rtgh

ಗೃಹಲಕ್ಷ್ಮಿ ಹಣ ಜಮಾ : ಸ್ಟೇಟಸ್ ಚೆಕ್ ಮಾಡಲು ಹೊಸ ಲಿಂಕ್ ಬಿಡುಗಡೆ

gruhalkshmi-money-deposit

ನಮಸ್ಕಾರ ಸ್ನೇಹಿತರೆ ಕರ್ನಾಟಕ ರಾಜ್ಯ ಸರ್ಕಾರವು ಅನೇಕ ಯೋಜನೆಗಳನ್ನು ಜಾರಿ ಮಾಡಿದೆ. ಇದರಲ್ಲಿ ಪ್ರಮುಖವಾದ ಯೋಜನೆ ಗೃಹಲಕ್ಷ್ಮಿ ಯೋಜನೆ ಯಾಗಿದ್ದು .ಈ ಗೃಹಲಕ್ಷ್ಮಿ ಯೋಜನೆ ಮೂಲಕ ಕರ್ನಾಟಕದ ಪ್ರತಿಯೊಂದು ಅರ್ಹ ಮಹಿಳೆಯು ಸಹ 2000 ಹಣವನ್ನು ಪಡೆದುಕೊಳ್ಳುತ್ತಿದ್ದಾರೆ ಹಾಗೂ ಇದರ ಸದುಪಯೋಗ ಪಡೆದುಕೊಂಡು ಆರ್ಥಿಕವಾಗಿ ಸಬಲರಾಗಿರುತ್ತಾರೆ.

gruhalkshmi-money-deposit
gruhalkshmi-money-deposit

ಈ ಗೃಹಲಕ್ಷ್ಮಿ ಯೋಜನೆ ಅರ್ಜಿ ಸಲ್ಲಿಸಿದವರು ಅರ್ಜಿ ಆಯ್ಕೆ ಆಗಿದೆಯಾ ಅಥವಾ ರಿಜೆಕ್ಟ್ ಆಗಿದೆಯಾ ಎಂಬುದನ್ನು ತಿಳಿಯುವುದರ ಜೊತೆಗೆ ಗೃಹಲಕ್ಷ್ಮಿ ಯೋಜನೆಯ ಎಲ್ಲಾ ಕಂತಿನ ಹಣ ಜಮಾ ಆಗಿರುವುದರ ಬಗ್ಗೆ ಮಾಹಿತಿಯನ್ನು ತಿಳಿಯಬಹುದು .ಅದಕ್ಕಾಗಿ ಈ ಕೆಳಕಂಡ ಸುಲಭ ಮಾರ್ಗಗಳನ್ನು ಅನುಸರಿಸಬಹುದು.

ಗ್ಯಾರೆಂಟಿ ಯೋಜನೆ ಮಾಹಿತಿ :

ಕರ್ನಾಟಕದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬರುವುದಕ್ಕಿಂತ ಮುಂಚೆ 5 ಯೋಜನೆಗಳ ಜಾರಿಗೆ ಬರವಸೆಯನ್ನು ನೀಡಿತು .ಅದರಂತೆ 5 ಯೋಜನೆಗಳನ್ನು ಸರ್ಕಾರ ಈಗಾಗಲೇ ಅನುಷ್ಠಾನಗೊಳಿಸಿದ್ದು ಗೃಹಲಕ್ಷ್ಮಿ ಯೋಜನೆ ಪ್ರಾರಂಭವಾಗಿ ನಾಲ್ಕೈದು ತಿಂಗಳು ಈಗಾಗಲೇ ಹಣವು ಜಮಾ ಆಗಿರುತ್ತದೆ. ಮುಂದಿನ ಕಂತಿನ ಹಣ ಜಮಾ ಆಗುವುದರ ಬಗ್ಗೆ ಹಾಗೂ ಹಿಂದೆ ಯಾವೆಲ್ಲ ಕಂತಿನ ಹಣ ನಿಮಗೆ ಜಮಾ ಆಗಿದೆ ಎಂಬುದನ್ನು ತಿಳಿದುಕೊಳ್ಳಬಹುದು.

