ನಮಸ್ಕಾರ ಸ್ನೇಹಿತರೇ ರಾಜೀವ್ ಗಾಂಧಿ ಪಂಚಾಯತ್ ರಾಜ್ ಫಿಲಂ ಮಾಡಿರುವುದರ ಬಗ್ಗೆ ಮಾಹಿತಿಯನ್ನು ತಿಳಿಸಲಾಗುತ್ತಿದೆ. ಕರ್ನಾಟಕ ರಾಜ್ಯದ ಕಲ್ಯಾಣ ಕರ್ನಾಟಕ ವ್ಯಾಪ್ತಿಯಲ್ಲಿ ಬರುವಂತಹ ಜಿಲ್ಲೆಗಳಲ್ಲಿ 51 ತಾಲೂಕುಗಳಲ್ಲಿ ಎರಡು ವರ್ಷಗಳ ಅವಧಿಗೆ ಪ್ರತಿ ತಾಲೂಕಿಗೆ ಒಬ್ಬ ಫೆಲೋಗಳಂತೆ ನೇಮಕಾತಿ ಮಾಡಿಕೊಳ್ಳಲು ರಾಜ್ಯ ಸರ್ಕಾರ ಮಂಜೂರಾತಿ ನೀಡಿದೆ. ಮಾಸಿಕ 60,000ಗಳನ್ನು ಶಿಷ್ಯವೇತನವಾಗಿ ಆಯ್ಕೆಯಾದ ಫೆಲೋಗಳಿಗೆ ಸರ್ಕಾರ ನೀಡುತ್ತದೆ ಈ ಕಾರ್ಯಕ್ರಮದ ಅವಧಿ ಎರಡು ವರ್ಷಗಳಾಗಿದೆ.
Contents
ಪಂಚಾಯತ್ ರಾಜ್ ಫಿಲೋಶಿಪ್ :
ಸ್ಥಳೀಯ ಆಡಳಿತವನ್ನು ಬಲಪಡಿಸುವ ಸಲುವಾಗಿ ಕರ್ನಾಟಕ ಕಲ್ಯಾಣ ವ್ಯಾಪ್ತಿಯಲ್ಲಿ ಬರುವ ಜಿಲ್ಲೆಗಳಲ್ಲಿ ಗ್ರಾಮೀಣ ಅಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯು ರಾಜೀವ್ ಗಾಂಧಿ ಪಂಚಾಯತ್ ರಾಜ್ ಫಿಲೋರ್ಶಿಪ್ ಘೋಷಣೆ ಮಾಡಿದೆ.
ಎರಡು ವರ್ಷಗಳ ಅವಧಿಗೆ ರಾಜ್ಯದ ಕರ್ನಾಟಕ ಕಲ್ಯಾಣ ವ್ಯಾಪ್ತಿಯಲ್ಲಿ ಬರುವ ಜಿಲ್ಲೆಗಳಲ್ಲಿ 51 ತಾಲೂಕುಗಳಿಗೆ ಸಂಬಂಧಿಸಿದಂತೆ ಪ್ರತಿ ತಾಲೂಕಿಗೆ ಒಬ್ಬರಂತೆ ಫೆಲೋಗಳನ್ನು ನೇಮಕಾತಿ ಮಾಡಿಕೊಳ್ಳಲು ರಾಜ್ಯ ಸರ್ಕಾರ ಮಂಜೂರಾತಿ ನೀಡಿದೆ. ಈ ಫೆಲೋಶಿಪನ್ನು ಆಡಳಿತ ಹಾಗೂ ವಿಕೇಂದ್ರೀಕರಣ ವ್ಯವಸ್ಥೆಯನ್ನು ಬಲಪಡಿಸುವ ಸಲುವಾಗಿ ಸ್ಥಾಪಿಸಲಾಗಿದ್ದು ನಿರಂತರ ಸಾಮಾಜಿಕ ಆರ್ಥಿಕ ಸಮಸ್ಯೆಯನ್ನು ಪಂಚಾಯತ್ ರಾಜ್ ಕ್ಷೇತ್ರದಲ್ಲಿ ನಿಭಾಯಿಸಲು ಸ್ಥಳೀಯ ಆಡಳಿತಕ್ಕೆ ಈ ಫೆಲೋಗಳು ನೆರವಾಗುತ್ತಾರೆ.
