ಹಲೋ ಸ್ನೇಹಿತರೇ, ಗೃಹಲಕ್ಷ್ಮಿ ಯೋಜನೆಯ ಜಾರಿಗೆ ಬಂದು ಆಗಲೇ 8 ತಿಂಗಳು ಕಳೆದಿದೆ. ಇಲ್ಲಿಯವರೆಗೆ ಮಹಿಳೆಯರಿಗೆ ಒಟ್ಟು 16,000 ಖಾತೆಗೆ ಜಮಾ ಆಗಿದೆ, ಅರ್ಜಿ ಸಲ್ಲಿಸಿದ ಕೋಟ್ಯಾಂತರ ಮಹಿಳೆಯರಲ್ಲಿ ಬಹುತೇಕ 9% ನಷ್ಟು ಮಹಿಳೆಯರ ಖಾತೆಗೆ ಹಣ ಬಂದಿದೆ ಎಂದು ಸರ್ಕಾರ ವರದಿ ಮಾಡಿದೆ.
ಪ್ರತಿ ತಿಂಗಳು 25 ರಿಂದ 30ನೇ ತಾರೀಖಿನ ಒಳಗೆ ಗೃಹಲಕ್ಷ್ಮಿ ಹಣ ಹಣ ಬಿಡುಗಡೆ ಮಾಡಲಾಗುತ್ತದೆ. ಆದ್ರೆ ಈ ಬಾರಿ 9ನೇ ಕಂತಿನ ಹಣವನ್ನು ಕೂಡ ಬಹಳ ಬೇಗ ಬಿಡುಗಡೆಯನ್ನು ಮಾಡುವ ಸಾಧ್ಯತೆ ಹೆಚ್ಚಾಗಿಯೇ ಇದೆ.
ಹೌದು, ಗೃಹಲಕ್ಷ್ಮಿಯ ಯೋಜನೆಯ 9ನೇ ಕಂತಿನ ಹಣವು ಮೇ ತಿಂಗಳ ಮೊದಲ ವಾರದಲ್ಲಿಯೇ ಬಿಡುಗಡೆಯಾಗಲಿದೆ ಎಂದು ತಿಳಿಸಿದ್ದಾರೆ. ಹಂತ ಹಂತವಾಗಿ ಕೆಲವು ಜಿಲ್ಲೆಗಳಿಗೆ ಬಿಡುಗಡೆ ಮಾಡಲಾಗುವುದು. ಮತ್ತು ಮೇ ತಿಂಗಳ ಎರಡನೇ ವಾರದ ಹೊತ್ತಿಗೆ ಪ್ರತಿಯೊಂದು ಜಿಲ್ಲೆಗೂ ಹಣವು ವರ್ಗಾವಣೆ ಆಗುತ್ತದೆ ಎಂದು ಮಾಹಿತಿಯು ಈಗಾಗಲೇ ಲಭ್ಯವಾಗಿದೆ.
ದೇಶಾದ್ಯಂತ ಲೋಕಸಭಾ ಚುನಾವಣೆ ನಡೆಯುತ್ತಿದೆ ಈ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರವು ತನ್ನ ಗ್ಯಾರಂಟಿ ಯೋಜನೆಯ ಮುಂದುವರಿಸುತ್ತದೆಯೋ ಇಲ್ಲವೋ ಎನ್ನುವ ಅನುಮಾನ ಕೂಡ ಸಾಕಷ್ಟು ಜನರಲ್ಲಿ ಈಗಾಗಲೇ ಇರಬಹುದು.
ಆದ್ರೆ ಸರ್ಕಾರವು ನೀಡಿರುವ ಮಾಹಿತಿಯ ಪ್ರಕಾರ ಗೃಹಲಕ್ಷ್ಮಿ ಯೋಜನೆಯನ್ನು ಇನ್ನೂ ಮುಂದುವರೆಯಲಿದೆ ಹಾಗೂ ಒಂಬತ್ತನೇ ಕಂತಿನ ಹಣವನ್ನು ಅಂದ್ರೆ ಮೇ ತಿಂಗಳ ಹಣ ಸದ್ಯದಲ್ಲಿಯೇ ಬಿಡುಗಡೆ ಆಗಲಿದೆ.
