rtgh

ವಿದ್ಯಾರ್ಥಿ ವೇತನದ ಅರ್ಜಿ ಸಲ್ಲಿಕೆ ದಿನಾಂಕ ವಿಸ್ತರಣೆ : ತಕ್ಷಣ ಈ ಕೆಲಸ ಮಾಡಿ

Scholarship Application Date Extension

ನಮಸ್ಕಾರ ಸ್ನೇಹಿತರೆ ಕರ್ನಾಟಕ ರಾಜ್ಯದಲ್ಲಿ ಅನೇಕ ವಿದ್ಯಾರ್ಥಿಗಳು ಶೈಕ್ಷಣಿಕ ವಿದ್ಯಾಭ್ಯಾಸವನ್ನು ಮುಂದುವರಿಸಲು ಹಾಗೂ ಇನ್ನಿತರ ಕಾರಣಗಳಿಗಾಗಿ ಸರ್ಕಾರವು ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನವನ್ನು ನೀಡುತ್ತಿದ್ದು ಅದರ ಸದುಪಯೋಗವನ್ನು ಪ್ರತಿಯೊಬ್ಬ ವಿದ್ಯಾರ್ಥಿಯು ಸಹ ಪಡೆದುಕೊಳ್ಳಲೆಂದು ವಿದ್ಯಾರ್ಥಿ ವೇತನಕ್ಕೆ ನಿಗದಿಯಾಗಿರುವ ದಿನಾಂಕವನ್ನು ವಿಸ್ತರಣೆ ಮಾಡಲಾಗಿದ್ದು ಇದರ ಬಗ್ಗೆ ಸಂಪೂರ್ಣವಾಗಿ ತಿಳಿದುಕೊಳ್ಳಿ.

Scholarship Application Date Extension
Scholarship Application Date Extension

ವಿದ್ಯಾರ್ಥಿವೇತನಕ್ಕೆ ಅರ್ಜಿ ಆಹ್ವಾನ :

ಕರ್ನಾಟಕ ರಾಜ್ಯದಲ್ಲಿ ಇರುವಂತಹ ಹಿಂದುಳಿದ ವರ್ಗದವರು ವಿದ್ಯಾರ್ಥಿ ವೇತನ ಪಡೆಯಲೆಂದು ಮೆಟ್ರಿಕ್ ನಂತರದ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿಗಳಿಗೆ ಅದರಲ್ಲೂ ಪ್ರವರ್ಗ1 ಹಾಗೂ ಅಲೆಮಾರಿ ಹಾಗೂ ಅರೆ ಮಾರಿ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನಕ್ಕೆ ಅರ್ಜಿ ಸಲ್ಲಿಸಲು ಅವಕಾಶವನ್ನು ನೀಡಿದ್ದು ಈ ಅವಧಿಯನ್ನು ಸಹ ವಿಸ್ತರಣೆ ಮಾಡಲಾಗಿದೆ.

ಆನ್ಲೈನ್ ಮುಖಾಂತರ ಅರ್ಜಿ ಆಹ್ವಾನ :

2023 24 ನೇ ಸಾಲಿನಲ್ಲಿ ಅನೇಕ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನ ನೀಡುವ ಸಲುವಾಗಿ ಸರ್ಕಾರ ಆನ್ಲೈನ್ ಮುಖಾಂತರ ವಿದ್ಯಾರ್ಥಿ ವೇತನಕ್ಕೆ ಅರ್ಜಿ ಆಹ್ವಾನ ಮಾಡಿತ್ತು. ಇದರಂತೆ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನ ಹಾಗು ಶುಲ್ಕ ಮರುಪಾವತಿ ವಿದ್ಯಾಶ್ರೀ ಊಟ ಮತ್ತು ವಸತಿ ಯೋಜನೆಗೆ ಸೌಲಭ್ಯ ಪಡೆಯಲು ಅರ್ಜಿಯನ್ನು ಆಹ್ವಾನಿಸಲಾಗಿತ್ತು.

ಅರ್ಜಿ ಸಲ್ಲಿಸಲು ದಿನಾಂಕ ನಿಗದಿಯಾಗಿತ್ತು :

ವಿದ್ಯಾರ್ಥಿಗಳು ಅರ್ಜಿ ಸಲ್ಲಿಸಲು ಕೊನೆಯ ದಿನಾಂಕವನ್ನು ನಿಗದಿಗೊಳಿಸಲಾಗಿತ್ತು. ಫೆಬ್ರವರಿ ತಿಂಗಳಿನಲ್ಲಿ 15ನೇ ತಾರೀಕಿನವರೆಗೂ ಈಗ ಮುಂದುವರಿಸಲು ತೀರ್ಮಾನಿಸಲಾಗಿದೆ. ಈ ಮಾಹಿತಿಯನ್ನು ಪ್ರತಿಯೊಬ್ಬ ವಿದ್ಯಾರ್ಥಿಯು ತಿಳಿದುಕೊಳ್ಳಬೇಕು.

