rtgh

ಬಿಸಿ ಬಿಸಿ ಸುದ್ದಿ.! ಇನ್ಮುಂದೆ ಯಾವುದೇ ಮುಲಾಜಿಲ್ಲದೆ ಇಂತವರ ರೇಷನ್‌ ಕಾರ್ಡ್‌ ರದ್ದು

Ration card cancellation

ಹಲೋ ಸ್ನೇಹಿತರೇ, ಪಡಿತರ ಚೀಟಿ ಇಂದು ಕರ್ನಾಟಕದಲ್ಲಿ ಬಹಳ ಮಹತ್ವವನ್ನು ಪಡೆದುಕೊಂಡಿದೆ. ಅದರಲ್ಲೂ ಬಿಪಿಎಲ್ ರೇಷನ್ ಕಾರ್ಡ್ ಇದ್ದವರು ತಮ್ಮ ಲೈಫ್ ಜಿಂಗಾಲಾಲ ಅಂತಿದ್ದಾರೆ. ಯಾಕೆ ಅಂತೀರಾ? ಕರ್ನಾಟಕ ರಾಜ್ಯ ಸರ್ಕಾರ ಕೆಲವು ಉಚಿತ ಯೋಜನೆಗಳನ್ನು ಪರಿಚಯಿಸಿತು.

Ration card cancellation

ಈ ಎಲ್ಲ ಯೋಜನೆಗಳು ಯಾರು ಬಿಪಿಎಲ್ ಕಾರ್ಡ್ ಹೊಂದಿದ್ದಾರೋ ಅವರಿಗೆ ಹೆಚ್ಚು ಪ್ರಯೋಜನವನ್ನು ನೀಡುತ್ತದೆ. ಆದರೆ ನಿಜವಾಗಿಯು ಯಾರಿಗೆ ಈ ಯೋಜನೆಯ ಪ್ರಯೋಜನವು ಸಿಗಬೇಕೋ, ಅವರಿಗೆ ಸಿಗ್ತಿದ್ಯಾ ಅಂತ ಕೇಳಿದ್ರೆ ಖಂಡಿತವಾಗಿಯು ಇಲ್ಲ ಎನ್ನುವ ಉತ್ತರವು ಬರುತ್ತೆ.

ಯಾಕೆ ಅಂದ್ರೆ ಅರ್ಹತೆಯನ್ನು ಹೊಂದಿರುವವರಿಗಿಂತ ಯಾರು ಅನರ್ಹರು.. ಅಂದ್ರೆ ಉತ್ತಮ ಸ್ಥಿತಿಯಲ್ಲಿ ಇದ್ದಾರೋ ಅವರು ಬಿಪಿಎಲ್ ಕಾರ್ಡ್ ಪಡೆದುಕೊಂಡು ಸರ್ಕಾರದ ಯೋಜನೆಗಳ ಪ್ರಯೋಜನ ಪಡೆದುಕೊಳ್ಳುತ್ತಿದ್ದಾರೆ.

ಈ ರೀತಿ ವಂಚನೆಯಾಗಿ ನಡೆದಿರುವುದರಿಂದ ಸಾಕಷ್ಟು ನಿಜವಾದ ಫಲಾನುಭವಿಗಳಿಗೆ ರೇಷನ್ ಕಾರ್ಡ್ ಗಳು ಸಿಗುತ್ತಿಲ್ಲ. ಸರ್ಕಾರದ ನಿಯಮದ ಪ್ರಕಾರ ಪ್ರತಿ ಐದು ವರ್ಷಗಳಿಗೊಮ್ಮೆ ನಮ್ಮ ಬಳಿ ಇರುವ ರೇಷನ್ ಕಾರ್ಡ್ ಅಪ್ಡೇಟ್ ಆಗಬೇಕು, ಈ ಸಂದರ್ಭದಲ್ಲಿ ಅನರ್ಹರ ಬಳಿ ಇರುವ ರೇಷನ್ ಕಾರ್ಡ್ ಅನ್ನು ಸರ್ಕಾರ ರದ್ದುಪಡಿ ಮಾಡಿದೆ. ಈಗಾಗಲೇ ಸುಮಾರು ಮೂರು ಲಕ್ಷಕ್ಕೂ ಅಧಿಕ ಬಿಪಿಎಲ್ ರೇಷನ್ ಕಾರ್ಡ್ ರದ್ದಾಗಿದೆ ಎಂದು ವರದಿಯಾಗಿದೆ.

ರೈತರೇ ಬರ ಪರಿಹಾರದ ಹಣ ಖಾತೆಗೆ ಜಮಾ ಆಗಿಲ್ವಾ? ಈ ದಾಖಲೆ ಅಪ್ಲೋಡ್‌ ಮಾಡಿದ್ರೆ ನಾಳೆನೇ ಖಾತೆಗೆ ಹಣ

ಯಾರ ರೇಷನ್‌ ಕಾರ್ಡ್‌ ರದ್ದು ಆಗುತ್ತೆ ಗೊತ್ತಾ?