ಮಹಿಳೆಯರಿಗೆ ಬಂಪರ್ ಅವಕಾಶ! ಉಚಿತ ಗ್ಯಾಸ್ ಸಿಲಿಂಡರ್ ಪಡೆಯಲು ಈ ದಾಖಲೆ ಕಡ್ಡಾಯ
ಇದರ ಜೊತೆಗೆ ರಾಜ್ಯ ಸರ್ಕಾರದ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ನೀಡಿರುವ ಮಾಹಿತಿಯ ಪ್ರಕಾರ ಅಗತ್ಯ ಇರುವ ದಾಖಲೆಗಳನ್ನು ನೀಡಿ ಹೊಸದಾಗಿ ಅರ್ಜಿ ಸಲ್ಲಿಸಲು ಮಹಿಳೆಯರಿಗೆ ಅವಕಾಶ ಇದೆ
ಯಾಕಂದ್ರೆ ಸಾಕಷ್ಟು ಜನರಿಗೆ ಇದುವರೆಗೆ ಹಣ ವರ್ಗಾವಣೆ ಆಗಿಲ್ಲ. ಅಂತಹ ಸಂದರ್ಭದಲ್ಲಿ ಖಾತೆಯಲ್ಲಿ ಇರುವ ಸಮಸ್ಯೆಯಿಂದಾಗಿ ಹಣ ಬಾರದೆ ಇರಬಹುದು. ಹಾಗಾಗಿ ಹೊಸದಾಗಿ ಅರ್ಜಿಯನ್ನು ಸಲ್ಲಿಸುವುದರ ಮೂಲಕ ಮುಂದಿನ ತಿಂಗಳಿನಿಂದ ಹಣವು ಬರುವಂತೆ ಮಾಡಿಕೊಳ್ಳುವುದು ಎಂಬ ಸಲಹೆಯನ್ನು ನೀಡಿದ್ದಾರೆ.
ಹೊಸ ಖಾತೆಯನ್ನು ತೆರೆಯಿರಿ
ಸಾಮಾನ್ಯವಾಗಿ ಬ್ಯಾಂಕ್ ಖಾತೆ ಬಹಳ ಹಳೆಯದಾಗಿದ್ದರೆ ಅಥವಾ ಅದರಲ್ಲಿ ಯಾವುದೇ ರೀತಿಯ ಹಣಕಾಸಿನ ವ್ಯವಹಾರ ಮಾಡದೆ ವರ್ಷಗಟ್ಟಲೆ ಆಗಿದ್ದರೆ ಅಂತಹ ಖಾತೆಗೆ ಹಣ ಜಮಾ ಆಗದೆ ಇರಬಹುದು
ಮಿನಿಮಮ್ ಬ್ಯಾಲೆನ್ಸ್ ಇಲ್ಲದೆ ಇರುವಾಗ ಬ್ಯಾಂಕ್ ಅಂತಹ ಖಾತೆಯನ್ನು ಎರಡು ವರ್ಷಗಳ ಬಳಿಕ ನಿಷ್ಕ್ರಿಯಗೊಳಿಸುತ್ತದೆ. ಈ ರೀತಿಯಾಗಿದ್ದು ನೀವು ನಿಮ್ಮ ಬ್ಯಾಂಕ್ ಖಾತೆಯ ವಿವರವನ್ನು ಅರ್ಜಿ ಸಲ್ಲಿಸುವಾಗ ಹಳೆಯ ಖಾತೆಯ ವಿವರ ನೀಡಿದ್ದರೆ ಆಗ ನಿಮ್ಮ ಖಾತೆಗೆ ಹಣ ಬಾರದೆ ಇರಬಹುದು
ಅಂತಹ ಸಂದರ್ಭದಲ್ಲಿ ಅಂಚೆ ಕಚೇರಿಯಲ್ಲಿ ಮತ್ತು ಯಾವುದೇ ರಾಷ್ಟ್ರೀಯ ಬ್ಯಾಂಕ್ ನಲ್ಲಿ ಹೊಸ ಖಾತೆಯನ್ನು ಆರಂಭಿಸುವುದರ ಮೂಲಕ ನಿಮ್ಮ ಖಾತೆಗೆ ಹಣವು ಬರುವಂತೆ ಮಾಡಿಕೊಳ್ಳಬಹುದಾಗಿದೆ.
ಇನ್ನು ಕೆಲವರ ಖಾತೆಗೆ ಬ್ಯಾಂಕು ಖಾತೆ ಅಪ್ಡೇಟ್ ಆದ ಅನಂತರವೇ ಪೆಂಡಿಂಗ್ ಇರುವ ಹಣವು ಜಮಾ ಆಗಿದೆ, ಆದ್ರೆ ಇದು ಎಲ್ಲರ ಖಾತೆಗೂ ಬಂದಿರುವ ಸಾಧ್ಯತೆ ಕಡಿಮೆ ಹಾಗಾಗಿ ನಿಮ್ಮ ಖಾತೆಗೆ ಹಣ ಬಾರದೆ ಇದ್ರೆ ಬ್ಯಾಂಕಿಗೆ ಹೋಗಿ ಪರಿಶೀಲನೆ ನಡೆಸಿ ಅಥವಾ ಹೊಸದಾಗಿ ಅರ್ಜಿ ಸಲ್ಲಿಸಿ.
ಇತರೆ ವಿಷಯಗಳು:
ಹೊಸ ಬಿಪಿಎಲ್ ಕಾರ್ಡ್ ಪಡೆಯುವ ಸುಲಭ ಮಾರ್ಗ.! ಇಲ್ಲಿಂದಲೇ ಫಾರ್ಮ್ ಭರ್ತಿ ಮಾಡಲು ಲಿಂಕ್
PM ಕಿಸಾನ್ 17 ನೇ ಕಂತಿಗೆ ಸಂಬಂಧಿಸಿದಂತೆ ದೊಡ್ಡ ಅಪ್‌ಡೇಟ್! ಇಲ್ಲಿದೆ ಸಂಪೂರ್ಣ ಮಾಹಿತಿ