rtgh
Headlines

ಯುಗಾದಿ ಸಂದರ್ಭದಲ್ಲಿ ಕರ್ನಾಟಕ ರಾಜ್ಯದ ಈ ಜಿಲ್ಲೆಗಳಲ್ಲಿ ಮಳೆ ಬರುತ್ತೆ : ನಮ್ಮ ಊರಿನ ಹೆಸರು ನೋಡಿ

During Ugadi, it rains in these districts of Karnataka state

ನಮಸ್ಕಾರ ಸ್ನೇಹಿತರೆ ಇವತ್ತಿನ ಲೇಖನದಲ್ಲಿ ಯಾವ ಸ್ಥಳಗಳಲ್ಲಿ ಮಳೆಯಾಗಲಿದೆ ಎಂಬುದರ ಮಾಹಿತಿಯನ್ನು ಭಾರತೀಯ ಹವಾಮಾನ ಇಲಾಖೆಯು ತಿಳಿಸಿರುವುದರ ಬಗ್ಗೆ ತಿಳಿಸಲಾಗುತ್ತಿದೆ. ರಾಜ್ಯದ ಕೆಲವು ಸ್ಥಳಗಳಲ್ಲಿ ಸಾಧಾರಣ ಮಳೆ ಆಗುತ್ತದೆ ಮಿತಿಮೀರಿದ ತಾಪಮಾನ ಬಹುತೇಕ ಕಡೆಗೆ ದಾಖಲಾಗುತ್ತಿದೆ.

ಅತಿ ಹೆಚ್ಚು ಉಷ್ಣಾಂಶ ರಾಜ್ಯದಲ್ಲಿ ಕಲಬುರ್ಗಿಯಲ್ಲಿ ದಾಖಲಾಗಿದ್ದು ಉದ್ಯಾನ ನಗರಿ ಎಂದೆ ಖ್ಯಾತಿಯಾಗಿದ ಬೆಂಗಳೂರು ಕೂಡ ಇದೀಗ ಅಧಿಕ ತಾಪಮಾನಕ್ಕೆ ಬೆಂದು ಹೋಗಿದೆ. ಇನ್ನು ಮೂರುವಾರ ಈ ವಾತಾವರಣ ಮುಂದುವರೆಯಲಿದ್ದು ಆನಂತರ ಬಹುತೇಕ ಕಡೆಗಳಲ್ಲಿ ರಾಜ್ಯದಲ್ಲಿ ಮಳೆಯ ಮುನ್ಸೂಚನೆಯನ್ನು ಹವಾಮಾನ ಇಲಾಖೆ ನೀಡಿದೆ.

During Ugadi, it rains in these districts of Karnataka state
During Ugadi, it rains in these districts of Karnataka state

ಮುಂದಿನ ಎರಡು ವಾರಗಳ ಕಾಲ ಬಿರು ಬಿಸಿಲು :

ಮುಂದಿನ ಎರಡು ವಾರಗಳ ಕಾಲ ರಾಜ್ಯದಲ್ಲಿ ಬಿರುಬಿಸಲು ಉಷ್ಣ ಹವೆ ಹೆಚ್ಚಾಗಲಿದ್ದು ಬರಗಾಲದ ಬವಣೆ ಮತ್ತಷ್ಟು ಹೆಚ್ಚುತ್ತದೆ ಎಂದು ಹವಾಮಾನ ಇಲಾಖೆ ಮಾಹಿತಿ ನೀಡಲಿ. ಏಪ್ರಿಲ್ 15ರವರೆಗೂ ಉಷ್ಣಾಂಶ ಏರಿಕೆಯ ಕಾರಣಕ್ಕಾಗಿ ಕಟ್ಟೆಚ್ಚರ ವಹಿಸಲು ಜಿಲ್ಲಾಡಳಿತಗಳಿಗೆ ಸರ್ಕಾರ ಸೂಚನೆ ನೀಡಿದ್ದು ರಾಜ್ಯದ ಪರಿಸ್ಥಿತಿಯ ಮೇಲೆ ಕಂದಾಯ ಇಲಾಖೆಯ ವಿಪತ್ತು ನಿರ್ವಹಣಾ ಕೋಶ ಹೆಚ್ಚು ನಿಗ ವಹಿಸಿದೆ.

ಇದನ್ನು ಓದಿ : ಬೆಳೆ ವಿಮೆಯ ಹಣ ಬಿಡುಗಡೆ : ಹಣ ಬರದೇ ಇದ್ದವರು ಈ ಕೆಲಸ ಮಾಡಿ ತಕ್ಷಣ ಹಣ ಸಿಗುತ್ತೆ.

ಪೂರ್ವ ಮುಂಗಾರು ಮಳೆ ರಾಜ್ಯಕ್ಕೆ ವರ ಆಗಲಿದೆ :

ಪೂರ್ವ ಮುಂಗಾರು ಮಳೆ ರಾಜ್ಯಕ್ಕೆ ವರವಾಗಲಿದ್ಧು ಭಾರತೀಯ ಹವಾಮಾನ ಇಲಾಖೆ ಅಂದಾಜಿನಂತೆ ಮುಂದಿನ ಏಪ್ರಿಲ್ ಮೂರನೇ ವಾರದ ಬಳಿಕ ರಾಜ್ಯದಲ್ಲಿ ತಾಪಮಾನ ಸುಧಾರಣಾ ಸ್ಥಿತಿಗೆ ಬರಲಿದೆ.

