rtgh

ಸಿಬಿಲ್ ಸ್ಕೋರನ್ನು ಹೆಚ್ಚು ಮಾಡುವ ಸೀಕ್ರೆಟ್ ಟ್ರಿಕ್ಸ್ ಇಲ್ಲಿದೆ – Sybil Score

information-that-will-increase-the-cibil-score

ನಮಸ್ಕಾರ ಸ್ನೇಹಿತರೆ ಬ್ಯಾಂಕಿಗೆ ಸಾಲ ಕೇಳಲು ಹೋದಾಗ ಅಥವಾ ಕಾರು ಬೈಕ್ ಖರೀದಿ ಮಾಡಲು ಲೋನ್ ಕೇಳಲು ಫೈನಾನ್ಸ್ ಗಳಿಗೆ ಹೋದಾಗ ಅವರು ಕೇಳುವಂತಹ ಮೊದಲ ಪ್ರಶ್ನೆ ಸಿವಿಲ್ ಸ್ಕೋರ್ನ ಬಗ್ಗೆ ಆಗಿರುತ್ತದೆ.

information-that-will-increase-the-cibil-score
information-that-will-increase-the-cibil-score

ಈ ಸಿಬಿಲ್ ಅಥವಾ ಕ್ರೆಡಿಟ್ ಸ್ಕೋರ್ ಸಾಮಾನ್ಯವಾಗಿ ಎಲ್ಲರಿಗೂ ತಿಳಿದಿರುವುದಿಲ್ಲ. ಯಾವುದೇ ಬ್ಯಾಂಕಿಗೆ ಅಥವಾ ಫೈನಾನ್ಸ್ ಗಳಿಗೆ ಸಾಲ ಪಡೆಯಲು ಹೋದಾಗ ಖಂಡಿತವಾಗಿಯೂ ಸಿಬಿಲ್ ಸ್ಕೋರ್ನ ಬಗ್ಗೆ ಗಮನಹರಿಸಲೇ ಬೇಕಾಗುತ್ತದೆ. ಹಾಗಾದರೆ ಈ ಸಿಬಿಲ್ ಸ್ಕೋರ್ ಏನು? ಯಾಕೆ ಸಿಬಿಲ್ ಸ್ಕೋರ್ ಇಂಪಾರ್ಟೆಂಟ್ ಆಗಿದೆ ಸುಲಭವಾಗಿ ಹೇಗೆ ಕಡಿಮೆ ಸಿ ಬಿ ಸ್ಕೊರಿದ್ದರೆ ಅದನ್ನು ಹೆಚ್ಚು ಮಾಡಿಕೊಳ್ಳಬೇಕು. ಎಂಬುದರ ಸಂಪೂರ್ಣ ಮಾಹಿತಿಯನ್ನು ಈ ಲೇಖನದಲ್ಲಿ ತಿಳಿದುಕೊಳ್ಳಬಹುದು.ಸಿಬಿಲ್ ಸ್ಕೋರನ್ನು ಸಾಲಕ್ಕೆ ಅರ್ಜಿ ಸಲ್ಲಿಸುವ ಸಂದರ್ಭದಲ್ಲಿ ಹೆಚ್ಚು ಮಾಡುವ ಸೀಕ್ರೆಟ್ ಟ್ರಿಕ್ಸ್ ಇಲ್ಲಿದೆ

ಸಿಬಿಲ್ ಸ್ಕೋರ್ :

  • ಸಾಲವನ್ನು ಪಡೆದುಕೊಂಡರೆ ಪರಿಪೂರ್ಣವಾಗಿ ಅದನ್ನು ಮರುಪಾವತಿ ಮಾಡುವ ಸಾಮರ್ಥ್ಯ ನಿಮ್ಮಲ್ಲಿ ಇದೆಯೇ ಇಲ್ಲವೇ ಎನ್ನುವುದನ್ನು ಸಿಬಿಲ್ ಸ್ಕೋರ್ನ ಮೂಲಕ ನೋಡಬಹುದಾಗಿದೆ. ಮೂರು ಅಂಕಿಯ ಸಂಖ್ಯಾ ಪ್ರಾತಿನಿಧ್ಯವನ್ನು ಈ ಸಿವಿಲ್ ಸ್ಕೋರ್ ಹೊಂದಿರುತ್ತದೆ.
  • ಸಾಮಾನ್ಯವಾಗಿ ಭಾರತದಲ್ಲಿ 300 ರಿಂದ 900 ಶ್ರೇಣಿಯವರಿಗೆ ಸಿಬಿಲ್ ಸ್ಕೋರ್ ಇರುತ್ತದೆ. ಉತ್ತಮ ಕ್ರೆಡಿಟ್ ಸ್ಕೋರ್ ಹೊಂದಿರುವುದು ಖಂಡಿತವಾಗಿಯೂ ಅದರಿಂದ ಹೆಚ್ಚಿನ ಪ್ರಯೋಜನಗಳನ್ನು ಪಡೆಯಬಹುದಾಗಿದೆ.
  • ನಿಮಗೆ ಬೇಕಾದ ರೀತಿಯಲ್ಲಿ ಸಾಲಗಳು ಅಥವಾ ಹೊಸ ಸಾಲಗಳಿಗೆ ಸಿಬಿಲ್ ಸ್ಕೋರ್ ಉತ್ತಮವಾಗಿದ್ದರೆ ಅನುಮೋದನೆಯನ್ನು ಪಡೆಯುವುದು ಸುಲಭವಾಗಿರುತ್ತದೆ.
  • 750ಕ್ಕಿಂತ ಸಿಬಿಲ್ ಸ್ಕೋರ್ ಹೆಚ್ಚಿದ್ದರೆ ಅದನ್ನು ಉತ್ತಮ ಸಿವಿಲ್ ಸ್ಕೋರ್ ಎಂದು ಪರಿಗಣಿಸಲಾಗುತ್ತದೆ ಅಲ್ಲದೆ ವೇಗವಾಗಿ ಸಾಲವನ್ನು ಅನುಮೋದಿಸಲು ಉತ್ತಮ ಕ್ರೆಡಿಟ್ ಸ್ಕೋರ್ ನೆರವಾಗುತ್ತದೆ.

