rtgh

ಉದ್ಯೋಗಿನಿ ಯೋಜನೆ : ಮಹಿಳೆಯರಿಗೆ 3 ಲಕ್ಷ ಹಣ : ಎಲ್ಲರೂ ತಕ್ಷಣ ಅರ್ಜಿ ಸಲ್ಲಿಸಿ

udyogini-s-cheme-karnataka

ನಮಸ್ಕಾರ ಸ್ನೇಹಿತರೆ ಭಾರತ ಸರ್ಕಾರವು ಅನೇಕ ಯೋಜನೆಗಳನ್ನು ಮಹಿಳೆಯರಿಗಾಗಿ ಜಾರಿಗೆ ತರುತ್ತದೆ. ಮಹಿಳೆಯರು ಸಹ ಉದ್ಯಮದಲ್ಲಿ ತೊಡಗಿಕೊಳ್ಳಲು ಕನಸನ್ನು ಹೊಂದಿರುತ್ತಾರೆ. ಅವರಿಗಾಗಿ ವ್ಯಾಪಾರ ಮಾಡಲು ತರಬೇತಿಯ ಜೊತೆಗೆ ಸಾಲವನ್ನು ನೀಡಲಾಗುವುದು. ನಿಮ್ಮ ವ್ಯಾಪಾರಕ್ಕಾಗಿ ಸರ್ಕಾರ ಸಹಾಯಧನವನ್ನು ನೀಡುತ್ತಿದೆ ಇದರ ಬಗ್ಗೆ ತಿಳಿದುಕೊಳ್ಳಿ.

udyogini-s-cheme-karnataka
udyogini-scheme-karnataka

Contents

ಉದ್ಯೋಗಿನಿ ಯೋಜನೆ ಮಾಹಿತಿ :

ಕರ್ನಾಟಕ ರಾಜ್ಯ ಮಹಿಳಾ ಅಭಿವೃದ್ಧಿ ನಿಗಮ ಮಹಿಳೆಯರು ಸಹ ತಮ್ಮ ವ್ಯವಹಾರಗಳಲ್ಲಿ ತೊಡಗಿಕೊಳ್ಳಲಿ ಎಂದು ಉದ್ಯೋಗಿನಿ ಯೋಜನೆಯನ್ನು ಪ್ರಾರಂಭ ಮಾಡಿದೆ. ಮಹಿಳೆಯರು ಸಹ ಉದ್ಯಮದಲ್ಲಿ ತೊಡಗಿಕೊಂಡು ಆರ್ಥಿಕ ಜೀವನವನ್ನು ಸುಧಾರಿಸಿಕೊಳ್ಳಲು ಕಡಿಮೆ ಅಥವಾ ಬಡ್ಡಿ ಇಲ್ಲದೆ ಸಾಲವನ್ನು ಪಡೆಯಬಹುದಾಗಿದೆ.

ಯೋಜನೆಯ ಪ್ರಮುಖ ಅಂಶ :

ಮಹಿಳೆಯರು ಈ ಯೋಜನೆಯಲ್ಲಿ ವ್ಯಾಪಾರಕ್ಕಾಗಿ ಸಾಲವನ್ನು ಪಡೆಯಬಹುದು ಅಥವಾ ಉದ್ಯಮವನ್ನು ಸೃಷ್ಟಿಸಲು ಉದ್ಯಮಿಗಳಾಗಲು ತರಬೇತಿ ಬೇಕಾದರೆ ಸರ್ಕಾರಿ ಹಾಗೂ ಖಾಸಗಿ ವಲಯದಲ್ಲಿ ಅವರಿಗೆ ತರಬೇತಿ ನೀಡಲಾಗುವುದು.