ಇದನ್ನು ಓದಿ : ವಿದ್ಯಾರ್ಥಿ ವೇತನದ ಅರ್ಜಿ ಸಲ್ಲಿಕೆ ದಿನಾಂಕ ವಿಸ್ತರಣೆ : ತಕ್ಷಣ ಈ ಕೆಲಸ ಮಾಡಿ
ಫೆಲೋಷಿಪ್ ಆರಂಭಿಸಲು 3 ಮುಖ್ಯ ಕಾರಣ :
- ಸ್ಥಳೀಯ ಆಡಳಿತದಲ್ಲಿ ನಾಗರಿಕರ ಭಾಗವಹಿಸುವಿಕೆಯನ್ನು ಹೊಸ ದೃಷ್ಟಿಕೋನಗಳು ಆಲೋಚನೆಗಳು ಮತ್ತು ಚಿಂತನೆಗಳ ಮೂಲಕ ಹೆಚ್ಚಿಸಲು ವಿದ್ಯಾವಂತ ತರಬೇತಿ ಪಡೆದ ಮತ್ತು ಪ್ರೇರಿತ ಯುವ ವೃತ್ತಿಪರ ಕೌಶಲ್ಯತೆಯನ್ನು ಬಳಸಿಕೊಳ್ಳುವುದು ರಾಜೀವ್ ಗಾಂಧಿ ಪಂಚಾಯತ್ ರಾಜ್ ಫಿಲೋರ್ಶಿಪ್ ಆರಂಭಿಸಲು ಮುಖ್ಯ ಕಾರಣವಾಗಿದೆ.
- ಸ್ಥಳೀಯ ಮತ್ತು ಆಡಳಿತ ಅಭಿವೃದ್ಧಿ ಕಾರ್ಯಕ್ರಮಗಳ ಅನುಷ್ಠಾನ ಕುರಿತಂತೆ ಜಿಲ್ಲಾ ಪಂಚಾಯಿತಿ ತಾಲೂಕು ಪಂಚಾಯಿತಿ ಮತ್ತು ಗ್ರಾಮ ಪಂಚಾಯಿತಿ ಮಟ್ಟದ ಅಭಿವೃದ್ಧಿ ಚಟುವಟಿಕೆಗಳ ಅನುಷ್ಠಾನದಲ್ಲಿ ತೊಡಗಿಕೊಂಡು ಕ್ಷೇತ್ರ ಮಟ್ಟದ ಸ್ಥಿತಿಗತಿ ಮತ್ತು ಕಲಿಕೆಗಳ ಅಧ್ಯಯನ ಮಾಡುವುದನ್ನು ಈ ಯುವ ಸಮೂಹ ಪ್ರಮುಖ ಹೊಣೆಯಾಗಿ ಹೊರಲಿದ್ದಾರೆ.
- ಆಯ್ಕೆಯಾದ ಫೆಲೋಗಳಿಗೆ ಶಿಷ್ಯವೇತನವಾಗಿ ಮಾಸಿಕ 60,000ಗಳನ್ನು ನೀಡುವುದರ ಜೊತೆಗೆ ಈ ಕಾರ್ಯಕ್ರಮದ ಅವಧಿಯನ್ನು ಎರಡು ವರ್ಷಗಳವರೆಗೆ ನಿಗದಿಪಡಿಸಲಾಗಿದೆ.
10 ಗ್ರಾಮ ಪಂಚಾಯಿತಿಗಳು ಆಯ್ಕೆ :
- ತಮ್ಮ ಚಟುವಟಿಕೆಗಳನ್ನು ಕೈಗೊಳ್ಳಲು ಫೆಲೋಗಳು ಗ್ರಾಮ ಪಂಚಾಯಿತಿ ಕಾರ್ಯನಿರ್ವಹಣೆ ಶ್ರೇಣಿಕರಣದಲ್ಲಿ ಕೊನೆಯಲ್ಲಿರುವ 10 ಪಂಚಾಯಿತಿಗಳನ್ನು ಆಯ್ಕೆ ಮಾಡಿಕೊಂಡು ತಮ್ಮ ಚಟುವಟಿಕೆಗಳನ್ನು ಅಲ್ಲಿ ಕೇಂದ್ರೀಕರಿಸಲಿದ್ದಾರೆ.
- ನಿಯುಕ್ತಿಗೊಳಿಸಲಾದ ತಾಲೂಕಿನಲ್ಲಿಯೇ ಅವಧಿ ಮುಗಿಯುವವರೆಗೆ ವಾಸ್ತವ್ಯ ಹೂಡಬೇಕಾಗಿಲ್ಲದೆ ನಿರಂತರವಾಗಿ ಗ್ರಾಮ ಪಂಚಾಯಿತಿಗಳಿಗೆ ಪ್ರವಾಸ ಕೈಗೊಂಡು ಗ್ರಾಮೀಣ ಪ್ರದೇಶದಲ್ಲಿ ಕಾರ್ಯನಿರ್ವಹಿಸುವುದು ಕಡ್ಡಾಯವಾಗಿದೆ.
