ನಮಸ್ಕಾರ ಸ್ನೇಹಿತರೇ ಸರ್ಕಾರವು ಇದೀಗ ಕುಟುಂಬ ಬಂಧುಗಳನ್ನು ಬಲಪಡಿಸುವ ಗುರಿಯನ್ನು ಹಾಗೂ ಮದುವೆಯನ್ನು ತೇಜಿಸುವ ಗುರಿಯನ್ನು ಹೊಂದಿದ್ದು ಅದರಲ್ಲಿ ಇದೀಗ ಒಂದು ಅದ್ಭುತ ಕ್ರಮದಲ್ಲಿ 50,000ಗಳ ಉದಾರ ಪ್ರೋತ್ಸಾಹ ಧನವನ್ನು ಗಂಟು ಕಟ್ಟುವ ಜೋಡಿಗಳಿಗೆ ನೀಡುವ ಹೊಸ ಉಪಕ್ರಮವನ್ನು ಸರ್ಕಾರ ಜಾರಿಗೊಳಿಸಿದೆ.
ಕುಟುಂಬಗಳನ್ನು ಬೆಂಬಲಿಸುವ ಮತ್ತು ದೀರ್ಘಕಾಲಿನ ಸಂಬಂಧಗಳನ್ನು ಉತ್ತೇಜಿಸುವ ಪ್ರಯತ್ನ ಈ ಅದ್ಭುತ ಪೂರ್ವ ಕಾರ್ಯಕ್ರಮದ್ದಾಗಿದೆ. ಕೆಲವು ಷರತ್ತುಗಳನ್ನು ಈ ಆಕರ್ಷಕ ಕೊಡುಗೆಗೆ ಅರ್ಹತೆ ಪಡೆಯಬೇಕಾದರೆ ಪೂರೈಸಬೇಕಾಗುತ್ತದೆ.
Contents
ಮದುವೆ ಪ್ರೋತ್ಸಾಹ ಕಾರ್ಯಕ್ರಮ :
ಮದುವೆಯಾಗಲು ನಿರ್ಧರಿಸಿರುವ ಅರ್ಹದಂಪತಿಗಳು ಹೊಸದಾಗಿ ಘೋಷಣೆ ಮಾಡಲಾಗಿರುವ ಮದುವೆ ಪ್ರೋತ್ಸಾಹ ಕಾರ್ಯಕ್ರಮದ ಅಡಿಯಲ್ಲಿ 50,000 ಮೊತ್ತವನ್ನು ಸರ್ಕಾರದಿಂದ ಪಡೆಯುತ್ತಾರೆ. ಈ ಹಣಕಾಸಿನ ಬೆಂಬಲ ಮದುವೆ ಮತ್ತು ಕುಟುಂಬವನ್ನು ಪ್ರಾರಂಭಿಸುವುದರ ಜೊತೆಗೆ ಕೆಲವು ಆರ್ಥಿಕ ಹೊರೆಗಳನ್ನು ನಿವಾರಿಸುವ ಉದ್ದೇಶವನ್ನು ಈ ಕಾರ್ಯಕ್ರಮ ಹೊಂದಿದೆ.
ಜನರಿಗಾಗಿ ವಿವಿಧ ಕಲ್ಯಾಣ ಯೋಜನೆಗಳನ್ನು ನಮ್ಮ ರಾಜ್ಯದಲ್ಲಿ ಇದೀಗ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಪರಿಚಯಿಸುತ್ತಿದ್ದಾರೆ ಅದರಂತೆ ರೈತರಿಗಾಗಿ ಆರೋಗ್ಯ ಯೋಜನೆ ಸ್ವಂತ ಉದ್ಯೋಗಕ್ಕಾಗಿ ಯೋಜನೆ ಹೀಗೆ ಸಾಕಷ್ಟು ವರ್ಗದವರಿಗೆ ಸಹಾಯವಾಗಲು ರಾಜ್ಯ ಸರ್ಕಾರ ಹೊಸ ಹೊಸ ಯೋಜನೆಗಳನ್ನು ಜಾರಿಗೆ ತರುತ್ತಿದ್ದು ಇದೀಗ ಆರ್ಥಿಕವಾಗಿ ಹಿಂದುಳಿದವರಿಗೆ ಮದುವೆಯ ಕನಸಿಗೆ ಸಹಾಯವಾಗಲು ಸರ್ಕಾರ ವಿಶೇಷ ಯೋಜನೆಯನ್ನು ಪರಿಚಯಿಸಿದೆ.
ಇದನ್ನು ಓದಿ : ರೈತರ ಸಾಲ ಮನ್ನಾ : ಸರ್ಕಾರದಿಂದ 50,000 ರೈತರ ಸಾಲ ಮನ್ನಾ
ಸರ್ಕಾರದಿಂದ 50,000 ಸಿಗಲಿದೆ :
ಇದೀಗ ಸರಳ ವಿವಾಹ ಯೋಜನೆಯು ಬಡ ಹಾಗೂ ಹಿಂದುಳಿದ ವರ್ಗದ ವಿವಾಹದ ಕನಸಿಗಾಗಿ ಜಾರಿಯಾಗಿದ್ದು ಈ ಯೋಜನೆ ಆರ್ಥಿಕವಾಗಿ ಹಿಂದುಳಿದವರಿಗೆ ಹೆಚ್ಚು ಸಹಾಯಕವಾಗಲಿದೆ.
