ನಮಸ್ಕಾರ ಸ್ನೇಹಿತರೇ ರಾಜ್ಯದಲ್ಲಿ ಜಾರಿಗೆ ಬಂದಿರುವ ಗೃಹಲಕ್ಷ್ಮಿ ಯೋಜನೆಯ ಹಣವನ್ನು ಇದುವರೆಗೂ ಯಾರೆಲ್ಲ ಪಡೆದಿಲ್ಲವೋ ಇದೀಗ ಅವರಿಗೆ ಹಣ ಪಡೆದುಕೊಳ್ಳಲು ಸಿಹಿ ಸುದ್ದಿಯನ್ನು ತಿಳಿಸಲಾಗುತ್ತಿದೆ. ನೀವೇನಾದರೂ ಗೃಹಲಕ್ಷ್ಮಿ ಯೋಜನೆಗೆ ಅರ್ಜಿ ಸಲ್ಲಿಸಿದ್ದು ಇದುವರೆಗೂ ಕೂಡ ನಿಮ್ಮ ಬ್ಯಾಂಕ್ ಖಾತೆಗೆ ಗೃಹಲಕ್ಷ್ಮಿ ಯೋಜನೆಯ ಹಣ ಬಂದಿಲ್ಲದಿದ್ದರೆ ಅಥವಾ ಕೇವಲ ಮೊದಲೆರಡು ಕಂತಿನ ಹಣ ಮಾತ್ರ ಬಿಡುಗಡೆಯಾಗಿದ್ದರೆ ಹಾಗೂ ನಿಮ್ಮ ಖಾತೆಯನ್ನು ಅವರು ಮತ್ತು 7ನೇ ಕಂತಿನ ಹಣ ತಲುಪಿಲ್ಲದಿದ್ದರೆ.
ಈ ಸಮಸ್ಯೆಗಳು ಏನಾದರೂ ನೀವು ಅನುಭವಿಸುತ್ತಿದ್ದರೆ ಈ ಸುದ್ದಿ ನಿಮಗಾಗಿ ಎಂದು ಹೇಳಬಹುದು. ಕೇವಲ ಈ ಮೂರು ದಾಖಲೆಗಳನ್ನು ನೀಡುವುದರ ಮೂಲಕ ಗೃಹಲಕ್ಷ್ಮಿ ಯೋಜನೆಯ ಪೆಂಡಿಂಗ್ ಇರುವ ಹಣವನ್ನು ಮತ್ತೆ ಪಡೆದುಕೊಳ್ಳಬಹುದೆಂದು ಈ ಮೂಲಕ ತಿಳಿಸಲಾಗುತ್ತಿದೆ.
Contents
ರಾಜ್ಯದಲ್ಲಿ ಯಶಸ್ವಿಯಾದ ಗೃಹಲಕ್ಷ್ಮಿ ಯೋಜನೆ :
ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರವು ಅಧಿಕಾರಕ್ಕೆ ಬಂದ ಕೇವಲ ಮೂರು ತಿಂಗಳಲ್ಲಿ ಅಧಿಕೃತವಾಗಿ ಗೃಹಲಕ್ಷ್ಮಿ ಯೋಜನೆಯನ್ನು ಘೋಷಣೆ ಮಾಡಿತು. ಇದೀಗ ರಾಜ್ಯದಲ್ಲಿ ಗೃಹಲಕ್ಷ್ಮಿ ಯೋಜನೆ ಪ್ರಾರಂಭವಾಗಿ ಏಳು ತಿಂಗಳು ಕಳೆದಿದೆ ಹಾಗೂ ಈ ಯೋಜನೆಯ ಮೂಲಕ 12 ರಿಂದ 14 ಸಾವಿರ ರೂಪಾಯಿಗಳ ಹಣವನ್ನು ಮಹಿಳೆಯರು ಪಡೆದುಕೊಂಡು ಸ್ವಾವಲಂಬಿ ಜೀವನವನ್ನು ನಡೆಸಲು ಸಹಕಾರಿಯಾಗಿದೆ ಎಂದು ಹೇಳಬಹುದು.
