ನಮಸ್ಕಾರ ಸ್ನೇಹಿತರೆ ವಿದ್ಯಾರ್ಥಿಗಳಿಗೆ ಅನೇಕ ಖಾಸಗಿ ಕಂಪನಿಗಳು ಸ್ಕಾಲರ್ಶಿಪ್ ಅನ್ನು ನೀಡುತ್ತವೆ ಅದೇ ರೀತಿ HDFC ಬ್ಯಾಂಕಿನವರು ಸ್ಕಾಲರ್ಶಿಪ್ ಗೆ ಅರ್ಜಿಯನ್ನು ಆಹ್ವಾನ ಮಾಡಿದ್ದಾರೆ. ಅರ್ಜಿ ಸಲ್ಲಿಸಲು ಯಾರು ಅರ್ಹರು.? ಯಾವ ದಾಖಲೆಗಳೊಂದಿಗೆ ಅರ್ಜಿ ಸಲ್ಲಿಸಬಹುದು ..? ಅರ್ಜಿ ಸಲ್ಲಿಸುವವರು ಯಾವ ವಿದ್ಯಾರ್ಹತೆ ಹೊಂದಿರಬೇಕು..? ಈ ಎಲ್ಲಾ ಸಂಪೂರ್ಣ ಮಾಹಿತಿ ತಿಳಿದುಕೊಳ್ಳಿ.
Contents
ಪರಿವರ್ತನಾ ಸ್ಕಾಲರ್ಶಿಪ್ ಮಾಹಿತಿ :
ಹಿಂದುಳಿದ ವರ್ಗದ ಅನೇಕ ಮಕ್ಕಳು ಪ್ರತಿಭಂತರಾಗಿದ್ದು ಅಂತಹ ಮಕ್ಕಳಿಗೆ ಶೈಕ್ಷಣಿಕ ವಿದ್ಯಾಭ್ಯಾಸ ಮುಂದುವರಿಸಲು ಯಾವುದೇ ರೀತಿ ಶಿಕ್ಷಣದಿಂದ ವಂಚಿತರಾಗದೆ ಶಿಕ್ಷಣಕ್ಕೆ ಅನುಕೂಲವಾಗಲೆಂದು HDFC ಬ್ಯಾಂಕಿನವರು ಈ ವಿದ್ಯಾರ್ಥಿ ವೇತನವನ್ನು ನೀಡುತ್ತಿದ್ದಾರೆ.
ವಿದ್ಯಾರ್ಥಿ ವೇತನದ ಸಂಪೂರ್ಣ ಮಾಹಿತಿ :
ವಿದ್ಯಾರ್ಥಿ ವೇತನದ ಹೆಸರು | ಪರಿವರ್ತನಾ ಸ್ಕಾಲರ್ಶಿಪ್ |
ವಿದ್ಯಾರ್ಥಿ ವೇತನದ ಹಣ | 75,000 |
ವಿದ್ಯಾರ್ಥಿ ವೇತನ ನೀಡುತ್ತಿರುವ ಸಂಸ್ಥೆ | HDFC ಬ್ಯಾಂಕ್ |
ಅರ್ಜಿ ಸಲ್ಲಿಸುವ ವಿಧಾನ | ಆನ್ಲೈನ್ |
ಅಧಿಕೃತ ಜಾಲತಾಣ | ಇಲ್ಲಿ ಕ್ಲಿಕ್ ಮಾಡಿ |
ಉದ್ದೇಶ | ವಿದ್ಯಾರ್ಥಿಗಳಿಗೆ ಶೈಕ್ಷಣಿಕ ವಿದ್ಯಾಭ್ಯಾಸಕ್ಕೆ ನೆರವಾಗಲು |
ಈ ಮೇಲ್ಕಂಡ ಮಾಹಿತಿಯಂತೆ ನೀವು ಭಾರತದ್ಯಂತ ಇರುವ ವಿದ್ಯಾರ್ಥಿಗಳಿಗೆಲ್ಲರಿಗೂ ಹಣಕಾಸಿನ ನೆರವಾಗಲೆಂದು ಶೈಕ್ಷಣಿಕ ವಿದ್ಯಾಭ್ಯಾಸಕ್ಕೆ ಅದರಲ್ಲೂ ಹಿಂದುಳಿದ ವರ್ಗದವರ ಪರಿವರ್ತನೆಗಾಗಿ ಈ ಸ್ಕಾಲರ್ಶಿಪ್ ಅನ್ನು ಜಾರಿ ಮಾಡಲಾಗಿರುತ್ತದೆ. ವಿದ್ಯಾರ್ಥಿಗಳು ಇಸ್ಕಾಲರ್ ಶಿಪ್ ನ ಪ್ರಯೋಜನ ಪಡೆದುಕೊಳ್ಳಬೇಕು.
