ನಮಸ್ಕಾರ ಸ್ನೇಹಿತರೆ ರೈತರಿಗೆ ಸಹಾಯ ಮಾಡುವ ಸಲುವಾಗಿ ರಾಜ್ಯ ಸರ್ಕಾರವು ಹಲವು ರೀತಿಯಾದಂತಹ ಯೋಜನೆಗಳನ್ನು ಹಾಗೂ ವಿವಿಧ ರೀತಿಯ ಸಬ್ಸಿಡಿಗಳನ್ನು ರೈತರಿಗೆ ಒದಗಿಸುತ್ತಾ ಬಂದಿದೆ ಇನ್ನು ಇಲ್ಲಿಯವರೆಗೂ ಹಲವು ರೀತಿ ಆಗಿ ರೈತರಿಗೆ ರಾಜ್ಯ ಸರ್ಕಾರ ಸ್ಪಂದಿಸುತ್ತಾ ಇದೆ ಎಂದು ಹೇಳಿದರೆ ತಪ್ಪಾಗಲಾರದು.
ಇಂದು ಈ ಬಾರಿ ಸರಿಯಾಗಿ ಮಳೆ ಬರದೇ ಇರುವ ಕಾರಣದಿಂದಾಗಿ ಹೆಚ್ಚು ತಾಪಮಾನದ ಕಾರಣದಿಂದಾಗಿ ಸಾಕಷ್ಟು ರೈತರು ಕಂಗಾಲಾಗಿದ್ದಾರೆ. ಇನ್ನು ಹೆಚ್ಚಿನ ಬಡ್ಡಿಮತ್ತದ ಸಾಲವನ್ನು ತೆಗೆದುಕೊಂಡಿದ್ದರೆ ಸಾಕಷ್ಟು ಜನರು ಸಾಲ ತೀರಿಸಲಾಗದೆ ಕಂಗೆಟ್ಟಿದ್ದಾರೆ. ಇದೀಗ ಅಂತಹ ರೈತರಿಗೆ ರಾಜ್ಯ ಸರ್ಕಾರದಿಂದ ಹೊಸ ಘೋಷಣೆಯನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಹೊರಡಿಸಿದ್ದಾರೆ.
Contents
ಮುಖ್ಯಮಂತ್ರಿಯಿಂದ ಹೊಸ ಘೋಷಣೆ :
ರೈತರು ಬೆಳೆದಿರುವಂತಹ ಬೆಳೆಗೆ ಸರಿಯಾದ ರೀತಿಯಲ್ಲಿ ಇಳುವರಿಯು ಸಿಕ್ಕದೆ ಹಲವರು ಕೃಷಿಯ ಮೇಲಿರುವಂತಹ ಆಸಕ್ತಿಯನ್ನೇ ಕಳೆದುಕೊಳ್ಳುತ್ತಿದ್ದಾರೆ ಇದೀಗ ಮತ್ತೆ ಕೃಷಿ ಚಟುವಟಿಕೆಗೆ ಪ್ರೋತ್ಸಾಹ ನೀಡುವ ಸಲುವಾಗಿ ಈಗಾಗಲೇ ಸಾಲ ಮನ್ನಾ ಮಾಡುವ ಸಹ ಯೋಜನೆಗಳನ್ನು ಸರ್ಕಾರ ತೆಗೆದುಕೊಂಡು ಬಂದಿದೆ.
ಇನ್ನು ಇದೀಗ ಈ ಯೋಜನೆಯ ಪ್ರಯೋಜನಗಳನ್ನು ಸಾಕಷ್ಟು ರೈತರು ಪಡೆದುಕೊಳ್ಳುವುದರ ಮೂಲಕ ಸಾಕಷ್ಟು ರೈತರ ಸಾಲವು ಕೂಡ ಮನ್ನಾ ಮಾಡಿದೆ ಎಂದು ಹೇಳಬಹುದು. ಇದನ್ನು ಹೊರತುಪಡಿಸಿ ಇದೀಗ ಕೆಲವೊಬ್ಬರು ಅಂದರೆ ಕೆಲ ರೈತರಿಗೆ ಅದರಲ್ಲಿಯೂ ಬಾಡಿಗೆಗೆ ಭೂಮಿಯನ್ನು ತೆಗೆದುಕೊಂಡು ಕೃಷಿ ಮಾಡುತ್ತಿದ್ದಾರೆ.