ದಿನಾಂಕ ವಿಸ್ತರಣೆ ಮಾಹಿತಿ :

ಈ ಹಿಂದೆ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕವನ್ನು ನೀಡಿದ ಕಾರಣ ಅನೇಕ ವಿದ್ಯಾರ್ಥಿಗಳು ಅರ್ಜಿ ಸಲ್ಲಿಸದ ಕಾರಣ ಪೋಷಕರು ಹಾಗೂ ವಿದ್ಯಾರ್ಥಿಗಳು ಪುನಹ ಶಿಕ್ಷಣ ಸಂಸ್ಥೆಗಳಿಗೆ ಮನವಿಯನ್ನು ಸಲ್ಲಿಸಿರುವ ಕಾರಣದಿಂದಾಗಿ ಆ ಜನರ ಉದ್ದೇಶದಿಂದ ಹಾಗೂ ಅವರಿಗೆ ಅಗತ್ಯವಿರುವ ಕಾರಣ ಈ ದಿನಾಂಕವನ್ನು ವಿಸ್ತರಣೆ ಮಾಡಲಾಗಿದೆ ಎಂದು ತಿಳಿಸಲಾಗಿದೆ.

ವಿದ್ಯಾರ್ಥಿ ವೇತನಕ್ಕೆ ಅರ್ಹತೆ :

ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯು ಅರ್ಜಿಯನ್ನು ಆಹ್ವಾನ ಮಾಡಿದ ಕಾರಣ. ಈ ವಿದ್ಯಾರ್ಥಿ ವೇತನವನ್ನು ಪಡೆಯಲು ಈ ಕೆಳಕಂಡ ಅರ್ಹತೆಯನ್ನು ಹೊಂದಿರಬೇಕು.

  • ವಿದ್ಯಾರ್ಥಿಯು ಹಿಂದುಳಿದ ಸಮುದಾಯದರಾಗಿರಬೇಕು.
  • ಪಿಯುಸಿ ಅಥವಾ ಇನ್ನಿತರ ಕೋಸುಗಳನ್ನು ಮಾಡುತ್ತಿರಬೇಕು.
  • ವಿದ್ಯಾರ್ಥಿನಿಯರಿಗೆ ಶೇಕಡ 30ರಷ್ಟು ಮೀಸಲಾತಿ ಇರುತ್ತದೆ.
  • ಅರ್ಹತೆ ಪರೀಕ್ಷೆಯಲ್ಲಿ ಅರ್ಜಿ ಸಲ್ಲಿಸಿದವರು ಕನಿಷ್ಠ 50ರಷ್ಟು ಅಂಕಗಳನ್ನು ಪಡೆದುಕೊಂಡಿರಬೇಕು.
  • ಕುಟುಂಬದ ವಾರ್ಷಿಕ ಆದಾಯವು 2 ಲಕ್ಷಕ್ಕಿಂತ ಹೆಚ್ಚಿನ ಮಿತಿಯನ್ನು ಹೊಂದಿರಬಾರದು.
  • ಅರ್ಜಿದಾರರು ಕರ್ನಾಟಕ ಕಾಯಂ ನಿವಾಸಿಯಾಗಿರಬೇಕು.

ಅರ್ಜಿ ಸಲ್ಲಿಸಲು ಅಗತ್ಯವಿರುವ ದಾಖಲೆ:

  1. ವಿದ್ಯಾರ್ಥಿಯ ಆಧಾರ್ ಸಂಖ್ಯೆ.
  2. ವಿದ್ಯಾರ್ಥಿಯ ನೊಂದಣಿ ಸಂಖ್ಯೆ.
  3. ಪೋಷಕರ ಆಧಾರ್ ಸಂಖ್ಯೆ.
  4. ವಿದ್ಯಾರ್ಥಿಯ ಆರ್ ಡಿ ನಂಬರ್.
  5. ಜಾತಿ ಪ್ರಮಾಣ ಪತ್ರ.
  6. ಆದಾಯ ಪ್ರಮಾಣ ಪತ್ರ.
  7. ಅಂಕಪಟ್ಟಿ.
  8. ಶೈಕ್ಷಣಿಕ ವಿದ್ಯಾ ಸಂಸ್ಥೆಯ ಶುಲ್ಕರಿಸಿದಿ.
  9. ಅಂಗವಿಕಲಾಗಿದ್ದರೆ ಅಂಗವಿಕಲ ಕಾರ್ಡ್.

