ನಮಸ್ಕಾರ ಸ್ನೇಹಿತರೆ ರಾಜ್ಯ ಸರ್ಕಾರದಿಂದ ಎಲೆಕ್ಷನ್ನು ಮುನ್ನವೇ ರೇಷನ್ ಕಾರ್ಡ್ ವಿಚಾರದಲ್ಲಿ ಶಾಪಿಂಗ್ ವಿಚಾರ ಹೊರಬಂದಿದೆ. ಸರ್ಕಾರಿ ಯೋಜನೆಗಳು ನೇರವಾಗಿ ಬಡತನ ರೇಖೆಗಿಂತ ಕೆಳಗಿರುವ ಜನರಿಗೆ ಸಿಗಲಿ ಎನ್ನುವ ಕಾರಣಕ್ಕಾಗಿ ರಾಜ್ಯ ಸರ್ಕಾರ ಬಿಪಿಎಲ್ ಕಾರ್ಡ್ ಅನ್ನು ನಿರ್ಮಾಣ ಮಾಡಿತ್ತು.
ರಾಜ್ಯ ಸರ್ಕಾರ ಇತ್ತೀಚಿನ ದಿನಗಳಲ್ಲಿ ಘೋಷಣೆ ಮಾಡಿರುವಂತಹ ಕೆಲವೊಂದು ಉಚಿತ ಯೋಜನೆಗಳ ಪ್ರಯೋಜನವನ್ನು ಪಡೆಯುವ ನಿಟ್ಟಿನಲ್ಲಿಯೂ ಕೂಡ ರೇಷನ್ ಕಾರ್ಡ್ ಕೆಲವು ವರ್ಗದ ಜನರಿಗೆ ಹಾಗೂ ಅದರಲ್ಲಿ ವಿಶೇಷವಾಗಿ ಬಿಪಿಎಲ್ ರೇಷನ್ ಕಾರ್ಡ್ ಅಗತ್ಯವಾಗಿದೆ ಎಂದು ಹೇಳಬಹುದು.
ಆರ್ಥಿಕವಾಗಿ ಹಿಂದುಳಿದಿರುವಂತಹ ಕುಟುಂಬಗಳಿಗೆ ಬಿಪಿಎಲ್ ರೇಷನ್ ಕಾರ್ಡ್ ಹಾಗೂ ಅಂತ್ಯೋದಯ ರೇಷನ್ ಕಾರ್ಡ್ ಗಳನ್ನು ನೀಡಲಾಗುತ್ತಿದ್ದು ಹೆಚ್ಚಿನ ಸರಕಾರಿ ಸೇವೆಗಳನ್ನು ಅವುಗಳ ಮೂಲಕ ಸಿಗುತ್ತವೆ ಎನ್ನುವ ಕಾರಣದಿಂದಾಗಿ ಅರ್ಹರಾಗದೇ ಇರುವವರು ಕೂಡ ಈ ರೀತಿಯಾಗಿ ರೇಷನ್ ಕಾರ್ಡ್ಗಳನ್ನು ಮಾಡಿಸಿಕೊಳ್ಳುತ್ತಿರುವುದು ಸರ್ಕಾರದ ಗಮನಕ್ಕೆ ಬಂದಿದೆ.
Contents
ಇಂಥವರ ರೇಷನ್ ಕಾರ್ಡ್ ರದ್ದಾಗುತ್ತದೆ :
ರಾಜ್ಯ ಸರ್ಕಾರವು ರೇಷನ್ ಕಾರ್ಡ್ ರದ್ದು ಮಾಡಲು ಕೆಲವೊಂದು ಅರ್ಹತೆಗಳನ್ನು ನಿಗದಿಪಡಿಸಿದ್ದು ಈ ಅರ್ಹತೆಗಳಿಗೆ ಒಳಗಾಗದೆ ರೇಷನ್ ಕಾರ್ಡ್ ಅನ್ನು ಪಡೆದುಕೊಂಡಿದ್ದರೆ ಅಂತವರ ರೇಷನ್ ಕಾರ್ಡ್ ಅನ್ನು ರದ್ದು ಮಾಡಲಾಗುತ್ತದೆ.
- ಆಸ್ತಿ ಹಾಗೂ ಹೆಚ್ಚು ಜಮೀನನ್ನು ಹೊಂದಿರುವಂತಹ ವ್ಯಕ್ತಿಗಳು ಬಿಪಿಓ ರೇಷನ್ ಕಾರ್ಡ್ ಅನ್ನು ಒಂದು ವೇಳೆ ಮಾಡಿಸಿಕೊಂಡಿದ್ದಾರೆ ಅಂತವರ ರೇಷನ್ ಕಾರ್ಡನ್ನು ರದ್ದು ಮಾಡುವುದು ಖಚಿತ. ಕೆಲವೊಂದು ನಿಯಮಗಳನ್ನು ರೇಷನ್ ಕಾರ್ಡ್ ಅನ್ನು ಪಡೆದುಕೊಳ್ಳಲು ಸರ್ಕಾರ ನಿಗದಿಪಡಿಸಿದ್ದು ಅಂತಹ ನಿಯಮಗಳ ಅಡಿಯಲ್ಲಿ ಆ ವ್ಯಕ್ತಿಯಿಂದದಿದ್ದರೆ ಖಂಡಿತವಾಗಿಯೂ ಅಂಥವರ ರೇಷನ್ ಕಾರ್ಡ್ ಅನ್ನು ಕ್ಯಾನ್ಸಲ್ ಮಾಡಲಾಗುತ್ತದೆ.
