rtgh

ನಿವೃತ್ತಿಯ ನಂತರ ಸಾಯುವವರೆಗೂ ಈ ಯೋಜನೆಯಲ್ಲಿ ಹಣ ಪಡೆಯಬಹುದು : ಹಾಗಾದರೆ ಆ ಯೋಜನೆ ಯಾವುದು ?

You can get money in this scheme after retirement till death

ನಮಸ್ಕಾರ ಸ್ನೇಹಿತರೆ ನಿವೃತ್ತಿಯ ನಂತರ ಜೀವನದ ಬಗ್ಗೆ ಸಾಮಾನ್ಯವಾಗಿ ಸಾಕಷ್ಟು ಜನರು ಚಿಂತಿಸುತ್ತಿರುತ್ತಾರೆ. ಪ್ರತಿ ತಿಂಗಳೂ ನಿವೃತ್ತಿಯ ನಂತರ ಸಂಬಳದ ರೂಪದಲ್ಲಿ ಸ್ವಲ್ಪ ಆದಾಯವನ್ನು ಪಡೆಯುತ್ತಿದ್ದರೆ ಚಿಂತೆ ಇಲ್ಲದೆ ಜೀವನವನ್ನು ಸಾಗಿಸಬಹುದಾಗಿದೆ. ಇದೀಗ ಪ್ರತಿ ತಿಂಗಳು ಸಂಬಳದ ರೂಪದಲ್ಲಿ ಪಿಂಚಣಿ ಯೋಜನೆಯಲ್ಲಿ ಹಣವನ್ನು ಪಡೆಯುವ ಅವಕಾಶ ಇರುತ್ತದೆ.

You can get money in this scheme after retirement till death
You can get money in this scheme after retirement till death

ಇದಕ್ಕಾಗಿ ಹೂಡಿಕೆಯನ್ನು ಪಿಂಚಣಿಯ ಯೋಜನೆಯಲ್ಲಿ ಮಾಡಬೇಕು. ಪಿಂಚಣಿಯ ಹಲವು ಯೋಜನೆಗಳು ನಿವೃತ್ತಿಯ ನಂತರವೂ ಕೂಡ ಆದಾಯ ಗಳಿಸಲು ನೋಡಬಹುದು ಅದರಂತೆ ಆ ಯೋಜನೆಗಳಲ್ಲಿ ಹೂಡಿಕೆ ಮಾಡುವುದರ ಮೂಲಕ ತಮ್ಮ ಭವಿಷ್ಯವನ್ನು ಸುರಕ್ಷಿತವಾಗಿರಿಸಿಕೊಳ್ಳಬಹುದಾಗಿದೆ ಈ ಯೋಜನೆಯಲ್ಲಿ ಇದೀಗ ಹೂಡಿಕೆ ಮಾಡಿದರೆ ಪ್ರತಿ ತಿಂಗಳು ಪಿಂಚಣಿಯನ್ನು ಪಡೆದುಕೊಳ್ಳಬಹುದಾಗಿದೆ.

ನಿವೃತ್ತಿಯ ನಂತರ ಸಾಯುವ ತನಕ ಹಣ ಪಡೆದುಕೊಳ್ಳಬಹುದು :

ನಾವು ತಿಳಿಸುವಂತಹ ಕೆಲವೊಂದು ಪಿಂಚಣಿ ಯೋಜನೆಯಲ್ಲಿ ಹಣವನ್ನು ಹೂಡಿಕೆ ಮಾಡುವುದರಿಂದ ನಿವೃತ್ತಿಯ ನಂತರ ಸಾಯುವವರೆಗೂ ಕೂಡ ಹಣವನ್ನು ಪಿಂಚಣಿಯಾಗಿ ಪಡೆದುಕೊಳ್ಳಬಹುದಾಗಿದೆ ಹಾಗಾದರೆ ಆ ಯೋಜನೆಗಳು ಯಾವುವು ಎಂದು ನೋಡುವುದಾದರೆ,

