rtgh

ಮಧ್ಯಾಂತರ ಬೆಳೆ ವಿಮೆ ಜಮಾ : ನಿಮ್ಮ ಅಕೌಂಟ್ ಗೆ ಬಂದಿದಿಯಾ ನೋಡಿ

interim-crop-insurance-deposit

ನಮಸ್ಕಾರ ಸ್ನೇಹಿತರೆ 2023 ನೇ ಸಾಲಿನ ಮುಂಗಾರು ಹಂಗಾಮಿಯ ಹಾಗೂ ರೈತ ಸುರಕ್ಷತಾ ಪ್ರಧಾನಮಂತ್ರಿ ಫಸಲ್ ಭೀಮಾ ಯೋಜನೆ ಮೂಲಕ ಮಧ್ಯಂತರ ಬೆಳೆ ವಿಮೆ ಜಮಾ ಆಗಿರುವ ಕುರಿತು ಸಂಪೂರ್ಣವಾಗಿ ಮಾಹಿತಿಯನ್ನು ತಿಳಿಸಲಿದ್ದೇವೆ.

interim-crop-insurance-deposit
interim-crop-insurance-deposit

ಮಧ್ಯಂತರ ಬೆಳೆ ವಿಮೆ ಮಾಹಿತಿ :

ಯಾವ ರೈತರು ಬೆಳೆ ವಿಮೆ ಪ್ರೀಮಿಯಂ ಅನ್ನು ಪಾವತಿ ಮಾಡಿದ್ದಾರೋ ಅಂತಹ ರೈತರ ಅರ್ಜಿ ಸ್ಥಿತಿ ಯಶಸ್ವಿಯಾಗಿದೆ ಇಲ್ಲವೇ ಎಂಬುವುದರ ಬಗ್ಗೆ ಹಂತ ಹಂತವಾಗಿ ನಿಮ್ಮ ಮೊಬೈಲ್ ಮೂಲಕ ಪರಿಶೀಲನೆ ಮಾಡಬಹುದು.

ಬೆಳೆ ವಿಮೆ ಯಾರಿಗೆ ಜಮಾ :

ಯಾವ ರೈತರು ಈ ಕೆಳಕಂಡ ಬೆಳೆಗಳನ್ನು ಬೆಳೆದಿದ್ದಾರೋ ಅಂತಹ ರೈತರಿಗೆ ಬೆಳೆವಿಮೆಯ ಮಧ್ಯಂತರ ಹಣ ಜಮಾ ಆಗಲಿದೆ ಬೆಳೆಗಳ ವಿವರ ಇಲ್ಲಿದೆ.

  • ಭತ್ತ.
  • ಈರುಳ್ಳಿ .
  • ಮೆಣಸಿನಕಾಯಿ.
  • ಆಲೂಗಡ್ಡೆ .
  • ಮೆಕ್ಕೆಜೋಳ.
  • ಹತ್ತಿ.

ಈ ಬೆಳೆಗಳನ್ನು ಬೆಳೆದ ರೈತರಿಗೆ ಬೆಳೆವಿಮೆ ಪ್ರಾರಂಭವಾಗಿದೆ.

ಬೆಳೆ ವಿಮೆ ಪರಿಶೀಲಿಸುವ ವಿವರ :

ಯಾವ ರೈತರು ಅಧಿಕೃತ ವೆಬ್ಸೈಟಿನಲ್ಲಿ ಮಧ್ಯಂತರ ಬೆಳೆ ವಿಮೆ ಪರಿಶೀಲಸಬೇಕು ಎಂದುಕೊಂಡಿದ್ದೀರಾ ಅಂತಹ ರೈತರು ಈ ವಿಧಾನಗಳನ್ನು ತಪ್ಪದೇ ಪಾಲಿಸಿ ಸ್ಟೇಟಸ್ ಅನ್ನು ಚೆಕ್ ಮಾಡಿಕೊಳ್ಳಬಹುದು..

