rtgh

ಕೇಂದ್ರ ಸರ್ಕಾರದಿಂದ ಸಾಲ ಹಾಗೂ ಉಚಿತ ಟೂಲ್ ಕಿಟ್ ಪ್ರೋತ್ಸಾಹ ಧನ ಸಿಗಲಿದೆ

Loans and free tool kits are available from the government

ನಮಸ್ಕಾರ ಸ್ನೇಹಿತರೆ ಇವತ್ತಿನ ಲೇಖನದಲ್ಲಿ ನಿಮಗೆ ಪ್ರಧಾನ ಮಂತ್ರಿ ವಿಶ್ವಕರ್ಮ ಯೋಜನೆಯ ಬಗ್ಗೆ ತಿಳಿಸಲಾಗುತ್ತಿದ್ದು ಈ ಯೋಜನೆಗೆ ಸಂಬಂಧಿಸಿ ದಂತೆ ಏನೆಲ್ಲಾ ಅರ್ಹತೆಗಳು ಇರಬೇಕು ಈ ಯೋಜನೆಯಲ್ಲಿ ಏನೆಲ್ಲ ಸೌಲಭ್ಯಗಳು ದೊರೆಯಲಿವೆ ಹಾಗೂ ಯಾರೆಲ್ಲ ಈ ಯೋಜನೆಯ ಪ್ರಯೋಜನವನ್ನು ಪಡೆಯಬಹುದು ಎಂಬುದರ ಸಂಪೂರ್ಣ ಮಾಹಿತಿಯನ್ನು ತಿಳಿದುಕೊಳ್ಳಬಹುದು.

Loans and free tool kits are available from the government
Loans and free tool kits are available from the government

Contents

ಪಿಎಂ ವಿಶ್ವಕರ್ಮ ಯೋಜನೆ :

ಭಾರತದ ಗ್ರಾಮೀಣ ಮತ್ತು ನಗರ ಪ್ರದೇಶದ ಸಾಂಪ್ರದಾಯಿಕ ಕುಶಲಕರ್ಮಿಗಳು ಮತ್ತು ಕರಕುಶಲ ಗಾರರನ್ನು ಸದೃಢಗೊಳಿಸುವ ಯೋಜನೆಯು ಪಿಎಂ ಕುಶಲಕರ್ಮಿ ಯೋಜನೆ ಇದಾಗಿದ್ದು 18 ರೀತಿಯ ಸಂಪ್ರದಾಯಿಕ ಕುಶಲಕರ್ಮಿಗಳು ಹಾಗೂ ಕರಕುಶಲಗಳಿಗೆ ಈ ಯೋಜನೆಯಲ್ಲಿ ಲಾಭ ದೊರೆಯಲಿದೆ. ಈ ಯೋಜನೆಯ ಲಾಭವನ್ನು ವಿಗ್ರಹ ತಯಾರಿಕರು ಗಾರೆ ಕೆಲಸಗಾರರು ಟೈಲರ್ಗಳು ಕಲ್ಲು ಹೊಡೆಯುವವರು ಅಗಸರು ಕಮ್ಮಾರರು ಹೂವಿನ ಹಾರ ತಯಾರಕರು ಹೀಗೆ ಮೊದಲಾದವರು ಪ್ರಯೋಜನವನ್ನು ಪಡೆಯಬಹುದಾಗಿದೆ.

ವಿಶ್ವಕರ್ಮ ಯೋಜನೆಗೆ ಅಗತ್ಯವಿರುವ ದಾಖಲೆಗಳು :

ವಿಶ್ವಕರ್ಮ ಯೋಜನೆಗೆ ಅರ್ಜಿಯನ್ನು ಸಲ್ಲಿಸಬೇಕಾದರೆ ಅಭ್ಯರ್ಥಿಗಳು ಕೆಲವೊಂದು ಅಗತ್ಯ ದಾಖಲೆಗಳನ್ನು ಹೊಂದಿರಬೇಕು ಅವುಗಳೆಂದರೆ ಬ್ಯಾಂಕ್ ಪಾಸ್ ಬುಕ್ ಆಧಾರ್ ಕಾರ್ಡ್ ರೇಷನ್ ಕಾರ್ಡ್ ಮೊಬೈಲ್ ನಂಬರ್ ಕುಟುಂಬದ ಸದಸ್ಯರ ಆಧಾರ್ ಕಾರ್ಡ್ ಹೀಗೆ ಕೆಲವೊಂದು ಅಗತ್ಯ ದಾಖಲೆಗಳನ್ನು ಹೊಂದಿರಬೇಕು.

ವಿಶ್ವಕರ್ಮ ಯೋಜನೆಯ ಅರ್ಹತೆಯ ಮಾನದಂಡಗಳು :

