rtgh

ರಾಜ್ಯದ ರೈತರ ಖಾತೆಗೆ ಜಮಾ ಆಗಲಿದೆ 10 ಸಾವಿರ ರೂ.! ಮಹತ್ವದ ಘೋಷಣೆ

Raitha Siri Yojana

ಹಲೋ ಸ್ನೇಹಿತರೇ, ಈ ಬಾರಿ ಸರಿಯಾಗಿ ಮುಂಗಾರು ಮತ್ತು ಹಿಂಗಾರು ಮಳೆ ಆಗದೆ ಇರುವ ಕಾರಣಕ್ಕಾಗಿ ರೈತರು ತಮ್ಮ ಬೆಳೆ ಸರಿಯಾಗಿ ಬೆಳೆಯಲು ಆಗದೆ ಕಷ್ಟ ಪಡುವಂತೆ ಆಗಿದೆ. ಇದಕ್ಕೆ ಸರ್ಕಾರ ಒಂದಲ್ಲ ಒಂದು ರೀತಿಯ ಯೋಜನೆಗಳನ್ನು ಜಾರಿಗೆ ತರುವ ಮೂಲಕ ರೈತರಿಗೆ ಅಗತ್ಯ ಇರುವ ನೆರವನ್ನು ನೀಡುತ್ತಿದೆ. ಇದರ ಕುರಿತಾದ ಸಂಪೂರ್ಣ ಮಾಹಿತಿಗಾಗಿ ಈ ಲೇಖನವನ್ನು ಕೊನೆವರೆಗೂ ಓದಿ..

Raitha Siri Yojana

ಇದೀಗ ಕಳೆದ ಎರಡು ವರ್ಷಗಳ ಹಿಂದೆ ಬಜೆಟ್ಟಿನಲ್ಲಿ ಘೋಷಣೆಯಾಗಿದ್ದ ರೈತರ ರಾಗಿ ಬೆಳೆಯನ್ನು ಪ್ರೋತ್ಸಾಹಿಸುವಂತಹ, ಸಿರಿಧಾನ್ಯ ಬೆಳೆಯುವುದನ್ನು ಹೆಚ್ಚಿಸುವಂತಹ ರೈತ ಸಿರಿ ಯೋಜನೆಯನ್ನು ಮಂಡಿಸಲಾಗಿತ್ತು. ಈಗ 2024ರ ಬಜೆಟ್ ನಲ್ಲಿ ಸಾವಿರಾರು ಕೋಟಿ ರೂಪಾಯಿಗಳನ್ನು ಈ ಯೋಜನೆಗಾಗಿ ಮೀಸಲಿಡಲು ಸರ್ಕಾರ ನಿರ್ಧರಿಸಿದ್ದು, ಮತ್ತೆ ರೈತರಿಗೆ ರೈತ ಸಿರಿ ಯೋಜನೆಯನ್ನ ಒದಗಿಸಲು ಮುಂದಾಗಿದೆ.

ಜಾರಿಗೆ ಬಂದಿದೆ ರೈತರ ಸಿರಿ ಯೋಜನೆ:

2019-20 ನೇ ಸಾಲಿನ ರಾಜ್ಯ ಬಜೆಟ್ ನಲ್ಲಿ ರೈತ ಸಿರಿ ಯೋಜನೆ ಮಂಡನೆ ಆಗಿತ್ತು. ಆದರೆ ಆ ಸಮಯದಲ್ಲಿ ಈ ಯೋಜನೆಯನ್ನು ಜಾರಿಗೆ ತರಲು ಸಾಧ್ಯವಾಗಿರಲಿಲ್ಲ. 2024ರ ಬಜೆಟ್ ನಲ್ಲಿ ಮತ್ತೆ ರೈತ ಸಿರಿ ಯೋಜನೆಗಾಗಿ ಸರ್ಕಾರ ಕೋಟ್ಯಾಂತರ ರೂಪಾಯಿಗಳನ್ನು ಮೀಸಲಿಟ್ಟಿದೆ.

ಇದರಿಂದಾಗಿ ರೈತರು ಸುಲಭವಾಗಿ ರಾಗಿ ಬೆಳೆಯನ್ನು ಬೆಳೆಯಬಹುದು ಹಾಗೂ ಸರ್ಕಾರದಿಂದ ಈ ರೀತಿ ರಾಗಿ ಬೆಳೆಯ ಜೊತೆಗೆ ಇತರ ಸಿರಿಧಾನ್ಯ ಬೆಳೆಯುವುದಕ್ಕೆ 10 ಸಾವಿರ ರೂಪಾಯಿಗಳ ಸಹಾಯಧನವನ್ನು ಪಡೆದುಕೊಳ್ಳಬಹುದು.