ಹೇಗೆ ಸಿಬಿಲ್ ಸ್ಕೋರನ್ನು ಮೈನ್ಟೈನ್ ಮಾಡಬೇಕು :

ಸಿಬಿಲ್ ಸ್ಕೋರನ್ನು ಯಾವ ರೀತಿ ಮೆಂಟೇನ್ ಮಾಡಬೇಕು ಎಂಬುದರ ಬಗ್ಗೆ ಮಾಹಿತಿಯನ್ನು ತಿಳಿಸಲಾಗುತ್ತಿದ್ದು ಕೈಗೆಟುಕುವ ಬಡ್ಡಿದರ ಮತ್ತು ಮರುಪಾವತಿ ಸೇರಿದಂತೆ ಸಾಲದಾತರೊಂದಿಗೆ ನಿಯಮಗಳು ಮತ್ತು ಶರತ್ತುಗಳಿಗೆ ಮಾತುಕತೆ ನಡೆಸುವಂತಹ ಪವರ್ ಇದು ಒದಗಿಸುತ್ತದೆ.

ನಿಗದಿತ ಸಮಯಕ್ಕೆ ಬಿಲ್ ಗಳನ್ನು ಪಾವತಿಸಬೇಕು :

ಲೋನ್ ಇಎಂಐಗಳ ಸಕಾಲಿಕ ಪಾವತಿಯನ್ನು ಹಾಗೂ ಕ್ರೆಡಿಟ್ ಕಾರ್ಡ್ ಬಿಲ್ಗಳು ಕಸಿರಪಡಿಸಿಕೊಳ್ಳಬೇಕು. ಪಾವತಿಗಳು ವಿಳಂಬವಾದರೆ ನಿಮ್ಮ ಸ್ಕೋರ್ನ ಮೇಲೆ ಹೆಚ್ಚಿನ ಪರಿಣಾಮ ಬೀರಬಹುದು. ರಿಮೈಂಡರ್ ಗಳನ್ನು ಮೊಬೈಲ್ ನಲ್ಲಿ ಹೊಂದಿಸುವ ಮೂಲಕ ಅಥವಾ ಸ್ವಯಂ ಚಾಲಿತ ಮರುಪಾವತಿಯನ್ನು ಸಕ್ರಿಯಗೊಳಿಸಿ, ಪಾವತಿ ಮಾಡಬಹುದಾಗಿದೆ. ಇದರಿಂದ ನಿಗದಿತ ಸಮಯಕ್ಕೆ ಬಿಲ್ ಗಳನ್ನು ಪಾವತಿಸಬಹುದು.

ಕ್ರೆಡಿಟ್ ಬಳಕೆಯನ್ನು ಕಡಿಮೆ ಮಾಡಿ :

ಕ್ರೆಡಿಟ್ ಕಾರ್ಡ್ ಕಂಪನಿಗಳು ಕ್ರೆಡಿಟ್ ಕಾರ್ಡ್ ಗಳನ್ನು ತುರ್ತು ಪರಿಸ್ಥಿತಿಗಾಗಿ ಹೆಚ್ಚುವರಿ ಬ್ಯಾಲೆನ್ಸ್ ಅನ್ನು ಒದಗಿಸುತ್ತಾರೆ ಹೀಗಿರುವ ಸಂದರ್ಭದಲ್ಲಿ ಆರೋಗ್ಯಕರ ಕ್ರೆಡಿಟ್ ಸ್ಕೋರನ್ನು ಕಾಪಾಡಿಕೊಳ್ಳಲು ಕಡಿಮೆ ಇರಿಸಿಕೊಳ್ಳಬೇಕು. ಕ್ರೆಡಿಟ್ ಲಿಮಿಟ್ 30% ಗಿಂತ ಕಡಿಮೆ ಇರಿಸಿಕೊಳ್ಳಲು ಸಾಕಷ್ಟು ಪ್ರಯತ್ನಿಸ ಬೇಕಾಗುತ್ತದೆ.