ಮಾಹಿತಿ ಕಣಜ ಜಾಲತಾಣ :

ಕರ್ನಾಟಕ ಸರ್ಕಾರವು ಜಾರಿಗೆ ಮಾಡಿರುವಂತಹ ಯೋಜನೆಯ ಲಾಭ ಪಡೆದಂತಹ ಮಹಿಳೆಯರು ಎಷ್ಟು ತಿಂಗಳ ಹಣ ಬಂದಿದೆ ಹಾಗೂ ಯಾವ ಖಾತೆಗೆ ಹಣ ಜಮಾ ಆಗಿದೆ ಎಂಬ ಎಲ್ಲಾ ಮಾಹಿತಿಯನ್ನು ಒಂದೇ ಕಡೆ ತಿಳಿದುಕೊಳ್ಳಲು ಹೊಸ ಜಾಲತಾಣವನ್ನು ರಾಜ್ಯ ಸರ್ಕಾರ ತಿಳಿಸಿದೆ. ಮಾಹಿತಿ ಕಣಜ ವೆಬ್ ಸೈಟಿನಲ್ಲಿ ರೇಷನ್ ಕಾರ್ಡ್ ಅಥವಾ ಆಧಾರ್ ಕಾರ್ಡ್ ನಂಬರ್ ನಮೂದಿಸಿದರೆ ಎಲ್ಲಾ ತಂತಿನ ಹಣದ ವಿವರ ತಿಳಿಯಬಹುದು

ಅರ್ಜಿ ಸಲ್ಲಿಸಲು ಬೇಕಾದ ದಾಖಲೆ :

  • ಮಹಿಳೆಯ ಆಧಾರ ಕಾರ್ಡ್.
  • ಮಹಿಳೆಯ ರೇಷನ್ ಕಾರ್ಡ್.
  • ಬ್ಯಾಂಕ್ ಪುಸ್ತಕ.
  • ನೋಂದಣಿಯಾದ ಮೊಬೈಲ್ ಸಂಖ್ಯೆ.

ಯಾವ ಮಹಿಳೆಯು ಇನ್ನೂ ಗೃಹಲಕ್ಷ್ಮಿ ಯೋಜನೆಯ ಲಾಭ ಪಡೆದಿಲ್ಲ ಆ ಮಹಿಳೆಯರು ಕೂಡಲೇ ಈ ಮೇಲ್ಕಂಡ ದಾಖಲೆಗಳನ್ನು ನೀಡುವ ಮುಖಾಂತರ ಪುನಃ ಅರ್ಜಿ ಸಲ್ಲಿಸಬಹುದು.

ಯೋಜನೆಯ ಹೆಸರುಗೃಹಲಕ್ಷ್ಮಿ ಯೋಜನೆ
ಇಲಾಖೆಯ ಹೆಸರು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ
ಜಾರಿಗೆ ಮಾಡಿದ ಸರ್ಕಾರ ಕರ್ನಾಟಕ ಸರ್ಕಾರ
ಅಧಿಕೃತ ಜಾಲತಾಣhttps://sevasindhugs.karnataka.gov.in/
ಗೃಹಲಕ್ಷ್ಮಿ ತಿಂಗಳ ಹಣ ಎಷ್ಟು 2,000
ಹಣ ಎಲ್ಲಿ ಚೆಕ್ ಮಾಡಬೇಕು https://dbtbharat.gov.in/

ಗೃಹಲಕ್ಷ್ಮಿ ಯೋಜನೆ ಸ್ಟೇಟಸ್ ಚೆಕ್ ಮಾಡುವ ವಿಧಾನ :

ಅನೇಕ ಮಹಿಳೆಯರು ಗೃಹಲಕ್ಷ್ಮಿ ಹಣ ನಮಗೆ ಬಂದಿದೆಯಾ? ಇಲ್ಲವಾ ಎಂಬುದನ್ನು ತಿಳಿದುಕೊಳ್ಳಲು ಖಚಿತಪಡಿಸಿಕೊಳ್ಳಲು ಈ ಕೆಳಕಂಡ ಹಂತಗಳನ್ನು ತಪ್ಪದೇ ಅನುಸರಿಸಿದರೆ ಗೃಹಲಕ್ಷ್ಮಿ ಯೋಜನೆ ಹಣ ಜಮಾ ಆಗಿರುವುದರ ಬಗ್ಗೆ ತಿಳಿಯಬಹುದು.

ಹಂತ-1 ಇಲ್ಲಿ DBT ನೀಡಿರುವ ಅಧಿಕೃತ ವೆಬ್ಸೈಟ್ಗೆ ಭೇಟಿ ನೀಡಿ.

ಹಂತ-2 ಸರ್ಚ್ ಎನ್ನುವ ಆಯ್ಕೆ ಕಾಣುತ್ತದೆ, ಅಲ್ಲಿ ನೀವು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯನ್ನು ಆಯ್ಕೆ ಮಾಡಿ.

ಹಂತ-3 ಆಯ್ಕೆ ಮಾಡಿದ ನಂತರ ಆ ಇಲಾಖೆಯ ಮೇಲೆ ಕ್ಲಿಕ್ ಮಾಡಿ.

