪತ್ರ
  • ಪಾಸ್ ಪೋರ್ಟ್ ಅಳತೆಯ ಫೋಟೋ
  • ಬ್ಯಾಂಕ್ ಖಾತೆಯ ವಿವರ.

ಅರ್ಜಿ ಸಲ್ಲಿಸಲು ಅರ್ಹತೆಗಳು!

  • 18 ವರ್ಷ ಮೇಲ್ಪಟ್ಟ ಮಹಿಳೆಯರಾಗಿರಬೇಕು
  • ಗ್ರಾಮೀಣ ಪ್ರದೇಶದಲ್ಲಿ ಒಂದು ಲಕ್ಷ ರೂಪಾಯಿ ಹಾಗೂ ನಗರ ಪ್ರದೇಶಗಳಲ್ಲಿ ಎರಡು ಲಕ್ಷ ರೂಪಾಯಿಗಳಿಗಿಂತ ಕಡಿಮೆ ವಾರ್ಷಿಕ ವರಮಾನ ಹೊಂದಿರಬೇಕು
  • ಈಗ ಕೆಳಗೆ ಕನೆಕ್ಷನ್ ಪಡೆದುಕೊಂಡಿದ್ದರೆ ಮತ್ತೆ ಪಡೆಯಲು ಅವಕಾಶ ಇಲ್ಲ.
  • ಒಂದು ಮನೆಗೆ ಒಂದೇ ಗ್ಯಾಸ್ ಕನೆಕ್ಷನ್ ಉಚಿತವಾಗಿ ನೀಡಲಾಗುವುದು.

ಅರ್ಜಿ ಸಲ್ಲಿಸುವುದು ಹೇಗೆ?

ಪ್ರಧಾನ ಮಂತ್ರಿ ಉಜ್ವಲ ಯೋಜನೆ 2.0 ಪ್ರಸ್ತುತ ಚಾಲ್ತಿಯಲ್ಲಿದ್ದು ಇದಕ್ಕೆ ನೀವು ಅರ್ಜಿ ಸಲ್ಲಿಸುವುದಾದ್ರೆ https://www.pmuy.gov.in ಈ ಅಧಿಕೃತ ವೆಬ್ ಸೈಟ್ ಗೆ ಭೇಟಿ ನೀಡಿ. ಕೇಳಿರುವ ಮಾಹಿತಿಗಳನ್ನು ಭರ್ತಿ ಮಾಡಿ ಅರ್ಜಿ ಸಲ್ಲಿಸಿ. ಅಥವಾ ಹತ್ತಿರದ ಗ್ಯಾಸ್ ಏಜೆನ್ಸಿಗೆ ಹೋಗಿ ಕೂಡ ನೀವು ಅರ್ಜಿ ಸಲ್ಲಿಸಬಹುದಾಗಿದೆ.

ಸಂಬಂಧಪಟ್ಟ ಅಧಿಕಾರಿಗಳು ಸ್ಥಳ ಪರಿಶೀಲನೆ ನಡೆಸಿ ನಂತರ ನಿಮಗೆ ಉಚಿತ ಗ್ಯಾಸ್ ಕನೆಕ್ಷನ್ ಮಂಜೂರು ಮಾಡಿಕೊಡುತ್ತಾರೆ.

ಇತರೆ ವಿಷಯಗಳು :

ರೇಷನ್ ಕಾರ್ಡ್: ಕ್ಯೂ ನಲ್ಲಿ ನಿಲ್ಲುವ ಅಗತ್ಯವಿಲ್ಲ ಎಲ್ಲಿಯೂ ಅಲೆಯಬೇಕಾಗಿಲ್ಲ : ಇಲ್ಲಿದೆ ಲಿಂಕ್ ಅರ್ಜಿ ಸಲ್ಲಿಸಿ

ದಿನಗೂಲಿ ಕಾರ್ಮಿಕರಿಗೆ ಗುಡ್ ನ್ಯೂಸ್ : ಕೆಲಸಕ್ಕೆ ಹೋಗುವ ಮುನ್ನ ಹಣ ಎಷ್ಟು ಹೆಚ್ಚಳ ಆಗಿದೆ ನೋಡಿ

Spread the love

Leave a Reply

Your email address will not be published. Required fields are marked *