ಹಲೋ ಸ್ನೇಹಿತರೇ, ಪ್ರಧಾನ ಮಂತ್ರಿ ನರೇಂದ್ರ ಮೋದಿಜಿ ಅವರ ಅಧಿಕಾರ ಅವಧಿಯಲ್ಲಿ ಇಲ್ಲಿಯವರೆಗೆ ಸಾಕಷ್ಟು ಉತ್ತಮ ಯೋಜನೆಗಳು ಜಾರಿಗೆ ಬಂದಿವೆ, ಅದರಲ್ಲೂ ಹೆಣ್ಣು ಮಕ್ಕಳಿಗಾಗಿಯೇ ವಿಶೇಷ ಯೋಜನೆ ಒಂದನ್ನು ಜಾರಿಗೆ ತಂದಿದ್ದು, ಈ ಯೋಜನೆಯ ಮುಖಾಂತರ ಹೆಣ್ಣುಮಕ್ಕಳು ಸುಲಭವಾಗಿ ಮನೆಯಲ್ಲಿ ಅಡುಗೆ ಮಾಡುವಂತೆ ಆಗಿದೆ. ಇದರ ಕುರಿತಾದ ಸಂಪೂರ್ಣ ಮಾಹಿತಿಗಾಗಿ ಈ ಲೇಖನವನ್ನು ಕೊನೆವರೆಗೂ ಓದಿ..
ಹೌದು, ನಾವು ಮಾತನಾಡುತ್ತಿರುವುದು ಪ್ರಧಾನಮಂತ್ರಿ ಉಜ್ವಲ ಯೋಜನೆ ಬಗ್ಗೆ ದೇಶಾದ್ಯಂತ ಲಕ್ಷಾಂತರ ಜನ ಪ್ರಧಾನಮಂತ್ರಿ ಉಜ್ವಲ ಯೋಜನೆಯ ಅಡಿಯಲ್ಲಿ ಉಚಿತ ಗ್ಯಾಸ್ ಕನೆಕ್ಷನ್ ಪಡೆದುಕೊಂಡಿರುವುದು ಮಾತ್ರವಲ್ಲದೆ ಅತಿ ಕಡಿಮೆ ಬೆಲೆ ಗ್ಯಾಸ್ ಸಿಲೆಂಡರ್ ಖರೀದಿ ಮಾಡಬಹುದು.
ಅದರಲ್ಲೂ ಇತ್ತೀಚಿನ ದಿನಗಳಲ್ಲಿ ಎರಡು ಗ್ಯಾಸ್ ಸಿಲಿಂಡರ್ ಉಚಿತವಾಗಿ ನೀಡಲು ಸರ್ಕಾರ ನಿರ್ಧರಿಸಿದ್ದು ಪ್ರತಿ ಗ್ಯಾಸ್ ಸಿಲೆಂಡರ್ ಗೆ 300 ರೂಪಾಯಿಗಳಂತೆ ವಾರ್ಷಿಕ 12 ಗ್ಯಾಸ್ ಸಿಲಿಂಡರ್ ಸಬ್ಸಿಡಿ ದರದಲ್ಲಿ ಪಡೆದುಕೊಳ್ಳಬಹುದು. ಅಂದರೆ ಕೇವಲ 603 ರೂಪಾಯಿಗಳಿಗೆ ಹೆಣ್ಣುಮಕ್ಕಳು ಇಂದು ಗ್ಯಾಸ್ ಸಿಲೆಂಡರ್ ಖರೀದಿ ಮಾಡಬಹುದಾಗಿದೆ.
Contents
ಯಾರಿಗೆ ಸಿಗುತ್ತೆ ಉಚಿತ ಗ್ಯಾಸ್ ಸಿಲಿಂಡರ್:
ಪ್ರಧಾನ ಮಂತ್ರಿ ಉಜ್ವಲ ಯೋಜನೆಯನ್ನು 2016ರಲ್ಲಿ ಆರಂಭಿಸಲಾಯಿತು. ಅಲ್ಲಿಂದ ಇಲ್ಲಿವರೆಗೆ ಸಾಕಷ್ಟು ಮಹಿಳೆಯರು ಕಟ್ಟಿಗೆ ಒಲೆ ಉರಿಸುವ ತಾಪತ್ರಯದಿಂದ ಮುಕ್ತರಾಗಿದ್ದಾರೆ ಎನ್ನಬಹುದು. ಯಾರು ಬಡತನ ರೇಖೆಗಿಂತ ಕೆಳಗಿರುತ್ತಾರೋ, ಯಾರ ಬಳಿ ಬಿಪಿಎಲ್ ರೇಷನ್ ಕಾರ್ಡ್ ಇರುತ್ತದೆಯೋ ಅಂತವರು ಉಜ್ವಲ ಯೋಜನೆಯ ಅಡಿಯಲ್ಲಿ ಉಚಿತ ಗ್ಯಾಸ್ ಸಿಲಿಂಡರ್ ಪಡೆದುಕೊಳ್ಳಬಹುದು.