ಯೋಜನೆ ಯಾವಾಗ ಪ್ರಾರಂಭವಾಗಿದೆ :

ಉದ್ಯೋಗಿನಿ ಯೋಜನೆಯ ಮಹಿಳೆಯರ ವ್ಯಾಪಾರ ಕ್ಷೇತ್ರವನ್ನು ಹೆಚ್ಚಿಸಲು ಹಾಗೂ ಅವರಿಗೆ ಅವಕಾಶ ದೊರೆಯಲೆಂದು ಸರ್ಕಾರ 2020ರಲ್ಲಿ ಈ ಯೋಜನೆಯನ್ನು ಜಾರಿಗೆ ತಂದಿರುತ್ತದೆ.ಸರ್ಕಾರದ ಪ್ರಮುಖ ಉದ್ದೇಶ ಮಹಿಳೆಯರನ್ನು ಆರ್ಥಿಕ ಸ್ವಾವಲಂಬಿಗಳಾಗಿಸುವುದು ಮತ್ತು ಉದ್ಯಮಿಗಳಾಗಿ ಅನೇಕರಿಗೆ ಪ್ರೇರೇಪಣೆಯನ್ನು ನೀಡಲು.

ಕೌಶಲ್ಯ ತರಬೇತಿ ನೀಡಲಾಗುತ್ತೆ :

ಈ ಯೋಜನೆಯ ಮೂಲಕ ಮಹಿಳೆಯರಿಗೆ ಕಡಿಮೆ ಬಡ್ಡಿ ದರದಲ್ಲಿ ಹಣವನ್ನು ನೀಡುವುದಲ್ಲದೆ ಮಹಿಳೆಯರಿಗಾಗಿ ಕೌಶಲ್ಯ ಅಭಿವೃದ್ಧಿ ತರಬೇತಿಗಳನ್ನು ಆಯೋಜಿಸಲಾಗುವುದು.

ಎಷ್ಟು ಹಣ ನೆರವು ನೀಡುತ್ತಾರೆ.?

ಉದ್ಯೋಗಿನಿ ಯೋಜನೆಯೆಲ್ಲಿ ಮಹಿಳೆಯರಿಗಾಗಿ ಆರ್ಥಿಕ ಹಣಕಾಸಿನ ನೆರವನ್ನು ನೀಡುವ ಉದ್ದೇಶದಿಂದ 3,000 ಹಣವನ್ನು ಬಡ್ಡಿ ರಹಿತವಾಗಿ ಎಸ್ಸಿ ಎಸ್ಟಿ ಮಹಿಳೆಯರು ಪಡೆದುಕೊಳ್ಳಬಹುದಾಗಿದೆ.

ಯೋಜನೆಗೆ ಸಂಬಂದಿಸಿದ ವಿವರ :

ಈ ಯೋಜನೆಗೆ ಯಾವುದೇ ರೀತಿ ತಾರತಮ್ಯವಿಲ್ಲದೆ ಮಹಿಳೆಯರಿಗೆ ಬಡ್ಡಿ ಇಲ್ಲದೆ ಹಣ ನೀಡಲು ತೀರ್ಮಾನಿಸಲಾಗಿದ್ದು ಯಾವುದಾದರೂ ಜಿಲ್ಲೆಯ ಕಾರ್ಪೊರೇಷನ್ ಶಾಖೆ ಯಿಂದ ಸಂಪೂರ್ಣ ಬಡ್ಡಿ ರಹಿತ ಸಾಲವನ್ನು ಪಡೆಯಬಹುದು.

  • ಖಾಸಗಿ ಹಾಗೂ ಸರ್ಕಾರಿ ಬ್ಯಾಂಕುಗಳಲ್ಲಿ ಹಣ ಪಡೆಯಬಹುದು.
  • ಪ್ರಾದೇಶಿಕ ಗ್ರಾಮೀಣ ಬ್ಯಾಂಕುಗಳಲ್ಲಿ ಹಣ ಪಡೆಯಬಹುದು.
  • ವಾಣಿಜ್ಯ ಬ್ಯಾಂಕುಗಳ ಮೂಲಕ ಹಣ ಪಡೆಯಬಹುದು .