ಅಂತವರಿಗೆ ಯಾವುದೇ ರೀತಿಯಾದಂತಹ ಸಹಾಯವು ಸಿಗುತ್ತಿಲ್ಲ ಎನ್ನುವುದನ್ನು ಗಮನದಲ್ಲಿಟ್ಟುಕೊಂಡ ಸರ್ಕಾರ ಇದೀಗ ಅಂತಹ ರೈತರಿಗೂ ಕೂಡ ನೆರವಾಗಬೇಕೆಂಬ ಉದ್ದೇಶದಿಂದ ಸರ್ಕಾರವು ಒಂದು ಹೊಸ ಘೋಷಣೆಯನ್ನು ಮಾಡಿದೆ. ಇತ್ತೀಚಿಗೆ ಒಂದು ಹೊಸ ಯೋಜನೆಯ ಮೂಲಕ ಸರ್ಕಾರವು ಕಡಿಮೆ ಭೂಮಿಯನ್ನು ಹೊಂದಿರುವ ರೈತರಿಗೆ ಸಿಹಿ ಸುದ್ದಿಯನ್ನು ನೀಡಿದೆ ಎಂದು ಹೇಳಬಹುದು ಅಂದರೆ ಹತ್ತು ಸಾವಿರ ರೂಪಾಯಿಗಳ ಹಣವನ್ನು 2 ಎಕರೆಗಿಂತ ಕಡಿಮೆ ಜಮೀನು ಹೊಂದಿರುವ ರೈತರಿಗೆ ನೇರವಾಗಿ ಅವರ ಬ್ಯಾಂಕ್ ಖಾತೆಗೆ ಜಮಾ ಮಾಡಲು ರಾಜ್ಯ ಸರ್ಕಾರ ಮುಂದಾಗಿದೆ.
ಇದನ್ನು ಓದಿ : ಸರ್ಕಾರಿ ನೌಕರರು ಹಳೆಯ ಪಿಂಚಣಿ ಯೋಜನೆಗೆ ಹೇಗೆ ಅರ್ಜಿ ಸಲ್ಲಿಸಬೇಕು ? ಇಲ್ಲಿದೆ ಸಂಪೂರ್ಣ ಮಾಹಿತಿ
ರೈತರ ಬ್ಯಾಂಕ್ ಖಾತೆಗೆ 10,000 :
ಎರಡು ಎಕರೆ ಗಿಂತ ಕಡಿಮೆ ಭೂಮಿಯನ್ನು ಹೊಂದಿರುವಂತಹ ರೈತರ ಬ್ಯಾಂಕ್ ಖಾತೆಗೆ ಇದೀಗ ರಾಜ್ಯ ಸರ್ಕಾರವು 10 ಸಾವಿರ ರೂಪಾಯಿಗಳ ಹಣವನ್ನು ಜಮ ಮಾಡಲು ಮುಂದಾಗಿದೆ. ಡಿಬಿಟಿ ಮೂಲಕ ರೈತರ ಬ್ಯಾಂಕ್ ಖಾತೆಗೆ ನೇರವಾಗಿ ಹಣವನ್ನು ಜಮಾ ಮಾಡಲು ರಾಜ್ಯ ಸರ್ಕಾರ ಮುಂದಾಗಿದ್ದು ಸರ್ಕಾರ ಇದೀಗ ಹಲವು ರೀತಿಯ ಸೌಲಭ್ಯಗಳನ್ನು ಅದರ ಮೂಲಕ ಒದಗಿಸಲು ಕಾರ್ಯಾಚರಣೆ ನಡೆಸಿದೆ ಎಂದು ಹೇಳಬಹುದು.
