ನಮಸ್ಕಾರ ಸ್ನೇಹಿತರೆ ಈ ಕುಟುಂಬದ ಸದಸ್ಯರಿಗೆ ಇನ್ನು ಮುಂದೆ ಅನ್ನಭಾಗ್ಯ ಹಣ ದೊರೆಯುವುದಿಲ್ಲ ಹಾಗಾಗಿ ಯಾರಿಗೆ ಅನ್ನ ಭಾಗ್ಯ ಯೋಜನೆ ಹಣ ಜಮಾ ಆಗುವುದಿಲ್ಲ .ಹಣ ಜಮಾ ಆಗಬೇಕಾದರೆ ಯಾವ ಕೆಲಸ ಮಾಡಬೇಕು ಪಡಿತರ ಚೀಟಿಯನ್ನು ಹೊಂದಿರುವವರು ಪ್ರತಿಯೊಬ್ಬರು ಕಡ್ಡಾಯವಾಗಿ ಗಮನಿಸಿ.
ಅನ್ನಭಾಗ್ಯ ಯೋಜನೆ ಮಾಹಿತಿ :
ಕರ್ನಾಟಕ ರಾಜ್ಯದಲ್ಲಿ ಅನ್ನಭಾಗ್ಯ ಯೋಜನೆ ಈಗಾಗಲೇ ಜಾರಿಯಲ್ಲಿದ್ದು ಈ ಯೋಜನೆಗಾಗಿ ರಾಜ್ಯ ಮತ್ತು ಕೇಂದ್ರ ಸರ್ಕಾರವು ಬಡವರಿಗಾಗಿಯೇ ಯೋಜನೆ ಜಾರಿ ಮಾಡಿದ ಕಾರಣ 5 ಕೆಜಿ ಅಕ್ಕಿಯನ್ನು ನೀಡುತ್ತಿರುತ್ತದೆ .ಆದರೆ ಕರ್ನಾಟಕ ರಾಜ್ಯ ಸರ್ಕಾರವು 10 ಕೆ.ಜಿ ನೀಡುವುದಾಗಿ ಚುನಾವಣೆ ಸಂದರ್ಭದಲ್ಲಿ ತಿಳಿಸಲಾಗಿತ್ತು ಆದರೆ ಅಕ್ಕಿ ಸಿಗದ ಕಾರಣ 5 ಕೆಜಿ ಅಕ್ಕಿಗೆ ಬದಲಾಗಿ 680ವನ್ನು ಜನರ ಖಾತೆಗೆ ಜಮೆ ಮಾಡಲಾಗುತ್ತಿತ್ತು.
ಈ ಜನರಿಗೆ ಹಣ ಇಲ್ಲ :
ಅನ್ನಭಾಗ್ಯ ಯೋಜನೆ ಮೂಲಕ ಅನೇಕ ಜನರು ಅದರ ಸದುಪಯೋಗವನ್ನು ಪಡೆದುಕೊಳ್ಳುತ್ತಿದ್ದಾರೆ ಆದರೆ ಈ ಜನರಿಗೆ ಅನ್ನಭಾಗ್ಯ ಯೋಜನೆಯ ಹಣ ಹಾಗೂ ಅಕ್ಕಿ ಸಿಗುವುದಿಲ್ಲ ಕಾರಣ .ಕಳೆದ ಐದು ತಿಂಗಳಿಂದ ಯಾರು ಪದಾರ್ಥವನ್ನು ಪಡೆದಿಲ್ಲವೋ ಅಂತಹ ಜನರಿಗೆ ಇನ್ನು ಮುಂದೆ ಯೋಜನೆ ಹಣ ಜಮೆ ಆಗಿರುವುದಿಲ್ಲ .ಏಕೆಂದರೆ ಕುಟುಂಬಕ್ಕೆ ಅನರ್ಹತೆ ಎಂದು ತೀರ್ಮಾನಿಸಲಾಗುತ್ತದೆ ಆ ಕಾರಣದಿಂದ ನಿಮಗೆ ಪಡಿತರ ಚೀಟಿಯ ಹಣವನ್ನು ರದ್ದುಗೊಳಿಸಲು ತಿಳಿಸಲಾಗಿದೆ.