- ಕೇವಲ ಒಂದು ರೇಷನ್ ಕಾರ್ಡನ್ನು ಒಂದು ಮನೆಯಲ್ಲಿ ಹೊಂದಿರಬೇಕು ಅದಕ್ಕಿಂತ ಹೆಚ್ಚಾಗಿ ರೇಷನ್ ಕಾರ್ಡ್ ಅನ್ನು ಪಡೆದುಕೊಂಡಿದ್ದರೆ ಅಂತಹ ರೇಷನ್ ಕಾರ್ಡ್ ಗಳನ್ನು ರದ್ದುಗೊಳಿಸಲಾಗುತ್ತದೆ ಎನ್ನುವುದನ್ನು ಪ್ರತಿಯೊಬ್ಬರು ಕೂಡ ನೆನಪಿನಲ್ಲಿಟ್ಟುಕೊಳ್ಳಬೇಕು.
- ಕಳೆದ ಆರು ತಿಂಗಳಿನಿಂದ ರೇಷನ್ ಕಾರ್ಡ್ ನಿಂದ ಪಡಿತರವನ್ನು ಪಡೆದುಕೊಳ್ಳದೆ ಇದ್ದರೆ ಇದನ್ನು ಸರಿಯಾದ ರೀತಿಯಲ್ಲಿ ಆಹಾರ ಇಲಾಖೆಯ ಮೂಲಕ ಪರಿಶೀಲಿಸಿದ ನಂತರ ಸರ್ಕಾರಿ ಕೆಲಸಗಳಿಗೆ ಮಾತ್ರ ಅಂತಹ ರೇಷನ್ ಕಾರ್ಡ್ಗಳನ್ನು ಉಪಯೋಗಿಸುತ್ತಿದ್ದರೆ ಆ ರೇಷನ್ ಕಾರ್ಡ್ ಗಳನ್ನು ರಾಜ್ಯ ಸರ್ಕಾರ ರದ್ದು ಪಡಿಸುತ್ತದೆ.
- ಒಂದು ವೇಳೆ ಸರ್ಕಾರಿ ನೌಕರರು ಬಿಪಿಎಲ್ ರೇಷನ್ ಕಾರ್ಡನ್ನು ಪಡೆದುಕೊಂಡಿದ್ದರೆ ಅಂತಹ ರೇಷನ್ ಕಾರ್ಡ್ಗಳನ್ನು ಕೂಡ ಸರ್ಕಾರ ರದ್ದುಪಡಿಸುತ್ತದೆ.
- ನಿರ್ದಿಷ್ಟ ವಾರ್ಷಿಕ ಆದಾಯ ಮಿತಿಗಿಂತ ಹೆಚ್ಚಿನ ಆದಾಯವನ್ನು ಆ ವ್ಯಕ್ತಿ ವಾರ್ಷಿಕವಾಗಿ ಹೊಂದಿದ್ದರೆ ಅಥವಾ ಅದನ್ನು ಕುಟುಂಬ ಹೊಂದಿದ್ದರೆ ಅಂತಹ ರೇಷನ್ ಕಾರ್ಡ್ಗಳನ್ನು ಕೂಡ ರದ್ದು ಮಾಡಲಾಗುತ್ತದೆ.
ಇದನ್ನು ಓದಿ : ಹೆಣ್ಣು ಮಕ್ಕಳಿಗೆ ಭರ್ಜರಿ ಸುದ್ದಿ.!! ಈ ಯೋಜನೆಯಡಿ ನಿಮ್ಮದಾಗಲಿದೆ 50,000 ರೂ. ಇಂದೇ ಅಪ್ಲೈ ಮಾಡಿ
ನಿಮ್ಮ ರೇಷನ್ ಕಾರ್ಡ್ ಸ್ಥಿತಿ ಚೆಕ್ ಮಾಡಿಕೊಳ್ಳಿ :
ಒಂದು ವೇಳೆ ನೀವೇನಾದರೂ ನಿಮ್ಮ ರೇಷನ್ ಕಾರ್ಡ್ ಸ್ಥಿತಿ ರದ್ದಾಗಿದೆ ಇಲ್ಲವೇ ಎಂಬುದನ್ನು ತಿಳಿದುಕೊಳ್ಳಲು ಬಯಸುತ್ತಿದ್ದರೆ ಮೊದಲು ಆಹಾರ ಇಲಾಖೆ ಅಧಿಕೃತ ವೆಬ್ಸೈಟ್ ಗೆ ಭೇಟಿ ನೀಡಬೇಕು ಅದರಲ್ಲಿ ನೀವು ನಿಮ್ಮ ಸಂಪೂರ್ಣ ವಿವರಗಳನ್ನು ಅಂದರೆ ಜಿಲ್ಲೆ ಗ್ರಾಮ ಹಾಗೂ ರೇಷನ್ ಕಾರ್ಡ್ ನಂಬರ್ ಅಲ್ಲಿ ನಮೂದಿಸಿ ನಂತರ ಸಬ್ಮಿಟ್ ಎಂಬ ಬಟನ್ ಮೇಲೆ ಕ್ಲಿಕ್ ಮಾಡಬೇಕು.
