rtgh

KSRTC ಬಸ್‌ ಹತ್ತುವವರಿಗೆ ಹೊಸ ರೂಲ್ಸ್.!!‌ ಕೋರ್ಟ್ ನಿಂದ ಖಡಕ್‌ ವಾರ್ನಿಂಗ್

KSRTC New Rules

ಹಲೋ ಸ್ನೇಹಿತರೇ, ಬಸ್ ನಲ್ಲಿ ಸುಮ್ಮನೆ ಕೂತು ಪ್ರಯಾಣ ಮಾಡುವುದು ಬಹುತೇಕರಿಗೆ ಕಷ್ಟದ ಕೆಲಸವೇ ಆಗಿದೆ. ಹಾಗಾಗಿ ಕಿಟಕಿ ಪಕ್ಕ ಕೂತು ಹೊರಗಿನ ಪ್ರಪಂಚ ವೀಕ್ಷಣೆ ಮಾಡುತ್ತಿದ್ದ ಆ ಹವ್ಯಾಸ ಈಗ ತುಂಬಾ ಕಡಿಮೆ ಆಗಿದೆ. ಹಿಂದೆ ಪುಸ್ತಕ ಓದುವುದು ,ಕಾಡು ,ಹರಟೆ ಮಾಡುವ ಪ್ರಮಾಣ ಕೂಡ ಅಧಿಕ ಇತ್ತು ಆದರೆ ಈಗ  ಕಾಲ ಸಂಪೂರ್ಣ ಬದಲಾಗಿದೆ. ಮೊಬೈಲ್ ನೋಡುವುದರಲ್ಲಿ ಕಾಲ ಕಳೆಯುತ್ತಲೆ ಇರುತ್ತಾರೆ. ಅದಕ್ಕಾಗಿ ಮೊಬೈಲ್ ನಲ್ಲೇ ಮುಳುಗಿರುವವರಿಗೆ ಸರ್ಕಾರಿ ಬಸ್ ನ ಈ ನಿಯಮವು ಗೊತ್ತಿಲ್ಲದೆ ಹೋದರೆ ಹೊಸ ಕ್ರಮಕ್ಕೆ ಒಳಗಾಗುವ ಸಂಧರ್ಭ ಒಳಗಾಗಲಿದೆ.

KSRTC New Rules

ಯಾವುದು ಈ ಹೊಸ ಕಾನೂನು:

ಸರ್ಕಾರಿ ಬಸ್ ನಲ್ಲಿ ಪ್ರಯಾಣ ಮಾಡುವಾಗ ಮೊಬೈಲ್ ಬಳಸಿ ವೀಡಿಯೋ ನೋಡುವುದು ಹಾಡು ಕೇಳುವುದು, ಸುದ್ದಿ ವೀಕ್ಷಣೆ ಮಾಡುವುದು ಇವುಗಳನ್ನು ಮಾಡದಂತೆ ಆದೇಶವನ್ನು ನೀಡಲಾಗಿದೆ ಒಂದು ವೇಳೆ ಬಳಕೆ ಮಾಡಲೇ ಬೇಕು ಎಂದಾದರೆ ನೀವು ಇಯರ್ ಫೋನ್, ಬ್ಲೂಟುತ್ ಅಥವಾ ಹೆಡ್ ಫೋನ್ ಅನ್ನು ಬಳಕೆ ಮಾಡುವಂತೆ ಸಲಹೆ ಸೂಚನೆ ನೀಡಲಾಗಿದೆ. ಈ ಹಿಂದೆ ರೈಲ್ಚೆ ಇಲಾಖೆ ಇದೆ ವ್ಯವಸ್ಥೆ ಪಾಲನೆ ಮಾಡುತ್ತಿದ್ದು ಸದ್ಯ ಸರಕಾರಿ ಬಸ್ ನಲ್ಲಿ ಕೂಡ ಬರುತ್ತಿದೆ ಎಂದು ಹೇಳಬಹುದು.

ಈ ರೂಲ್ಸ್‌ ಬರಲು ಕಾರಣ ಏನು?

ಸರ್ಕಾರಿ ಬಸ್ ನಲ್ಲಿ ಪ್ರಯಾಣಿಸುವ ಸಂದರ್ಭದಲ್ಲಿ ಸಹ ಪ್ರಯಾಣಿಕರು ಗಟ್ಟಿ ಶಬ್ಧ ಇಟ್ಟು ಮೊಬೈಲ್ ಅನ್ನು ಬಳಕೆ ಮಾಡುವುದು ಕಿರಿ ಕಿರಿ ಅನುಭವ ಪ್ರಯಾಣಿಕರಿಗೆ ಆಗಲಿದೆ ಎಂದು 2019ರಲ್ಲಿ ಹೈಕೋರ್ಟ್ ನಲ್ಲಿ ದಾವೆ ಹೂಡಲಾಗಿತ್ತು ಅದರ ವಿಚಾರಣೆ ಮಾಡಿದ್ದ ಬಳಿಕ ದೂರದ ಊರಿನ ಪ್ರಯಾಣಿಕರಿಗೆ ನಿದ್ರೆ ತೊಂದರೆ ಆಗುವುದು ಹಾಗೂ ಒತ್ತಡದಂತ ಪರಿಸ್ಥಿತಿ ಎದುರಾಗುವುದು ಸಹ ತಿಳಿದು ಬಂದ ಹಿನ್ನೆಲೆಯಲ್ಲಿ ಸರಕಾರಿ ಬಸ್ ಪ್ರಯಾಣ ಮಾಡುವಾಗ ಹೆಡ್ ಫೋನ್ ಬಳಸಿ ಮನೋರಂಜನೆ ಕಾರ್ಯಕ್ರಮ ವೀಕ್ಷಿಸಬಹುದು ಎಂಬ ತೀರ್ಪನ್ನು ನೀಡಲಾಗಿದೆ.