18 ವರ್ಷ ಮೀರಿದ ಮಹಿಳೆಯರಿಗೆ ಈ ಸೌಲಭ್ಯ ಸಿಗುತ್ತದೆ. ಹಾಗೂ ಕುಟುಂಬದ ಸದಸ್ಯರಲ್ಲಿ ಮಹಿಳಾ ಸದಸ್ಯರ ಹೆಸರಿಗೆ ಮಾತ್ರ ಉಜ್ವಲ ಯೋಜನೆಯ ಉಚಿತ ಗ್ಯಾಸ್ ಕನೆಕ್ಷನ್ ಕೊಡಲಾಗುವುದು. ಇನ್ನು ಆದಾಯದ ವಿಚಾರಕ್ಕೆ ಬಂದರೆ ನಗರ ಪ್ರದೇಶಗಳಲ್ಲಿ ವಾರ್ಷಿಕ 2 ಲಕ್ಷ ರೂಪಾಯಿ ಹಾಗೂ ಗ್ರಾಮೀಣ ಪ್ರದೇಶದಲ್ಲಿ ವಾರ್ಷಿಕ ಒಂದು ಲಕ್ಷ ರೂಪಾಯಿಗಳಿಗಿಂತ ಕಡಿಮೆ ಆದಾಯ ಹೊಂದಿರುವವರು ಉಜ್ವಲ ಯೋಜನೆಯ ಪ್ರಯೋಜನ ಪಡೆದುಕೊಳ್ಳಲು ಅರ್ಹರು.
ಈಗ ಎಲ್ಲಾ ಉದ್ಯೋಗಿಗಳು ಹಳೆಯ ಪಿಂಚಣಿ ಯೋಜನೆಯಡಿ ₹30000 ಲಾಭ!
ಅರ್ಜಿ ಸಲ್ಲಿಸಲು ಈ ದಾಖಲೆಗಳು ಬೇಕು:
ಉಜ್ವಲ ಯೋಜನೆಯ ಪ್ರಯೋಜನ ಪಡೆದುಕೊಳ್ಳುವುದಕ್ಕೆ ಸರ್ಕಾರ ಈಗಾಗಲೇ ತಿಳಿಸಿರುವಂತೆ ಆಧಾರ್ ಕಾರ್ಡ್ ಅಪ್ಡೇಟ್ ಆಗಿರಬೇಕು, ಗ್ಯಾಸ್ ಕಾರ್ಡ್ ಆಧಾರ್ ಲಿಂಕ್ ಆಗಿರಬೇಕು. ಇದನ್ನು ನೀವು ಎಲ್ಲಿ ಗ್ಯಾಸ್ ಕನೆಕ್ಷನ್ ಪಡೆದುಕೊಂಡಿರುತ್ತೀರೋ ಅದೇ ಗ್ಯಾಸ್ ಏಜೆನ್ಸಿಗೆ ಹೋಗಿ ಲಿಂಕ್ ಮಾಡಿಸಿಕೊಳ್ಳಬೇಕು.
ಇನ್ನು ಹೊಸದಾಗಿ ಅರ್ಜಿ ಹಾಕುವವರು ಆಧಾರ್ ಕಾರ್ಡ್, ವಿಳಾಸದ ಪುರಾವೆ, ಜಾತಿ ಪ್ರಮಾಣ ಪತ್ರ, ಆದಾಯ ಪ್ರಮಾಣ ಪತ್ರ, ಬಿಪಿಎಲ್ ರೇಷನ್ ಕಾರ್ಡ್, ಪಾಸ್ ಪೋರ್ಟ್ ಅಳತೆಯ ಫೋಟೋ ಮೊದಲಾದ ದಾಖಲೆಗಳನ್ನು ಹೊಂದಿರುವುದು ಕಡ್ಡಾಯ.