  • ರೇಷನ್ ಕಾರ್ಡ್ ಗೆ ಸಂಬಂಧಪಟ್ಟ ಹಾಗೆ ಸರ್ಕಾರ ಬೇರೆ ಬೇರೆ ಮಾನದಂಡಗಳನ್ನು ತಿಳಿಸಿದೆ ಈ ಮಾನದಂಡದ ಅಡಿಯಲ್ಲಿ ಬಾರದೆ ಇರುವವರು ಬಿಪಿಎಲ್ ಕಾರ್ಡ್ ಹೊಂದಿದ್ರೆ ಅವರ ಕಾರ್ಡ್ ಆಗುತ್ತೆ.
  • ಕಳೆದ ಆರು ತಿಂಗಳಿನಿಂದ ಯಾರೂ ಪಡಿತರ ವಸ್ತುಗಳನ್ನ ಖರೀದಿ ಮಾಡಿಲ್ಲವೋ ಅಂತವರ ರೇಷನ್ ಕಾರ್ಡ್ ರದ್ದಾಗುತ್ತದೆ.
  • ಬಿಪಿಎಲ್ ಕಾರ್ಡ್ ಗಳನ್ನು ಹೊಂದಿರುವವರು ತಮ್ಮ ಕಾರ್ಡನ್ನು ಆಧಾರ್ ಕಾರ್ಡ್ ಗೆ ಲಿಂಕ್ ಮಾಡಿಕೊಳ್ಳಬೇಕು. ಈ ರೀತಿ ಲಿಂಕ್ ಮಾಡಿಕೊಂಡಾಗ ಆ ಕುಟುಂಬದ ಎಲ್ಲಾ ವಿವರಗಳು ಕೂಡ ಸರ್ಕಾರದ ಡೇಟಾಬೇಸ್‌ನಲ್ಲಿ ಸ್ಟೋರ್ ಆಗುತ್ತದೆ. ಹಾಗಾಗಿ ಅಂತವರು ಉಳ್ಳವರಾಗಿದ್ರೆ ಅವರ ರೇಷನ್ ಕಾರ್ಡ್ ಅನ್ನು ಸರ್ಕಾರ ತಕ್ಷಣ ರದ್ದು ಪಡಿ ಮಾಡುತ್ತೆ.
  • ಇನ್ನು ಸರ್ಕಾರಿ ನೌಕರಿ ಮಾಡುತ್ತಿರುವವರು ಉತ್ತಮ ಆದಾಯ ಗಳಿಸುವವರು ಬಿಪಿಎಲ್ ಕಾರ್ಡ್ ಪಡೆದುಕೊಂಡು ಸರ್ಕಾರದ ಉಚಿತ ಯೋಜನೆ ಪಡೆದುಕೊಳ್ಳುತ್ತಿದ್ದರು ಅಂತವರ ಕಾರ್ಡ್ ರದ್ದಾಗುತ್ತದೆ.

ಕೇಂದ್ರ ಸರ್ಕಾರ ಬಿಪಿಎಲ್ ಕಾರ್ಡ್ ಬಿಡುಗಡೆ ಮಾಡಿದ ನಂತರ ಬಡತನ ರೇಖೆಗಿಂತ ಕೆಳಗಿರುವವರಿಗೆ ಸಾಕಷ್ಟು ಅನುಕೂಲ ಆಗಿದೆ. ಆದ್ರೆ ಇಲ್ಲಿಯೂ ಕೂಡ ವಂಚನೆಯು ನಡೆಯುತ್ತಿದ್ದು ಇದನ್ನು ಆಹಾರ ಇಲಾಖೆ ಗಮನಿಸಿದೆ.

ಹಾಗಾಗಿ ರಾಜ್ಯ ಸರ್ಕಾರದಲ್ಲಿ ಯಾರು ಅಕ್ರಮವಾಗಿ ಬಿಪಿಎಲ್ ಕಾರ್ಡ್ ಹೊಂದಲು ಇನ್ನು ಮುಂದೆ ಸಾಧ್ಯವಿಲ್ಲ. ಹೊಸ ರೇಷನ್ ಕಾರ್ಡ್ ವಿತರಣೆ ಮಾಡುವಾಗಲೂ ಬಹಳ ಕೂಲಂಕುಶವಾಗಿ ಅರ್ಜಿಯನ್ನು ಪರಿಶೀಲಿಸಿ ಅಂತವರಿಗೆ ಬಿಪಿಎಲ್ ಕಾರ್ಡ್ ಅಥವಾ ಎಪಿಎಲ್ ಕಾರ್ಡ್ ಎರಡರಲ್ಲಿ ಯಾವುದನ್ನು ವಿತರಣೆ ಮಾಡಬೇಕು ಎಂದು ಸರ್ಕಾರವೇ ನಿರ್ಧಾರ ಮಾಡಿ ಕಾರ್ಡ್ ವಿತರಣೆ ಮಾಡುತ್ತದೆ.

ಒಟ್ಟಿನಲ್ಲಿ ರೇಷನ್ ಕಾರ್ಡ್ ಹೊಂದಿರುವ ಸಾಕಷ್ಟು ಕುಟುಂಬಗಳು ಇನ್ನು ಮುಂದೆ ತಮ್ಮ ರೇಷನ್ ಕಾರ್ಡ್ ಕಳೆದುಕೊಳ್ಳುವ ಪರಿಸ್ಥಿತಿ ಎದುರಾಗಬಹುದು.

ಇತರೆ ವಿಷಯಗಳು

ಈ ಯೋಜನೆಗೆ ಅರ್ಜಿ ಸಲ್ಲಿಸಿದರೆ ಪತಿ-ಪತ್ನಿ ಇಬ್ಬರಿಗೂ ₹10 ಸಾವಿರ! ಹೊಸ ಯೋಜನೆ

ಮೋಟಾರ್ ವೆಹಿಕಲ್ ಇನ್ಸ್‌ಪೆಕ್ಟರ್ ಹುದ್ದೆಗೆ ಅರ್ಜಿ ಆಹ್ವಾನ.! ಜಸ್ಟ್‌ SSLC ಪಾಸಾಗಿದ್ರೆ ಸಾಕು ಸಿಗುತ್ತೆ ₹62,600 ಸಂಬಳ


Spread the love

Leave a Reply

Your email address will not be published. Required fields are marked *