ನಮಸ್ಕಾರ ಸ್ನೇಹಿತರೆ 2024 25 ನೇ ಸಾಲಿನ ಆಯವ್ಯಯ ಪೂರ್ವಭಾವಿ ಚರ್ಚೆಗಳು ಈ ಬಾರಿಯ ರಾಜ್ಯ ಬಜೆಟ್ ಗೂ ಮುನ್ನ ನಡೆಯುತ್ತಿವೆ. ರಾಜ್ಯ ರೈತ ಸಂಘದ ಜೊತೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಭಾನುವಾರ ಸಭೆ ನಡೆಸಿದ್ದಾರೆ ಈ ಸಂದರ್ಭದಲ್ಲಿ ಹಲವಾರು ಬೇಡಿಕೆಗಳನ್ನು ರೈತ ಮುಖಂಡರು ಇಟ್ಟಿದ್ದಾರೆ.
ರೈತರ ಸಂಪೂರ್ಣ ಸಾಲವನ್ನು ಈ ಬಾರಿಯ ಬಜೆಟ್ ನಲ್ಲಿ ಮನ್ನ ಮಾಡಬೇಕು ಹಾಗೂ ಯುವ ರೈತರನ್ನು ಮದುವೆಯಾಗುವಂತಹ ಹೆಣ್ಣು ಮಕ್ಕಳಿಗೆ ಪ್ರೋತ್ಸಾಹ ಧನವಾಗಿ 5 ಲಕ್ಷಗಳನ್ನು ನೀಡಬೇಕೆಂದು ಮುಖ್ಯಮಂತ್ರಿ ಸಿದ್ದರಾಮಯ್ಯನವರ ಬಳಿ ರಾಜ್ಯ ರೈತ ಸಂಘದ ರಾಜ್ಯ ದಕ್ಷರಾದ ಬಡಗಲಪುರ ನಾಗೇಂದ್ರ ಅವರು ಮನವಿ ಮಾಡಿರುವುದಾಗಿ ಮಾಹಿತಿ ನೀಡಿದ್ದಾರೆ.
Contents
ರೈತರಿಗೆ ಮದುವೆಯಾಗುವ ಹೆಣ್ಣು ಮಕ್ಕಳಿಗೆ 5 ಲಕ್ಷ ರೂಪಾಯಿ :
ಮುಖ್ಯಮಂತ್ರಿ ಯೊಂದಿಗೆ ರಾಜ್ಯ ರೈತ ಸಂಘದ ರಾಜ್ಯ ಅಧ್ಯಕ್ಷರಾದ ಬಡಗಲಪುರ ನಾಗೇಂದ್ರರವರು ಮಾತನಾಡಿದ್ದು ಮುಖ್ಯಮಂತ್ರಿಗಳ ಜೊತೆಗಿನ ಸಭೆ ನಡೆದ ನಂತರ ಸಂಪೂರ್ಣ ಸಾಲಮನ್ನಾ ಮಾಡಲು ಒತ್ತಾಯ ಮಾಡಲಾಗಿದೆ ಎಂದು ತಿಳಿಸಿದ್ದಾರೆ. ಇಂದು ಕೃಷಿ ದಿಕ್ಕು ತಪ್ಪಿದೆ ಬಜೆಟ್ ನಲ್ಲಿ ಕೃಷಿಯನ್ನು ಉಳಿಸಲು ಹೆಚ್ಚಿನ ಒತ್ತು ಕೊಡಬೇಕು ಅಲ್ಲದೆ ಈ ಬಜೆಟ್ ರೈತರ ಪರವಾಗಿ ಬೇಕು ಹಾಗು ರೈತರ ಸಂಪೂರ್ಣ ಕೃಷಿ ಸಾಲವನ್ನು ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಮನ್ನಾ ಮಾಡಬೇಕು ಸಾಲದ ಸುಳಿಗೆ ರೈತರು ಸಿಲುಕದಂತೆ ಕೃಷಿ ನೀತಿ ರೂಪಿಸಬೇಕೆಂದು ಮನವಿ ಮಾಡಿದ್ದೇವೆ ಎಂದು ತಿಳಿಸಿದರು.