ಅದಾದ ನಂತರ ನಿಮಗೆ ರದ್ದಾಗಿರುವವರ ಪಟ್ಟಿಯಲ್ಲಿ ನಿಮ್ಮ ಹೆಸರು ಇದೆಯೇ ಇಲ್ಲವೇ ಎಂಬುದನ್ನು ತಿಳಿದುಕೊಳ್ಳಬೇಕು ಒಂದುವೇಳೆ ರದ್ದಾಗಿರುವ ಪಟ್ಟಿಯಲ್ಲಿ ನಿಮ್ಮ ಹೆಸರು ಇದ್ದರೆ ಖಂಡಿತವಾಗಿಯೂ ನಿಮ್ಮ ರೇಷನ್ ಕಾರ್ಡ್ ರದ್ದಾಗಿದೆ ಎಂದರ್ಥ.
ಹೊಸ ರೇಷನ್ ಕಾರ್ಡ್ ಗೆ ಅರ್ಜಿ :
ರಾಜ್ಯದಲ್ಲಿ ಈಗಾಗಲೇ ಹೊಸ ರೇಷನ್ ಕಾರ್ಡಿಗೆ ಅರ್ಜಿ ಸಲ್ಲಿಸುವವರ ಸಂಖ್ಯೆ ದಿನೇ ದಿನೇ ಗಣನೀಯವಾಗಿ ಹೆಚ್ಚಾಗುತ್ತಿದೆ.
ಈಗಾಗಲೇ ಅರ್ಜಿ ಸಲ್ಲಿಕೆ ಮಾಡಿರುವಂತಹ ರೇಷನ್ ಕಾರ್ಡ್ಗಳನ್ನು ಆಹಾರ ಹಾಗೂ ನಾಗರಿಕ ಸರಬರಾಜು ಇಲಾಖೆಯ ಸಚಿವರಾಗಿರುವ ಕೆಎಚ್ ಮುನಿಯಪ್ಪ ರವರು ಸಂಬಂಧಪಟ್ಟವರಿಗೆ ನೀಡುವಂತಹ ಅಂದರೆ ವಿಲೇವಾರಿ ಮಾಡುವಂತಹ ಕಾರ್ಯವನ್ನು ಮಾಡಲಾಗುತ್ತಿದೆ ಹಾಗೂ ಏಪ್ರಿಲ್ ನಿಂದ ಹೊಸ ರೇಷನ್ ಕಾರ್ಡ್ ಗಳಿಗೆ ಅರ್ಜಿ ಸಲ್ಲಿಸಲು ಅವಕಾಶವನ್ನು ಕೂಡ ನೀಡಲಾಗುತ್ತದೆ ಎನ್ನುವಂತಹ ಮಾಹಿತಿಯನ್ನು ರಾಜ್ಯದ ಜನತೆಗೆ ನೀಡಿದ್ದಾರೆ.
ಒಟ್ಟಾರೆ ರೇಷನ್ ಕಾರ್ಡ್ ಗೆ ಸಂಬಂಧಿಸಿದಂತೆ ರಾಜ್ಯದಲ್ಲಿ ಹೊಸ ಅಪ್ಡೇಟ್ ಹೊರಬಿದ್ದಿದ್ದು ಮುಲಾಜಿ ಇಲ್ಲದೆ ರಾಜ್ಯ ಸರ್ಕಾರವು ಅನರ್ಹರ ರೇಷನ್ ಕಾರ್ಡ್ಗಳನ್ನು ರದ್ದುಪಡಿಸಲು ನಿರ್ಧರಿಸಿದೆ ಹಾಗಾಗಿ ಈ ಬಗ್ಗೆ ಪ್ರತಿಯೊಬ್ಬರಿಗೂ ಶೇರ್ ಮಾಡುವ ಮೂಲಕ ಅವರೇನಾದರೂ ಅಕ್ರಮವಾಗಿ ರೇಷನ್ ಕಾರ್ಡ್ ಗಳನ್ನು ಹೊಂದಿದ್ದರೆ ಅವರ ರೇಷನ್ ಕಾರ್ಡ್ ಗಳು ರದ್ದಾಗುತ್ತವೆ ಎಂಬ ಮಾಹಿತಿಯನ್ನು ತಿಳಿಸಿ ಧನ್ಯವಾದಗಳು.