ಹಂತ-4 ನಂತರ ನಿಮಗೆ ಎರಡು ಮುಖ್ಯ ಮುಖಪುಟಗಳು ತೆರೆದುಕೊಳ್ಳಲಿದೆ ಅದರಲ್ಲಿ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯನ್ನು ಆಯ್ಕೆ ಮಾಡಿಕೊಳ್ಳಿ.

ಹಂತ-5 ಗೃಹಲಕ್ಷ್ಮಿ ಅಪ್ಲಿಕೇಷನ್ ವರದಿ ಕಾಣಿಸುತ್ತದೆ ಅದರ ಮೇಲೆ ಆಯ್ಕೆ ಮಾಡಿ.

ಹಂತ-6 ಹೊಸ ಮುಖಪುಟ ತೆಗೆದುಕೊಳ್ಳಲಿದೆ ಅಲ್ಲಿ ಗೃಹಲಕ್ಷ್ಮಿ ಸ್ಟೇಟಸ್ ಇರುತ್ತದೆ ಅಲ್ಲಿ ನೀವು ನಿಮ್ಮ ರೇಷನ್ ಕಾರ್ಡ್ನ ಸಂಖ್ಯೆಗಳನ್ನು ನಮೂದಿಸಿ ಸಲ್ಲಿಸು ಎಂಬ ಆಯ್ಕೆಯನ್ನು ಕ್ಲಿಕ್ ಮಾಡಿ.

ಹಂತ-7 ನಿಮ್ಮ ಆಧಾರ್ ನೊಂದಿಗೆ ಲಿಂಕ್ ಆಗಿರುವ ಬ್ಯಾಂಕ್ ಖಾತೆಗೆ ಎಷ್ಟು ತಿಂಗಳ ಹಣ ಜಮಾ ಆಗಿದೆ ಎಂಬ ಎಲ್ಲಾ ಮಾಹಿತಿ ನಿಮಗೆ ಕಾಣುತ್ತದೆ .ಗೃಹಲಕ್ಷ್ಮಿಯ ಇಲ್ಲಿಯವರೆಗೂ ಜಮಾ ಆಗಿರುವ ಕಂತಿನ ಹಣದ ಬಗ್ಗೆ ಮಾಹಿತಿ ದೊರೆಯಲಿದೆ.

ಮುಖ್ಯಾಂಶಗಳನ್ನು ತಿಳಿದುಕೊಳ್ಳಿ :

  • ಗೃಹಲಕ್ಷ್ಮಿ ಯೋಜನೆಯ ಫಲಾನುಭವಿಗಳು E-KYC ಯನ್ನು ಮಾಡಿಸಿಕೊಳ್ಳಬೇಕು.
  • ಬ್ಯಾಂಕ್ ಖಾತೆಯೊಂದಿಗೆ ಆಧಾರ ಕಾರ್ಡ್ ಲಿಂಕ್ ಆಗಿರಬೇಕು.
  • ನಿಮ್ಮ ಮೊಬೈಲ್ ಸಂಖ್ಯೆಗೆ ಪ್ರತಿ ತಿಂಗಳು ಹಣ ಜಮಾದ ಬಗ್ಗೆ ಮಾಹಿತಿ ಬರುತ್ತದೆ.
  • ಮೊಬೈಲ್ ಹೊಂದಿಲ್ಲದೆ ಇರುವವರು ಈ https://dbtbharat.gov.in/ ಲಿಂಕ್ ನ ಬಳಸಿಕೊಳ್ಳಬಹುದು.

ಈ ಮಾಹಿತಿ ಎಲ್ಲಾ ಕರ್ನಾಟಕದ ಮಹಿಳೆಯರಿಗೆ ತಿಳಿಸಿ ಧನ್ಯವಾದ .

ಇತರೆ ವಿಷಯಗಳು :

ಗೃಹಲಕ್ಷ್ಮಿ ಯೋಜನೆಯ ತಿಂಗಳ ಹಣ ಎಷ್ಟು..?

2 ,000 ತಿಂಗಳ ಹಣ.

ಗೃಹಲಕ್ಷ್ಮಿ ಯೋಜನೆ ಸ್ಟೇಟಸ್ ಚೆಕ್ ಮಾಡುವ ಹೊಸ ವೆಬ್ಸೈಟ್ ಯಾವುದು..?

ಮಾಹಿತಿ ಕಣಜ.

ಮಾಹಿತಿ ಕಣಜ ಹೊರೆತುಪಡಿಸಿ ಗೃಹಲಕ್ಷ್ಮಿ ಹಣ ಹೇಗೆ ಚೆಕ್ ಮಾಡಬಹುದು..?

DBT ಅಪ್ಲಿಕೇಶನ್ ಮೂಲಕ ಚೆಕ್ ಮಾಡಿಕೊಳ್ಳಬಹುದು.

Spread the love

Leave a Reply

Your email address will not be published. Required fields are marked *