ಮಹಿಳೆಯರಿಗೆ ಎಲ್ಲಾ ಗೃಹಲಕ್ಷ್ಮಿ ಹಣ ಜಮಾ! ನಿಮಗೆ ಬಂದಿಲ್ವಾ ಈ ರೀತಿ ಮಾಡಿ

ರೈತ ಸಿರಿ ಯೋಜನೆಯ ಪ್ರಮುಖ ಅಂಶಗಳು:

* ಯೋಜನೆಯ ಪ್ರಯೋಜನ ಪಡೆದುಕೊಳ್ಳಲು ಬಯಸುವ ಜನರು ಕರ್ನಾಟಕದ ಖಾಯಂ ನಿವಾಸಿಗಳಾಗಿರಬೇಕು
* ವಿಶೇಷವಾಗಿ ರೈತರೇ ಆಗಿರಬೇಕು ಹಾಗೂ ಸ್ವಂತ ಜಮೀನು ಹೊಂದಿರಬೇಕು.
* ರೈತ ಸಿರಿ ಯೋಜನೆ ಪ್ರಯೋಜನ ಪಡೆದುಕೊಳ್ಳಲು ಕನಿಷ್ಠ ಒಂದು ಹೆಕ್ಟರ್ ಜಮೀನನ್ನು ರೈತರು ಹೊಂದಿರಬೇಕು.

ಅರ್ಜಿ ಸಲ್ಲಿಸಲು ಬೇಕಾಗಿರುವ ದಾಖಲೆಗಳು:

  • ರೈತರ ಭೂಮಿಯ ದಾಖಲೆ/ಪಹಣಿ ಪತ್ರ
  • ಆದಾಯ ಪ್ರಮಾಣ ಪತ್ರ
  • ಜಾತಿ ಪ್ರಮಾಣ ಪತ್ರ
  • ಬ್ಯಾಂಕ್ ಖಾತೆಯ ವಿವರ
  • ಆಧಾರ್ ಕಾರ್ಡ್
  • ಖಾಯಂ ನಿವಾಸದ ಪ್ರಮಾಣ ಪತ್ರ
  • ಅಡ್ರೆಸ್ ಪ್ರೂಫ್
  • ವೋಟರ್ ಐಡಿ
  • ಇತ್ತೀಚಿಗಿನ ಭಾವಚಿತ್ರ

ರೈತ ಸಿರಿ ಯೋಜನೆಯ ಅಡಿಯಲ್ಲಿ ಹತ್ತು ಸಾವಿರ ರೂಪಾಯಿಗಳ ಸಹಾಯದ ಪಡೆದುಕೊಳ್ಳುವುದಕ್ಕೆ ಹತ್ತಿರದ ರೈತ ಸೇವಾ ಕೇಂದ್ರ ಅಥವಾ ತೋಟಗಾರಿಕಾ ಇಲಾಖೆಗೆ ಹೋಗಿ ಮಾಹಿತಿ ಪಡೆದು ಅರ್ಜಿ ಸಲ್ಲಿಸಿ ಹತ್ತು ಸಾವಿರ ರೂಪಾಯಿಗಳನ್ನು ಪಡೆದುಕೊಳ್ಳಬಹುದು.

ಇತರೆ ವಿಷಯಗಳು:

ಹೊಸ ಬಿಪಿಎಲ್‌ ಕಾರ್ಡ್‌ ಪಡೆಯುವ ಸುಲಭ ಮಾರ್ಗ.! ಇಲ್ಲಿಂದಲೇ ಫಾರ್ಮ್‌ ಭರ್ತಿ ಮಾಡಲು ಲಿಂಕ್

PM ಕಿಸಾನ್‌ 17 ನೇ ಕಂತಿಗೆ ಸಂಬಂಧಿಸಿದಂತೆ ದೊಡ್ಡ ಅಪ್‌ಡೇಟ್! ಇಲ್ಲಿದೆ ಸಂಪೂರ್ಣ ಮಾಹಿತಿ

Spread the love

Leave a Reply

Your email address will not be published. Required fields are marked *