ಅನ್ನದಾತರಿಗೆ ಭರ್ಜರಿ ಕೊಡುಗೆ.!! ಅಂತೂ ನಿಮ್ಮ ಖಾತೆಗೆ ₹2000 ರೂ. ಜಮಾ

ಮೊದಲು ಎಲ್ಲಿ ಈ ಕ್ರಮ ಜಾರಿಯಾಗಿದೆ?

ಕರ್ನಾಟಕ ಮೋಟಾರ್ ವಾಹನ ಅಧಿನಿಯಮದ ಅನ್ವಯದ 94/ 1c ಅಡಿಯಲ್ಲಿ ಮೊದಲ ಹಂತದಲ್ಲಿ ಸಾರಿಗೆ ಇಲಾಖೆಯ ಕಲ್ಯಾಣ ಕರ್ನಾಟಕದ ಭಾಗದಲ್ಲಿ ಜಾರಿಗೆ ತರಲಾಗಿದೆ, ಕಾಲ ಕ್ರಮೇಣ ಉಳಿದ ಭಾಗಕ್ಕೂ ಬಂದಿದೆ. ಹೀಗಾಗಿ BMTC ನಲ್ಲಿ ಕೂಡ ಈ ನಿಯಮ ಇರಲಿದ್ದು ಸಹ ಪ್ರಯಾಣಿಕರು ನಿಮಗೆ ಮೊಬೈಲ್ ಬಳಕೆ ಮಾಡಿ ಕಿರಿ ಕಿರಿ ಅನುಭವವನ್ನು ಉಂಟಾಗುತ್ತಿದ್ದರೆ ಆಗ ನೀವು ಕಂಡೆಕ್ಟರ್ ನ ಬಳಿ ಹೇಳಬಹುದು. ಆಗ ಕಂಡಕ್ಟರ್ ಅವರು ಸಂಬಂಧ ಪಟ್ಟಂತವರ ಬಳಿ ಈ ತರ ಮಾಡದಂತೆ ಸೂಚಿಸುತ್ತಾರೆ. ಆಗ ಕೂಡ ಕೇಳದೆ ಹೋದ್ರೆ ಬಸ್ ನಿಂದ ಹೊರ ಹೋಗುವಂತೆ ಸೂಚಿಸಲಿದ್ದಾರೆ.

ವಿನಾಯಿತಿ ಇದೆಯೇ?

ಸರ್ಕಾರದ ಬಸ್ ನಲ್ಲಿ ಮೊಬೈಲ್ ಬಳಕೆ ಮಾಡುವಾಗ ಹಾಡು ಕೇಳಲು ಮತ್ತು ಮನೋರಂಜನಾ ಕಾರ್ಯಕ್ರಮ ವೀಕ್ಷಣೆ ಮಾಡುವಾಗ ಹೆಡ್‌ ಫೋನ್ ಅಥವಾ ಇಯರ್ ಫೋನ್‌ ಗಳ ಬಳಕೆಗೆ ಸೂಚಿಸಲಾಗಿದ್ದರು ಸಾರ್ವಜನಿಕರಿಗೆ ಮೊಬೈಲ್ ನಲ್ಲಿ ಮಾತನಾಡಲು ಕೂಡ ಇಯರ್ ಫೋನ್ ಬಳಸಬೇಕು ಎಂಬ ನಿಯಮ ಇರಲಾರದು. ಮೊಬೈಲ್ ಕರೆಗಳು ಬಂದಾಗ ಸೀದಾ ಇಯರ್ ಫೋನ್ ಇಲ್ಲದೆಯು ಉತ್ತರಿಸಬಹುದು. ಆದರೆ ಇತರರಿಗೆ ತೊಂದರೆ ಯಾಗುವಂತೆ ಗಟ್ಟಿ ಧ್ವನಿಯಲ್ಲಿ ಉತ್ತಿರಸುವಂತಿಲ್ಲ ಈ ರೀತಿಯಾಗಿ ಮಾತನಾಡಿದರೆ ಅಂತವರಿಗೆ ದಂಡ ಸಿಗಲಿದೆ.

ಇತರೆ ವಿಷಯಗಳು:

ಕೇಂದ್ರ ಸರ್ಕಾರದ ಸೌರಗೃಹ ಯೋಜನೆ: 20 ವರ್ಷದ ವರೆಗೂ ಫ್ರೀ ವಿದ್ಯುತ್‌ ತಕ್ಷಣ ನೋಂದಾಯಿಸಿ

ಬ್ಯಾಂಕ್‌ ಗ್ರಾಹಕರಿಗೆ ಶಾಕಿಂಗ್ ಸುದ್ದಿ.!! ಇಂತಹ ಬ್ಯಾಂಕ್ ಅಕೌಂಟ್‌ಗಳು ರದ್ದು

Spread the love

Leave a Reply

Your email address will not be published. Required fields are marked *