rtgh

ಆಯುಷ್ಮಾನ್ ಕಾರ್ಡ್ ಪ್ರತಿಯೊಬ್ಬರು ಪಡೆದುಕೊಳ್ಳಿ ! ಉಚಿತ ಅರೋಗ್ಯ ಸೇವೆ ಸಿಗುತ್ತೆ !

Ayushman Card

ನಮಸ್ಕಾರ ಸ್ನೇಹಿತರೆ ಸಾಕಷ್ಟು ಯೋಜನೆಗಳು ದೇಶದಲ್ಲಿ ಇದೀಗ ಪರಿಚಯವಾಗುತ್ತಿದೆ ಅದರಂತೆ ದೇಶದ ಜನತೆಗಾಗಿ ವಿವಿಧ ಕಲ್ಯಾಣ ಯೋಜನೆಗಳನ್ನು ಭಾರತ ಸರ್ಕಾರ ಪರಿಚಯಿಸುತ್ತಿದೆ. ಆರ್ಥಿಕ ಸ್ಥಿತಿ ಆರ್ಥಿಕವಾಗಿ ಹಿಂದುಳಿದವರಿಗೆ ನೀಡುವಂತಹ ಸಾಕಷ್ಟು ಯೋಜನೆಗಳನ್ನು ಕೇಂದ್ರ ಸರ್ಕಾರ ಜಾರಿಗೆ ತಂದಿದ್ದು ಸರ್ಕಾರವು ಎಪಿಎಲ್ ರೇಷನ್ ಕಾರ್ಡ್ ಹಾಗೂ ಬಿಪಿಎಲ್ ರೇಷನ್ ಕಾರ್ಡ್ ಹೊಂದಿರುವವರಿಗೆ ಉಚಿತ ಆರೋಗ್ಯ ಸೌಲಭ್ಯವನ್ನು ಒದಗಿಸುತ್ತಿದೆ.

Ayushman Card
Ayushman Card

Contents

ಉಚಿತ ಆರೋಗ್ಯ ಚಿಕಿತ್ಸೆ :

ಆರೋಗ್ಯ ಸುರಕ್ಷತೆಗಾಗಿ ದೇಶದ ಬಡ ಜನರಿಗೆ ಕೇಂದ್ರ ಸರ್ಕಾರವು ಪ್ರಧಾನ ಮಂತ್ರಿ ಆಯುಷ್ಮಾನ್ ಭಾರತ್ ಯೋಜನೆಯನ್ನು ಪರಿಚಯಿಸಿದೆ. ಗುಣಮಟ್ಟದ ಆರೋಗ್ಯ ಸೌಲಭ್ಯವನ್ನು ಬಡವರು ಪಡೆಯಲಿ ಎನ್ನುವ ಉದ್ದೇಶದಿಂದ ಈ ಯೋಜನೆಯನ್ನು ಸರ್ಕಾರ ರೂಪಿಸಿದ್ದು ಈ ಯೋಜನೆಯ ಪ್ರಯೋಜನವನ್ನು ಪಡೆಯಬೇಕಾದರೆ ಮೊದಲು ಜನರು ಆಯುಷ್ಮಾನ್ ಕಾರ್ಡ್ ಅನ್ನು ಹೊಂದಿರುವುದು ಕಡ್ಡಾಯವಾಗಿದೆ. ತಲ ಅರ್ಹ ಫಲಾನುಭವಿಗಳಿಗೆ ವಾರ್ಷಿಕವಾಗಿ 5ಲಕ್ಷ ರೂಪಾಯಿ ಗಳ ಉಚಿತ ಚಿಕಿತ್ಸೆಯನ್ನು ಈ ಯೋಜನೆ ಮೂಲಕ ನೀಡುತ್ತದೆ.

ಆಯುಷ್ಮ ಕಾರ್ಡ್ ಯೋಜನೆ ಯ ಪ್ರಯೋಜನಗಳು :

ಆಯುಷ್ಮಾನ್ ಕಾರ್ಡ್ ನಿಂದ ಜನರು ವೈದ್ಯಕೀಯ ಪರೀಕ್ಷೆ ಚಿಕಿತ್ಸೆ ಮತ್ತು ಸಮಾಲೋಚನೆಯನ್ನು ಪಡೆಯಬಹುದು ಅಲ್ಲದೆ ಔಷಧ ಮತ್ತು ವೈದ್ಯಕೀಯ ಬಳಕೆ ವಸ್ತುಗಳನ್ನು ಪಡೆದುಕೊಳ್ಳಬಹುದು. ತೀವ್ರವಲ್ಲದ ಮತ್ತು ತೀವ್ರ ನಿಗ ಸೇವೆಗಳು ವಸತಿ ಸೌಲಭ್ಯಗಳು ಆಹಾರ ಸೇವೆಗಳು ರೋಗ ನಿರ್ಣಯ ಮತ್ತು ಪ್ರಯೋಗಾಲಯ ತನಿಖೆಗಳು ಆಸ್ಪತ್ರೆಗೆ ದಾಖಲಾದ ನಂತರದ ಅನುಸರಣ ಆರೈಕೆ 15 ದಿನಗಳವರೆಗೆ ಈ ಕಾರ್ಡ್ ನ ಮೂಲಕ ಪಡೆಯಬಹುದಾಗಿದೆ.