ಯಾವ ಉದ್ಯಮಿಗಳಿಗೆ ಸಾಲ ನೀಡಲಾಗುತ್ತೆ :

ಉದ್ಯೋಗಿನಿ ಯೋಜನೆಯ ಮೂಲಕ ಮಹಿಳೆಯರಿಗೆ ವ್ಯವಹಾರ ಮಾಡಲು ಹಣಕಾಸಿನ ನೆರವನ್ನು ನೀಡಲಾಗುತ್ತಿದ್ದು ಒಟ್ಟು 88 ಸಣ್ಣ ಕೈಗಾರಿಕೆಗಳಿಗೆ ಈ ಯೋಜನೆಯ ಹಣವನ್ನು ಸದುಪಯೋಗಪಡಿಸಿಕೊಳ್ಳಬಹುದು. ಸಬ್ಸಿಡಿಯ ಜೊತೆಗೆ ಹಣಕಾಸಿನ ನೆರವು ಸಹ ದೊರೆಯಲಿದೆ.

ಪ್ರಮುಖ ಉದ್ಯಮಗಳ ಮಾಹಿತಿ :

ಮಹಿಳೆಯರು ಈ ಕೆಳಗಿನ ಉದ್ಯಮಗಳನ್ನು ಸ್ಥಾಪಿಸಿದರೆ .ಅವರಿಗೆ ಬೇಕಾದಂತಹ ಮೂರು ಲಕ್ಷದವರೆಗಿನ ಬಡ್ಡಿ ರಹಿತ ಸಾಲ ದೊರೆಯುತ್ತದೆ.

  1. ಬೇಕರಿ ಅಂಗಡಿ ಇಡಬಹುದು.
  2. ದಿನಸಿ ಸಾಮಗ್ರಿಗಳ ಅಂಗಡಿ ಇಡಬಹುದು.
  3. ಮೀನು ಮಾರಾಟ ಅಂಗಡಿ.
  4. ಉಪ್ಪಿನಕಾಯಿ ವ್ಯಾಪಾರದ ಅಂಗಡಿ.
  5. ಬ್ಯೂಟಿ ಪಾರ್ಲರ್ಗಳನ್ನು ತೆಗೆಯಬಹುದು.
  6. ಹೊಲಿಗೆ ಯಂತ್ರಗಳನ್ನು ಪಡೆಯಬಹುದು.

ಈ ಮೇಲ್ಕಂಡ ಸಣ್ಣ ಕೈಗಾರಿಕೆಗಳ ಜೊತೆಗೆ ಅನೇಕ ಉದ್ಯಮಗಳನ್ನು ಸ್ಥಾಪಿಸಲು ಅವಕಾಶ ಇರುತ್ತದೆ. ಒಟ್ಟು 88 ಸಣ್ಣ ಕೈಗಾರಿಕೆಗಳ ಸ್ಥಾಪನೆಗೆ ಅವಕಾಶ.

ಅರ್ಜಿ ಸಲ್ಲಿಸುವ ವಿಧಾನ ತಿಳಿಯಿರಿ :

ಹಂತ-1 ಮಹಿಳೆಯರು ಯಾವುದೇ ಖಾಸಗಿ ಅಥವಾ ಸರ್ಕಾರಿ ಬ್ಯಾಂಕುಗಳಿಗೆ ಹೋಗಿ ಉದ್ಯೋಗಿ ಸಾಲದ ಅರ್ಜಿ ಫಾರ್ಮ್ ಅನ್ನು ಭರ್ತಿ ಮಾಡಿ ಆನ್ಲೈನ್ ಮುಖಾಂತರ ಬ್ಯಾಂಕಿನ ಅಧಿಕೃತ ವೆಬ್ಸೈಟ್ನಲ್ಲಿ ಅರ್ಜಿ ಸಲ್ಲಿಸಬಹುದು.

ಹಂತ-2 ಅರ್ಜಿಯ ಜೊತೆಗೆ ಅಗತ್ಯವಿರುವ ಎಲ್ಲಾ ದಾಖಲೆಗಳನ್ನು ಭರ್ತಿ ಮಾಡಿ ಸಂಪೂರ್ಣ ಮಾಹಿತಿ ತುಂಬಬೇಕು.