  • ಹಂತ- 01- ಅಧಿಕೃತ ವೆಬ್ಸೈಟ್ಗೆ ಭೇಟಿ ನೀಡಿ ಮಾಹಿತಿ ಪಡೆಯಿರಿ ವೆಬ್ಸೈಟ್ ವಿಳಾಸ. https://samrakshane.karnataka.gov.in/ ಈ ಲಿಂಕ್ ಮೇಲೆ ಕ್ಲಿಕ್ ಮಾಡಿ
  • ಹಂತ-02 -ನೀವು ಬೆಳೆ ವಿಮೆ ಯಾವ ವರ್ಷವನ್ನು ಆಯ್ಕೆ ಮಾಡಬೇಕೆಂದು ಹೇಳುತ್ತದೆ. ನಂತರ ಆ ವರ್ಷವನ್ನು ಆಯ್ಕೆ ಮಾಡಿ ಮುಂದಿನ ಆಯ್ಕೆಯನ್ನು ಕ್ಲಿಕ್ ಮಾಡಿ ಇದಾದ ನಂತರ ರೈತರ ಪಟ್ಟಿ ಸ್ಟೇಟಸ್ ಚೆಕ್ ಆಯ್ಕೆ ಕಾಣುತ್ತದೆ ಅದನ್ನು ಕ್ಲಿಕ್ ಮಾಡಿ.
  • ಹಂತ -03-ಈ ಹಂತದಲ್ಲಿ ನಿಮ್ಮ ಐಡಿಯನ್ನು ನಮೂದಿಸಬೇಕು ಅಂದರೆ ನಿಮ್ಮ ಆಧಾರ್ ಸಂಖ್ಯೆ ಹಾಗೂ ಮೊಬೈಲ್ ಸಂಖ್ಯೆಯನ್ನು ಹಾಕಿದ ನಂತರ ನಿಮಗೆ ಹೊಸ ಪುಟ್ಟ ತೆರೆದುಕೊಳ್ಳಲಿದೆ.
  • ಹಂತ -04-ಅರ್ಜಿ ಸಲ್ಲಿಸಿದವರ ಸಂಪೂರ್ಣ ಮಾಹಿತಿ ದೊರೆಯುತ್ತದೆ. ನಂತರ ನಿಮ್ಮ ಬೆಳೆ ವಿಮಾ ಅರ್ಜಿ ಯಶಸ್ವಿಯಾಗಿ ನೋಂದಣಿಯಾಗಿದೆಯಾ ಎಂಬುದನ್ನು ತಿಳಿದುಕೊಳ್ಳಬಹುದು.
  • ಹಂತ -05- ಈ ವಿಷಯ ಗಮನದಲ್ಲಿರಲಿ ಕೆಲವೊಬ್ಬರ ಅರ್ಜಿ ಪ್ರಗತಿಯಲ್ಲಿದ್ದರೆ ನೋ ಡಾಟಾ ಫೌಂಡ್ ಎಂದು ತೋರಿಸುತ್ತದೆ ಅಥವಾ ಡಾಟಾ ಎಂಟ್ರಿ ಪ್ರೋಗ್ರೆಸ್ಸಿನಲ್ಲಿದೆ ಎಂದು ನಿಮಗೆ ತೋರಿಸುತ್ತದೆ.
  • ಹಂತ -06-ನಿಮ್ಮ ಐಡಿಯಾ ಕೊನೆಯಲ್ಲಿ ಕಾಣುವಂತಹ ಬಟನ್ ಅನ್ನು ಕ್ಲಿಕ್ ಮಾಡಿ ನಂತರ ನ್ಯೂ ಡೀಟೇಲ್ಸ್ ಎಂಬ ಮಾಹಿತಿಯನ್ನು ಕ್ಲಿಕ್ ಮಾಡಿದರೆ .ನಿಮಗೆ ನಿಮ್ಮ ಜಮೀನಿನ ಸರ್ವೇ ನಂಬರ್ ಹಾಗೂ ನೀವು ಬೆಳೆದ ಬೆಳೆ ವಿಮೆ ಸಂಬಂಧಿಸಿದ ಸಂಪೂರ್ಣ ಮಾಹಿತಿ ದೊರೆಯಲಿದೆ.