ಇದನ್ನು ಓದಿ : ಲೋಕಸಭಾ ಚುನಾವಣೆಗೆ ಸ್ಮಾರ್ಟ್ ವೋಟರ್ ಐಡಿ ಪಡೆದುಕೊಳ್ಳಿ- Voter ID
ಪಟ್ಟಿ ರದ್ದಾಗಿರುವುದನ್ನ ಹೇಗೆ ತಿಳಿಯುವುದು :
ಅನೇಕ ಜನರ ಪಟ್ಟಿ ಈಗಾಗಲೇ ರದ್ದು ಮಾಡಲಾಗಿದೆ .ಅಂತಹ ಜನರು ಪಟ್ಟಿಯನ್ನು ಪರಿಶೀಲಿಸಲು ಈ ಕೆಳಗಿನ ವಿಧಾನವನ್ನು ಬಳಸಿಕೊಳ್ಳಿ.
- https://ahara.kar.nic.in/Home/EServices ಈ ಅಧಿಕೃತ ವೆಬ್ ಸೈಟಿಗೆ ಮೊದಲು ಭೇಟಿ ನೀಡಿದ ನಂತರ ನಿಮಗೆ ಇಲಾಖೆಯ ಪೇಜ್ ಓಪನ್ ಆಗಲಿದೆ. ಈ ಇಲಾಖೆಯ ಹೆಸರು ನಾಗರೀಕ ಸರಬರಾಜು ಮತ್ತು ಗ್ರಾಹಕ ವ್ಯವಹಾರ ಇಲಾಖೆ.
- ವೆಬ್ಸೈಟಿನಲ್ಲಿ ಮೂರು ಲೈನ್ಗಳು ಕಾಣುತ್ತವೆ ಅದನ್ನು ಕ್ಲಿಕ್ ಮಾಡಿದರೆ ನಿಮಗೆ ವಿವಿಧ ಆಯ್ಕೆಗಳು ಕಾಣಿಸುತ್ತವೆ ಅಲ್ಲಿ ನೀವು ಈ ಪಡಿತರ ಚೀಟಿಯನ್ನು ಆಯ್ಕೆ ಮಾಡಿಕೊಳ್ಳಬೇಕು.
- ಇದಾದ ನಂತರ ಅಲ್ಲಿ ರದ್ದುಗೊಳಿಸಲಾದ ಅಥವಾ ತಡೆಹಿಡಿಯಲಾದ ಎಂಬ ಪಟ್ಟಿ ಕಾಣಲಿದೆ ಆ ಪಟ್ಟಿಯನ್ನು ಕ್ಲಿಕ್ ಮಾಡಿಕೊಳ್ಳಿ.
- ನಂತರದಲ್ಲಿ ನಿಮ್ಮ ಜಿಲ್ಲೆಯ ಹೆಸರು ನಿಮ್ಮ ತಾಲೂಕಿನ ಹೆಸರು ನಂತರ ನಿಮ್ಮ ರೇಷನ್ ಕಾರ್ಡ್ ಅನ್ನು ಎಂಟರ್ ಮಾಡಿ.
- ಅದಾದ ಮೇಲೆ ಯಾರ ಯಾರ ಹೆಸರನ್ನು ಪಟ್ಟಿಯಿಂದ ರದ್ದುಗೊಳಿಸಲಾಗಿದೆ ಎಂಬ ಎಲ್ಲಾ ಮಾಹಿತಿ ತಿಳಿಯುತ್ತದೆ ಆಮೇಲೆ ತಿಂಗಳನ್ನು ಆಯ್ಕೆ ಮಾಡಿಕೊಂಡರೆ ಯಾರು ಯಾವ ತಿಂಗಳಿನಲ್ಲಿ ಪಡಿತರ ಲಾಭ ಅಥವಾ ಸೌಲಭ್ಯ ಪಡೆದಿಲ್ಲ ಎಂಬುದು ತಿಳಿಯುತ್ತದೆ.
