rtgh
Headlines

ಕೇಂದ್ರ ಸರ್ಕಾರದಿಂದ ಯುವಕ ಯುವತಿಯರಿಗೆ 10 ಲಕ್ಷ ರೂ: ಹೊಸ ಯೋಜನೆ ಜಾರಿ !

Pradhan Mantri Mudra Yojana

ನಮಸ್ಕಾರ ಸ್ನೇಹಿತರೇ ಯಾವುದೇ ಗ್ಯಾರೆಂಟಿ ಇಲ್ಲದೆ 10 ಲಕ್ಷ ರೂಪಾಯಿಗಳವರೆಗೆ ಸಾಲ ಸೌಲಭ್ಯವನ್ನು ಕೇಂದ್ರ ಸರ್ಕಾರವು ಯುವಕ ಯುವತಿಯರಿಗೆ ನೀಡಲು ಮುಂದಾಗಿದೆ. ಹಾಗಾದರೆ ಯಾವ ಯೋಜನೆ ಮೂಲಕ ಈ ಯೋಜನೆಯ ಸೌಲಭ್ಯವನ್ನು ಪಡೆಯಬಹುದು ಹಾಗೂ ಏನೆಲ್ಲ ದಾಖಲೆಗಳು ಬೇಕು ಯಾರೆಲ್ಲ ಈ ಯೋಜನೆಗೆ ಅರ್ಹರಿರುತ್ತಾರೆ ಎಂಬುದರ ಸಂಪೂರ್ಣ ಮಾಹಿತಿಯನ್ನು ಈ ಲೇಖನದಲ್ಲಿ ತಿಳಿದುಕೊಳ್ಳಬಹುದು.

Pradhan Mantri Mudra Yojana
Pradhan Mantri Mudra Yojana

ಪ್ರಧಾನ ಮಂತ್ರಿ ಮುದ್ರಾ ಯೋಜನೆ :

ನಮ್ಮ ದೇಶವನ್ನು ಬೆಳವಣಿಗೆ ಯತ್ತ ಸಾಗಿಸಬೇಕು ಎನ್ನುವ ಉದ್ದೇಶದಿಂದ ಕೇಂದ್ರ ಸರ್ಕಾರವು ಯುವಕ ಯುವತಿಯರಿಗೆ ಹೊಸ ಯೋಜನೆಯನ್ನು ಪರಿಚಯಿಸಿದೆ. ಸಣ್ಣ ಪ್ರಮಾಣದ ವ್ಯವಹಾರಗಳಿಗೆ 10 ಲಕ್ಷ ರೂಪಾಯಿಗಳವರೆಗೆ ಸಾಲ ಸೌಲಭ್ಯವನ್ನು ಯುವಕ ಯುವತಿಯರು ಪ್ರಧಾನ ಮಂತ್ರಿ ಮುದ್ರಾ ಯೋಜನೆಯ ಅಡಿಯಲ್ಲಿ ಪಡೆಯಬಹುದು.

2015ರಲ್ಲಿ ಈ ಯೋಜನೆಯನ್ನು ಕೇಂದ್ರ ಸರ್ಕಾರ ಪ್ರಾರಂಭಿಸಿತು. ಯುವಕರು ಉದ್ಯಮಿಗಳಾಗಲು ಈ ಯೋಜನೆಯ ಸಹಕಾರಿಯಾಗುತ್ತದೆ ಅಷ್ಟೇ ಅಲ್ಲದೆ ಸ್ವಂತ ಉದ್ಯಮವನ್ನು ಪ್ರಾರಂಭಿಸಲು ಬಯಸುವ ಯುವಕರಿಗೆ ಈ ಯೋಜನೆಯು ಬೆಂಬಲ ನೀಡುತ್ತದೆ. ಕೃಷಿಯೇತರ ಉದ್ದೇಶಗಳಿಗೆ ಹಾಗೂ ಕಾರ್ಪೊರೇಟರ್ ಉದ್ದೇಶಗಳಿಗಾಗಿ ಸಾಲಗಳನ್ನು ಈ ಯೋಜನೆಯ ಅಡಿಯಲ್ಲಿ ಪಡೆಯಬಹುದು.

ಅರ್ಜಿ ಸಲ್ಲಿಸಲು ಇರಬೇಕಾದ ಅರ್ಹತೆಗಳು :

ಪ್ರಧಾನ ಮಂತ್ರಿ ಮುದ್ರಾ ಯೋಜನೆಗೆ ಅರ್ಜಿಯನ್ನು ಸಲ್ಲಿಸಬೇಕಾದರೆ ಕೆಲವೊಂದು ಶರತ್ತುಗಳನ್ನು ಅನುಸರಿಸಬೇಕಾಗುತ್ತದೆ ಅವುಗಳೆಂದರೆ ಸಾಲಕ್ಕೆ ಅರ್ಜಿ ಸಲ್ಲಿಸುವ ಅಭ್ಯರ್ಥಿಯು ಭಾರತದ ಪ್ರಜೆಯಾಗಿರಬೇಕು. ಬ್ಯಾಂಕ್ ಡೀಫಾಲ್ಟ್ ಇತಿಹಾಸವನ್ನು ಅರ್ಜಿದಾರರು ಹೊಂದಿರಬಾರದು. ಯಾವುದೇ ರೀತಿಯ ವ್ಯವಹಾರ ಕಾರ್ಪೊರೇಟ್ ಘಟಕದಲ್ಲಿ ಮುದ್ರಾ ಸಾಲವನ್ನು ಪಡೆಯಲು ಸಾಧ್ಯವಾಗುವುದಿಲ್ಲ. 18 ವರ್ಷಕ್ಕಿಂತ ಹೆಚ್ಚಿನ ವಯಸ್ಸನ್ನು ಹೊಂದಿರುವವರು ಈ ಯೋಜನೆಗೆ ಅರ್ಜಿ ಸಲ್ಲಿಸಬಹುದು.