ಇದನ್ನು ಓದಿ ; ಉದ್ಯಮಶೀಲತಾ ತರಬೇತಿಗೆ ಅರ್ಜಿ ಆಹ್ವಾನ : ಸರ್ಕಾರದಿಂದ ಸಿಗುವ ಸೌಲಭ್ಯ ತಿಳಿಯಿರಿ

ಹಣ ಜಮಾ ಆದ ದಿನಾಂಕ ತೋರಿಸುತ್ತದೆ :

ರೈತರಿಗೆ ಬೆಳೆ ವಿಮೆ ಎಷ್ಟು ಜಮಾ ಆಗಿರುತ್ತದೆ ಎಂಬುದನ್ನು ತಿಳಿಯಲು ಅಧಿಕೃತ https://samrakshane.karnataka.gov.in/ ಮೊದಲನೇ ಪುಟದಲ್ಲಿ ಯುಟಿಆರ್ ಡೀಟೇಲ್ಸ್ ತೋರಿಸುತ್ತದೆ .ಅಲ್ಲಿ ನೀವು ನೀಡಿರುವಂತಹ ಬ್ಯಾಂಕ್ ಖಾತೆಯ ವಿವರಗಳ ಮೇಲೆ ಆಯ್ಕೆ ಮಾಡಿದರೆ ನಿಮಗೆ ಎಷ್ಟು ಹಣ ಜಮಾ ಆಗಿದೆ ಎಂಬುದನ್ನು ತಿಳಿದುಕೊಳ್ಳಬಹುದು.

ಯಾವ ಜಿಲ್ಲೆಗಳಿಗೆ ಹಣ ಜಮಾ ಆಗಿದೆ :

ಮಧ್ಯಂತರ ಬೆಳೆವಿಮೆ ಈ ಜಿಲ್ಲೆಗಳಿಗೆ ಮಾತ್ರ ಜಮಾ ಆಗಿದೆ. ಆ ಜಿಲ್ಲೆಗಳೆಂದರೆ ಧಾರವಾಡ ಮತ್ತು ಹಾವೇರಿ ಜಿಲ್ಲೆಗಳಿಗೆ ಮಧ್ಯಂತರ ಬೆಳೆವಿಮೆ ರೈತರ ಖಾತೆಗೆ ಡಿಬಿಟಿ [DBT] ಮೂಲಕ ಜಮಾ ಆಗಿರುತ್ತದೆ.

ಯಾವ ಬೆಳೆಗಳಿಗೆ ಹಣ ಜಮಾ ಆಗಿದೆ :

ರೈತರು ಬೆಳೆದಿರುವಂತಹ ಈ ಬೆಳೆಗಳಿಗೆ ಮಧ್ಯಾಂತರ ಬೆಳೆ ವಿಮೆ ಹಣ ಜಮಾ ಆಗಿರುತ್ತದೆ ಎಂದು ಜಿಲ್ಲಾಧಿಕಾರಿಗಳು ತಿಳಿಸಿದ್ದಾರೆ. ಈ ಕೆಳಕಂಡ ಬೆಳೆಗಳಿಗೆ ಹಣ ಜಮಾ ಆಗಿದೆ ಭತ್ತ ಹಾಗೂ ಕೆಂಪು ಮೆಣಸಿನಕಾಯಿ ಆಲೂಗಡ್ಡೆ ಮೆಕ್ಕೆಜೋಳ ಹತ್ತಿ ಈರುಳ್ಳಿ ಜಮಾ ಆಗಿರುತ್ತದೆ.

ಎಷ್ಟು ಹಣ ಜಮಾ ಆಗಿದೆ :

ಮಧ್ಯಂತರ ಬೆಳೆ ವಿಮೆಯು ಕೆಲವೇ ಜಿಲ್ಲೆಗಳಿಗೆ ಮಾತ್ರ ಜಮಾ ಆಗಿದ್ದು ಧಾರವಾಡ ಜಿಲ್ಲೆಗೆ 1,11.057 ಒಟ್ಟು ರೈತರಿಗೆ ವಿವಿಧ ಬೆಳೆಗಳನ್ನು ಒಳಗೊಂಡಂತೆ ಹಣವು ಜಮಾ ಆಗಿರುತ್ತದೆ.