- ಆದ್ದರಿಂದ ಈ ಫಿಲೋಶೀಟ್ ನ ಪ್ರಯೋಜನವನ್ನು ನೈಜ ಸಮಾಜ ಸೇವೆಯಲ್ಲಿ ಆಸಕ್ತಿ ಇರುವ ಯುವಜನರು ಪಡೆಯಬೇಕೆಂದು ಕೇಳಿಕೊಳ್ಳುತ್ತೇನೆ ಎಂದು ಗ್ರಾಮೀಣಾಭಿವೃದ್ಧಿ ಸಚಿವರಾದ ಪ್ರಿಯಾಂಕ ಖರ್ಗೆಯವರು ತಿಳಿಸಿದ್ದಾರೆ.
ಅರ್ಜಿ ಸಲ್ಲಿಸಲು ಪ್ರಮುಖ ದಾಖಲೆ :
- ಆಧಾರ್ ಕಾರ್ಡ್ .
- ಅಂಕ ಪಟ್ಟಿ .
- ಅರ್ಜಿ ಫಾರಂ .
- ಮೊಬೈಲ್ ಸಂಖ್ಯೆ .
ವರದಿ ಸಂಪೂರ್ಣ ಮಾಹಿತಿ :
ಹುದ್ದೆಯ ಹೆಸರು | ಪಂಚಾಯತ್ ರಾಜ್ ಫಿಲೋಶಿಪ್ |
ಉದ್ಯೋಗ ಸ್ಥಳ | ಕರ್ನಾಟಕ |
ವೇತನ ಮಾಸಿಕ | 60,000 |
ತಾಲೂಕಿಗೆ ಎಷ್ಟು ಜನ ಆಯ್ಕೆ | ಒಬ್ಬರು ಮಾತ್ರ |
ನೇರ ಲಿಂಕ್ | ಇಲ್ಲಿದೆ ಕ್ಲಿಕ್ ಮಾಡಿ |
ಒಟ್ಟಾರೆ ರಾಜ್ಯ ಸರ್ಕಾರವು ರಾಜೀವ್ ಗಾಂಧಿ ಪಂಚಾಯತ್ ರಾಜ್ ಫಿಲೋನ್ಶಿಪ್ ಘೋಷಣೆ ಮಾಡಿದ್ದು ಯಾವೆಲ್ಲ ಯುವಜನರು ನೈಜ ಸಮಾಜ ಸೇವೆಯಲ್ಲಿ ಆಸಕ್ತಿ ಹೊಂದಿರುತ್ತಾರೆ ಅವರು ಈ ಫಿಲೋಶಿಪ್ ನ ಪ್ರಯೋಜನ ಪಡೆದು ಗ್ರಾಮ ಪಂಚಾಯಿತಿಯಲ್ಲಿ ಸಾಕಷ್ಟು ಕಾರ್ಯಗಳನ್ನು ಮಾಡಬಹುದಾಗಿದೆ.
ಹಾಗಾಗಿ ನಿಮ್ಮ ಸ್ನೇಹಿತರು ಯಾರಾದರೂ ಸಮಾಜ ಸೇವೆಯಲ್ಲಿ ಹೆಚ್ಚು ಆಸಕ್ತಿಯನ್ನು ಹೊಂದಿದ್ದರೆ ರಾಜ್ಯ ಸರ್ಕಾರವು ರಾಜೀವ್ ಗಾಂಧಿ ಪಂಚಾಯತ್ ರಾಜ್ ಫಿಲೋಷಿಪ್ ಘೋಷಣೆ ಮಾಡಿದೆ ಎಂಬುದರ ಈ ಮಾಹಿತಿಯನ್ನು ತಿಳಿಸಿ ಧನ್ಯವಾದಗಳು.
ಇತರೆ ವಿಷಯಗಳು :
- ಅನ್ನಭಾಗ್ಯ ಹಣ ಈ ಜನರಿಗೆ ಸಿಗಲ್ಲ ಕಾರಣ ಏನು ತಿಳಿದುಕೊಳ್ಳಿ
- SDA FDA ಹುದ್ದೆಗಳಿಗೆ ಅರ್ಜಿ ಆಹ್ವಾನ : ಕೂಡಲೇ ಅರ್ಜಿ ಸಲ್ಲಿಸಿ
ಎಷ್ಟು ತಾಲೂಕ್ ನಲ್ಲಿ ಉದ್ಯೋಗ ..?
51 ತಾಲೂಕುಗಳಲ್ಲಿ
ಎಷ್ಟು ವರ್ಷ ಕೆಲಸ ..?
ಎರಡು ವರ್ಷ