ಇದನ್ನು ಓದಿ : ಉಚಿತ ವಸತಿ ಯೋಜನೆಯಲ್ಲಿ 36,000 ಬಡ ಜನರಿಗೆ ಮನೆ ಹಂಚಿಕೆ !

ಪ್ರಧಾನಮಂತ್ರಿ ಮುದ್ರಾ ಯೋಜನೆಗೆ ಅರ್ಜಿ ಸಲ್ಲಿಸುವ ಪ್ರಕ್ರಿಯೆ :

ಪ್ರಧಾನ ಮಂತ್ರಿ ಮುದ್ರಾ ಯೋಜನೆಗೆ ಅರ್ಜಿಯನ್ನು ಸಲ್ಲಿಸಬೇಕಾದರೆ ಅಭ್ಯರ್ಥಿಗಳು ಮುದ್ರಾ ಯೋಜನೆಯ ಅಧಿಕೃತ ವೆಬ್ಸೈಟ್ ಆದ https://mudra.org.in/ಈ ವೆಬ್ಸೈಟ್ಗೆ ಭೇಟಿ ನೀಡಿ ಯಾವ ಶಾಲೆ ಎಂಬುದನ್ನು ಆಯ್ಕೆ ಮಾಡಿ ಅರ್ಜಿಯನ್ನು ಸಲ್ಲಿಸಬೇಕಾಗುತ್ತದೆ.

ಪ್ರಧಾನಮಂತ್ರಿ ಮುದ್ರಾ ಯೋಜನೆಯ ಸಾಲದ ಆಯ್ಕೆಗಳು :

ಪ್ರಧಾನಮಂತ್ರಿ ಮುದ್ರಾ ಯೋಜನೆಯ ಅಡಿಯಲ್ಲಿ ಮೂರು ರೀತಿಯಲ್ಲಿ ಸಾಲವನ್ನು ಪಡೆಯಬಹುದು ಅವುಗಳೆಂದರೆ ಮಕ್ಕಳ ಸಾಲ ಕಿಶೋರ್ ಸಾಲ ಹಾಗೂ ತರುಣ ಸಾಲ. ಪ್ರಧಾನ ಮಂತ್ರಿ ಮುದ್ರಾ ಯೋಜನೆಯ ಅಡಿಯಲ್ಲಿ 50,000 ದಿಂದ 10 ಲಕ್ಷದವರೆಗೆ ಸಾಲವನ್ನು ಪಡೆಯಬಹುದಾಗಿದೆ.

ಒಟ್ಟಾರೆ ಯುವಕ ಯುವತಿಯರಿಗೆ ಸ್ವಂತ ಉದ್ಯೋಗವನ್ನು ಪ್ರಾರಂಭಿಸುವ ಸಲುವಾಗಿ ಕೇಂದ್ರ ಸರ್ಕಾರವು ಪ್ರಧಾನ ಮಂತ್ರಿ ಮುದ್ರಾ ಯೋಜನೆಯ ಅಡಿಯಲ್ಲಿ 50,000 ದಿಂದ 10 ಲಕ್ಷದವರೆಗೆ ಸಾಲ ಸೌಲಭ್ಯವನ್ನು ನೀಡುತ್ತಿದ್ದು .

ಈ ಮಾಹಿತಿಯನ್ನು ಪ್ರತಿಯೊಬ್ಬರಿಗೂ ಶೇರ್ ಮಾಡುವ ಮೂಲಕ ಅವರ ಏನಾದರೂ ಸಾಲವನ್ನು ಪಡೆಯಲು ಯೋಚಿಸುತ್ತಿದ್ದರೆ ಯಾವುದೇ ಗ್ಯಾರಂಟಿ ಇಲ್ಲದೆ ಪ್ರಧಾನಮಂತ್ರಿ ಮುದ್ರಾ ಯೋಜನೆ ಅಡಿಯಲ್ಲಿ ಸಾಲ ಪಡೆಯಬಹುದು ಎಂದು ತಿಳಿಸಿ ಧನ್ಯವಾದಗಳು.

ಇತರೆ ವಿಷಯಗಳು :

ಯೋಜನೆ ಯಾವುದು ..?

ಪ್ರಧಾನ ಮಂತ್ರಿ ಮುದ್ರಾ ಯೋಜನೆ.

ಯುವಕ ಯುವತಿಯರಿಗೆ ಎಷ್ಟು ಸಾಲ ಸಿಗುತ್ತೆ ..?

10 ಲಕ್ಷ ರೂ.

Spread the love

Leave a Reply

Your email address will not be published. Required fields are marked *