ಯಾವ ರೈತರಿಗೆ ಹಣ ಜಮಾ ಆಗಿರುತ್ತದೆ :

ಬೆಳೆ ವಿಮೆಯು ಪ್ರಕೃತಿ ವಿಕೋಪಗಳಿಂದ ಅಥವಾ ಯಾವುದೇ ಬೆಳೆ ವಿಫಲವಾದಾಗ ರೈತರ ಖಾತೆಗೆ ವಿಮ ರಕ್ಷಣೆ ಅಥವಾ ಆರ್ಥಿಕ ಬೆಂಬಲ ನೀಡುವ ಉದ್ದೇಶದಿಂದ ಇದರೊಂದಿಗೆ ಕೃಷಿ ಆದಾಯ ಸ್ಥಿರವಾಗಿರುವ ಉದ್ದೇಶದಿಂದ ನೆರವಾಗುವಳು ಈ ಯೋಜನೆ ಸಹಾಯವಾಗಲಿದೆ.

ಬೇರೆ ರೈತರಿಗೆ ಹಣ ಯಾವಾಗ ಜಮಾ :

ಇನ್ನು ಮುಂದಿನ ದಿನಗಳಲ್ಲಿ ರಾಜ್ಯದ ಅನೇಕ ಜಿಲ್ಲೆಯ ಅನೇಕ ರೈತರಿಗೆ ಹಣ ಜಮಾ ಆಗಲಿದೆ .ಇದರ ಬಗ್ಗೆ ಸದ್ಯದಲ್ಲೇ ಬೆಳೆವಿಮೆ ಬಿಡುಗಡೆಯಾಗುವ ಮುನ್ಸೂಚನೆ ಕಾಣುತ್ತಿವೆ. ಈಗಾಗಲೇ ಎರಡು ಜಿಲ್ಲೆಗಳಿಗೆ ಹಣ ಜಮಾ ಆಗಿರುವುದರಿಂದ ಸದ್ಯದಲ್ಲೇ ನಿಮ್ಮ ಜಿಲ್ಲೆಗೂ ಸಹ ಹಣ ಜಮಾ ಆಗಲಿದೆ.

ಈ ಮಧ್ಯಂತರ ಬೆಳೆ ವಿಮೆ ಜಮಾ ಆಗಿರುವುದರ ಬಗ್ಗೆ ಸಂಪೂರ್ಣವಾಗಿ ತಿಳಿಯಬೇಕಾದರೆ ಅಧಿಕೃತ https://samrakshane.karnataka.gov.in/ ವೆಬ್ಸೈಟ್ ಗೆ ಭೇಟಿ ನೀಡಿ .ಮೇಲ್ಕಂಡಂತೆ ನೀಡಿರುವ ಹಂತಗಳನ್ನು ಸರಿಯಾದ ಕ್ರಮದಲ್ಲಿ ಅನುಸರಿಸಿ.

ಈ ಮಾಹಿತಿಯನ್ನು ಇತರ ರೈತರಿಗೂ ತಲುಪಿಸಿ ಹಾಗೂ ಮಧ್ಯಂತರ ಬೆಳೆವಿಮೆ ಜಮಾ ಆಗಿರುವುದನ್ನು ಪರಿಶೀಲನೆ ಮಾಡಿಕೊಳ್ಳಲು ತಿಳಿಸಿರಿ. ಧನ್ಯವಾದಗಳು.

ಇತರೆ ವಿಷಯಗಳು :

ಯಾವ ಬೆಳೆ ವಿಮೆ ಜಮಾ ಆಗಿದೆ.?

ಮಧ್ಯಂತರ ಬೆಳೆ ವಿಮೆ ಜಮಾ

ಯಾವ ಜಿಲ್ಲೆ ಅವರಿಗೆ ಬೆಳೆ ವಿಮೆ ಜಮಾ ಆಗಿದೆ ಮೊದಲು .?

ಧಾರವಾಡ ಜಿಲ್ಲೆಗೆ ಮೊದಲು ಜಮಾ ಆಗಿದೆ

Spread the love

Leave a Reply

Your email address will not be published. Required fields are marked *