ಇದನ್ನು ಓದಿ : PDO ಹುದ್ದೆಗಳಿಗೆ ಅರ್ಜಿ ಸಲ್ಲಿಸುವ ಕೊನೆ ದಿನಾಂಕ ನಿಗದಿ : ಒಟ್ಟು ಖಾಲಿ ಹುದ್ದೆಗಳು 247 ಹೆಚ್ಚು!
ಶೇಕಡ 20ರಷ್ಟು ಮಹಿಳೆಯರ ಬ್ಯಾಂಕ್ ಖಾತೆಗೆ ಹಣ ವರ್ಗಾವಣೆಯಾಗಿಲ್ಲ :
ರಾಜ್ಯದಲ್ಲಿ ಜಾರಿಗೆ ಬಂದ ನಂತರ ಗೃಹಲಕ್ಷ್ಮಿ ಯೋಜನೆ, ಶೇಕಡ 80ರಷ್ಟು ಮಹಿಳೆಯರು ಕಡೆದ ಆರು ತಿಂಗಳಿನಿಂದ ಯೋಜನೆಯ ಹಣವನ್ನು ಪಡೆದುಕೊಳ್ಳಲು ಸಾಧ್ಯವಾಗಿದೆ ಆದರೆ ದುರಾದೃಷ್ಟವಶಾತ್ ಎಂಬಂತೆ ಗೃಹಲಕ್ಷ್ಮಿ ಯೋಜನೆಗೆ ಅರ್ಜಿ ಸಲ್ಲಿಸಿದಂತಹ ಶೇಕಡ 20ರಷ್ಟು ಮಹಿಳೆಯರ ಬ್ಯಾಂಕ್ ಖಾತೆಗೆ ಇದುವರೆಗೂ ಕೂಡ ಸಂಪೂರ್ಣವಾಗಿ ಗೃಹಲಕ್ಷ್ಮಿ ಯೋಜನೆಯ ಹಣ ವರ್ಗಾವಣೆಯಾಗಿರುವುದಿಲ್ಲ. ಅದರಂತೆ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವೆ ಯಾದ ಲಕ್ಷ್ಮಿ ಹೆಬ್ಬಾಳ್ಕರ್ ಅವರು ಇದರ ಬಗ್ಗೆ ಮಾಹಿತಿಯನ್ನು ಅಧಿಕೃತವಾಗಿ ತಿಳಿಸಿದ್ದಾರೆ.
ಯೋಜನೆಯ ಹಣ ಬರದೇ ಇರುವವರು ಈ ಕೆಲಸ ಮಾಡಬೇಕು :
ಇಲ್ಲಿಯವರೆಗೆ ನಿಮ್ಮ ಬ್ಯಾಂಕ್ ಖಾತೆಗೆ ಗೃಹಲಕ್ಷ್ಮಿ ಯೋಜನೆಯ ಹಣ ಬರದೇ ಇದ್ದರೆ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವೆಯದ ಲಕ್ಷ್ಮಿ ಹೆಬ್ಬಾಳ್ಕರ್ ಅವರು ತಿಳಿಸಿರುವ ಪ್ರಕಾರ ಈ ಕೆಲವು ಅಗತ್ಯ ದಾಖಲೆಗಳನ್ನು ಸರಿಪಡಿಸಿಕೊಂಡು ಮತ್ತೆ ಗೃಹಲಕ್ಷ್ಮಿ ಯೋಜನೆಗೆ ಅರ್ಜಿ ಸಲ್ಲಿಸಬಹುದು ಅಥವಾ ಪೋಸ್ಟ್ ಆಫೀಸ್ನಲ್ಲಿ ಹೊಸದಾಗಿ ಖಾತೆಯನ್ನು ತೆರೆಯಬಹುದಾಗಿದೆ.