ರದ್ದು ಮಾಡಲು ಪ್ರಮುಖ ಕಾರಣ ಏನು :
ಅನೇಕ ಜನರು ಪಡಿತರ ಚೀಟಿಯನ್ನು ಹೊಂದಿದ್ದು ಕೆಲವರು ಸೌಲಭ್ಯವನ್ನು ಪಡೆಯುತ್ತಿರುತ್ತಾರೆ. ಆದರೆ ಇನ್ನೂ ಕೆಲವರು ಸೌಲಭ್ಯವನ್ನು ಪಡೆಯುತ್ತಿರುವುದಿಲ್ಲ ಅದಲ್ಲದೆ ಪ್ರಮುಖ ಕಾರಣವೇನೆಂದರೆ ಸರ್ಕಾರಿ ನೌಕರಿಯಲ್ಲಿರುವ ಜನರು ಹಾಗೂ ಇನ್ನಿತರ ಶ್ರೀಮಂತ ವರ್ಗದವರು ಸಹ ಈ ಕಾರ್ಡನ್ನು ಪಡೆಯುತ್ತಿರುವ ಕಾರಣ ಅವರು ಹೆಚ್ಚಾಗಿ ಆಹಾರ ಪಡಿತರ ಚೀಟಿ ಪಡೆಯದೆ ಇನ್ನಿತರೆ ಸೌಲಭ್ಯವನ್ನು ಪಡೆಯಲು ಈ ಕಾಡನ್ನು ಮಾಡಿಸಿಕೊಂಡಿರುತ್ತಾರೆ ಹಾಗಾಗಿ ಈ ರೀತಿಯ ಮಾರ್ಗದ ಮುಖಾಂತರ ಅವರ ಕಾರ್ಡನ್ನು ರದ್ದುಗೊಳಿಸಲಾಗುವುದು.
ಅಗತ್ಯ ಜನರಿಗೆ ಮಾತ್ರ ಸೌಲಭ್ಯ :
- ಯೋಜನೆ ಜಾರಿ ಮಾಡಿರುವ ಪ್ರಮುಖ ಉದ್ದೇಶ ನಿಜವಾದ ಜನರಿಗೆ ಅದರಲ್ಲೂ ಬಡತನ ರೇಖೆಗಿಂತ ಕಡಿಮೆ ಇರುವ ಜನರಿಗೆ ಈ ಸೌಲಭ್ಯದ ಅರ್ಹತೆ ಹೊಂದಿರುತ್ತಾರೆ.
- ಈ ಜನರು ರೇಷನ್ ಕಾರ್ಡ್ ಪಡೆಯುವಂತಿಲ್ಲ ಯಾರು ಆದಾಯ ತೆರಿಗೆಯನ್ನು ಪಾವತಿ ಮಾಡುತ್ತಿರುತ್ತಾರೋ ಅಂತಹ ಜನರು ರೇಷನ್ ಕಾರ್ಡ್ ಪಡೆಯುವಂತಿಲ್ಲ.
- ಸರ್ಕಾರಿ ನೌಕರಿಯಲ್ಲಿರುವ ಜನರು ರೇಷನ್ ಕಾರ್ಡ್ ಪಡೆಯುವಂತಿಲ್ಲ.
- ಅನ್ಯ ರಾಜ್ಯದ ಜನರು ಸಹ ರೇಷನ್ ಕಾರ್ಡ್ ಪಡೆಯುವಂತಿಲ್ಲ ಏಕೆಂದರೆ ಕೆಲವರು ಬೇರೆ ರಾಜ್ಯದಿಂದ ವಲಸೆ ಬಂದಿದ್ದರು ಸಹ ಅವರು ತಮ್ಮ ಊರಿನಲ್ಲಿ ಬಿಪಿಎಲ್ ಕಾರ್ಡನ್ನು ಹೊಂದಿರುತ್ತಾರೆ.
ರೇಷನ್ ಕಾರ್ಡ್ ಪಡೆಯಲು ಬೇಕಾದ ದಾಖಲೆ :
- ಆಧಾರ್ ಸಂಖ್ಯೆ ಬೇಕಾಗುತ್ತದೆ.
- ಆದಾಯ ಪ್ರಮಾಣ ಪತ್ರ.
- ಕುಟುಂಬದ ಜಾತಿ ಪ್ರಮಾಣ ಪತ್ರ.
- ಮೊಬೈಲ್ ಸಂಖ್ಯೆ.
ಮೇಲ್ಕಂಡ ದಾಖಲೆಗಳನ್ನು ಸಲ್ಲಿಸುವ ಮುಖಾಂತರ ಹೊಸ ರೇಷನ್ ಕಾರ್ಡನ್ನು ಪಡೆದುಕೊಳ್ಳಬಹುದಾಗಿದೆ.