ಇದನ್ನು ಓದಿ : ಗೃಹಲಕ್ಷ್ಮಿ ಹಣ ಜಮಾ : ಸ್ಟೇಟಸ್ ಚೆಕ್ ಮಾಡಲು ಹೊಸ ಲಿಂಕ್ ಬಿಡುಗಡೆ
ಶಾಲಾ ವಿದ್ಯಾರ್ಥಿಗಳಿಗೆ ಪರಿವರ್ತನಾ ಸ್ಕಾಲರ್ಶಿಪ್ :
ಸ್ನಾತಕೋತ್ತರ ವಿದ್ಯಾರ್ಥಿಗಳಿಗೆ ಮಾತ್ರ ಸ್ಕಾಲರ್ಶಿಪ್ ಬಗ್ಗೆ ತಿಳಿಸಲಾಗಿದ್ದು .ಈ ಕೆಳಕಂಡ ಮಾಹಿತಿಯಲ್ಲಿ 1 ರಿಂದ 12ನೇ ತರಗತಿ ಓದುವ ಮಕ್ಕಳಿಗೂ ಸ್ಕಾಲರ್ಶಿಪ್ ಮಾಹಿತಿ ತಿಳಿದುಕೊಳ್ಳಬಹುದು.
ಕಾಲೇಜು ಮಕ್ಕಳಿಗೆ ಪರಿವರ್ತನಾ ಸ್ಕಾಲರ್ಶಿಪ್ :
ಪರಿವರ್ತನಾ ಸ್ಕಾಲರ್ಶಿಪ್ ಪಡೆಯಲು1ರಿಂದ 12ನೇ ತರಗತಿ ಓದುತ್ತಿರುವ ವಿದ್ಯಾರ್ಥಿಗಳು ಹಾಗೂ ಡಿಪ್ಲೋಮೋ ಐಟಿಐ ಪಾಲಿಟೆಕ್ನಿಕ್ ಕೋರ್ಸ್ ಗಳನ್ನು ಓದುತ್ತಿರುವ ವಿದ್ಯಾರ್ಥಿಗಳು ಅದರಲ್ಲೂ ಖಾಸಗಿ ಅಥವಾ ಸರ್ಕಾರಿ ಹಾಗೂ ಸರ್ಕಾರಿ ಅನುದಾನಿತ ಕಾಲೇಜುಗಳಲ್ಲಿ ಅಥವಾ ಶಾಲೆಗಳಲ್ಲಿ ಓದುತ್ತಿರಬೇಕು.
ಸ್ಕಾಲರ್ಶಿಪ್ ಹಣದ ಮಾಹಿತಿ :
1 ರಿಂದ 6 ತರಗತಿ ವಿದ್ಯಾರ್ಥಿಗಳಿಗೆ | 15,000 |
7 ರಿಂದ 12ನೇ ತರಗತಿ ವಿದ್ಯಾರ್ಥಿಗಳಿಗೆ | 18,000 |
ಡಿಪ್ಲೋಮಾ ಐಟಿಐ ವಿದ್ಯಾರ್ಥಿಗಳಿಗೆ | 18,000 |
ವಿದ್ಯಾರ್ಥಿಗಳಿಗೆ ಬೇಕಾದ ದಾಖಲೆ :
- ವಿದ್ಯಾರ್ಥಿಯ ಪಾಸ್ಪೋರ್ಟ್ ಅಳತೆಯ ಫೋಟೋ.
- ಶೈಕ್ಷಣಿಕ ವರ್ಷದ ಅಂಕ ಪಟ್ಟಿಗಳು.
- ಆಧಾರ ಕಾರ್ಡ್.
- ಪ್ರವೇಶ ಪಡೆದ ಶುಲ್ಕ ರಶೀದಿ ಪತ್ರ.
- ವಿದ್ಯಾಸಂಸ್ಥೆಯ ಗುರುತಿನ ಚೀಟಿ.
- ಆದಾಯ ಪ್ರಮಾಣ ಪತ್ರ
- ಬ್ಯಾಂಕ್ ಪಾಸ್ ಪುಸ್ತಕ.
ಉನ್ನತ ಶಿಕ್ಷಣ ಅರ್ಹತೆ ಮತ್ತು ಕೋರ್ಸ್ :
ಪರಿವರ್ತನಾ ಸ್ಕಾಲರ್ ಶಿಪ್ ಗೆ ಅರ್ಜಿ ಸಲ್ಲಿಸುವಂತಹ ವಿದ್ಯಾರ್ಥಿಗಳು ಯಾವ ಅರ್ಹತೆಯನ್ನು ಹೊಂದಿರಬೇಕು ಹಾಗೂ ಸಂಬಂಧಪಟ್ಟ ಕೋರ್ಸ್ ಗಳಿಗೆ ವ್ಯಾಸಂಗ ಮಾಡುತ್ತಿರಬೇಕು ಎಂಬುದನ್ನು ತಿಳಿದುಕೊಳ್ಳಿ.
- ಅರ್ಜಿ ಸಲ್ಲಿಸುವ ವಿದ್ಯಾರ್ಥಿಯು ಭಾರತ ಸರ್ಕಾರದಿಂದ ಮಾನ್ಯತೆ ಪಡೆದ ಕಾಲೇಜುಗಳಲ್ಲಿ ಅಥವಾ ವಿಶ್ವವಿದ್ಯಾಲಯಗಳಲ್ಲಿ ಅಧ್ಯಯನ ಮಾಡುತ್ತಿರಬೇಕು.