ವಿಶ್ವಕರ್ಮ ಯೋಜನೆಗೆ ಅರ್ಜಿಯನ್ನು ಸಲ್ಲಿಸಬೇಕಾದರೆ ಕೆಲವೊಂದು ಅರ್ಹತೆಗಳನ್ನು ಅಭ್ಯರ್ಥಿಗಳು ಹೊಂದಿರಬೇಕು ಫಲಾನುಭವಿಯ ಕನಿಷ್ಠ ವಯಸ್ಸು 18 ವರ್ಷಗಳ ಆಗಿರಬೇಕು. ನೊಂದಣಿ ದಿನಾಂಕ ದಂದು ಫಲಾನುಭವಿಯು ಸಂಬಂಧಿಸಿದ ವ್ಯಾಪಾರದಲ್ಲಿ ತೊಡಗಿಸಿಕೊಂಡಿರಬೇಕು ಮತ್ತು ಕೇಂದ್ರ ಸರ್ಕಾರ ಅಥವಾ ರಾಜ್ಯ ಸರ್ಕಾರದ ಇದೇ ರೀತಿಯ ಕ್ರೆಡಿಟ್ ಆಧಾರಿತ ಯೋಜನೆಗಳ ಅಡಿಯಲ್ಲಿ ಸ್ವಯಂ ಉದ್ಯೋಗ ಅಥವಾ ಅಭಿವೃದ್ಧಿಗಾಗಿ ಸಾಲವನ್ನು ಪಡೆದಿರಬಾರದು. ಕುಟುಂಬದ ಒಬ್ಬ ಸದಸ್ಯರಿಗೆ ಈ ಯೋಜನೆಯನ್ನು ಸೀಮಿತಗೊಳಿಸಲಾಗಿದೆ. ಸರ್ಕಾರಿ ಸೇವೆಯಲ್ಲಿರುವವರು ಈ ಯೋಜನೆಗೆ ಅರ್ಜಿ ಸಲ್ಲಿಸಲು ಅರ್ಹರಾಗಿರುವುದಿಲ್ಲ.

ಇದನ್ನು ಓದಿ : ಕೇಂದ್ರ ಸರ್ಕಾರದ ಯೋಜನೆ 36,000 ಹಣ ಪಡೆದುಕೊಳ್ಳಿ ಇಲ್ಲಿದೆ ಸಂಪೂರ್ಣ ಮಾಹಿತಿ

ಪಿಎಂ ವಿಶ್ವಕರ್ಮ ಯೋಜನೆಯ ಪ್ರಯೋಜನಗಳು :

ಪಿಎಂ ವಿಶ್ವಕರ್ಮ ಯೋಜನೆಯಲ್ಲಿ ಕೇಂದ್ರ ಸರ್ಕಾರವು ಕೆಲವೊಂದು ಪ್ರಯೋಜನಗಳನ್ನು ನೀಡುತ್ತಿದ್ದು ಮೂರು ಲಕ್ಷದವರೆಗೆ ಆಧಾರ ರಹಿತ ಸಾಲವನ್ನು ಸಹೋದರ ಮತ್ತು ಸಹೋದರಿಯರಿಗೆ ನೀಡಲಾಗುತ್ತದೆ ಹಾಗೂ 15,000 ಟೂಲ್ ಕಿಟ್ ಪ್ರೋತ್ಸಾಹ ಧನವನ್ನು ನೀಡಲಾಗುತ್ತದೆ.

ಸರ್ಕಾರದಿಂದ ಕ್ವಾಲಿಟಿ ಸರ್ಟಿಫಿಕೇಷನ್ ಬ್ರಾಂಡಿಂಗ್ ಮತ್ತು ಜಾಹೀರಾತು ಮಾದರಿಯಲ್ಲಿ ಮಾರ್ಕೆಟಿಂಗ್ಗಾಗಿ ನೆರವನ್ನು ಪಡೆಯಬಹುದಾಗಿದೆ. ದಿನಕ್ಕೆ 500 ರೂಪಾಯಿ ಸಂಭಾವನೆಯ ಜೊತೆಗೆ ಕೌಶಲ್ಯಾಭಿವೃದ್ಧಿ ತರಬೇತಿಯನ್ನು ಪಡೆಯಬಹುದು.

ಒಟ್ಟಾರೆ ಪ್ರಧಾನಮಂತ್ರಿ ವಿಶ್ವಕರ್ಮ ಯೋಜನೆಯ ಅಡಿಯಲ್ಲಿ ಸಹಾಯಧನವನ್ನು ಕೇಂದ್ರ ಸರ್ಕಾರದಿಂದ ಪಡೆಯಬಹುದಾಗಿತ್ತು ಈ ಸಹಾಯಧನವನ್ನು ಪಡೆದು ಸ್ವಂತ ಉದ್ಯೋಗವನ್ನು ಆರಂಭಿಸಬಹುದಾಗಿದೆ ಹಾಗಾಗಿ ನಿಮ್ಮ ಸ್ನೇಹಿತರು ಯಾರಾದರೂ ಸ್ವಂತ ಉದ್ಯೋಗವನ್ನು ಪ್ರಾರಂಭಿಸಲು ಯೋಚಿಸುತ್ತಿದ್ದರೆ ಅವರಿಗೆ ಕೇಂದ್ರ ಸರ್ಕಾರದ ಪ್ರಧಾನ ಮಂತ್ರಿ ವಿಶ್ವಕರ್ಮ ಯೋಜನೆಯ ಅಡಿಯಲ್ಲಿ ಮೂರು ಲಕ್ಷದವರೆಗೆ ಸಹಾಯಧನ ಲಭ್ಯವಿದೆ ಎಂಬುದರ ಬಗ್ಗೆ ತಿಳಿಸಿ ಧನ್ಯವಾದಗಳು.

ಅಧಿಕೃತ ಜಾಲತಾಣ : https://pmvishwakarma.gov.in/

ಇತರೆ ವಿಷಯಗಳು :

ಯೋಜನೆ ಹೆಸರು ..?

ವಿಶ್ವಕರ್ಮ ಯೋಜನೆ

ಅರ್ಜಿ ಸಲ್ಲಿಸಲು ಕೊನೆ ದಿನಾಂಕ ..?

ನಿಗದಿ ಆಗಿಲ್ಲ .

Spread the love

Leave a Reply

Your email address will not be published. Required fields are marked *