ಮುಖ್ಯಮಂತ್ರಿ ಸಿದ್ದರಾಮಯ್ಯನವರು ಈ ಸರಳ ವಿವಾಹ ಯೋಜನೆಗಾಗಿ ಸಾಮೂಹಿಕ ವಿವಾಹಗಳ ಟ್ರಸ್ಟ್ ಗಳ ಜೊತೆಗೆ ಕೈಜೋಡಿಸಿದ್ದು ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ದಂಪತಿಗಳಿಗೆ ಸರಳ ವಿವಾಹ ಯೋಜನೆಯ ಅಡಿಯಲ್ಲಿ ಅವರ ಬ್ಯಾಂಕ್ ಖಾತೆಗೆ 50,000ಗಳ ಹಣವನ್ನು ಡಿಬಿಟಿ ಮೂಲಕ ನೇರವಾಗಿ ವರ್ಗಾವಣೆ ಮಾಡಲಾಗುತ್ತದೆ.
ಸರಳ ವಿವಾಹ ಯೋಜನೆಯ ಶರತ್ತುಗಳು :
ಸರ್ಕಾರವು ಜಾರಿಗೆ ತಂದಿರುವ ಈ ಸರಳ ವಿವಾಹ ಯೋಜನೆಗೆ ಸಂಬಂಧಿಸಿ ದಂತೆ ಸಾಮೂಹಿಕ ವಿವಾಹವಾಗುತ್ತಿರುವವರು ಸಂಘ ಸಂಸ್ಥೆಗಳ ಜಿಲ್ಲಾ ನೋಂದಣಿ ಕಚೇರಿಗಳಲ್ಲಿ ಸಾಮೂಹಿಕ ನಡೆಸುವುದಾಗಿ ತಮ್ಮ ಹೆಸರನ್ನು ನೋಂದಾಯಿಸಿಕೊಳ್ಳಬೇಕಾಗುತ್ತದೆ.
ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡದವರು ಈ ಯೋಜನೆಯ ಲಾಭವನ್ನು ಪಡೆಯಬಹುದು. ಮದುವೆಯಾಗುವಂತಹ ದಂಪತಿಗಳು ಕರ್ನಾಟಕದವರಾಗಿರಬೇಕು. ಸಾಮೂಹಿಕ ವಿವಾಹದಲ್ಲಿ ಕನಿಷ್ಠ 10 ಜೋಡಿ ಮದುವೆಯಾಗಿರಬೇಕು.
ಸಾಮೂಹಿಕ ವಿವಾಹವಾಗುವ ಸಂದರ್ಭದಲ್ಲಿ ಹುಡುಗನಿಗೆ ಕನಿಷ್ಠ 21 ವರ್ಷ ಹಾಗೂ ಹುಡುಗಿಗೆ 18 ವರ್ಷ ತುಂಬಿರಬೇಕು. ಕುಟುಂಬದ ವಾರ್ಷಿಕ ಆದಾಯವು 2 ಲಕ್ಷಕ್ಕಿಂತ ಕಡಿಮೆ ಇರಬೇಕು.
ಈ ಯೋಜನೆಯ ಪ್ರಯೋಜನ ಕೇವಲ ಮೊದಲನೇ ಮದುವೆಯಾಗುವ ಜೋಡಿಗೆ ಮಾತ್ರ ಲಭ್ಯವಿದ್ದು ಎರಡು ಅಥವಾ ಮೂರು ಮದುವೆ ಆಗುವವರಿಗೆ ಈ ಪ್ರಯೋಜನ ಲಭ್ಯವಿರುವುದಿಲ್ಲ.
ಒಟ್ಟಾರೆ ರಾಜ್ಯ ಸರ್ಕಾರವು ಕೌಟುಂಬಿಕ ಜೀವನವನ್ನು ನಡೆಸಲು ಆರ್ಥಿಕ ನೆರವು ನೀಡುವ ಉದ್ದೇಶದಿಂದ ಸಾಮೂಹಿಕ ವಿವಾಹವಾಗುವ ಜೋಡಿಗಳಿಗೆ ಉಚಿತವಾಗಿ 50 ಸಾವಿರ ರೂಪಾಯಿಗಳನ್ನು ಸರ್ಕಾರದಿಂದ ನೀಡಲಾಗುತ್ತಿದ್ದು.
ಈ ಬಗ್ಗೆ ಪ್ರತಿಯೊಬ್ಬರಿಗೂ ಶೇರ್ ಮಾಡುವ ಮೂಲಕ ಅವರೇನಾದರೂ ಮೊದಲ ಬಾರಿ ವಿವಾಹವಾಗುತ್ತಿದ್ದರೆ ಅದರಲ್ಲಿಯೂ ಸರಳ ವಿವಾಹ ಯೋಜನೆಯ ಅಡಿಯಲ್ಲಿ 50,000 ಸಾಮೂಹಿಕ ವಿವಾಹ ಸಂದರ್ಭದಲ್ಲಿ ಲಭ್ಯವಿದೆ ಎಂದು ತಿಳಿಸಿ ಧನ್ಯವಾದಗಳು.