- ಸಂಬಂಧಪಟ್ಟ ಕೋರ್ಸ್ ಗಳನ್ನು ಆಯ್ಕೆ ಮಾಡಿಕೊಂಡ ಅನೇಕ ದಾಖಲೆಗಳು ಹಾಗೂ ಅಂಕಪಟ್ಟಿಗಳನ್ನು ನೀಡಬೇಕು.
ಈ ಕೋರ್ಸ್ ಗಳನ್ನು ಅಧ್ಯಯನ ಮಾಡುತ್ತಿರಬೇಕು.
ಪರಿವರ್ತನಾ ಸ್ಕಾಲರ್ ಶಿಪ್ ಗೆ ಅರ್ಜಿ ಸಲ್ಲಿಸುವ ವಿದ್ಯಾರ್ಥಿಗಳು ಕಡ್ಡಾಯವಾಗಿ ಈ ಕೆಳಕಂಡ ಕೋರ್ಸುಗಳಲ್ಲಿ ವ್ಯಾಸಂಗ ಮಾಡುತ್ತಿರಬೇಕು.
- ಮಾಸ್ಟರ್ ಆಫ್ ಕಾಮರ್ಸ್.
- ಮಾಸ್ಟರ್ ಆಫ್ ಆರ್ಟ್ಸ್.
- ಎಂ ಟೆಕ್ ವಿದ್ಯಾರ್ಥಿಗಳು.
- ಎಂಬಿಎ ವಿದ್ಯಾರ್ಥಿಗಳು.
ಉನ್ನತ ಪರಿವರ್ತನಾ ಸ್ಕಾಲರ್ಶಿಪ್ ಹಣ :
ಸಾಮಾನ್ಯ ಸ್ನಾತಕೋತ್ತರ ಕೋರ್ಸ್ ಗಳಿಗೆ | 35,000 ಹಣ ನೀಡಲಾಗುತ್ತದೆ |
ವೃತ್ತಿಪರ ಕೋರ್ಸ್ ಗಳಿಗೆ | 75,000 ಹಣವನ್ನು ನೀಡಲಾಗುತ್ತದೆ |
ಈ ಮೇಲ್ಕಂಡ ದಾಖಲೆಗಳನ್ನು ಹೊಂದಿರುವಂತಹ ವಿದ್ಯಾರ್ಥಿಗಳು ಪರಿವರ್ತನಾ ಸ್ಕಾಲರ್ಶಿಪ್ ಗೆ ಅರ್ಜಿ ಸಲ್ಲಿಸಬಹುದು.
ಪ್ರಮುಖ ದಿನಾಂಕಗಳು :
ಅರ್ಜಿ ಸಲ್ಲಿಕೆ ಪ್ರಾರಂಭದ ದಿನಾಂಕ- 25/01/2025
ಅರ್ಜಿ ಸಲ್ಲಿಕೆ ಕೊನೆಯ ದಿನಾಂಕ -31/01/2020
ಈ ಪರಿವರ್ತನಾ ಸ್ಕಾಲರ್ಶಿಪ್ ಎಲ್ಲಾ ವಿದ್ಯಾರ್ಥಿಗಳಿಗೂ ದೊರೆಯುತ್ತಿದ್ದು ಅಗತ್ಯವಿರುವಂತಹ ವಿದ್ಯಾರ್ಥಿಗಳಿಗೆ ಈ ಮಾಹಿತಿಯನ್ನು ತಲುಪಿಸಿ, ಧನ್ಯವಾದಗಳು.
ಇತರೆ ವಿಷಯಗಳು :
- ವಾಹನ ಖರೀದಿಸಲು50 % ರಷ್ಟು ಸಬ್ಸಿಡಿ ಸಿಗುತ್ತೆ, ಅರ್ಹತೆ ಏನು ತಿಳಿಯಿರಿ
- ಉದ್ಯೋಗ ಅವಕಾಶ : ಪಶುಪಾಲನಾ ನಿಗಮದ 1884 ಹುದ್ದೆಗಳಿಗೆ ಅರ್ಜಿ ಅಹ್ವಾನ
ಪರಿವರ್ತನಾ ಸ್ಕಾಲರ್ ಶಿಪ್ ನಲ್ಲಿ ಎಷ್ಟು ಹಣ ಸಿಗುತ್ತದೆ..?
75,000 ಹಣ ಸಿಗುತ್ತದೆ.
ಸ್ಕಾಲರ್ಶಿಪ್ ನೀಡುತ್ತಿರುವ ಬ್ಯಾಂಕಿನ ಹೆಸರು..?
HDFC Bank.
ಯಾರು ಅರ್ಜಿ ಸಲ್ಲಿಸಬಹುದು..?
ಪ್ರಾಥಮಿಕ ಶಿಕ್ಷಣದಿಂದ ಉನ್ನತ ಶಿಕ್ಷಣ ಓದುತ್ತಿರುವ ಎಲ್ಲರೂ ಅರ್ಜಿ ಸಲ್ಲಿಸಬಹುದು.