ಇದನ್ನು ಓದಿ : ದಿಶಾ ಸ್ಕಾಲರ್ಶಿಪ್ 25,000 ಹಣ ಪಡೆಯುವುದು ಹೇಗೆ ಇಲ್ಲಿದೆ ನೋಡಿ

ಕಡ್ಡಾಯ ದಾಖಲೆಗಳು :

ಆಯುಷ್ಮಾನ್ ಕಾರ್ಡ್ ಪಡೆಯಬೇಕಾದರೆ ಮುಖ್ಯವಾಗಿ ರೇಷನ್ ಕಾರ್ಡ್ ಮೊಬೈಲ್ ನಂಬರ್ ಆಧಾರ್ ಕಾರ್ಡ್ ಅಡ್ರಸ್ ಪ್ರೂಫ್ ರೆಸಿಡೆನ್ಸ್ ಸರ್ಟಿಫಿಕೇಟ್ ಇನ್ಕಮ್ ಸರ್ಟಿಫಿಕೇಟ್ ಪಾಸ್ಪೋರ್ಟ್ ಸೈಜ್ ಫೋಟೋ ಹೀಗೆ ಕೆಲವೊಂದು ಕಡ್ಡಾಯ ದಾಖಲೆಗಳನ್ನು ಹೊಂದಿರಬೇಕು.

ಆಯುಷ್ಮಾನ್ ಕಾಡಿಗೆ ಅರ್ಜಿ ಸಲ್ಲಿಸುವ ಪ್ರಕ್ರಿಯೆ :

ಕೇಂದ್ರ ಸರ್ಕಾರದ ಆಯುಷ್ಮಾನ್ ಕಾರ್ಡಿಗೆ ಅರ್ಜಿಯನ್ನು ಸಲ್ಲಿಸಲು ಜನರು ಸರ್ಕಾರದ ಅಧಿಕೃತ ವೆಬ್ಸೈಟ್ ಆದ https://beneficiary.nha.gov.in ಈ ವೆಬ್ ಸೈಟ್ ಗೆ ಭೇಟಿ ನೀಡಿ ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಬೇಕು.

ಒಟ್ಟಾರೆ ಕೇಂದ್ರ ಸರ್ಕಾರವು ಬಡವರ್ಗದ ಜನರಿಗೆ ಉಚಿತ ಚಿಕಿತ್ಸೆ ನೀಡುವ ಉದ್ದೇಶದಿಂದ ಆಯುಷ್ಮಾನ್ ಕಾರ್ಡ್ ಅನ್ನು ಪ್ರಧಾನ ಮಂತ್ರಿ ಆಯುಷ್ಮಾನ್ ಭಾರತ್ ಯೋಜನೆಯ ಮೂಲಕ ನೀಡುತ್ತಿದ್ದು ಇದರಿಂದ ಸುಮಾರು ಐದು ಲಕ್ಷದವರೆಗೆ ಉಚಿತ ಚಿಕಿತ್ಸೆ ಪಡೆಯಬಹುದಾಗಿದೆ. ಹಾಗಾಗಿ ಈ ಮಾಹಿತಿಯನ್ನು ಪ್ರತಿಯೊಬ್ಬರಿಗೂ ಶೇರ್ ಮಾಡುವ ಮೂಲಕ ಅವರು ಕೂಡ ಆಯುಷ್ಮಾನ್ ಕಾರ್ಡ್ ಪಡೆದುಕೊಳ್ಳಲು ತಿಳಿಸಿ ಧನ್ಯವಾದಗಳು.

ಇತರೆ ವಿಷಯಗಳು :

ಆಯುಷ್ಮಾನ್ ಕಾರ್ಡ್ ಪ್ರಮುಖ ಉದ್ದೇಶ …?

ಅರೋಗ್ಯ ಸೇವೆ ಉಚಿತ ನೀಡುವುದು.

ಯಾವ ಸರ್ಕಾರ ನೀಡುತ್ತಿದೆ..?

ಕೇಂದ್ರ ಸರ್ಕಾರ.

Spread the love

Leave a Reply

Your email address will not be published. Required fields are marked *