ರಾಜ್ಯದ ಪಾಲಿಗೆ ಪೂರ್ವ ಮುಂಗಾರು ಮಳೆ ವರದಾನ ವಾಗುವ ಭರವಸೆ ವ್ಯಕ್ತವಾಗುತ್ತಿದೆ ಏಕೆಂದರೆ ರಾಜ್ಯದ ಅಲ್ಲಲ್ಲಿ ವಾಡಿಕೆಯ ಮಳೆ ಗಿಂತ ಹೆಚ್ಚಿಗೆ ಬೇಸಿಗೆ ಮಳೆ ಮಾರ್ಚ್ ತಿಂಗಳಲ್ಲಿ ಉಂಟಾಗಿದೆ. 9 ಮಿಲಿಮೀಟರ್ ಬೇಸಿಗೆ ಮಳೆ ಸಾಮಾನ್ಯವಾಗಿ ಮಾರ್ಚ್ ತಿಂಗಳಲ್ಲಿ ಬಾಡಿಗೆಯಂತೆ ಉಂಟಾಗುತ್ತದೆ ಆದರೆ ಈ ವರ್ಷ 10 ಮಿಲಿಮೀಟರ್ ಮಳೆಯಾಗಿದ್ದು ಮುಂದಿನ ದಿನಗಳಲ್ಲಿ ತಾಪಮಾನ ಏರಿಕೆಯಿಂದ ಮಳೆಯ ಪ್ರಮಾಣ ಉತ್ತಮವಾಗಿರುತ್ತದೆ ಎಂದು ಭಾರತೀಯ ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.

ಈ ಜಿಲ್ಲೆಗಳಲ್ಲಿ ಹಗುರ ಮಳೆ :

ಮಾರ್ಚ್ 30 ಹಾಗೂ 31 ರಂದು ಅಂದರೆ ಮಾರ್ಚ್ ತಿಂಗಳ ಅಂತ್ಯಕ್ಕೆ ಕರಾವಳಿಯ ಎಲ್ಲಾ ಜಿಲ್ಲೆಗಳು ಹಾಗೂ ದಕ್ಷಿಣ ಒಳನಾಡಿನ ಚಾಮರಾಜನಗರ ಹಾಸನ ಶಿವಮೊಗ್ಗ ಕೊಡಗು ಮೈಸೂರು ಚಿಕ್ಕಮಗಳೂರು ಜಿಲ್ಲೆಗಳಲ್ಲಿ ಹಗುರ ಮಳೆಯಾಗುವ ಸಾಧ್ಯತೆ ಇದೆ ಎಂದು ಭಾರತೀಯ ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.

ಯುಗಾದಿ ಮಳೆ ಹಬ್ಬ ಈ ವರ್ಷ :

ಭಾರತೀಯರ ಪಾಲಿಗೆ ಸಾಮಾನ್ಯವಾಗಿ ಯುಗಾದಿ ಹೊಸ ವರ್ಷವಾಗಿದ್ದು ಹೊಸ ಚಿಗುರಿನೊಂದಿಗೆ ಪ್ರಕೃತಿ ಕಂಗೊಳಿಸುತ್ತದೆ ಎಂದು ಹೇಳಬಹುದು. ಯುಗಾದಿ ಸಮೀಪಕ್ಕೆ ಈ ವರ್ಷ ಮಳೆ ಸಿಂಚನವಾಗಲಿದ್ದು ಯುಗಾದಿಯು ಮಳೆಯ ಹಬ್ಬವಾಗುವ ಸಾಧ್ಯತೆ ಇದೆ ಎಂದು ಕರ್ನಾಟಕ ರಾಜ್ಯ ವಿಪತ್ತು ನಿರ್ವಹಣಾ ಪ್ರಾಧಿಕಾರ ಅಂದಾಜು ಮಾಡಿದೆ.

ಏಪ್ರಿನ ಎರಡು ವಾರ ಅಂದಾಜಿನಂತೆ ಬಿಸಿಲು ಮತ್ತು ಒಣ ಹಾವೇ ಮತ್ತಷ್ಟು ತೀವ್ರಗೊಳ್ಳಲಿದೆ. ಯುಗಾದಿ ಆಸುಪಾಸಿನ ದಿನಗಳಲ್ಲಿ ಪರಿಸ್ಥಿತಿ ಮತ್ತಷ್ಟು ಹದಗಡಲಿದ್ದು ಪೂರ್ವ ಮುಂಗಾರು ಎರಡು ಮೂರು ವಾರಗಳ ನಂತರ ಉತ್ತಮವಾಗಿರುವ ಮುನ್ಸೂಚನೆ ಸಿಕ್ಕಿದೆ.

ಒಟ್ಟಾರೆ ರಾಜ್ಯದಲ್ಲಿ ಪೂರ್ವ ಮುಂಗಾರು ಏಪ್ರಿಲ್ ತಿಂಗಳಲ್ಲಿ ಅಂದರೆ ಯುಗಾದಿಯ ಸಂದರ್ಭದಲ್ಲಿ ಪ್ರಾರಂಭವಾಗುವುದರ ಬಗ್ಗೆ ತಿಳಿಸಿದ್ದು ರಾಜ್ಯದ ರೈತರಿಗೆ ಪೂರ್ವ ಮುಂಗಾರು ಮಳೆ ವರದಾನವಾಗಲಿದೆ ಎಂದು ಹೇಳಬಹುದು. ಹಾಗಾಗಿ ಈ ಮಾಹಿತಿಯ ಬಗ್ಗೆ ಪ್ರತಿಯೊಬ್ಬರಿಗೂ ಶೇರ್ ಮಾಡುವ ಮೂಲಕ ಏಪ್ರಿಲ್ ತಿಂಗಳಲ್ಲಿ ಹೆಚ್ಚು ಮಳೆ ಆಗುತ್ತದೆ ಎಂದು ತಿಳಿಸಿ ಧನ್ಯವಾದಗಳು.

ಇತರೆ ವಿಷಯಗಳು :

Spread the love

Leave a Reply

Your email address will not be published. Required fields are marked *