ಇದನ್ನು ಓದಿ : ರೈತರ ಸಾಲ ಮನ್ನಾ ಪಟ್ಟಿ ಬಿಡುಗಡೆ 80% ರಷ್ಟು ಹೆಸರು ಇಲ್ಲಿದೆ ನೋಡಿ

ಸಾಲ ಮರುಪಾವತಿ ಮಾಡಬೇಕು :

ಯಾವುದೇ ರೀತಿಯ ಸಾಲವನ್ನು ನೀವು ಈಗಾಗಲೇ ಪಡೆದಿದ್ದರೆ ಸಕಾಲಿಕ ಸಮಯಕ್ಕೆ ಸರಿಯಾಗಿ ಸಾಲವನ್ನು ಮರುಪಾವತಿಸಬೇಕು ಇಲ್ಲದಿದ್ದರೆ ಇದು ನಿಮ್ಮ ಕ್ರೆಡಿಟ್ ಸ್ಕೋರ್ನ ಮೇಲೆ ಹೆಚ್ಚಿನ ಪರಿಣಾಮ ಬೀರುತ್ತದೆ ಹೀಗಾಗಿ ನೀವು ಸಾಲವನ್ನು ಪಡೆಯುವ ಮುನ್ನ ಮರುಪಾವತಿಸುವ ಸಾಮರ್ಥ್ಯವನ್ನು ಹೊಂದಿದ್ದರೆ ಮಾತ್ರ ಸಾಲ ಪಡೆಯಬೇಕು.

ಕಠಿಣ ವಿಚಾರಗಳನ್ನು ಮಿತಗೊಳಿಸಬೇಕು :

ಕ್ರೆಡಿಟ್ ಕಾರ್ಡ್ ಅಥವಾ ಸಾಲಕ್ಕಾಗಿ ಅರ್ಜಿ ಸಲ್ಲಿಸಿದ ಸಂದರ್ಭದಲ್ಲಿ ಸಾಮಾನ್ಯವಾಗಿ ಕ್ರೆಡಿಟ್ ಕಾರ್ಡ್ ವಿಚಾರಣೆಗೆ ಅರ್ಜಿ ಸಲ್ಲಿಸಬೇಕಾಗುತ್ತದೆ ಇದನ್ನು ಕಠಿಣ ವಿಚಾರಣೆ ಎಂದು ಸಹ ಕರೆಯಲಾಗುತ್ತದೆ. ಕಠಿಣ ವಿಚಾರಣೆಗಳು ಪದೇಪದೇ ಸಲ್ಲಿಸಿದರೆ ನಿಮ್ಮ ಕ್ರೆಡಿಟ್ ಸ್ಕೋರ್ನ ಮೇಲೆ ಅದು ಕೆಟ್ಟ ಪರಿಣಾಮವನ್ನು ಬೀರುತ್ತದೆ ಹಾಗಾಗಿ ಅಗತ್ಯವಿದ್ದಾಗ ಮಾತ್ರ ವಿಚಾರಣೆಗೆ ಅರ್ಜಿ ಸಲ್ಲಿಸಬೇಕು.

ಹೀಗೆ ಕೆಲವೊಂದು ಟಿಪ್ಸ್ ಗಳನ್ನು ಅನುಸರಿಸುವ ಮೂಲಕ ಕ್ರೆಡಿಟ್ ಅಭ್ಯಾಸಗಳನ್ನು ಜವಾಬ್ದಾರಿಯುತವಾಗಿ ನಿರ್ವಹಿಸಿ ನೀವು ಕ್ರೆಡಿಟ್ ಅರ್ಹತೆಯನ್ನು ಸ್ಥಿರವಾಗಿ ಹೆಚ್ಚಿಸಬಹುದಾಗಿದೆ ಅಲ್ಲದೆ ಹಣಕಾಸಿನ ಅವಕಾಶಗಳನ್ನು ಉತ್ತಮವಾಗಿ ಪ್ರವೇಶಿಸಬಹುದು. ಹಾಗಾಗಿ ನಿಮ್ಮ ಸ್ನೇಹಿತರು ಯಾರಾದರೂ ಕ್ರೆಡಿಟ್ ಸ್ಕೋರ್ ಕಡಿಮೆ ಇತ್ತು ಎಂದು ತಿಳಿದಿದ್ದರೆ ಅವರಿಗೆ ಈ ಮಾಹಿತಿಯನ್ನು ಶೇರ್ ಮಾಡಿ ಧನ್ಯವಾದಗಳು.

ವರದಿಯ ವಿವರ :

ವರದಿಯ ಮಾಹಿತಿ ಸಿಬಿಲ್ ಸ್ಕೋರ
ಸಿಬಿಲ್ ಸ್ಕೋರ ನೋಡುವ ಲಿಂಕ್ ಇಲ್ಲಿದೆ ಕ್ಲಿಕ್ ಮಾಡಿ

ಇತರೆ ವಿಷಯಗಳು :

Spread the love

Leave a Reply

Your email address will not be published. Required fields are marked *