ಇನ್ನು ರೈತ ಸಿರಿ ಎಂಬ ಯೋಜನೆಯ ಮೂಲಕ ಸರ್ಕಾರವು 10,000ಗಳ ಹಣವನ್ನು ಎರಡು ಎಕರೆಗಿಂತ ಕಡಿಮೆ ಜಮೀನನ್ನು ಹೊಂದಿರುವಂತಹ ಪ್ರತಿ ರೈತರಿಗೆ ಅವರ ಬ್ಯಾಂಕ್ ಖಾತೆಗೆ ನೇರವಾಗಿ ವರ್ಗಾವಣೆ ಮಾಡುತ್ತದೆ. ರೈತರು ಅಪ್ಲಿಕೇಶನ್ ಮೂಲಕ ತಮ್ಮ ಹೆಸರನ್ನು ನೋಂದಣಿ ಮಾಡಿಕೊಂಡು ಸರಿಯಾದ ದಾಖಲೆಗಳನ್ನು ಸರ್ಕಾರಕ್ಕೆ ಸಲ್ಲಿಸಲು ರೈತರಿಗೆ ಸರ್ಕಾರ ಸೂಚನೆ ನೀಡಿದೆ.
ರೈತಸಿರಿ ಯೋಜನೆಗೆ ಬೇಕಾಗುವ ದಾಖಲೆಗಳು :
ರೈತಸಿರಿ ಯೋಜನೆಯ ಅಡಿಯಲ್ಲಿ ರೈತರು ಹತ್ತು ಸಾವಿರ ರೂಪಾಯಿಗಳ ಹಣವನ್ನು ಪಡೆಯಬೇಕಾದರೆ ಸರ್ಕಾರದ ಅಧಿಕೃತ ವೆಬ್ಸೈಟ್ ಗೆ ಭೇಟಿ ನೀಡಿ ತಮ್ಮ ಹೆಸರನ್ನು ರೈತರು ನೋಂದಣಿ ಮಾಡಿಕೊಳ್ಳಬೇಕು. ನೊಂದಣಿ ಮಾಡಿಕೊಳ್ಳುವ ಸಂದರ್ಭದಲ್ಲಿ ಸರಿಯಾದ ದಾಖಲೆಗಳನ್ನು ರೈತರಿಗೆ ನೀಡಬೇಕೆಂದು ಸರ್ಕಾರ ಸೂಚನೆ ನೀಡಿದೆ.
- ರೈತರ ಹೆಸರು.
- ಆಧಾರ್ ಕಾರ್ಡ್.
- ಪಹಣಿ.
- ಜಮೀನಿನ ಖಾತೆ ಪತ್ರ.
- ರೇಷನ್ ಕಾರ್ಡ್.
- ಪಾಸ್ಪೋರ್ಟ್ ಸೈಜ್ ಫೋಟೋ.
- ಮೊಬೈಲ್ ನಂಬರ್.
ಹೀಗೆ ಈ ದಾಖಲೆಗಳನ್ನು ಹೊಂದುವುದರ ಮೂಲಕ ರಿಜಿಸ್ಟ್ರೇಷನ್ ಮಾಡಿಕೊಳ್ಳಲು ರೈತರು ಸರಿಯಾದ ರೀತಿಯಲ್ಲಿ ದಾಖಲೆಗಳನ್ನು ನೀಡಿ ನೋಂದಣಿ ಮಾಡಿಕೊಳ್ಳಬಹುದಾಗಿದೆ.
ಒಟ್ಟಾರೆ ರಾಜ್ಯ ಸರ್ಕಾರವು 2 ಎಕರೆಗಿಂತ ಕಡಿಮೆ ಭೂಮಿಯನ್ನು ಹೊಂದಿರುವಂತಹ ರೈತರಿಗೆ ಇದೀಗ 10 ಸಾವಿರ ರೂಪಾಯಿಗಳ ಹಣದ ಒಂದು ಜಮಾ ಮಾಡಲು ನಿರ್ಧರಿಸಿದ್ದು ಈ ಬಗ್ಗೆ ಎಲ್ಲ ರೈತರಿಗೂ ಶೇರ್ ಮಾಡುವ ಮೂಲಕ ರಾಜ್ಯ ಸರ್ಕಾರದಿಂದ ರೈತರಿಗೆ ಹೊಸ ಘೋಷಣೆಯನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಹೊರಡಿಸಿದ್ದಾರೆ ಎಂದು ತಿಳಿಸಿ.
ಇದರಿಂದ ಅವರು ಕೂಡ ರಾಜ್ಯ ಸರ್ಕಾರದ ರೈತ ಸಿರಿ ಯೋಜನೆಯ ಪ್ರಯೋಜನವನ್ನು ಪಡೆದುಕೊಳ್ಳಲಿ ಧನ್ಯವಾದಗಳು.