ಮುಖ್ಯವಾಗಿ ರಾಜ್ಯದಲ್ಲಿ ಬರದ ಸಮಸ್ಯೆ ಇದೆ ಅಲ್ಲದೆ ಶಾಶ್ವತ ಪರಿಹಾರ ಬರಕ್ಕೆ ಸಿಗಬೇಕು ಎಂದರೆ ಸಣ್ಣ ನೀರಾವರಿಗೆ ಒತ್ತು ಕೊಡಬೇಕು ಜೊತೆಗೆ 10 ವರ್ಷಗಳ ಕಾರ್ಯ ಯೋಜನೆಯನ್ನು ಘೋಷಣೆ ಮಾಡಬೇಕೆಂದು ರಾಜ್ಯದ ಮುಖ್ಯಮಂತ್ರಿಗಳಿಗೆ ಮನವಿ ಮಾಡಿದ್ದೇವೆ ಎಂದು ರಾಜ್ಯ ರೈತ ಸಂಘದ ರಾಜ್ಯಾಧ್ಯಕ್ಷರು ತಿಳಿಸಿದರು.
ಇದನ್ನು ಓದಿ : ಹೊಸ ಆದೇಶ : 200ರೂ ನಿಂದ 400 ರೂ.ಗೆ ಗ್ಯಾಸ ಸಬ್ಸಿಡಿ ಹಣ ಏರಿಕೆ !
ಇದರ ಜೊತೆಗೆ ರೈತರನ್ನು ಮದುವೆಯಾಗುವ ಹೆಣ್ಣು ಮಕ್ಕಳಿಗೆ ಪ್ರೋತ್ಸಾಹ ಧನವನ್ನು ನೀಡಬೇಕು, ರೈತರ ಮಕ್ಕಳನ್ನು ರೈತರನ್ನು ಮದುವೆಯಾಗಲು ಹೆಣ್ಣು ಮಕ್ಕಳು ಸಿಗುತ್ತಿಲ್ಲ ಹೀಗಾಗಿ ರೈತರಿಗೆ ಹಾಗೂ ರೈತರ ಮಕ್ಕಳಿಗೆ 45 ವರ್ಷಗಳಾದರೂ ಕೂಡ ಮದುವೆಯಾಗುತ್ತಿಲ್ಲ ಇದರಿಂದ ಕೃಷಿಗೆ ಆದ್ಯತೆ ಕೂಡ ಸಿಗುತ್ತಿಲ್ಲ ಹೀಗಾಗಿ ಯಾರೆಲ್ಲಾ ರೈತರನ್ನು ಮದುವೆಯಾಗುತ್ತಾರ ಅಂತಹವರಿಗೆ 5 ಲಕ್ಷ ರೂಪಾಯಿ ಪ್ರೋತ್ಸಾಹ ಧನ ನೀಡಬೇಕೆಂದು ಮನವಿ ಮಾಡಿದ್ದೇವೆ ಎಂದು ತಿಳಿಸಿದರು.
ಅಲ್ಲದೆ ಹಿಂದಿನ ಬಿಜೆಪಿ ಸರ್ಕಾರವು ಜಾರಿಗೆ ತಂದಿರುವಂತಹ ಭೂ ಸುಧಾರಣಾ ತಿದ್ದುಪಡಿ ಕಾಯ್ದೆಯನ್ನು ಕೊಟ್ಟ ಮಾತಿನಂತೆ ಕಾಂಗ್ರೆಸ್ ಪಕ್ಷ ವಾಪಸ್ ಪಡೆದು ಮಾತು ಉಳಿಸಿಕೊಳ್ಳಬೇಕು ಹಾಗೂ ಬಜೆಟ್ ನಲ್ಲಿ ಈ ಬಗ್ಗೆ ಘೋಷಣೆ ಮಾಡಬೇಕೆಂದು ಆಗ್ರಹಿಸಿದ್ದೇವೆ ಎಂದು ಹೇಳಿದರು.