ಹಂತ-3 ಫಾರಂನಲ್ಲಿ ನಮೂದಿಸಲಾದ ಹಾಗೂ ಇತರೆ ದಾಖಲೆಗಳನ್ನು ಸಲ್ಲಿಸಬೇಕು.

ಹಂತ-4 ಮಹಿಳೆಯರು ಯಾವ ವ್ಯಾಪಾರದ ಸಾಲದ ಪಡೆಯುತ್ತಾರೋ ಅನ್ನುವುದನ್ನು ಅರ್ಜಿ ಫಾರಂನಲ್ಲಿ ನಮೂದಿಸಬೇಕು.

ಹಂತ-5 ಅರ್ಜಿ ಸಲ್ಲಿಸಿದ ಮೇಲೆ ಸ್ವಲ್ಪ ದಿನಗಳ ನಂತರ ಬ್ಯಾಂಕಿಗೆ ಭೇಟಿ ನೀಡಿ ಲೋನ್ ಅನುಮೋದನೆ ದೊರೆತಿದೆಯಾ ಎಂದು ತಿಳಿದುಕೊಳ್ಳಬೇಕು.

ಅರ್ಹತಾ ಮಾನದಂಡಗಳು ತಿಳಿಯಿರಿ :

  • ಅರ್ಜಿ ಸಲ್ಲಿಸುವರು ಮಹಿಳೆಯರಾಗಿದ್ದರೆ ಮಾತ್ರ ಅವಕಾಶ.
  • ಮಹಿಳೆಗೆ ಕನಿಷ್ಠ 18 ವರ್ಷ ತುಂಬಿರಬೇಕು ಗರಿಷ್ಠ 55 ವರ್ಷ.
  • ಮಹಿಳೆಯರ ವಾರ್ಷಿಕ ಕುಟುಂಬ ಆದಾಯ ಒಂದುವರೆ ಲಕ್ಷಕ್ಕಿಂತ ಮಿದಿರಬಾರದು.
  • ಮಹಿಳೆಯರು ಮೂರು ಲಕ್ಷದವರೆಗೂ ಸಾಲವನ್ನು ಪಡೆಯಲು ಅರ್ಹತೆ ಹೊಂದಿರುತ್ತಾರೆ.
  • ಅಂಗವಿಕಲೆ ಅಥವಾ ವಿಧವೆಯರಾಗಿದ್ದರೆ ಆ ಮಹಿಳೆಯರಿಗೆ ಈ ಮೇಲ್ಕಂಡ ಕೆಲವು ನಿಯಮಗಳಲ್ಲಿ ಸಡಿಲಿಕೆ ಇರಲಿದೆ.

ಅರ್ಜಿ ಸಲ್ಲಿಸಲು ಬೇಕಾದ ದಾಖಲೆ :

  • ಮಹಿಳೆಯರ ಆಧಾರ ಕಾರ್ಡ್.
  • ಮಹಿಳೆಯ ಜನನ ಪ್ರಮಾಣ ಪತ್ರ.
  • ಮಹಿಳೆಯ ಇತ್ತೀಚಿಗಿನ ಎರಡು ಭಾವಚಿತ್ರ.
  • ಜಾತಿ ಪ್ರಮಾಣ ಪತ್ರ.
  • ಪಡಿತರ ಚೀಟಿ.
  • ಆದಾಯ ಪ್ರಮಾಣ ಪತ್ರ.
  • ಬ್ಯಾಂಕ್ ಪುಸ್ತಕ.

ಸಂಪೂರ್ಣ ಯೋಜನೆ ವರದಿ :