ಈ ಮೇಲ್ಕಂಡ ಅಗತ್ಯ ದಾಖಲೆಗಳನ್ನು ಅರ್ಜಿ ಸಲ್ಲಿಸುವ ಸಂದರ್ಭದಲ್ಲಿ ನೀಡಬೇಕು ಇಲ್ಲವಾದರೆ ನಿಮಗೆ ವಿದ್ಯಾರ್ಥಿ ವೇತನ ದೊರೆಯುವುದಿಲ್ಲ.

ಅರ್ಜಿ ಸಲ್ಲಿಸುವ ವಿಧಾನ ಗಮನಿಸಿ:

  • https://ssp.karnataka.gov.in ಈ ಅಧಿಕೃತ ವೆಬ್ಸೈಟ್ಗೆ ಮೊದಲು ಭೇಟಿ ನೀಡಬೇಕು.
  • ನಂತರ ನಿಮ್ಮ ಖಾತೆಯನ್ನು ರಚಿಸಿಕೊಳ್ಳಿ.
  • ಆದರ್ ಸಂಖ್ಯೆ ಹಾಗೂ ನಿಮ್ಮ ಹೆಸರನ್ನು ನಮೂದಿಸುವ ಮೂಲಕ ಇನ್ನಿತರ ಅಗತ್ಯ ದಾಖಲೆಗಳನ್ನು ಸಲ್ಲಿಸಿ.
  • ನಿಮ್ಮ ತಂದೆ ತಾಯಿಯ ಆದ ಸಂಖ್ಯೆಯನ್ನು ನಮೂದಿಸಿ ನಂತರ ನಿಮ್ಮ ಹತ್ತಿರ ಇರುವ ಮೊಬೈಲ್ ಸಂಖ್ಯೆಯನ್ನು ನೀಡಿ ಸಬ್ಮಿಟ್ ಮಾಡಿ ನಂತರ ನಿಮ್ಮ ಮೊಬೈಲ್ ಗೆ ಓಟಿಪಿಯನ್ನು ಬರುತ್ತದೆ ಅದನ್ನು ಎಂಟರ್ ಮಾಡಿ.
  • ಅಜ್ಜಿದಾರರ ಬಳಕೆಗಾಗಿ ಐಡಿ ಮತ್ತು ಪಾಸ್ವರ್ಡ್ ಅನ್ನು ಪಡೆದುಕೊಳ್ಳಿ ನಂತರ ನೋಂದಣಿಯಾಗಿ.

ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ :

ದೇವರಾಜ್ ಅರಸು ಭವನ
ಜಿಲ್ಲಾ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ
ತಾಲೂಕು ಕಚೇರಿಯನ್ನು ಸಂಪರ್ಕಿಸಬಹುದು.

ಯೋಜನೆ ಸಂಪೂರ್ಣ ವಿವರ :

ಯೋಜನೆ ಹೆಸರು ವಿದ್ಯಾರ್ಥಿ ವೇತನ
ವಿದ್ಯಾರ್ಥಿ ವೇತನಫೆಬ್ರವರಿ 15
ಕುಟುಂಬದ ವಾರ್ಷಿಕ ಆದಾಯ 2 ಲಕ್ಷಕ್ಕಿಂತ ಮೀರಬಾರದು
ಅಧಿಕೃತ ಜಾಲತಾಣಇಲ್ಲಿದೆ ಕ್ಲಿಕ್ ಮಾಡಿ

ಇತರೆ ವಿಷಯಗಳು :

ಯಾವ ವಿದ್ಯಾರ್ಥಿ ಅರ್ಜಿ ಸಲ್ಲಿಸಬಹುದು..?

ಹಿಂದುಳಿದ ವರ್ಗಗಳ ಸಮುದಾಯಕ್ಕೆ ಸೇರಿದ ವಿದ್ಯಾರ್ಥಿ.

ವಿದ್ಯಾರ್ಥಿ ವೇತನದ ಹಣ ಎಷ್ಟು..?

ಶುಲ್ಕ ಮರುಪಾವತಿ ಹಾಗೂ ಸಹಾಯಧನ.

ಅರ್ಜಿ ಸಲ್ಲಿಸುವ ವಿಧಾನ..?

ಆನ್ಲೈನ್ ಮುಖಾಂತರ ಅರ್ಜಿ ಸಲ್ಲಿಸಬಹುದು.

Spread the love

Leave a Reply

Your email address will not be published. Required fields are marked *