  1. ರಾಷ್ಟ್ರೀಯ ಪಿಂಚಣಿ ವ್ಯವಸ್ಥೆ : ಪಿಂಚಣಿ ಪ್ರಯೋಜನಗಳನ್ನು ಪ್ರತಿ ತಿಂಗಳು ಪಡೆಯಬೇಕಾದರೆ ರಾಷ್ಟ್ರೀಯ ಪಿಂಚಣಿ ವ್ಯವಸ್ಥೆಯನ್ನು ಆಯ್ಕೆ ಮಾಡಿಕೊಳ್ಳಬೇಕಾಗುತ್ತದೆ ಹೂಡಿಕೆಯನ್ನು ಈ ಯೋಜನೆಗಳಲ್ಲಿ ಾಡಿದರೆ ಮತ್ತು 60 ವರ್ಷಗಳ ನಂತರ ಎನ್‌ಪಿಎಸ್ ನಿಧಿಯಲ್ಲಿನ ಮೊತ್ತದ ಅರವತ್ತು ಪ್ರತಿಶತವನ್ನು ಒಟ್ಟಿಗೆ ಮತ್ತು 40 ಪ್ರತಿಶತ ಮೊತ್ತವನ್ನು ಈ ಯೋಜನೆಯಲ್ಲಿ ಪಿಂಚಣಿಯಾಗಿ ಪಡೆದುಕೊಳ್ಳಬಹುದು.
  2. ಪಿ ಪೀ ಎಫ್ ಯೋಜನೆ : ಖಾತರಿಯಾದಾಯಗಳು ಪಿಪಿಎಫ್ ಯೋಜನೆಯಲ್ಲಿ ಲಭ್ಯವಿದೆ ಅಂದರೆ ಇದರಲ್ಲಿ ಹೂಡಿಕೆ ಮಾಡಿದ ಮೊತ್ತವು ಸಂಪೂರ್ಣವಾಗಿ ಸುರಕ್ಷಿತವಾಗಿರುತ್ತದೆ ಈ ಯೋಜನೆಯಲ್ಲಿ ನಿಮ್ಮ ನಿವೃತ್ತಿಗಾಗಿ ಹೂಡಿಕೆ ಮಾಡಬಹುದಾಗಿದೆ. ಇಪಿಎಫ್ ಯೋಜನೆಯಲ್ಲಿ 15 ವರ್ಷಗಳವರೆಗೆ ಹೂಡಿಕೆ ಮಾಡಬಹುದಾಗಿದ್ದು ಕನಿಷ್ಠ 500 ರೂಪಾಯಿಗಳಿಂದ ಗರಿಷ್ಠ 1.5 ಲಕ್ಷ ರೂಪಾಯಿಗಳ ವರೆಗೆ ಒಂದು ಆರ್ಥಿಕ ವರ್ಷದಲ್ಲಿ ಹೂಡಿಕೆ ಮಾಡಬೇಕು. ಹೂಡಿಕೆ ಮೊತ್ತದ ಮೇಲೆ ತೆರಿಗೆ ಪ್ರಯೋಜನದ ಲಾಭವನ್ನು ಈ ಯೋಜನೆಯಲ್ಲಿ ಪಡೆಯಬಹುದಾಗಿದೆ.
  3. ಮ್ಯೂಚುಯಲ್ ಫಂಡ್ ಗಳಲ್ಲಿ ಹೂಡಿಕೆ ಮಾಡುವುದು : ಹೂಡಿಕೆಯನ್ನು ಮ್ಯೂಸಿಯಲ್ ಫಂಡ್ಗಳಲ್ಲಿಯೂ ಕೂಡ ಮಾಡುವುದು ಉತ್ತಮ ಆಯ್ಕೆಯಾಗಿದೆ ದೀರ್ಘಾವಧಿಗೆ ಮ್ಯೂಚುಯಲ್ ಫಂಡ್ ನಲ್ಲಿ ಹೂಡಿಕೆ ಮಾಡಬಹುದು. ಶೇಕಡ ಹನ್ನೆರಡಕ್ಕಿಂತ ಹೆಚ್ಚು ಆದಾಯವನ್ನು ಮೂರು ವರ್ಷ ಅಥವಾ ಅದಕ್ಕಿಂತ ಹೆಚ್ಚು ಕಾಲ ಹೂಡಿಕೆ ಮಾಡಿದರೆ ಪಡೆಯಬಹುದು ಮ್ಯೂಚುಯಲ್ ಫಂಡ್ ನಲ್ಲಿ ಹೂಡಿಕೆ ಮಾಡುವಂತಹ ಸಂದರ್ಭದಲ್ಲಿ ಎಲ್ಲಾ ಮಾರುಕಟ್ಟೆ ಅಪಾಯಗಳ ಬಗ್ಗೆ ಹೆಚ್ಚಿನ ಗಮನವನ್ನು ಹರಿಸಬೇಕಾಗುತ್ತದೆ.
  4. ಬ್ಯಾಂಕ್ ಠೇವಣಿ : ಹಣವನ್ನು ಬ್ಯಾಂಕಿನಲ್ಲಿ ಉಳಿಸುವುದು ಕೂಡ ಉತ್ತಮ ಆಯ್ಕೆಯಾಗಿದೆ ನೀವೇನಾದರೂ ಬ್ಯಾಂಕಿನಲ್ಲಿ ಎಫ್ ಡಿ ಅಥವಾ ಆರ್ಡಿಯಲ್ಲಿ ಹೂಡಿಕೆ ಮಾಡಬಹುದಾಗಿದ್ದು ಉಳಿತಾಯ ಖಾತೆಯಲ್ಲಿ ಲಭ್ಯವಿರುವ ಬಡ್ಡಿ ದರದಲ್ಲಿ ಈ ಯೋಜನೆಯಲ್ಲಿ ನೀವು ಸಾಕಷ್ಟು ಪ್ರಯೋಜನವನ್ನು ಪಡೆಯಬಹುದಾಗಿದೆ. ಅನೇಕ ಬ್ಯಾಂಕುಗಳಲ್ಲಿ ವಿಶೇಷ ಎಫ್ ಡಿ ಯೋಜನೆಗಳು ಕೂಡ ನಡೆಸಲ್ಪಡುತ್ತವೆ.
  5. ಅಟಲ್ ಪಿಂಚಣಿ ಯೋಜನೆಯಲ್ಲಿ ಹೂಡಿಕೆ : ಸರ್ಕಾರ ಅಟಲ್ ಪಿಂಚಣಿ ಯೋಜನೆಯನ್ನು ಮಾಧ್ಯಮ ವರ್ಗ ಮತ್ತು ಬಡವರ್ಗದವರಿಗಾಗಿ ಪ್ರಾರಂಭಿಸಿದೆ.
  6. ಈ ಯೋಜನೆಯಲ್ಲಿ 18 ವರ್ಷದಿಂದ 40 ವರ್ಷದೊಳಗಿನ ಯಾವುದೇ ವ್ಯಕ್ತಿಯು ಹೂಡಿಕೆ ಮಾಡಬಹುದಾಗಿದ್ದು ಯೋಜನೆಯ ಪಕ್ವವಾದಾಗ ಅಂದರೆ 60 ವರ್ಷ ವಯಸ್ಸು ಹೂಡಿಕೆದಾರರಿಗೆ ಆದಂತಹ ಸಂದರ್ಭದಲ್ಲಿ ಅವರು ಪ್ರತಿ ತಿಂಗಳು ಒಂದು ಸಾವಿರದಿಂದ 5000 ವರೆಗೆ ಪಿಂಚಣಿಗೆ ಸೌಲಭ್ಯವನ್ನು ಪಡೆಯಬಹುದು.
    ಹೀಗೆ ಅನೇಕ ರೀತಿಯ ಪಿಂಚಣಿ ಸೌಲಭ್ಯವನ್ನು ಇವತ್ತಿನ ಲೇಖನದಲ್ಲಿ ತಿಳಿಸಲಾಗಿದ್ದು ಇದರ ಸಂಪೂರ್ಣ ಪ್ರಯೋಜನವನ್ನು ನಿವೃತ್ತಿಯ ನಂತರ ಪಡೆಯಬಹುದಾಗಿದೆ.