ಯೋಜನೆಯ ಹೆಸರು ಉದ್ಯೋಗಿನಿ ಯೋಜನೆ
ಅಧಿಕೃತ ಜಾಲತಾಣ https://bangalorerural.nic.in/
ಯೋಜನೆ ಆರಂಭಿಸಿದ ಸರ್ಕಾರ ಕೇಂದ್ರ ಸರ್ಕಾರ.
ಯೋಜನೆಗೆ ಕನಿಷ್ಠ ವಯೋಮಿತಿ 18 ವರ್ಷ.
ಯಾರು ಅರ್ಜಿ ಸಲ್ಲಿಸಬಹುದುಮಹಿಳೆಯರಿಗೆ ಮಾತ್ರ ಅರ್ಜಿ ಸಲ್ಲಿಸಲು ಅವಕಾಶ.
ಎಷ್ಟು ಸಣ್ಣ ಕೈಗಾರಿಕೆಗಳಿಗೆ ಅರ್ಜಿ ಸಲ್ಲಿಸಬಹುದು 88 ಸಣ್ಣ ಕೈಗಾರಿಕೆಗಳ ಸ್ಥಾಪನೆಗೆ ಅರ್ಜಿ ಸಲ್ಲಿಸಬಹುದು.

ಯೋಜನೆಯ ಪ್ರಮುಖ ಪ್ರಯೋಜನಗಳು :

  • ಮಹಿಳೆಯರನ್ನು ಆರ್ಥಿಕವಾಗಿ ಉತ್ತೇಜನ ನೀಡಲು ಪ್ರಮುಖ ದಾರಿಯಾಗಿದೆ.
  • ಅನಕ್ಷರತೆ ಮತ್ತು ಬಡತನದ ಮಹಿಳೆಯರು ಸುಲಭವಾಗಿ ಯೋಜನೆಯ ಲಾಭ ಪಡೆಯಬಹುದು.
  • ಮಹಿಳೆಯರಿಗೆ ಕೌಶಲ್ಯ ತರಬೇತಿಯನ್ನು ನೀಡಲಾಗುವುದು.
  • ಮಹಿಳೆಯರಿಗೆ ಆರ್ಥಿಕ ಅಭಿವೃದ್ಧಿಗೆ ಹಾಗೂ ಮಹಿಳಾ ಸಬಲೀಕರಣಕ್ಕೆ ಉಪಯೋಗವಾಗಲಿದೆ.

ಈ ಮೇಲ್ಕಂಡ ಅಗತ್ಯ ದಾಖಲೆಗಳನ್ನು ಸಲ್ಲಿಸುವ ಮುಖಾಂತರ ಉದ್ಯೋಗಿನಿ ಯೋಜನೆಗೆ ಅರ್ಜಿ ಸಲ್ಲಿಸಿ ಆರ್ಥಿಕ ಸಹಾಯಧನವನ್ನು ಪಡೆದುಕೊಳ್ಳಬಹುದು. ಈ ಮಾಹಿತಿಯನ್ನು ಮಹಿಳೆಯರಿಗೆ ಉದ್ಯಮವನ್ನು ಸ್ಥಾಪನೆ ಮಾಡಬೇಕೆಂದು ಕೊಂಡಿರುವ ಜನರಿಗೆ ತಲುಪಿಸಿ ಧನ್ಯವಾದಗಳು.

ಇತರೆ ವಿಷಯಗಳು :

ಇಲ್ಲಿಯವರೆಗೂ ಎಷ್ಟು ಮಹಿಳೆಯರು ಉದ್ಯೋಗಿನಿ ಯೋಜನೆಯಲ್ಲಿ ತೊಡಗಿಕೊಂಡಿದ್ದಾರೆ..?

53,726 ಮಹಿಳೆಯರು ಉದ್ಯೋಗ ಯೋಜನೆಯನ್ನು ಉಪಯೋಗಿಸಿದ್ದಾರೆ ಲಾಭ ಪಡೆದುಕೊಂಡಿದ್ದಾರೆ

ಈ ಯೋಜನೆ ಎಷ್ಟು ಮಕ್ಕಳಿಗೆ ಬೆಂಬಲವನ್ನು ನೀಡುತ್ತಿದೆ..?

ಉದ್ಯೋಗಿನಿ ಯೋಜನೆಯಲ್ಲಿ ಮಕ್ಕಳ ಬೆಂಬಲ ಪಡೆಯುತ್ತಿರುವ ಸಂಖ್ಯೆ 5,432

Spread the love

Leave a Reply

Your email address will not be published. Required fields are marked *