ಅರ್ಜಿ ಸಲ್ಲಿಸುವುದು ಹೇಗೆ?
ಪ್ರಧಾನ ಮಂತ್ರಿ ಉಜ್ವಲ ಯೋಜನೆಯ ಅಡಿಯಲ್ಲಿ ಹೆಣ್ಣು ಮಕ್ಕಳು ಉಚಿತವಾಗಿ ಗ್ಯಾಸ್ ಕನೆಕ್ಷನ್ ಪಡೆದುಕೊಳ್ಳಲು ಉಜ್ವಲ ಯೋಜನೆಯ ಅಧಿಕೃತ ವೆಬ್ಸೈಟ್ https://www.pmuy.gov.in/index.aspx ಮೇಲೆ ಕ್ಲಿಕ್ ಮಾಡಿ.
ಈಗ ನೀವು ಯಾವ ಗ್ಯಾಸ್ ಏಜೆನ್ಸಿ ಆಯ್ದುಕೊಳ್ಳುತ್ತೀರಿ ಎಂಬುದು ಮುಖ್ಯ. HP, Inden ಅಥವಾ Bharat Gas ಮೂರು ಏಜೆನ್ಸಿಗಳ ಆಯ್ಕೆ ಇರುತ್ತದೆ. ಯಾವ ಏಜೆನ್ಸಿ ನಿಮ್ಮ ಹತ್ತಿರದಲ್ಲಿ ಇದೆಯೋ ಅದರ ಆಧಾರದ ಮೇಲೆ ಇಲ್ಲಿ ಗ್ಯಾಸ್ ಏಜೆನ್ಸಿ ಆಯ್ದುಕೊಳ್ಳಿ. ನಂತರ ನೇರವಾಗಿ ಅದೇ ಗ್ಯಾಸ್ ಏಜೆನ್ಸಿ ವೆಬ್ಸೈಟ್ ತೆರೆದುಕೊಳ್ಳುತ್ತದೆ, ನಂತರ ಸೂಕ್ತ ಮಾಹಿತಿ ಮತ್ತು ಅಗತ್ಯ ಇರುವ ದಾಖಲೆಗಳ ಸ್ಕ್ಯಾನ್ ಕಾಪಿ ಅಪ್ಲೋಡ್ ಮಾಡಿದ್ರೆ ನಿಮ್ಮ ಅರ್ಜಿ ಸಲ್ಲಿಕೆ ಆಗುತ್ತದೆ.
ಈಗಾಗಲೇ ಗ್ಯಾಸ್ ಕನೆಕ್ಷನ್ ಹೊಂದಿದ್ದವರಿಗೆ ಉಜ್ವಲ ಯೋಜನೆಯ ಅಡಿಯಲ್ಲಿ ಉಚಿತ ಗ್ಯಾಸ್ ಕನೆಕ್ಷನ್ ಸಿಗುವುದಿಲ್ಲ ಎಂಬುದನ್ನು ನೆನಪಿಡಿ. ಒಟ್ಟಿನಲ್ಲಿ ಮಹಿಳೆಯರು 300 ರೂಪಾಯಿಗಳ ಸಬ್ಸಿಡಿ ಜೊತೆಗೆ ಕೇವಲ 603 ರೂಪಾಯಿಗಳಿಗೆ ಪ್ರತಿ ತಿಂಗಳು ಗ್ಯಾಸ್ ಸಿಲಿಂಡರ್ ಪಡೆದುಕೊಳ್ಳಬಹುದಾಗಿದೆ.
ಇತರೆ ವಿಷಯಗಳು:
ಹೊಸ ಬಿಪಿಎಲ್ ಕಾರ್ಡ್ ಪಡೆಯುವ ಸುಲಭ ಮಾರ್ಗ.! ಇಲ್ಲಿಂದಲೇ ಫಾರ್ಮ್ ಭರ್ತಿ ಮಾಡಲು ಲಿಂಕ್
PM ಕಿಸಾನ್ 17 ನೇ ಕಂತಿಗೆ ಸಂಬಂಧಿಸಿದಂತೆ ದೊಡ್ಡ ಅಪ್‌ಡೇಟ್! ಇಲ್ಲಿದೆ ಸಂಪೂರ್ಣ ಮಾಹಿತಿ