ವರದಿ ಸಂಪೂರ್ಣ ಮಾಹಿತಿ :
ಯೋಜನೆ ಹೆಸರು | ಅನ್ನಭಾಗ್ಯ ಯೋಜನೆ |
ಪ್ರತಿ ತಿಂಗಳು ಎಷ್ಟು ಅಕ್ಕಿ ನೀಡಲಾಗುತ್ತಿದೆ | ಪ್ರತಿ ತಿಂಗಳು 5 ಕೆಜಿ ಹಕ್ಕಿಯನ್ನು ನೀಡಲಾಗುತ್ತಿದೆ |
5 ಕೆಜಿ ಅಕ್ಕಿಗೆ ಬದಲಾಗಿ ನೀಡುತ್ತಿರುವ ಹಣ ಎಷ್ಟು | 680 ನೀಡಲಾಗುತ್ತಿದೆ |
ಅಧಿಕೃತ ಜಾಲತಾಣ | ಇಲ್ಲಿದೆ ನೋಡಿ |
ಇತರೆ ವಿಷಯಗಳು :
- NSP ವಿದ್ಯಾರ್ಥಿ ವೇತನಕ್ಕೆ ಅರ್ಜಿ ಆಹ್ವಾನ ಅರ್ಜಿ ಸಲ್ಲಿಸಲು ಕೆಲವೇ ದಿನ ಬಾಕಿ
- SDA FDA ಹುದ್ದೆಗಳಿಗೆ ಅರ್ಜಿ ಆಹ್ವಾನ : ಕೂಡಲೇ ಅರ್ಜಿ ಸಲ್ಲಿಸಿ
ಈ ಮಾಹಿತಿಯನ್ನು ಪ್ರತಿಯೊಬ್ಬ ಜನರಿಗೂ ತಲುಪಿಸಿ ಅಗತ್ಯವಿರುವ ಜನರು ಕೂಡಲೇ ರೇಷನ್ ಕಾರ್ಡ್ ಅನ್ನು ಪಡೆಯದೆ ಹಾಗೆ ಬಿಟ್ಟಿದ್ದರೆ ತಪ್ಪದೇ ಪ್ರತಿ ತಿಂಗಳು ರೇಷನ್ ಅನ್ನು ಪಡೆದುಕೊಳ್ಳಿ ಇಲ್ಲವಾದರೆ ನಿಮ್ಮ ಕಾರ್ಡ್ ರದ್ದುಗೊಳಿಸಲಾಗುತ್ತದೆ .ಅನರ್ಹತೆ ಹೊಂದಿದ್ದ ರೇಷನ್ ಕಾರ್ಡ್ ಹೊಂದಿರುವ ಜನರು ನೀವೇ ಸ್ವತಹ ಸರ್ಕಾರಕ್ಕೆ ಕಾರ್ಡನ್ನು ವರ್ಗಾವಣೆ ಮಾಡಿ ಈ ಮಾಹಿತಿಯನ್ನು ಪ್ರತಿಯೊಬ್ಬರಿಗೂ ತಲುಪಿಸಿ ಧನ್ಯವಾದ.
ಯಾರ ರೇಷನ್ ಕಾರ್ಡ್ ರದ್ದಾಗಲಿದೆ..?
ಆದಾಯ ತೆರಿಗೆ ಕಟ್ಟುತ್ತಿರುವವರು ಹಾಗೂ ಸರ್ಕಾರಿ ನೌಕರರ ರೇಷನ್ ಕಾರ್ಡ್.
ರೇಷನ್ ಕಾರ್ಡ್ ನಲ್ಲಿ ತಿದ್ದುಪಡಿ ಮಾಡಬಹುದೇ..?
ನಿಗದಿತ ದಿನಾಂಕವನ್ನು ನಿಗದಿ ಪಡಿಸಿದಾಗ ತಿದ್ದುಪಡಿ ಮಾಡಬಹುದು.
ಕರ್ನಾಟಕ ರಾಜ್ಯದಲ್ಲಿ ಎಷ್ಟು ರೇಷನ್ ನೀಡಲಾಗುತ್ತಿದೆ..?
5 ಕೆಜಿ ಅಕ್ಕಿ ಹಾಗೂ ಇನ್ನಿತರೆ ಪದಾರ್ಥಗಳು.