ತಮ್ಮ ಹತ್ತಿರದ ಸೇವಾ ಕೇಂದ್ರಕ್ಕೆ ಭೇಟಿ ನೀಡಿ ಅಭ್ಯರ್ಥಿಗಳು ಆಧಾರ್ ಕಾರ್ಡ್ ಬ್ಯಾಂಕ್ ಫೇಸ್ ಬುಕ್ ಹಾಗೂ ರೇಷನ್ ಕಾರ್ಡ್ ಈ ಮೂರನ್ನು ತೆಗೆದುಕೊಂಡು ನಿಮ್ಮ ದಾಖಲೆಗಳು ಸರಿಯಾಗಿ ಇದೆಯೇ ಇಲ್ಲವೇ ಎಂಬುದನ್ನು ಒಂದು ಬಾರಿ ಪರಿಶೀಲನೆ ಮಾಡಿಕೊಳ್ಳುವುದು ಮುಖ್ಯವಾಗಿದೆ. ಅದೇ ರೀತಿ ಖಾತೆಗೆ ಸಂಬಂಧಿಸಿದಂತೆ ನಿಮ್ಮ ಬ್ಯಾಂಕ್ ಪಾಸ್ ಬುಕ್ ಅಪ್ಡೇಟ್ ಮಾಡಿಸಿಕೊಳ್ಳುವುದರ ಜೊತೆಗೆ ನಿಮ್ಮ ಬ್ಯಾಂಕ್ ಖಾತೆಯಲ್ಲಿ ಏನಾದರೂ ಸಮಸ್ಯೆಗಳು ಇದೆಯೇ ಎಂಬುದನ್ನು ತಿಳಿದುಕೊಳ್ಳಬೇಕು.
ಒಂದು ವೇಳೆ ನಿಮ್ಮ ಬ್ಯಾಂಕ್ ಖಾತೆಗೆ ಸಂಬಂಧಿಸಿದಂತೆ ಸಮಸ್ಯೆ ಏನಾದರೂ ಇದ್ದರೆ ಕೆವೈಸಿ ಪ್ರಕ್ರಿಯೆಯನ್ನು ಪೂರ್ಣಗೊಳಿಸದೆ ಇದ್ದರೆ ಹೊಸದಾಗಿ ಪೋಸ್ಟ್ ಆಫೀಸ್ ನಲ್ಲಿ ಖಾತೆಯನ್ನು ತೆರೆಯುವುದು ಸೂಕ್ತ ಎಂದು ಸಚಿವೆ ತಿಳಿಸಿದ್ದಾರೆ. ಅದರಂತೆ ಗುರುಲಕ್ಷ್ಮೀ ಯೋಜನೆಗೆ ಈಗಾಗಲೇ ಅರ್ಜಿಯನ್ನು ಸಲ್ಲಿಸಿರುವವರು ಕೂಡ ತಮ್ಮ ಅರ್ಜಿ ಪರಿಶೀಲನೆಯನ್ನು ಮತ್ತೊಮ್ಮೆ ಪರಿಶೀಲಿಸಿಕೊಳ್ಳಬೇಕು.
ಇದಕ್ಕಾಗಿ ಲಕ್ಷ್ಮಿ ಯೋಜನೆಯ ಅರ್ಜಿ ಪರಿಶೀಲನೆಯನ್ನು ಸಿಡಿಪಿ ಓ ಕಚೇರಿಗೆ ಭೇಟಿ ನೀಡಿ ಮಾಡಿಸಬಹುದಾಗಿತ್ತು ನೀವೇನಾದರೂ ನೀಡಿದಂತಹ ದಾಖಲೆಗಳಲ್ಲಿ ತಪ್ಪಾಗಿದ್ದರೆ ಆ ಕಾರಣಕ್ಕಾಗಿ ನಿಮಗೆ ಮಹಾಲಕ್ಷ್ಮಿ ಯೋಜನೆಯ ಅರ್ಜಿ ಸರ್ಕಾರಕ್ಕೆ ಸಂದಾಯವಾಗಿರುವುದಿಲ್ಲ. ಈ ಕಾರಣಕ್ಕಾಗಿಯೇ ಗೃಹಲಕ್ಷ್ಮಿ ಯೋಜನೆಯ ಹಣ ನಿಮ್ಮ ಬ್ಯಾಂಕ್ ಖಾತೆಗೆ ಬಾರದೇ ಇರಬಹುದು ಅಂತಹ ಪರಿಸ್ಥಿತಿಯಲ್ಲಿ ಮಹಿಳೆಯರು ನಿರಾಶೆಯಾಗುವಂತಹ ಅಗತ್ಯವಿಲ್ಲ ಏಕೆಂದರೆ ಗೃಹಲಕ್ಷ್ಮಿ ಯೋಜನೆಗೆ ಹೊಸದಾಗಿ ಮತ್ತೊಮ್ಮೆ ಅರ್ಜಿ ಸಲ್ಲಿಸಬಹುದು.