ಒಟ್ಟಾರೆ ಸರ್ಕಾರದ ಯೋಜನೆಗಳಲ್ಲದೆ ಬ್ಯಾಂಕಿನಲ್ಲಿಯೂ ಕೂಡ ವಯಸ್ಕರ ಇದ್ದಾಗ ಹೂಡಿಕೆ ಮಾಡುವುದರಿಂದ ನಿವೃತ್ತಿಯ ನಂತರ ಯಾವುದೇ ಆರ್ಥಿಕ ಸಮಸ್ಯೆ ಇಲ್ಲದೆ ಜೀವನವನ್ನು ಸಾಗಿಸಲು ಸಹಾಯವಾಗುತ್ತದೆ ಹಾಗಾಗಿ ನಿಮಗೆ ತಿಳಿದಿರುವಂತಹ ಸ್ನೇಹಿತರು ಯಾರಾದರೂ ಹೂಡಿಕೆ ಮಾಡಲು ಯೋಚಿಸುತ್ತಿದ್ದರೆ.

ಅವರಿಗೆ ಈ ಲೇಖನದಲ್ಲಿ ತಿಳಿಸಲಾದಂತಹ ಹೂಡಿಕೆ ಯೋಜನೆಗಳು ಹಾಗೂ ಪಿಂಚಣಿ ಯೋಜನೆಗಳ ಬಗ್ಗೆ ಮಾಹಿತಿಯನ್ನು ಶೇರ್ ಮಾಡುವ ಮೂಲಕ ಇದರಲ್ಲಿ ಹೂಡಿಕೆ ಮಾಡುವುದರಿಂದ ಹೆಚ್ಚು ಸುರಕ್ಷಿತ ಹಾಗೂ ಪ್ರತಿ ತಿಂಗಳು ಪಿಂಚಣಿಯ ರೂಪದಲ್ಲಿ ಹಣವನ್ನು ಪಡೆದುಕೊಳ್ಳಬಹುದು ಎಂದು ತಿಳಿಸಿ ಧನ್ಯವಾದಗಳು.

ಇತರೆ ವಿಷಯಗಳು :

Spread the love

Leave a Reply

Your email address will not be published. Required fields are marked *