ಕಡಿಮೆ ಬಡ್ಡಿ ದರದಲ್ಲಿ ರೈತರಿಗೆ ಸಾಲವನ್ನು ನೀಡಬೇಕು ರೈತ ಗೃಹ ವಿದ್ಯುತ್ ಬಿಲ್ ಸಂಪೂರ್ಣವಾಗಿ ಕರನಿರಾಕರಣ ಚಳುವಳಿಯ ಭಾಗವಾಗಿ ಬಾಕಿ ಉಳಿದಿರುವ ಹಣವನ್ನು ಮನ ಮಾಡಬೇಕೆಂದು ಮನವಿ ಮಾಡಿದ್ದೇವೆ ಎಂದು ತಿಳಿಸಿದರು.
ಒಟ್ಟಾರೆ ರಾಜ್ಯ ಸರ್ಕಾರದಲ್ಲಿ ಈ ಬಾರಿಯ ರಾಜ್ಯ ಬಜೆಟ್ ನಲ್ಲಿ ಹೆಚ್ಚಾಗಿ ರೈತರಿಗೆ ಹೆಚ್ಚಿನ ಪ್ರಾಶಸ್ತ್ಯ ನೀಡಬೇಕೆಂದು ರೈತ ಸಂಘದ ನಿಲುವಾಗಿದ್ದು ಈ ಬಗ್ಗೆ ಬಜೆಟ್ ನಲ್ಲಿ ಏನು ಮಂಡನೆ ಆಗಲಿದೆ ಎಂದು ಕಾದು ನೋಡಬೇಕಾಗಿದೆ ಹಾಗಾಗಿ ಈ ಮಾಹಿತಿಯನ್ನು ಪ್ರತಿಯೊಬ್ಬರಿಗೂ ಶೇರ್ ಮಾಡುವ ಮೂಲಕ ರೈತರನ್ನು ಮದುವೆಯಾಗುವ ಹೆಣ್ಣು ಮಕ್ಕಳಿಗೆ ಐದು ಲಕ್ಷ ಪ್ರೋತ್ಸಾಹ ಧನ ಘೋಷಣೆಯಾಗುತ್ತದೆ ಇಲ್ಲವೇ ಎಂಬುದನ್ನು ಕಾದು ನೋಡಬೇಕಾಗಿದೆ. ಹೀಗೆ ಪ್ರತಿಯೊಬ್ಬರಿಗೂ ಈ ಮಾಹಿತಿಯನ್ನು ಶೇರ್ ಮಾಡಿ ಧನ್ಯವಾದಗಳು.
ಇತರೆ ವಿಷಯಗಳು :
- ಆಯುಷ್ಮಾನ್ ಕಾರ್ಡ್ ಪ್ರತಿಯೊಬ್ಬರು ಪಡೆದುಕೊಳ್ಳಿ ! ಉಚಿತ ಅರೋಗ್ಯ ಸೇವೆ ಸಿಗುತ್ತೆ !
- ಜಿಯೋ ಗ್ರಾಹಕರಿಗೆ ಸಿಹಿ ಸುದ್ಡಿ : ಬರೋಬ್ಬರಿ 18 ಜಿಬಿ ಡೇಟಾ ಪಡೆಯಿರಿ!
ಸರ್ಕಾರ ಅಧಿಕೃತವಾಗಿ ಘೋಷಣೆ ಮಾಡಿದೀಯಾ ..?
ಯಾವುದೇ ಘೋಷಣೆ ಮಾಡಿಲ್ಲ.
ರೈತರನ್ನು ಮದುವೆಯಾಗುವ ಹುಡುಗಿಗೆ ಎಷ್ಟು ಹಣ ನೀಡಬೇಕು ..?
5 ಲಕ್ಷ ರೂಪಾಯಿ
ಯಾವ ಸರ್ಕಾರ ನೀಡಬೇಕು ಹಣ ..?
ಕರ್ನಾಟಕ.