ಹೆಚ್ಚಿನ ಮಾಹಿತಿ
ಗೃಹಲಕ್ಷ್ಮಿ ಯೋಜನೆಗೆ ಸಂಬಂಧಿಸಿದಂತೆ ಅರ್ಜಿ ಸಲ್ಲಿಸುವ ಸಂದರ್ಭದಲ್ಲಿ ನೀವು ನೀಡಿರುವಂತಹ ದಾಖಲೆಗಳು ಸರಿಯಾಗಿದ್ದರೆ ಆಟೋಮೆಟಿಕ್ ಆಗಿ ಖಾತೆಗೆ ಹಣ ಜಮಾ ಮಾಡುವ ಪ್ರಕ್ರಿಯೆ ಆಗಿರುವುದರಿಂದ ಯಾವುದೇ ಸಮಸ್ಯೆ ಇಲ್ಲದೆ ಸರ್ಕಾರದಿಂದ ನಿಮ್ಮ ಬ್ಯಾಂಕ್ ಖಾತೆಗೆ ಹಣ ವರ್ಗಾವಣೆ ಆಗುತ್ತದೆ.
ಪ್ರತಿಯೊಂದು ಜಿಲ್ಲೆಯಲ್ಲಿಯೂ ಕೂಡ ಇದೀಗ ವರಲಕ್ಷ್ಮಿ ಯೋಜನೆ ಅಡಿಯಲ್ಲಿ ಮಹಿಳೆಯರು ಹಣ ಪಡೆದುಕೊಳ್ಳುತ್ತಿದ್ದಾರೆ ಒಂದು ವೇಳೆ ನಿಮ್ಮ ಖಾತೆಗೆ ಹಣ ಬರದೇ ಇದ್ದರೆ ಮಾರ್ಚ್ 31ನೇ ತಾರೀಖಿನವರೆಗೆ ಕಾಯಬೇಕೆಂದು ರಾಜ್ಯ ಸರ್ಕಾರ ತಿಳಿಸಿದೆ.
ಒಟ್ಟರೆ ರಾಜ್ಯ ಸರ್ಕಾರವು ಇದೀಗ ಜಾರಿಗೆ ತಂದಿರುವ ಗ್ಯಾರಂಟಿ ಯೋಜನೆಗಳಲ್ಲಿ ಒಂದಾದ ಗೃಹಲಕ್ಷ್ಮಿ ಯೋಜನೆಯು ಮನೆಮನೆ ಮಾತಾಗಿದ್ದು ಇದೀಗ ಈ ಯೋಜನೆ ಪ್ರಯೋಜನವನ್ನು ಸಾಕಷ್ಟು ಮಹಿಳೆಯರು ಪಡೆದುಕೊಂಡು ಸ್ವಾವಲಂಬಿ ಜೀವನವನ್ನು ನಡೆಸಲು ಸಹಕಾರಿಯಾಗಿದೆ ಎಂದು ಹೇಳಬಹುದು.
ಅದರಂತೆ ಇದುವರೆಗೂ ಕೂಡ ಯಾವ ಮಹಿಳೆಯರ ಬ್ಯಾಂಕ್ ಖಾತೆಗೆ ಹಣ ವರ್ಗಾವಣೆಯಾಗಿಲ್ಲವೋ ಅವರಿಗೆ ಈ ಮಾಹಿತಿಯನ್ನು ಶೇರ್ ಮಾಡುವ ಮೂಲಕ ಯೋಜನೆಗೆ ಸಂಬಂಧಿಸಿದಂತೆ ಸೂಕ್ತ ಕ್ರಮಗಳನ್ನು ಕೈಗೊಳ್ಳಲು ತಿಳಿಸಿ ಧನ್ಯವಾದಗಳು.